Lakshmibaramma: ವೈಷ್ಣವ್ ಸಿಂಗರ್ ಅನ್ನೋದನ್ನೆ ಮರೆತೋಗಿದ್ದಾರಾ 'ಲಕ್ಷ್ಮೀ ಬಾರಮ್ಮ' ಡೈರೆಕ್ಟರ್?

By ಎಸ್ ಸುಮಂತ್

ಕಾವೇರಿಯಂಥ ತಾಯಿ, ಕಾವೇರಿಯಂಥ ಅತ್ತೆ ಇನ್ಯಾರಿಗೂ ಸಿಗಬಾರದು ಅಂತಾನೇ ಬಯಸುವ ಹೆಣ್ಣು ಮಕ್ಕಳಿದ್ದಾರೆ. ಪುಟ್ಟ ಪುಟ್ಟ ಅಂದುಕೊಂಡು ಮಗನಿಗೆ ನಾನೇ ಎಲ್ಲಾ ಆಗಿರಬೇಕು, ಕುಂತ್ರು ಅಮ್ಮ ಎನ್ನಬೇಕು, ನಿಂತ್ರು ಅಮ್ಮ ಎನ್ನಬೇಕು. ಏನೇ ಬೇಕು ಅಂದ್ರು ಅಮ್ಮನ ಬಳಿ ಕೇಳಬೇಕು. ಇದು ಕಾವೇರಿಯ ಮಹದಾಸೆ. ಅದಕ್ಕೆ ಮಗನ ಪ್ರೀತಿಯನ್ನು ಕೊಂದೇ ಬಿಟ್ಟಳು. ಈಗ ತಾನೇ ಆಯ್ಕೆ‌ ಮಾಡಿ ತಂದ ಸೊಸೆಯನ್ನು ಕೊಲ್ಲುವ ಪ್ಲ್ಯಾನ್ ಮಾಡಿದ್ದಾಳೆ.

ವೈಷ್ಣವ್ ತನ್ನ ತಾಯಿಯನ್ನು ಕುರುಡನಂತೆ ನಂಬಿದ್ದಾನೆ. ಕಾವೇರಿ ಆಡುತ್ತಿರುವ ನಾಟಕಕ್ಕೆ ಪುಷ್ಠಿ ಸಿಗುವಂತೆ ಆಗಿದ್ದೆ ಲಕ್ಷ್ಮೀ ಆಡಿದ್ದ ನಾಟಕದಿಂದ. ತನ್ನ ಮೈಮೇಲೆ ಕೀರ್ತಿ ಬಂದಿದ್ದಾಳೆಂದು ಲಕ್ಷ್ಮೀ ಆಡಿದ್ದ ನಾಟಕವನ್ನೇ ಕಾವೇರಿ ಬಂಡವಾಳವಾಗಿಸಿಕೊಂಡು, ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದಾಳೆ. ಇದರ ನಡುವೆ ವೈಷ್ಣವ್ ಒಬ್ಬ ಹಾಡುಗಾರ ಎಂಬುದನ್ನೇ ಮರೆತೋದಂತೆ ಕಾಣಿಸ್ತಿದೆ.

is lakshmibaramma director forgot that Vaishnav famous singer in the story

ವೈಷ್ಣವ್ ಫೇಮಸ್ ಸಿಂಗರ್ ಆಗಿದ್ದ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಫೇಮಸ್ ಸಿಂಗರ್. ಅವರ ಒಂದೇ‌ ಒಂದು ಆಲ್ಬಂಗಾಗಿ ಮ್ಯೂಸಿಕ್ ಕಂಪನಿಗಳು ಕಾಯುತ್ತಿದ್ದವು. ಅಷ್ಟು ಡಿಮ್ಯಾಂಡ್ ಇತ್ತು. ವೈಷ್ಣವ್ ಕೇಳಿದ್ದಷ್ಟು ಹಣ ಕೊಟ್ಟು ಸಾಂಗ್ಸ್ ಹಾಡಿಸುತ್ತಿದ್ದರು. ವೈಷ್ಣವ್ ಆಡಿದ ಒಂದೊಂದು ಹಾಡು ಕೂಡ ಮಿಲಿಯನ್ ಗಟ್ಟಲೇ ವೀವ್ಸ್ ಆಗುತ್ತಿತ್ತು. ಅಭಿಮಾನಿಗಳು ಕೂಡ ವೈಷ್ಣವ್ ಹಾಡಿಗಾಗಿ ಕಾಯುತ್ತಿದ್ದರು.

ಸಖಿಯೇ..ಸಖಿಯೇ ಹಿಟ್ ಸಾಂಗ್

ಅದರಲ್ಲೂ ಲವ್ ಮೂಡಲ್ಲಿದ್ದಾಗ ವೈಷ್ಣವ್ ಒಳ್ಳೊಳ್ಳೆ ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದನು. ಕೀರ್ತಿ ಹಾಗೂ ವೈಷ್ಣವ್ ಆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ವೈಷ್ಣವ್ ಸೂಪರ್ ಸಿಂಗರ್ ಆಗಿದ್ರೆ ಕೀರ್ತಿ ಸಖತ್ ಡ್ಯಾನ್ಸರ್. ಹೀಗಾಗಿ ಇಬ್ಬರು ತಮ್ಮದೇ ಲೋಕದಲ್ಲಿ ತೇಲುತ್ತಿದ್ದರು. ಅವರಿಬ್ಬರ ಡ್ಯುಯೆಟ್ ಸಾಂಗ್ ಅಂದ್ರೆ ಸಖಿಯೇ ಸಖಿಯೇ ಹಾಡು ಫೇಮಸ್ ಹಾಡಗಿತ್ತು. ಆಗಾಗ ಆ ಹಾಡು ಪ್ಲೇ ಆಗುತ್ತಿದ್ದರೆ ಕೇಳುತ್ತಿದ್ದರೆ ಮನಸ್ಸಿಗೆ ಮುದಾ, ಕಿವಿಗೆ ಹಿತವಾಗಿ ಕೇಳಿಸುತ್ತದೆ. ವೈಷ್ಣವ್‌ನ ಒಬ್ಬ ಸಿಂಗರ್ ಆಗಿ ನೋಡುವುದಕ್ಕೇನೆ ಸುಮಾರು ಜನಕ್ಕೆ ಪ್ರೀತಿ.

ಸಮಸ್ಯೆಗಳಲ್ಲೇ ಕಳೆದು ಹೋದ ವೈಷ್ಣವ್

ಸಿಂಗರ್ ವೈಷ್ಣವ್ ಈಗ ಕಾಣಿಸುತ್ತಲೇ ಇಲ್ಲ. ಸಮಸ್ಯೆಗಳ ಸುಳಿಯಲ್ಲಿ ಸುತ್ತಿಕೊಂಡಿರುವ ವೈಷ್ಣವ್ ಕಾಣಿಸುತ್ತಿದ್ದಾರೆ. ಬೆಳಗ್ಗೆ ಆದ್ರೆ ಟೆನ್ಶನ್ ಟೆನ್ಶನ್ ಟೆನ್ಶನ್. ತನ್ನ ಪ್ಯಾಷನ್ ಕೂಡ ಮರೆತು ಹೋಗಿದ್ದಾನೆ. ಕಾವೇರಿಯ ಕಿತಾಪತಿ, ಲಕ್ಷ್ಮೀ ಪರಿಸ್ಥಿತಿ. ಯಾರನ್ನ ನಂಬಬೇಕು, ಯಾವುದನ್ನು ನಂಬಬೇಕು ಎಂಬುದೇ ಅವನಿಗೆ ತಿಳಿಯುತ್ತಿಲ್ಲ. ಅಮ್ಮನ ಮಾತನ್ನೇ ನಂಬಿಕೆ ಹೆಂಡತಿಯನ್ನು ಮಾನಸಿಕ ಆಸ್ವಸ್ಥರೇ ಇರುವ ಜಾಗಕ್ಕೆ ಸೇರಿಸಿದ್ದಾನೆ. ಈಗಲೂ ಅದೇ ಸಮಸ್ಯೆಯ ಸುಳಿಯಲ್ಲಿಯೇ ಗಿರಕಿ ಹೊಡೆಯುತ್ತಿದ್ದಾನೆ.

ಬೇಜಾರಾದಾಗಲಾದರೂ ವೈಷ್ಣವ್ ಆಡ್ತಿಲ್ವಲ್ಲ

ವೈಷ್ಣವ್ ಅಂದ್ರೆ ಹುಡುಗಿಯರು ಕ್ಯೂ ನಿಲ್ಲುತ್ತಿದ್ದರು. ಹ್ಯಾಂಡ್ಸಮ್ ಹಂಕ್, ಇಂಪಾದ ಧ್ವನಿ. ಆದ್ರೆ ನಿರ್ದೇಶಕರು ಯಾಕೋ ವೈಷ್ಣವ್‌ನನ್ನು ಬೇರೆ ರೀತಿಯೇ ಮಾಡಿ ಬಿಟ್ಟಿದ್ದಾರೆ. ಮುಖದಲ್ಲಿ ಹೀರೋ ಕಳೆ ಹೋಗಿ, ಸದಾ ಟೆನ್ಶನ್ ತೂಗುಯ್ಯಾಲೆ ಆಡುವಂತೆ ಮಾಡಿದ್ದಾರೆ. ಸಿಂಗರ್ ಎಂದಾಗ ಸದಾ ಹಾಡಿನಲ್ಲಿಯೇ ಮುಳುಗಿರುತ್ತಾರೆ. ಹಾಡು ಹೇಳುವುದೇ ಬದುಕಾಗಿರುತ್ತದೆ. ನೋವಾದರೆ ಒಂದು ರೀತಿಯ ಹಾಡು, ಖುಷಿಯಾದರೆ ಮತ್ತೊಂದು ರೀತಿಯ ಹಾಡು. ಏನೇ ಆಗಲಿ, ಏನೇ ಹೋಗಲಿ ಹಾಡು ಹೇಳುವ ಮೂಲಕವೇ ಎಲ್ಲವೂ ನಡೆಯುತ್ತದೆ. ಆದರೆ ವೈಷ್ಣವ್ ಬದುಕಲ್ಲಿ ಆ ಸಿಂಗರ್ ಕಳೆದೋಗಿರೋದಾದರೂ ಯಾಕೆ? ಎಂದು ಹುಡುಕುತ್ತಿರುವ ವೀಕ್ಷಕ..!

More from Filmibeat

English summary
Colors kannada Lakshmibaramma Written Update on November 4th episode. Here is the details about netizens upaset with story;
Read more about: sumanth serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X