ಈ ನಟಿ ನೆನಪಿದೆಯೇ? ಎಲ್ಲಿ ಹೋದಳು 'ಮಂಗಳ ಗೌರಿ'?
'ಮಂಗಳ ಗೌರಿ ಮದುವೆ' ಧಾರಾವಾಹಿ ಎಂದಾಕ್ಷಣ ಕಿರುತೆರೆ ಪ್ರೇಕ್ಷಕರಿಗೆ ನೆನಪಾಗುವುದು 'ಪುಟ್ಟಗೌರಿ' ಧಾರಾವಾಹಿ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಅದು ಮುಗಿಯುತ್ತಿದ್ದಂತೆ ಅದರ ಬೆನ್ನ ಹಿಂದೆಯೇ 'ಮಂಗಳಗೌರಿ ಮದುವೆ' ಧಾರಾವಾಹಿ ಆರಂಭವಾಯಿತು.
ಬಹಳ ವಿಭಿನ್ನ ಕಥಾ ಅಂದರೆ ಹೊಂದಿದ್ದ ಈ ಧಾರಾವಾಹಿ ಜನಮನ ಗೆದ್ದಿತ್ತು. ಈ ಎರಡೂ ಧಾರವಾಹಿಗಳನ್ನು ರಾಮ್ ಜಿ ಸಂಸ್ಥೆಯ ನಿರ್ಮಾಣ ಮಾಡಿತ್ತು. 'ಮಂಗಳ ಗೌರಿ ಮದುವೆ' ಧಾರಾವಾಹಿ ಅಂತೂ ತನ್ನ ಫೈಟಿಂಗ್ ಸೀನ್ ಹಾಗೂ ಇತರೆ ಸಾಹಸಿ ಸೀನ್‌ಗಳ ಮೂಲಕವೇ ಹೆಚ್ಚು ಟ್ರೋಲ್ ಆಗಿತ್ತು. ಇದರ ಒಂದಷ್ಟು ಟ್ರೋಲ್‌ಗಳು ಇಂದಿಗೂ ಜನರನ್ನು ನಗಿಸುವಲ್ಲಿ ಸೋತಿಲ್ಲ. ವಿಭಿನ್ನ ಕಥಾಹಂದರ ಹೊಂದಿದ್ದ ಈ ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿರುವಾಗಲೇ ನಾನಾ ಕಾರಣಗಳಿಂದ ಮುಕ್ತಾಯಗೊಂಡಿತ್ತು.

'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟ ಗಗನ್ ಚಿನ್ನಪ್ಪ ನಟಿಸಿದ್ದರು. ನಾಯಕ ನಟಿಯಾಗಿ ಕಾವ್ಯಶ್ರೀ ಗೌಡ ಹಾಗೂ ಖಳನಾಯಕಿಯಾಗಿ ನಟಿ ತನಿಷಾ ಕುಪ್ಪಂಡ ಅವರು ಕಾಣಿಸಿಕೊಂಡಿದ್ದರು. ಇಂದು ನಟ ಗಗನ್ ಚಿನ್ನಪ್ಪ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯ ಶ್ರೀರಾಮ್ ದೇಸಾಯಿ ಎನ್ನುವ ನಾಯಕ ನಟನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಖಳನಾಯಕಿ ಪಾತ್ರ ಮಾಡಿದ್ದ ನಟಿ ತನಿಷಾ ಕುಪ್ಪಂಡ ಅಂತೂ ಇದೀಗ ಬಹಳಷ್ಟು ಫೇಮಸ್ಸು.
ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಮಿಂಚ್ ಇರುವ ನಟಿ ತನಿಷಾ ಕುಪ್ಪಂಡ ಬೆಂಕಿ ತನುಷ ಎಂದೆ ಜನಮನ ಗೆದ್ದಿದ್ದಾರೆ. ಜೊತೆಗೆ ತಮ್ಮದೇ ಕುಪ್ಪಂಡ ಜ್ಯುವೆಲರ್ಸ್ ಅನ್ನು ಆರಂಭಿಸಿ ಇತ್ತೀಚೆಗಷ್ಟೇ ಒಂದು ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿದ್ದಾರೆ.
ಹೀಗಿರುವಾಗ 'ಮಂಗಳ ಗೌರಿ' ಧಾರಾವಾಹಿ, ನಾಯಕ ನಟಿಯಾಗಿ ಮಿಂಚಿದ್ದ ನಟಿ ಕಾವ್ಯಶ್ರೀ ಗೌಡ ಎಲ್ಲಿ ಹೋದರು ಎಂದು ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ? ನಟಿ ಕಾವ್ಯಶ್ರೀ ಗೌಡ 'ಮಂಗಳಗೌರಿ ಮದುವೆ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. 'ಮಂಗಳಗೌರಿ ಮದುವೆ' ಧಾರಾವಾಹಿಯುದ್ದಕ್ಕೂ ನಾಯಕ ನಟಿಯಾಗಿ ಮಿಂಚಿದವರು ತಮ್ಮ ನಟನೆಯಿಂದ ಬಹುದೊಡ್ಡ ಅಭಿಮಾನಿ ವೃಂದವನ್ನು ಪಡೆದುಕೊಂಡರು.

ಅದಾದ ಮೇಲೆ ಬಿಗ್ ಬಾಸ್ ಸೀಸನ್ ಎಂಟರಲ್ಲಿಯೂ ಸ್ಪರ್ಧಿಯಾಗಿ ಮಿಂಚಿದರು. ಬಿಗ್ ಬಾಸ್‌ನಲ್ಲಿ ತಾವು ಸ್ಪರ್ಧಿಯಾಗಿದ್ದ ಈಕೆ ಬಹಳಷ್ಟು ಫನ್ನಿ ಡೈಲಾಗ್ ಹಾಗೂ ಹಾವ ಭಾವದಿಂದಲೇ ಬಹುದೊಡ್ಡ ಪ್ರೇಕ್ಷಕ ಬಳಗವನ್ನು ಪಡೆದುಕೊಂಡರು. ಬಿಗ್ ಬಾಸ್‌ನಿಂದ ಹೊರಬಂದು ಹಲವು ವರ್ಷಗಳಾದರೂ ಬೇರೆ ಯಾವುದೇ ಕಿರುತೆರೆ ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಆಗಲಿ ನಟಿ ಕಾವ್ಯಶ್ರೀ ಕಾಣಿಸಿಕೊಂಡಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳಷ್ಟು ಆಕ್ಟಿವ್ ಇರುವ ಈ ನಟಿ, ಆಗಾಗ ಹಲವು ಫೋಟೋಗಳನ್ನು ಶೇರ್ ಮಾಡುತ್ತಾರೆ. ಸಾಮಾನ್ಯವಾಗಿ ಬಹಳ ಸಾಂಪ್ರದಾಯಿಕ ಹುಡುಗ ತೊಡುಗೆಯಲ್ಲಿ ಕಾಣಿಸಿಕೊಳ್ಳುವ ನಟಿ ಕಾವ್ಯಶ್ರೀ ಗೌಡ ಇತ್ತೀಚೆಗೆ ಬೋಲ್ಡ್ ಲುಕ್‌ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಕಾವ್ಯಶ್ರೀ ಗೌಡ ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೋಲ್ಡ್ ಲುಕ್‌ನಲ್ಲಿ ಪೋಸ್ ಕೊಟ್ಟು ಫೋಟೋಗಳನ್ನು ಶೇರ್ ಮಾಡಿ ಕೊಂಡಿದ್ದಾರೆ.
ಈ ಫೋಟೊಗಳನ್ನು ನೋಡಿರುವ ಅವರ ಫಾಲೋವರ್ಸ್ ಹಾಗೂ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಜೊತೆಗೆ, ಹೊಸ ಪ್ರಾಜೆಕ್ಟ್ ಏನಾದರೂ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯಾವುದೇ ಉತ್ತರ ಬಾರದಿದ್ದರೂ ನಟಿ ಕಾವ್ಯಾ ಗೌಡ ಅವರಂತೂ ಬಹಳ ದೊಡ್ಡ ಪ್ರೇಕ್ಷಕ ಬಳಗವನ್ನು ಹೊಂದಿರುವುದರಿಂದ, ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ತೆರೆ ಮೇಲೆ ಬನ್ನಿ ಎನ್ನುವ ಸತತ ಬೇಡಿಕೆ ಪ್ರೇಕ್ಷಕರಿಂದ ಅಭಿಮಾನಿಗಳಿಂದ ಬರುತ್ತಿದೆ.
ಎಲ್ಲಿ ಹೋದಳು ಮಂಗಳ ಗೌರಿ ಎಂಬ ಪ್ರಶ್ನೆಗೆ, ಏನಾದರೂ ಉತ್ತರ ಸಿಗಲಿದೆಯಾ? ನಟಿ ಕಾವ್ಯಶ್ರೀ ಗೌಡ ಹೊಸ ಪ್ರಾಜೆಕ್ಟ್ ಯಾವುದಾದರಲ್ಲಾದರೂ ನಟಿಸುವ ಯೋಜನೆಯಲ್ಲಿದ್ದಾರಾ? ಎಂಬ ಕುತೂಹಲಕ್ಕೆ ಪ್ರಶ್ನೆಗೆ ಇನ್ನೂ ಉತ್ತರ ಸಿಗಬೇಕಿದೆ ಅಷ್ಟೇ!


Click it and Unblock the Notifications











