For Quick Alerts
  ALLOW NOTIFICATIONS  
  For Daily Alerts

  ಈ ಬಾರಿಯ 'ಬಿಗ್ ಬಾಸ್' ವಿನ್ನರ್ ನವೀನ್ ಸಜ್ಜು?

  |

  'ಬಿಗ್ ಬಾಸ್ ಕನ್ನಡ' ವೀಕ್ಷಕರ ಮನಸ್ಸಿನಲ್ಲಿರೋ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಈ ಬಾರಿ 'ಬಿಗ್ ಬಾಸ್' ಯಾರು ಗೆದ್ದರು? ಎಂಬುದರ ಆಫೀಶಿಯಲ್ ಅನೌನ್ಸ್ ಕಾರ್ಯಕ್ರಮದಲ್ಲಿಯೇ ಆಗಲಿದೆ.

  ಈ ಬಾರಿಯ ಕಾರ್ಯಕ್ರಮದಲ್ಲಿ ಇದ್ದ 20 ಸ್ಪರ್ಧಿಗಳ ಪೈಕಿ ಐದು ಸ್ಪರ್ಥಿಗಳು ಫೈನಲ್ ಹಂತದವರಗೆ ಬಂದಿದ್ದರು. ಐದು ಜನರಲ್ಲಿ ನಿನ್ನೆ ಇಬ್ಬರು ಬಿಗ್ ಬಾಸ್ ಆಟದಿಂದ ಹೊರ ಹೋಗಿದ್ದಾರೆ.

  ಈ ಮೂವರಲ್ಲಿ ಯಾರಿಗೆ ಸಿಗಲಿದೆ 'ಬಿಗ್ ಬಾಸ್' ಪಟ್ಟ?ಈ ಮೂವರಲ್ಲಿ ಯಾರಿಗೆ ಸಿಗಲಿದೆ 'ಬಿಗ್ ಬಾಸ್' ಪಟ್ಟ?

  ಆಂಡ್ರ್ಯೂ, ಕವಿತಾ, ರಶ್ಮಿ, ಶಶಿ ಕುಮಾರ್, ನವೀನ್ ಸಜ್ಜು ಪೈಕಿ ಈಗ ಉಳಿದಿರುವುದು ನವೀನ್ ಸಜ್ಜು, ಕವಿತಾ ಹಾಗೂ ಶಶಿ ಮಾತ್ರ. ಈ ಮೂರು ಸ್ಪರ್ಧಿಗಳ ಪೈಕಿ ಒಬ್ಬರ ತಲೆ ಮೇಲೆ ಬಿಗ್ ಬಾಸ್ ಕಿರೀಟ ಜಾಗ ಪಡೆಯಲಿದೆ.

  ಕಾರ್ಯಕ್ರಮದ ಕೊನೆ ದಿನದ ಸಂಚಿಕೆ ಪ್ರಸಾರ ಆಗುವುದು ಇನ್ನು ಬಾಕಿ ಇದೆ. ಆದರೆ, ಈಗಾಗಲೇ ನವೀನ್ ಸಜ್ಜು ವಿನ್ನರ್ ಎನ್ನುವ ಮಾತು ಹೆಚ್ಚಾಗಿದೆ. ಮುಂದೆ ಓದಿ...

  ನವೀನ್ ಸಜ್ಜು ವಿನ್ನರ್ ?

  ನವೀನ್ ಸಜ್ಜು ವಿನ್ನರ್ ?

  ಗಾಯಕ ನವೀನ್ ಸಜ್ಜು ಫೈನಲ್ ಗೆ ಆಯ್ಕೆ ಆಗಿರುವ ಟಾಪ್ 3 ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದಾರೆ. ಅಲ್ಲದೆ ನವೀನ್ ನೇರವಾಗಿ ಪೈನಲ್ ಟಿಕೆಟ್ ಪಡೆದುಕೊಂಡಿದ್ದರು. ಸದ್ಯ, ಮೂರು ಸ್ಪರ್ಧಿಗಳ ಪೈಕಿ ನವೀನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನವೀನ್ ಈ ಬಾರಿಯ ಬಿಗ್ ಬಾಸ್ ವಿನ್ನರ್ ಎನ್ನುವ ಟಾಕ್ ಹೆಚ್ಚಿದೆ.

  ನವೀನ್ ಬಗ್ಗೆ ಟ್ರೋಲ್

  ನವೀನ್ ಬಗ್ಗೆ ಟ್ರೋಲ್

  ನವೀನ್ ಈ ಬಾರಿಯ ಬಿಗ್ ಬಾಸ್ ಗೆಲ್ಲಬೇಕು. ಕಾರಣ ಅವರಿಗೆ ಬಿಗ್ ಬಾಸ್ ಗೆಲ್ಲುವ ಎಲ್ಲ ಅರ್ಹತೆಗಳಿವೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ನವೀನ್ ಬಗ್ಗೆ ಪಾಸಿಟಿವ್ ಟ್ರೋಲ್ ಗಳು ಕೂಡ ಜಾಸ್ತಿಯಾಗಿವೆ. ಅವರೇ ಈ ಬಾರಿಯ ಬಿಗ್ ಬಾಸ್ ಎಂಬ ಪೋಸ್ಟರ್ ಗಳು ಹರಿದಾಡುತ್ತಿವೆ. ಫೇಸ್ ಬುಕ್ ನಲ್ಲಿ ಅವರೇ ಗೆಲ್ಲಬೇಕು ಎನ್ನುವುದು ಅನೇಕರ ಆಸೆ.

  'ಬಿಗ್ ಬಾಸ್': ಕೊನೆಯವರೆಗೂ ಬಂದು ರನ್ ಔಟ್ ಆದ ಆಂಡ್ರ್ಯೂ.! 'ಬಿಗ್ ಬಾಸ್': ಕೊನೆಯವರೆಗೂ ಬಂದು ರನ್ ಔಟ್ ಆದ ಆಂಡ್ರ್ಯೂ.!

  ಜನರ ಆಸೆಯೇ ತೀರ್ಪಾಗುತ್ತದೆಯೇ

  ಜನರ ಆಸೆಯೇ ತೀರ್ಪಾಗುತ್ತದೆಯೇ

  ಸಾಕಷ್ಟು ಜನರ ಆಸೆ ನವೀನ್ ಸಜ್ಜು ಬಿಗ್ ಬಾಸ್ ಗೆಲ್ಲಬೇಕು ಎನ್ನುವುದಾಗಿದೆ. ಮೂರೂ ಸ್ಪರ್ಧಿಗಳಿಗೂ ಫಾಲೋಹರ್ಸ್ ಇದ್ದರೆ, ಆದರೆ ನವೀನ್ ಗೆ ಬರುತ್ತಿರುವ ಬೆಂಬಲ ದೊಡ್ಡದಿದೆ. ಈ ಕಾರಣ ಜನರ ಆಸೆಯನ್ನು ಪರೀಗಣಿಸಿ ಬಿಗ್ ಬಾಸ್ ತಮ್ಮ ತೀರ್ಪು ನೀಡುತ್ತದೆಯೇ ಎನ್ನುವ ಕುತೂಹಲವಿದೆ.

  ಚಂದನ್, ಪ್ರಥಮ್ ವಿಚಾರದಲ್ಲಿ ಹೀಗೆ ಆಗಿತ್ತು

  ಚಂದನ್, ಪ್ರಥಮ್ ವಿಚಾರದಲ್ಲಿ ಹೀಗೆ ಆಗಿತ್ತು

  ಕಳೆದ ಬಿಗ್ ಬಾಸ್ ಸೀಸನ್ ಗಳನ್ನು ಗಮನಿಸಿದಾಗ ಅಲ್ಲಿ ಚಂದನ್ ಶೆಟ್ಟಿ, ಹಾಗೂ ಪ್ರಥಮ್ ಗೆ ಇದೇ ರೀತಿಯ ಬೆಂಬಲ ಸಿಕ್ಕಿತ್ತು. ವೀಕ್ಷಕರ ಆಯ್ಕೆಯೇ ಬಿಗ್ ಬಾಸ್ ಆಯ್ಕೆಯಾಗಿ ಕೊನೆಗೆ ಈ ಇಬ್ಬರೂ ಬಿಗ್ ಬಾಸ್ ಗೆದ್ದರು. ಈಗ ನವೀನ್ ವಿಷಯದಲ್ಲಿಯೂ ಈ ರೀತಿ ಆಗಬಹುದು... ಆಗದೆಯೂ ಇರಬಹುದು.

  'ಬಿಗ್ ಬಾಸ್ ಕನ್ನಡ-6': ಫಿನಾಲೆ ರೇಸ್ ನಿಂದ ರಾಪಿಡ್ ರಶ್ಮಿ ಹೊರಕ್ಕೆ.! 'ಬಿಗ್ ಬಾಸ್ ಕನ್ನಡ-6': ಫಿನಾಲೆ ರೇಸ್ ನಿಂದ ರಾಪಿಡ್ ರಶ್ಮಿ ಹೊರಕ್ಕೆ.!

  ಚಿತ್ರರಂಗದವರ ಸಾಥ್

  ಚಿತ್ರರಂಗದವರ ಸಾಥ್

  ನವೀನ್ ಸಜ್ಜು ಚಿತ್ರರಂಗದಲ್ಲಿ ಇರುವ ಕಾರಣ ಚಿತ್ರರಂಗದ ಅನೇಕ ಸಾಥ್ ಕೂಡ ಸಿಕ್ಕಿದೆ. ನಟ ಸತೀಶ್ ನೀನಾಸಂ, ವಿಕ್ಕಿ ವರುಣ್, ಪ್ರದೀಪ್, ಡಾರ್ಲಿಂಗ್ ಕೃಷ್ಣ, ಶಿವರಾಜ್ ಕೆ ಆರ್ ಪೇಟೆ, ಸಂಭಾಷಣೆಕಾರ ಮಂಜು ಮಾಸ್ತಿ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹೀಗೆ ಅನೇಕರು ನವೀನ್ ಗೆ ವಿಶ್ ಮಾಡಿದ್ದಾರೆ.

  English summary
  Is Naveen sajju will win bigg boss kannada 6 finale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X