ಈ ಬಾರಿ ಬಿಗ್ ಬಾಸ್ ಮನೆಗೆ ಹೋಗ್ತೀರಾ ಎಂದು ಕೇಳಿದ್ದಕ್ಕೆ ಹೇಳಿದ್ದೇನು ಈ ನಟಿ..?
ಬಿಗ್ ಬಾಸ್ ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಇಂತಹ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಮತ್ತೆ ಶುರುವಾಗಲಿದೆ.ಈಗಾಗಲೇ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಬಿಗ್ ಬಾಸ್‌ನ ಕೆಲಸಗಳು ಕೂಡ ..
ತೆರೆಮರೆಯಲ್ಲಿ ನಡೆಯುತ್ತಿವೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದಿಯ ಬಿಗ್ ಬಾಸ್ 19ನೇ ಸೀಸನ್‌ನಲ್ಲಿ ಯಾರೆಲ್ಲ ಈ ಬಾರಿ ಭಾಗವಹಿಸಲಿದ್ದಾರೆ ಎನ್ನುವ ಕುತೂಹಲ ಈಗಾಗಲೇ ಮನೆ ಮಾಡಿದೆ. ಕೆಲವರ ಹೆಸರುಗಳು ಕೂಡ ಚಾಲ್ತಿಯಲ್ಲಿವೆ.

ಕೇವಲ ಹಿಂದಿ ಮಾತ್ರವಲ್ಲ ನಾಗಾರ್ಜುನ ಸಾರಥ್ಯದಲ್ಲಿ ಈ ಬಾರಿ ಕೂಡ ತೆಲುಗಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬರಲಿದ್ದು ಈ ಬಾರಿ ತೆಲುಗು ಬಿಗ್ ಬಾಸ್ ಮನೆಗೆ ಜ್ಯೋತಿ ರೈ, ಕಲ್ಪಿಕಾ ಗಣೇಶ್, ಕಾವ್ಯಾ, ತೇಜಸ್ವಿನಿ, ಕಿರುತೆರೆ ನಟಿ ನವ್ಯಾ ಸ್ವಾಮಿ, ಶ್ರಾವಣಿ ವರ್ಮಾ, ಆರ್ ಜೆ ರಾಜ್, ಸಾಯಿ ಕಿರಣ್, ಮುಖೇಶ್ ಗೌಡ, ಚತ್ರಪತಿ ಶೇಖರ್, ನಿರೂಪಕಿ ಸತ್ಯಶ್ರೀ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇವರಲ್ಲಿ ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯಕ್ಕೆ ನಾನು ಆ ಮನೆಗೆ ಹೋಗ್ತಿಲ್ಲ ಎಂದು ಸತ್ಯಶ್ರೀ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಹೌದು, ಸತ್ಯಶ್ರೀ.. ತೆಲುಗಿನ ಜನಪ್ರಿಯ ಕಾರ್ಯಕ್ರಮ ಜಬರದಸ್ತ್ ಮೂಲಕ ಗುರುತಿಸಿಕೊಂಡ ಹಾಸ್ಯ ನಟಿ. ರಾಬಿನ್‌ಹುಡ್ ಸೇರಿ ಕೆಲ ಚಿತ್ರಗಳಲ್ಲಿ ಕೂಡ ಅಭಿನಯಿಸಿರುವ ಸತ್ಯಶ್ರೀ, 'ಸೋಶಿಯಲ್ ಪೋಸ್ಟ್ ಟಿವಿ' ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿರುವ ಸತ್ಯಶ್ರೀ ಬಿಗ್ ಬಾಸ್ ಕುರಿತ ಪ್ರಶ್ನೆಗಳಿಗೆ ಕೂಡ ಉತ್ತರವನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸತ್ಯಶ್ರೀ ನನಗೆ ಈ ಹಿಂದೆ ಬಿಗ್ ಬಾಸ್ ಮನೆಯಿಂದ ಕರೆ ಬಂದಿತ್ತು. ಆದರೆ..ಆಗ ಕಾರಣಾಂತರಗಳಿಂದ ನನಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಈ ಬಾರಿ ನನ್ನನ್ನು ಯಾರು ಸಂಪರ್ಕಿಸಿಲ್ಲ ಆದರೆ ಸಂಪರ್ಕಿಸಿದರೆ ಈ ಬಾರಿ ಹೋಗುವುದು ಕಷ್ಟ ಯಾಕೆಂದರೆ ನಾನು ಕೆಲ ಸಿನಿಮಾಗಳನ್ನು ಮಾಡುತ್ತಿದ್ದೇನೆ, ಆ ಚಿತ್ರಗಳ ಚಿತ್ರೀಕರಣಗಳು ಇರುವುದರಿಂದ ಹೋಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವ ಸತ್ಯಶ್ರೀ ಮುಂದಿನ ವರ್ಷದ ಸೀಸನ್‌ಗೆ ನನ್ನನ್ನೂ ಕರೆದರೆ ನಾನು ಖಂಡಿತ ಹೋಗುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಸತ್ಯಶ್ರೀ ಅವರ ಈ ಮಾತು ತೆಲುಗು ಪ್ರೇಕ್ಷಕರ ವಲಯದಲ್ಲಿ, ಬಿಗ್ ಬಾಸ್ ಪ್ರೇಮಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಬಾರಿ ಮನೆಗೆ ಹೋಗಲು ಹಿಂದೇಟು ಹಾಕಿರುವ ಸತ್ಯಶ್ರೀಗೆ ಮುಂದಿನ ವರ್ಷ ಬಿಗ್ ಬಾಸ್ ನಲ್ಲಿ ಅವಕಾಶ ಸಿಗುತ್ತಾ ಎನ್ನುವ ಪ್ರಶ್ನೆ ಈಗ ಸತ್ಯಶ್ರೀ ಅವರನ್ನು ಇಷ್ಟಪಡುವ ಅನೇಕರನ್ನು ಕಾಡುತ್ತಿದೆ.
ಇನ್ನುಳಿದಂತೆ ಈ ಬಾರಿ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಐದೂವರೆ ತಿಂಗಳು ನಡೆಯಲಿದೆ ಎಂದು ಪಿಂಕ್ ವಿಲ್ಲಾ ತನ್ನ ವರದಿಯಲ್ಲಿ ತಿಳಿಸಿದೆ.ಜುಲೈ 30ರಿಂದ ಕಾರ್ಯಕ್ರಮ ಶುರುವಾಗಲಿದೆ ಎಂದು ಕೂಡ ಪಿಂಕ್ ವಿಲ್ಲಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ತೆಲುಗಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಅಗಸ್ಟ್‌ದಿಂದ ಶುರುವಾಗುವ ಸಾಧ್ಯತೆ ಇದೆ. ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಕಾರ್ಯಕ್ರಮ ಶುರುವಾಗುವ ದಿನದಂದೇ ಸಿಗಲಿದೆ.


Click it and Unblock the Notifications











