ಶ್ರುತಿ ಬಳಿಕ 'ಬಿಗ್ ಬಾಸ್' ಎರಡನೇ ಮಹಿಳಾ ವಿಜೇತ ಸ್ಪರ್ಧಿ ಆಗ್ತಾರ ಕವಿತಾ?
ಇಂದು ಬಿಗ್ ಬಾಸ್ ಗ್ರಾಂಡ್ ಫಿನಾಲೆ. ನೂರು ದಿನಗಳ ಆಟಕ್ಕೆ ಇಂದು ತೆರೆಬೀಳಲಿದೆ. ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಫಿನಾಲೆಗೆ ನವೀನ್ ಸಜ್ಜು, ಶಶಿ ಮತ್ತು ಕವಿತಾ ಗೌಡ ತಲುಪ್ಪಿದ್ದಾರೆ.
ಕೆಲವರು ನವೀನ್ ಸಜ್ಜು ಗೆಲ್ಲಬಹುದು ಎಂದರೆ, ಇನ್ನು ಕೆಲವರು ಶಶಿ ಗೆಲ್ಲಬಹುದು ಎನ್ನುತ್ತಿದ್ದಾರೆ. ಇದರ ಜೊತೆಗೆ ಕವಿತಾ ಗೆಲ್ಲಬಹುದು ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, ಇಲ್ಲಿಯವರೆಗೂ ಬಿಗ್ ಬಾಸ್ ನಲ್ಲಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ, ಒಳ್ಳೆ ಹುಡುಗ ಪ್ರಥಮ್ ಮತ್ತು ಚಂದನ್ ಶೆಟ್ಟಿ ಗೆದ್ದಿದ್ದರು. ಆ ಪೈಕಿ ಶ್ರುತಿ ಒಬ್ಬರೆ ಮಹಿಳೆ ಸ್ಪರ್ಧಿ ಆಗಿದ್ದರು. ಹಾಗೆನಾದರೂ, ಈ ಬಾರಿ ಕವಿತಾ ಗೆದ್ದರೆ ಅವರು ಬಿಗ್ ಬಾಸ್ ಗೆದ್ದ ಎರಡನೇ ಮಹಿಳಾ ಸ್ಪರ್ಧಿ ಆಗುತ್ತಾರೆ.

ಇನ್ನು ಈ ಸಲ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ? ಕವಿತಾ ಬಿಗ್ ಬಾಸ್ ಪಟ್ಟ ಪಡೆಯುವ ಸಾಧ್ಯತೆ ಇದ್ಯಾ ಎಂಬುದಕ್ಕೆ ಉತ್ತರ ಬೇಕು ಎಂದರೆ ಸಂಜೆಯವರೆಗು ಕಾದು ನೋಡಬೇಕು....
More from Filmibeat
English summary
Is Kavitha Gowda will win bigg boss kannada 6 finale.


Click it and Unblock the Notifications











