'ಜೊತೆ ಜೊತೆಯಲಿ' ಧಾರಾವಾಹಿ ಅಂತ್ಯ ಆಗುತ್ತಾ? ಗೊಂದಲ ಮೂಡಿಸಿದ ಆ ಒಂದು ವಿಡಿಯೋ!

By ಎಸ್ ಸುಮಂತ್

'ಜೊತೆ ಜೊತೆಯಲಿ' ಧಾರಾವಾಹಿ ಶುರುವಾಗಿ ಹತ್ತಿರ ಹತ್ತಿರ ಮೂರು ವರ್ಷಗಳೇ ಕಳೆದಿವೆ. ಆದರು ಕಥೆಯಲ್ಲಿ ಎಲ್ಲಿಯೂ ಬೋರ್ ಹೊಡೆದಿಲ್ಲ. ಅಷ್ಟು ಅಚ್ಚುಕಟ್ಟಾಗಿ ಧಾರಾವಾಹಿಯ ಕಥೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಕಥೆ ಮುಗಿದೇ ಹೋಯಿತು, ಧಾರಾವಾಹಿ ನಿಂತೆ ಹೋಯಿತು ಎಂದುಕೊಂಡಾಗಲೇ ನೋಡುಗರ ಮನಸ್ಸಿನ ಬೇಸರ ತಿಳಿದ, ಟೀಂ ಧಾರಾವಾಹಿಯ ಕಥೆಯನ್ನು ಅದ್ಭುತವಾಗಿ ಬೇರೆ ದಿಕ್ಕಿಗೆ ಎಳೆದಿತ್ತು.

ಅಬ್ಬಾ ಒಂದಾ-ಎರಡಾ ? ಆರ್ಯ ಸತ್ತೆ ಹೋಗುತ್ತಾನೆ ಎಂಬುದನ್ನು ಫ್ಯಾನ್ಸ್ ಸಹಿಸಿಕೊಳ್ಳದ ಕಾರಣ, ಅಲ್ಲಿಂದ ಇಲ್ಲಿಯವರೆಗೂ ಕಥೆಯ ದಾರಿ ವಿಭಿನ್ನವಾಗಿ ಸಾಗುತ್ತಿದೆ. ಒಂದೇ ಒಂದು ದಿನ ಆ ಧಾರಾವಾಹಿ ನೋಡದೆ ಹೋದರೂ, ಓ ಕಥೆ ಎನಾಯ್ತು ಎಂಬೆಲ್ಲಾ ಗಲಿಬಿಲಿ ಇರುತ್ತದೆ. ಅಂಥದ್ರಲ್ಲಿ ಈಗ ಇದ್ದಕ್ಕಿದ್ದ ಹಾಗೇ ಧಾರಾವಾಹಿ ನಿಂತು ಹೋಗುತ್ತಾ ಎಂಬ ಅನುಮಾನ ಮೂಡಿದೆ.

ಅನು ಮಗುಗಾಗಿ ಕಾಯುತ್ತಿರೋ ಫ್ಯಾನ್ಸ್

ಅನು ಮಗುಗಾಗಿ ಕಾಯುತ್ತಿರೋ ಫ್ಯಾನ್ಸ್

ಇಷ್ಟು ದಿನ ಒಂದು ರೀತಿಯ ಕಥೆಯನ್ನು ನೋಡಿದವರಿಗೆ ಈಗ ಭಾವನಾತ್ಮಕ ತೊಳಲಾಟವನ್ನು ನೋಡುವ ಸಮಯ. ಯಾಕೆಂದರೆ ತನ್ನ ಸಾವಿಗೆ, ತಂದೆ ರಾಜವರ್ಧನ್ ಸಾವಿಗೆ ಆರ್ಯನೆ ಕಾರಣವೆಂದು, ಅದೇ ದ್ವೇಷದಲ್ಲಿ ಮರು ಜನ್ಮವೆತ್ತಿ ಬಂದಿರುವ ರಾಜನಂದಿನಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಳು. ಆದರೆ‌ ಇದೇ ಸಮಯದಲ್ಲಿ ಅನು ಸಿರಿಮನೆ ಆರ್ಯವರ್ಧನ್ ಮಗುವಿಗೆ ತಾಯಿ ಆಗುತ್ತಿದ್ದಾಳೆ. ಒಂದು ಕಡೆ ದ್ವೇಷ. ಮತ್ತೊಂದು ಕಡೆ ಮಗುವಿನ ಹಾರೈಕೆ. ಅನು ಸಿರಿಮನೆ ಸೇಡನ್ನು ತೀರಿಸಿಕೊಳ್ಳುವುದು ಬೇಡ ಎಂದರೂ, ಅದನ್ನು ಮುಗಿಸಲು ಹರ್ಷ ರೆಡಿ ಇಲ್ಲ. ಯಾಕೆಂದರೆ ಈ ಎಲ್ಲಾ ಸಮಸ್ಯೆಗಳು ಹರ್ಷನ ಬಾಲ್ಯವನ್ನೇ ಕಳೆದುಬಿಟ್ಟಿದೆ. ಹೀಗಾಗಿ ಹರ್ಷನಿಗೆ ಹೆಚ್ಚು ಕೋಪ ಬಂದಿದೆ.

ಮಗು ಹುಟ್ಟಿದ ಮೇಲೆ ಕಥೆ ಮುಗಿಯುತ್ತಾ?

ಮಗು ಹುಟ್ಟಿದ ಮೇಲೆ ಕಥೆ ಮುಗಿಯುತ್ತಾ?

ಅನು ಸಿರಿಮನೆ ಸದ್ಯ ತಾಯಿಯಾಗುತ್ತಿದ್ದಾಳೆ. ಈ ವಿಚಾರ ಮನೆಯವರಿಗೆ ಗೊತ್ತಾದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಆದರೆ ಅನು ಗೊಂದಲದಲ್ಲಿದ್ದಾಳೆ. ಮನೆಯವರಿಗೆ ಹೇಳುವುದೋ ಬಿಡುವುದೋ ತಿಳಿಯುತ್ತಿಲ್ಲ. ಯಾಕೆಂದರೆ ಒಂದು ಕಡೆ ತನ್ನ ಸೇಡನ್ನು ತೀರಿಸಿಕೊಳ್ಳಲು ಎಲ್ಲಾ ಕಡೆಯ ಹಾದಿಯಿಂದಲೂ ಯತ್ನಿಸುತ್ತಿದ್ದಾಳೆ. ಹೀಗಾಗಿ ಮನೆಯವರಿಗೆ ಇನ್ನು ಗರ್ಭಿಣಿ ಎಂಬ ವಿಚಾರವನ್ನು ತಿಳಿಸಿಲ್ಲ. ಆದರೆ ಮಗು ಹುಟ್ಟಿದ ಮೇಲೆ ಧಾರಾವಾಹಿಯ ಕಥೆ ಸಾಗುವುದಿಲ್ಲವೇನೋ ಎಂಬ ಅನುಮಾನ ಮೂಡಿದೆ. ಅನುಸಿರಿಮನೆಗೆ ಮಗುವಾದ ಮೇಲೆ ಧಾರಾವಾಹಿ ನಿಂತು ಹೋಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಅದಕ್ಕೆಲ್ಲಾ ಕಾರಣ ಆ ಒಂದು ವಿಡಿಯೋ.

ಗೆಟ್ ಟುಗೆದರ್ ಪಾರ್ಟಿ ಹಿಂದಿನ ಕಾರಣವೇನು?

ಗೆಟ್ ಟುಗೆದರ್ ಪಾರ್ಟಿ ಹಿಂದಿನ ಕಾರಣವೇನು?

ಗೆಟ್ ಟಿಗೆದರ್ ಪಾರ್ಟಿ ಮಾಡುವುದು ಯಾತಕ್ಕಾಗಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಈಗ 'ಜೊತೆ ಜೊತೆಯಲಿ' ಧಾರಾವಾಹಿ ಮುಗಿದು ಹೋಗುತ್ತಾ ಎಂಬುದಕ್ಕೆ ಈ ಪಾರ್ಟಿಯೇ ಕಾರಣವಾಗಿದೆ. 'ಜೊತೆ ಜೊತೆಯಲಿ' ಧಾರಾವಾಹಿಯ ಎಲ್ಲಾ ನಟ-ನಟಿಯರು ಸೇರಿಕೊಂಡು ಅದ್ಭುತವಾಗಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಮೇಘಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಆಚರಿಸಿರುವ ಪಾರ್ಟಿಗೆ ಗೆಟ್ ಟುಗೆದರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದರಿಂದಾಗಿ ಧಾರಾವಾಹಿ ನಿಂತು ಹೋಗುತ್ತಾ ಎಂಬ ಅನುಮಾನ ಮೂಡಿದೆ.

ಬೇಸರದ ಕಮೆಂಟ್ ಗಳು

ಐ ಥಿಂಕ್ ಮೇಘಾ ಶೆಟ್ಟಿ ಹಂಚಿಕೊಂಡಿರುವ ವಿಡಿಯೋ ಕ್ಲಿಪ್ ನೋಡಿದರೆ ಅದು ಮಹದೇವಪುರದ ಬಳಿ ಇರುವ ರೆಸಾರ್ಟ್ ಒಂದರಲ್ಲಿ ಮಸ್ತಿ ‌ಮಾಡಿರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಕೇಕ್ ಕತ್ತರಿಸಿ, ಡ್ಯಾನ್ಸ್ ಮಾಡಿ, ಅಡ್ವೆಂಚರ್ ಮಾಡುತ್ತಾ ಇಡೀ ಟೀಂ ಖುಷ್ ಖುಷಿಯಾಗಿ‌ ಕಳೆದಿದ್ದಾರೆ. ಗೆಟ್ ಟುಗೆದರ್ ಪಾರ್ಟಿ ಎಂದ ಕೂಡಲೇ ಫ್ಯಾನ್ಸ್ ಹಾರ್ಟ್‌ಗೆ ಕೊಂಚ ಬೇಸರ ಉಂಟು ಮಾಡಿದೆ. ಹಾಗಾದರೆ ಧಾರಾವಾಹಿ ನಿಂತು ಹೋಗುತ್ತಾ ಎಂದು ಹಲವರು ಬೇಸರ ಮಾಡಿಕೊಂಡು ಕಮೆಂಟ್ ಹಾಕಿದ್ದಾರೆ. ಇನ್ನು ಹಲವರಿಗೆ ಆ ಸ್ಥಳದ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಹೀಗಾಗಿ ಸಾಕಷ್ಟು ಜನ ಆ ಸ್ಥಳ ಯಾವುದೆಂದು ಕಮೆಂಟ್ ಹಾಕಿದ್ದರೆ, ಹಲವರು ಕುಟುಂಬದ ಖುಷಿ ಕಂಡು ತಾವು ಖುಷಿಪಟ್ಟಿದ್ದಾರೆ.

More from Filmibeat

English summary
Is Kannada Serial Jothe Jotheyali End its Journey? Video Reveals. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X