ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಕನ್ನಡ ನಟಿಯ ಸಂಸಾರದಲ್ಲಿ ಬಿರುಕು ?
ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ.
ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ತೇಜಸ್ವಿನಿ ಗೌಡ ಅವರ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

ಹೌದು, ತೇಜಸ್ವಿನಿ ಗೌಡ.. ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಕನ್ನಡತಿ. ತುಮಕೂರಿನ ಶಿರಾದಿಂದ ಬೆಂಗಳೂರಿಗೆ ಬಂದು ಬಿಳಿ ಹೆಂಡ್ತಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯನ್ನು ಪ್ರವೇಶಿಸಿದ ತೇಜಸ್ವಿನಿ ಆ ನಂತರ ವಿದ್ಯಾ ನಂ 1 ಧಾರಾವಾಹಿಯ ಮೂಲಕ ತೆಲುಗಿಗೆ ವಲಸೆ ಹೋದರು. ವಿದ್ಯಾ ನಂಬರ್ 1 ಬೆನ್ನಲ್ಲೇ ಕೋಯಿಲಮ್ಮ, ಸುಂದರಿ ನೀಂ ಸುಂದನ್ ನಾನುಂ, ಧಾರಾವಾಹಿಗಳ ಮೂಲಕ ತೆಲುಗು ಪ್ರೇಕ್ಷಕರ ಹೃದಯಕ್ಕೆ ಇನ್ನು ಹತ್ತಿರವಾದರು. ತಮಿಳಿನಲ್ಲಿ ಕೂಡ ಧಾರಾವಾಹಿಯನ್ನು ಮಾಡಿದರು.
ಇನ್ನು ಇದೇ ಸಮಯದಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 7ರ ರನ್ನರ್ ಅಪ್ ಅಮರ್‌ದೀಪ್ ಚೌಧರಿ ಜೊತೆ ಪ್ರೀತಿಯಲ್ಲಿ ಬಿದ್ದ ತೇಜಸ್ವಿನಿ ಗೌಡ ಕಳೆದ ಮೂರು ವರ್ಷಗಳ ಹಿಂದೆ ಡಿಸೆಂಬರ್ 11-2022ರಂದು ಅದ್ಧೂರಿಯಾಗಿ ಮದುವೆಯೂ ಆದರು. ಇಂಥಾ ತೇಜಸ್ವಿನಿ ಗೌಡ ಸದ್ಯ ಮನೆ-ಗಂಡ-ಸಂಸಾರ ಎಂದುಕೊಂಡು ನೆಮ್ಮದಿಯಾಗಿದ್ದಾರೆ.
ಆದರೆ ಈ ನೆಮ್ಮದಿಗೆ ಕೊಳ್ಳಿ ಇಡುವ ಪ್ರಯತ್ನವನ್ನು ಮಾಡುತ್ತಿರುವ ಕೆಲವರು ತೇಜಸ್ವಿನಿ ಗೌಡ ಮತ್ತು ಅಮರದೀಪ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಪುಕಾರು ಹಬ್ಬಿಸಿದ್ದಾರೆ. ಹಬ್ಬಿರುವ ಈ ಸುದ್ದಿ ನಿಜಾ ಎಂದುಕೊಂಡು ತೆಲುಗಿನ ಅನೇಕ ಮಾಧ್ಯಮಗಳು ತೇಜಸ್ವಿನಿ ಗೌಡ ಮತ್ತು ಅಮರ್‌ದೀಪ್ ಶೀಘ್ರದಲ್ಲಿಯೇ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯನ್ನು ಕೂಡ ಮಾಡಿವೆ.
ಹೀಗಾಗಿಯೇ ಇದೀಗ ತೇಜಸ್ವಿನಿ ಗೌಡ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಹರಡಿರುವ ಸುದ್ದಿಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೀವು ಅಂದುಕೊಂಡಂತೆ ಏನು ಇಲ್ಲ ಎಂದು ಹೇಳಿದ್ದಾರೆ.
ಹೌದು, ಜಬರ್‌ದಸ್ತ್ ಕಾರ್ಯಕ್ರಮದಿಂದ ಖ್ಯಾತಿಯನ್ನು ಪಡೆದ ವರ್ಷಾ ಅವರ 'ಬಿಗ್ ಟಿವಿ ಪ್ಲಸ್' ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ತೇಜಸ್ವಿನಿ ಗೌಡ, ತಮ್ಮ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ವಿಚ್ಛೇದನದ ವದಂತಿಯ ಕುರಿತು ಕೂಡ ಮಾತನಾಡಿರುವ ತೇಜಸ್ವಿನಿ ವಿಚ್ಛೇದನದ ವಿಚಾರ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಗಂಡ ಹೆಂಡತಿಯ ನಡುವೆ ಆಗಾಗ ಜಗಳವಾಗುವುದು ಮಾಮೂಲಿ, ಹಾಗಂಥ ವಿಚ್ಛೇದನ ಪಡೆದು ಯಾರೂ ಬೇರೆಯಾಗಲು ಇಚ್ಚಿಸುವುದಿಲ್ಲ ಎಂದು ಹೇಳಿರುವ ತೇಜಸ್ವಿನಿ ಗೌಡ, ಅಮರ್ ದೀಪ್ ಮತ್ತು ನಾನು ಸದ್ಯ ನೆಮ್ಮದಿಯಿಂದ ಇದ್ದೇವೆ, ಪರಸ್ಪರ ಪ್ರೀತಿಸುತ್ತೇವೆ ಎಂದು ಹೇಳಿದ್ದಾರೆ. ನಾನು ಅಮರ್‌ದೀಪ್‌ನ ಹೆಚ್ಚು ಪ್ರೀತಿ ಮಾಡುತ್ತೇನೆ ಹೀಗಾಗಿ ಈ ವಿಚ್ಚೇದನದ ವಂದತಿಗಳನ್ನೆಲ್ಲ ನಂಬಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ. ಈ ಮೂಲಕ ಡಿವೋರ್ಸ್ ರೂಮರ್ಸ್‌ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ತೇಜಸ್ವಿನಿ ಗೌಡ.


Click it and Unblock the Notifications