For Quick Alerts
  ALLOW NOTIFICATIONS  
  For Daily Alerts

  Big News: ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಔಟ್?

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿಯ ಮೊದಲ ವಾರದಲ್ಲಿ ನಟಿ ಶುಭಾ ಪೂಂಜಾ ಹೊರ ಬಂದಿದ್ದಾರೆ ಎಂಬ ಮಾಹಿತಿ ಸೋರಿಕೆಯಾಗಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಐದು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ಶುಭಾ ಪೂಂಜಾಗೆ ಗೇಟ್ ಪಾಸ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

  ಬಿಗ್ ಬಾಸ್ ಎಂಟನೇ ಆವೃತ್ತಿಯ ಮೊದಲ ವಾರದ ಕಿಚ್ಚನ ಪಂಚಾಯಿತಿಯ ಚಿತ್ರೀಕರಣ ಬಿಡದಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಶುಭಾ ಪೂಂಜಾ ಅವರನ್ನು ಮನೆಯಿಂದ ಹೊರಗೆ ಕರೆದಿದ್ದಾರಂತೆ.

  ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?

  ಇಂದು ರಾತ್ರಿ 9.30ಕ್ಕೆ ಬಿಗ್ ಬಾಸ್ ಕಿಚ್ಚನ ಪಂಚಾಯಿತಿ ಎಪಿಸೋಡ್ ಪ್ರಸಾರವಾಗಲಿದೆ.

  ಐದು ಸ್ಪರ್ಧಿಗಳು ನಾಮಿನೇಟ್

  ಐದು ಸ್ಪರ್ಧಿಗಳು ನಾಮಿನೇಟ್

  ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಐದು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ವಿಶ್ವನಾಥ್, ರಘು ಗೌಡ, ಧನುಶ್ರೀ, ಶುಭ ಪೂಂಜಾ ಹಾಗೂ ಬಿಗ್ ಬಾಸ್ ಕಡೆಯಿಂದ ನೇರವಾಗಿ ನಾಮಿನೇಟ್ ಆಗಿದ್ದ ನಿರ್ಮಲಾ ಚೆನ್ನಪ್ಪ ಡೇಂಜರ್ ಜೋನ್‌ನಲ್ಲಿ ಇದ್ದರು.

  ಆಟದಲ್ಲಿ ಸೋತು ನಾಮಿನೇಟ್ ಆಗಿದ್ದ ಶುಭಾ

  ಆಟದಲ್ಲಿ ಸೋತು ನಾಮಿನೇಟ್ ಆಗಿದ್ದ ಶುಭಾ

  ಸೋಮವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಶುಭಾ ಪೂಂಜಾ ನಾಮಿನೇಟ್ ಆಗಿರಲಿಲ್ಲ. ವಾರದ ಮಧ್ಯದಲ್ಲಿ ನಡೆದ ನಾಮಿನೇಷನ್ ವರ್ಗಾವಣೆ ಟಾಸ್ಕ್ ಪರಿಣಾಮ ಶುಭಾ ಪೂಂಜಾ ಡೇಂಜರ್ ಝೋನ್ ಸಿಲುಕಿದ್ದರು. ನಿಧಿ ಸುಬ್ಬಯ್ಯ ವಿರುದ್ಧ ಆಟದಲ್ಲಿ ಸೋತ ಕಾರಣ ಶುಭಾ ಪೂಂಜಾ ನಾಮಿನೇಟ್ ಆಗಿದ್ದರು.

  ಶುಭಾ ಎಲಿಮಿನೇಷನ್ ಅಚ್ಚರಿ?

  ಶುಭಾ ಎಲಿಮಿನೇಷನ್ ಅಚ್ಚರಿ?

  ಮೊದಲ ವಾರದಲ್ಲಿ ಶುಭಾ ಪೂಂಜಾ ಒಳ್ಳೆಯ ಆಟ ಆಡಿದ್ದಾರೆ ಎನ್ನುಬ ಅಭಿಪ್ರಾಯ ವೀಕ್ಷಕರಲ್ಲಿದೆ. ಟಾಸ್ಕ್, ಎಂಟರ್‌ಟೈನ್‌ಮೆಂಟ್ ವಿಚಾರದಲ್ಲಿ ಶುಭಾ ಪಾಸ್ ಆಗಿದ್ದರು. ಉಳಿದ ಸ್ಪರ್ಧಿಗಳಿಗೆ ಹೋಲಿಸಿಕೊಂಡರೆ ಶುಭಾ ಪೂಂಜಾಗೆ ಸೇಫ್ ಆಗಲು ಹೆಚ್ಚು ಮತ ಬಂದಿರುತ್ತದೆ. ಏಕಂದ್ರೆ, ಶುಭಾ ಪೂಂಜಾಗೆ ಹೆಚ್ಚು ಫಾಲೋವರ್ಸ್ ಇದ್ದಾರೆ. ಇಂತಹದ್ರಲ್ಲಿ ನಟಿ ಎಲಿಮಿನೇಟ್ ಆದ್ರಾ ಎಂಬ ಸುದ್ದಿಯನ್ನು ನಂಬಲು ಕಷ್ಟವಾಗುತ್ತಿದೆ. ಈ ಅನುಮಾನ ಹಾಗೂ ಕುತೂಹಲಕ್ಕೆ ಉತ್ತರ ಕಿಚ್ಚನ ಪಂಚಾಯಿತಿ ನೋಡಲೇಬೇಕು.

  ಸೋಮವಾರ ನಾಮಿನೇಟ್ ಆಗಿದ್ದ ಸ್ಪರ್ಧಿಗಳು ಯಾರು?

  ಸೋಮವಾರ ನಾಮಿನೇಟ್ ಆಗಿದ್ದ ಸ್ಪರ್ಧಿಗಳು ಯಾರು?

  ಸೋಮವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರೀ, ನಿರ್ಮಲಾ ಚೆನ್ನಪ್ಪ ಹಾಗೂ ನಿಧಿ ಸುಬ್ಬಯ್ಯ ನಾಮಿನೇಟ್ ಆಗಿದ್ದರು. ಇವರಲ್ಲಿ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ನಿಧಿ ಸುಬ್ಬಯ್ಯ ಗೆದ್ದು ಡೇಂಜರ್ ಝೋನ್‌ನಿಂದ ಹೊರಗುಳಿದರು.

  English summary
  Is Actress Shubha Poonja evicted from the Bigg Boss house this week?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X