ಹಿಟ್ಲರ್ ಕಲ್ಯಾಣ: ಎಜೆ ಕಣ್ಣೀರಿಗೆ ಕರಗುತ್ತಾಳಾ ಲೀಲಾ?
ಕಿರುತೆರೆ ಧಾರಾವಾಹಿಗಳಲ್ಲಿ ಜನ ನಿತ್ಯವೂ ತಪ್ಪದೇ ತಮ್ಮ ಮನೆಗೆ ಎಜೆ ಮತ್ತು ಲೀಲಾಳನ್ನು ಬರ ಮಾಡಿಕೊಳ್ಳುತ್ತಾರೆ. ಎಜೆ ಮತ್ತು ಲೀಲಾ ಅಂದಾಕ್ಷಣ ಇದು ಯಾವ ಧಾರಾವಾಹಿ ಎನ್ನುವುದು ಗೊತ್ತಾಗಿ ಬಿಡುತ್ತದೆ. ಹೌದು ನಿಮ್ಮ ಊಹೆ ಸರಿ ಇದು ಹಿಟ್ಲರ್ ಕಲ್ಯಾಣ ಧಾರಾವಾಹಿ. ಹಿಟ್ಲರ್ ಕಲ್ಯಾಣ ಧಾರಾವಾಹಿ ಜನ ಮನ ಗೆದ್ದು, ಮುಂದೆ ಸಾಗುತ್ತಿದೆ.
ನಿತ್ಯವೂ ಒಂದಲ್ಲಾ ಒಂದು ಟ್ವಿಸ್ಟ್ ಈ ಧಾರಾವಾಹಿಯಲ್ಲಿ ಇದ್ದೇ ಇರುತ್ತದೆ. ಒಂದು ಕಡೆ ಲೀಲಾ, ಮತ್ತೊಂದು ಕಡೆ ಎಜೆ. ಇವರಿಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದರು, ಮನಸ್ಸಿನ ಅಂತರ ಹೆಚ್ಚಾಗಿ ಇಲ್ಲ. ಲೀಲಾ ಇನ್ನೇನು ಎಜೆ ಕಡೆಗೆ ವಾಲ ಬೇಕು, ಅಷ್ಟರಲ್ಲೇ ಕಿಡಿಗೇಡಿಗಳು ಲೀಲಾ ಮನಸ್ಸಿಗೆ ಹುಳಿ ಇಂಡಿ ಬಿಡುತ್ತಾರೆ.
ಎಜೆ ಒಬ್ಬ ಕ್ರೂರ ವ್ಯಕ್ತಿ ಎಂದೇ ಲೀಲಾ ತಿಳಿದುಕೊಂಡಿದ್ದಾಳೆ. ಹಾಗಾಗಿ ಎಜೆ ಬಗ್ಗೆ ಎಷ್ಟೇ ಉತ್ತಮ ಅಭಿಪ್ರಾಯ ಮನಸಲ್ಲಿ ಬಂದರೂ ಕೂಡ ಅದನ್ನು ಲೀಲಾ ಒಪ್ಪಲು ರೆಡಿ ಇಲ್ಲ. ಎಜೆಗೆ ಬುದ್ದಿ ಕಲಿಸುತ್ತೇನೆ ಎಂದು ಲೀಲಾ ಹಠ ಮಾಡುತ್ತಿದ್ದಾಳೆ. ಆದರೆ ಲೀಲಾಗೆ ತನ್ನ ತಿಳುವಳಿಕೆಗೂ ಮೀರಿದ್ದು ಏನೋ ಇದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.

ಎಜೆ ಕನಸಿನ ಪ್ರಾಜೆಕ್ಟ್‌ಗೆ ಕೊನೆಗೂ ಸಹಿ ಹಾಕಿದ ಲೀಲಾ!
ಸದ್ಯ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆ ಮತ್ತು ಆತನ ಮೊದಲ ಪತ್ನಿಯ ಕನಸಿನ ಪ್ರಾಜೆಕ್ಟ್‌ಗೆ ಸಹಿ ಹಾಕುವ ಸನ್ನಿವೇಶ ನಡೆಯುತ್ತಿದೆ. ಈಗ ಎಜೆ ಹೆಂಡತಿ ಸ್ಥಾನದಲ್ಲಿ ಇರುವ ಲೀಲಾ ಅವರ ಕನಸಿನ ಪ್ರಾಜೆಕ್ಟ್‌ಗೆ ಸಹಿ ಹಾಕಬೇಕು. ಇದಕ್ಕೆ ಸಹಿ ಹಾಕಲು ಲೀಲಾ ಎಜೆಗೆ ಷರತ್ತು ವಿಧಿಸಿರುತ್ತಾಳೆ. ತನ್ನ ತವರು ಮನೆಗೆ ಎಜೆ ಬರಬೇಕೆಂದು ಷರತ್ತು ಹಾಕಿರುತ್ತಾಳೆ. ಎಲ್ಲವೂ ಮುಗಿದು ಇನ್ನೇನು ಲೀಲಾ ಸಹಿ ಹಾಕ ಬೇಕು ಎನ್ನವಷ್ಟರಲ್ಲಿ ಲೀಲಾಳ ಅಪಹರಣ ಮಾಡಿಸುತ್ತಾಳೆ ಎಜೆ ಹಿರಿಯ ಸೊಸೆ ದುರ್ಗಾ. ಆದರೆ ಎಲ್ಲವನ್ನು ದಾಟಿ ಈಗ ಸಹಿ ಹಾಕಲು ಲೀಲಾ ಬಂದಿದ್ದಾಳೆ. ಆದರೆ ಅಲ್ಲೂ ಎಡವಟ್ಟು ಆಗುವ ಸೂಚನೆ ಇದೆ. ಲೀಲಾ ಸಹಿ ಹಾಕುತ್ತಲೇ, ಎಜೆ ಕಣ್ಣೀರು ಸಹಿ ಮೇಲೆ ಬೀಳುತ್ತೆ. ಅದು ಅಳಿಸಿ ಹೋಗುತ್ತಾ ಎನ್ನುವ ಕುತೂಹಲ ಸದ್ಯಕ್ಕೆ ಮೂಡಿದೆ.

ಎಜೆ ಕಣ್ಣೀರಿಗೆ ಕರಗುತ್ತಾಳ ಲೀಲಾ!
ಲೀಲಾ ಮನಸ್ಸಲ್ಲಿ ಎಜೆ ಬಗ್ಗೆ ಅಪನಂಬಿಕೆ ಇದೆ. ಎಜೆ ತನ್ನ ಪತ್ನಿ ಅಂತರಾಳನ್ನು ಕೊಂದಿದ್ದಾನೆ ಎಂದು ಲೀಲಾ ತಪ್ಪು ತಿಳಿದು ಕೊಂಡಿದ್ದಾಳೆ. ಹಾಗಾಗಿ ಎಜೆ ಬಗ್ಗೆ ಲೀಲಾ ಮನಸ್ಸಲ್ಲಿ ಪ್ರೀತಿ ಇಲ್ಲ. ದ್ವೇಷವೇ ತುಂಬಿದೆ. ಆದರೆ ಕನಸಿನ ಪ್ರಾಜೆಕ್ಟ್‌ಗೆ ಲೀಲಾ ಸಹಿ ಹಾಕುವಾಗ ಎಜೆ ಭಾವುಕರಾಗುತ್ತಾರೆ. ತನ್ನ ಮತ್ತು ತನ್ನ ಮೊದಲ ಪತ್ನಿ ಅಂತರ ಅಂದುಕೊಂಡ ಉದ್ದೇಶ ನೆರವೇರುತ್ತಿರುವ ಸಮಯ. ಹಾಗಾಗಿ ಅಂತರಾಳನ್ನು ನೆನೆದು ಎಜೆ ಕಣ್ಣೀರು ಹಾಕುತ್ತಾರೆ. ಇದನ್ನು ನೋಡಿದ ಬಳಿಕ ಲೀಲಾಗೆ ಎಜೆ ಬಗ್ಗೆ ಇರುವ ಭಾವನೆ ಬದಲಾಗುತ್ತಾ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

ಎಜೆ ಬಗ್ಗೆ ತಪ್ಪು ತಿಳಿದು ಕೊಂಡಿರುವ ಲೀಲಾ!
ಎಜೆ ಮತ್ತು ಲೀಲಾ ಮದುವೆ ಆಗಬೇಕು ಎನ್ನುವುದು ಅಂತರ ನಿರ್ಧಾರ. ಎಷ್ಟು ಅಡ್ಡಿಗಳು ಬಂದರು ಎಲ್ಲವನ್ನೂ ದಾಟಿ ಲೀಲಾ ಮತ್ತು ಎಜೆ ಮದುವೆ ಆಗಿ ಬಿಟ್ಟಿದೆ. ಎಜೆ ಅನಿವಾರ್ಯಕ್ಕೆ ಲೀಲಾಳನ್ನು ಮನೆಯಲ್ಲಿ ಇಟ್ಟು ಕೊಂಡರೆ, ಲೀಲಾ ಎಜೆ ಮೇಲಿನ ಕೋಪಕ್ಕೆ, ದ್ವೇಷಕ್ಕೆ ಅವರ ಜೊತೆಗೆ ಇದ್ದಾಳೆ. ಅಂತರಾಳನ್ನು ಕೊಂದಿದ್ದು ಎಜೆ ಮತ್ತು ದೇವ್ ಜೊತೆಗೆ ಒಂದಾಗಿ ತನ್ನನ್ನು ಮೋಸದಿಂದ ಎಜೆ ಮದುವೆ ಆಗಿದ್ದಾರೆ ಎಂದು ಲೀಲಾ ಭಾವಿಸಿದ್ದಾಳೆ. ಈ ವಿಷವನ್ನು ಎಜೆ ತಲೆಗೆ ತುಂಬಿದ್ದಾನೆ ದೇವ್. ಹಾಗಾಗಿ ಸತ್ಯ ತಿಳಿಯುವವರೆಗೂ ಲೀಲಾ ಎಜೆಯನ್ನು ದ್ವೇಷಿಸುತ್ತಿರುತ್ತಾಳೆ.

ಲೀಲಾಗೆ ಟಕ್ಕರ್ ಕೊಡಲು ಆರಂಭಿಸಿದ 3 ಸೊಸೆಯರು!
ಇನ್ನು ಲೀಲಾಳನ್ನು ಹೆದರಿ, ಬೆದರಿಸಿ ಮನೆಯಿಂದ ಹೊರ ಹಾಕಲು ಮೂವರು ಸೊಸೆಯರು ಎಲ್ಲಿಲ್ಲದ ಪ್ರಯತ್ನ ಮಾಡಿದರು. ಆದರೆ ಅದ್ಯಾವುದಕ್ಕೂ ಲೀಲಾ ಬಗ್ಗಲಿಲ್ಲ. ಅತ್ತೆಯಾಗಿ ಚಾರ್ಜ್ ತೆಗೆದುಕೊಂಡಿದ್ದಾಳೆ. ಹಾಗಾಗಿ ಎಜೆ ಕಣ್ಣಲ್ಲಿ ಲೀಲಾಳನ್ನು ವಿಲನ್ ಆಗಿ ಮಾಡಲು ಪಣ ತೊಟ್ಟಿದ್ದಾರೆ. ಲೀಲಾ ಎಜೆಗೆ ಹತ್ತಿರ ಆದರೆ ತಮ್ಮ ಬೇಳೆ ಬೇಯುವುದಿಲ್ಲ ಎಂದು ತಿಳಿದು, ಲೀಲಾಳಿಂದ ಎಡವಟ್ಟು ಆಗುವಂತೆ ಪ್ಲ್ಯಾನ್ ಮಾಡುತ್ತಿದ್ದಾರೆ. ಈಗ ಲೀಲಾ ಏನು ಮಾಡುತ್ತಾಳೆ ಎನ್ನುವುದನ್ನು ನೋಡ ಬೇಕಾಗಿದೆ.


Click it and Unblock the Notifications