ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ಗೆಲ್ಲುತ್ತಾ 'ಪಾರು' ಸೀರಿಯಲ್?

ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಮನೆ ಮಾತಾಗಿವೆ. ಅದರಲ್ಲಿ ಹಲವು ಧಾರಾವಾಹಿಗಳು ಜನರ ಮನಸಲ್ಲಿ ಅಚ್ಚು ಮೆಚ್ಚಿನ ಸ್ಥಾನ ಗಿಟ್ಟಿಸಿಕೊಂಡಿವೆ. ಅಂತಹ ಧಾರಾವಾಹಿಗಳಲ್ಲಿ 'ಪಾರು' ಕೂಡ ಒಂದು. ಪಾರು ಧಾರಾವಾಹಿಯಲ್ಲಿ ಇದೀಗ ಟ್ವಿಸ್ಟ್ ಮೇಲೆ, ಟ್ವಿಸ್ಟ್. ಹಾಗಾಗಿ ಧಾರಾವಾಹಿ ಅತ್ಯಂತ ರೋಚಕತೆಯಿಂದ ಸಾಗುತ್ತಿದೆ. ಧಾರಾವಾಹಿ ಪ್ರೇಕ್ಷಕರು ಕಥೆಯ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಧಾರಾವಾಹಿಯ ಕಥೆ ಹೀಗಿದೆ. ಇಲ್ಲಿ ನಾಯಕ ನಟಿ ಪಾರು ಮನೆ ಕೆಲಸದಾಕೆ, ನಟ ಆದಿತ್ಯ ಮನೆಯ ಯಜಮಾನ. ಈ ಇಬ್ಬರ ನಡುವೆ ಪ್ರೀತಿ ಚಿಗುರಿ ಅವರು ಒಂದಾಗುವುದೇ ಮೂಲ ಕಥಾ ವಸ್ತು. ಇರುವ ಅಡ್ಡಿಗಳನ್ನೆಲ್ಲಾ ದಾಟಿಕೊಂಡು ಈಗ ಈ ಜೋಡಿ ಮದುವೆ ಆಗವ ಹಂತಕ್ಕೆ ಬಂದಿದೆ. ಪ್ರೇಮ ಕಥೆಯನ್ನೇ ನೂರಾರು ಸಂಚಿಕೆ ಮಾಡಲಾಗಿದೆ. ಹಾಗಾಗಿ ಈಗಲಾದರೂ ಧಾರಾವಾಹಿ ಪ್ರೇಕ್ಷಕರ ನಿರೀಕ್ಷೆ ಮುಟ್ಟುತ್ತದೆಯಾ ಎನ್ನುವ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.

ಪಾರು ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ಶುರುವಾದಾಗಿನಿಂದಲೂ ದೊಡ್ಡ ಹೈ ಡ್ರಾಮವೇ ನಡೆದು ಹೋಗಿದೆ. ಹಾಗಾಗಿ ಮುಂದಿನ ಸಂಚಿಕೆಗಳ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟಿಕೊಂಡಿದೆ. ಅಷ್ಟಕ್ಕೂ ಧಾರಾವಾಹಿ ಇನ್ನಷ್ಟು ನಿರೀಕ್ಷೆಯೊಂದಗೆ ಸಾಗಬೇಕು ಎಂದರೆ ಸದ್ಯ ಪ್ರೇಕ್ಷಕರು ಮಾಡುತ್ತಿರುವ ನಿರೀಕ್ಷೆಗಳಲ್ಲಿ ಒಂದಾದರು ನಿಜವಾಗಬೇಕಾಗಿದೆ.

ವಿಲನ್‌ಗಳ ಕಥೆ ಮುಗೀತು: ಇನ್ನಾದರೂ ಮದುವೆ ಆಗುತ್ತಾ?

ವಿಲನ್‌ಗಳ ಕಥೆ ಮುಗೀತು: ಇನ್ನಾದರೂ ಮದುವೆ ಆಗುತ್ತಾ?

'ಪಾರು' ಧಾರಾವಾಹಿಯ ಮುಖ್ಯ ಕಥೆ ಅಂದರೆ ಸೀರಿಯಲ್ ನಾಯಕ ಆದಿತ್ಯ ಮತ್ತು ನಟಿ ಪಾರು ಇಬ್ಬರು ಮದುವೆ ಆಗುವುದು. ಆದರೆ ವಿಪರ್ಯಾಸ ಅಂದರೆ ಧಾರಾವಾಹಿ ಆರಂಭವಾಗಿ ವರ್ಷಗಳೇ ಕಳೆದರೂ, ಈಗ ಆದಿ ಮತ್ತು ಪಾರು ಮದುವೆ ಸಂದರ್ಭ ಹತ್ತಿರ ಆಗಿದೆ. ಆದಿ, ಪಾರು ಮದುವೆಗೆ ಅಡ್ಡಿ ಆಗಿದ್ದ ವಿಲನ್‌ಗಳ ಮುಖವಾಡ ಕಳಚಿದೆ. ಹಾಗಾಗಿ ಇನ್ನಾದರು ಅವರ ಮದುವೆ ಆಗುತ್ತಾ ಇಲ್ಲವಾ ಎನ್ನುವ ನಿರೀಕ್ಷೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಇದಕ್ಕೆ ಈ ವಾರದ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಆದಿತ್ಯ, ಪಾರು ಮದುವೆ ನೋಡಲು ಕಾಯುತ್ತಿರುವ ಪ್ರೇಕ್ಷಕರು!

ಆದಿತ್ಯ, ಪಾರು ಮದುವೆ ನೋಡಲು ಕಾಯುತ್ತಿರುವ ಪ್ರೇಕ್ಷಕರು!

ಸದ್ಯ 'ಪಾರು' ಧಾರಾವಾಹಿಯಲ್ಲಿ ಆದಿತ್ಯ ಮತ್ತು ಪಾರು ಮದುವೆಯನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಲಿದ್ದಾರೆ. ಈಗ ಆ ಸಮಯ ಹತ್ತಿರ ಬಂದ ಹಾಗೆ ಇದೆ. ಹಾಗಾಗಿ ಸೀರಿಯಲ್ ನೋಡುಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಈಗ ಎಲ್ಲವೂ ಆದಿ ತಾಯಿ ಅಖಿಲಾಂಡೇಶ್ವರಿ ನಿರ್ಧಾರದ ಮೇಲೆ ನಿಂತಿದೆ. ಆದರೆ ಅದೇನೆ ಟ್ವಿಸ್ಟ್ ಕೊಟ್ಟರು ಓಕೆ. ಈ ಬಾರಿಯಾದರೂ ಆದಿ, ಪಾರು ಮದುವೆ ಆಗಲಿ ಎಂದು ಪ್ರೇಕ್ಷಕ ಬಳಗ ಕಾಯುತ್ತಿದೆ.

ಆದಿ ಮಾತು ಕೇಳಿ ಕಣ್ಣಿರು ಹಾಕಿದ ಅಖಿಲಾಂಡೆಶ್ವರಿ!

ಆದಿ ಮಾತು ಕೇಳಿ ಕಣ್ಣಿರು ಹಾಕಿದ ಅಖಿಲಾಂಡೆಶ್ವರಿ!

ಪಾರು, ಆದಿತ್ಯ ಪ್ರೀತಿ ವಿಚಾರ ಕೇಳಿ ಅಖಿಲಾಂಡೇಶ್ವರಿಗೆ ಶಾಕ್ ಆಗಿದೆ. ನಟ ಆದಿತ್ಯ ತನ್ನ ಅಮ್ಮ ಅಖಿಲಾಂಡೇಶ್ವರಿಯ ಎದುರು ನಿಂತು, ಪಾರು ನಾನು ಒಬ್ಬರನ್ನು ಒಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ ಎಂದು ಹೇಳಿ ಬಿಡುತ್ತಾನೆ. ಆದಿತ್ಯನ ಮಾತು ಕೇಳಿ ಅಖಿಲಾಗೆ ತುಂಬಾನೇ ಶಾಕ್ ಆಗಿದೆ. ಹಾಗಾಗಿ ಈ ಬಗ್ಗೆ ಅಖಿಲಾಂಡೇಶ್ವರಿ ವೀರಣ್ಣನ ಜೊತೆಗೆ ಮಾತನಾಡುತ್ತಾಳೆ. ಆದಿತ್ಯ, ಪಾರು ತನಗೆ ಮೋಸ ಮಾಡಿರುವುದಾಗಿ ಹೇಳಿಕೊಳ್ಳುತ್ತಾಳೆ. ಈ ದುಖಃ ಸಹಿಸಲಾಗದೇ ವೀರಣ್ಣನ ಮುಂದೆ ಕಣ್ಣೀರು ಹಾಕುತ್ತಾಳೆ.

ಮದುವೆ ಆಗದೇ ಹೋದರೆ ಪ್ರೇಕ್ಷಕರ ಆಸಕ್ತಿ ಕುಂದುತ್ತದೆ!

ಮದುವೆ ಆಗದೇ ಹೋದರೆ ಪ್ರೇಕ್ಷಕರ ಆಸಕ್ತಿ ಕುಂದುತ್ತದೆ!

ಇನ್ನು ಸಂದರ್ಭದಲ್ಲಿ ಆದಿ, ಪಾರು ಮದುವೆಗೆ ಅಖಿಲಾಂಡೇಶ್ವರಿ ಒಪ್ಪುತ್ತಾರಾ ಎನ್ನುವ ಕುತೂಹಲ ಮೂಡಿದೆ. ಒಂದು ವೇಳೆ ಏನೇನೂ ಟ್ವಿಸ್ಟ್ ಬಂದು ಮದುವೆ ಆಗದೇ ಹೋದರೆ, ಪ್ರೇಕ್ಷಕರು ಧಾರಾವಾಹಿಯ ಕಥೆಯ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಾರೆ. ಯಾಕೆಂದರೆ ಈಗ ಮದುವೆ ಆಗದೇ ಹೋದರೆ. ಮತ್ತೇ ಅಖಿಲಾಂಡೇಶ್ವರಿಯನ್ನು ಒಪ್ಪಿಸಲು ಆದಿ, ಪಾರು, ಕುಟುಂಬದವರು ಮತ್ತದೇ ಸಾಹಸಗಳನ್ನು ಮಾಡಬೇಕಾಗುತ್ತದೆ.

More from Filmibeat

English summary
Is 'Paaru' Kannada Serial Reach The Audience Expectation, Hero Adithya And Paaru Will Get Marry,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X