ಶಾಪಗ್ರಸ್ತ ಬಿಗ್ ಬಾಸ್ ? ಹುಡುಗರು ಶೆಫಾಲಿ ಮಾತ್ರವಲ್ಲ, ಕನ್ನಡದ ನಟಿಯೂ ಸೇರಿ ಹಠಾತ್ ನಿಧನರಾದ 6 ಸ್ಫರ್ಧಿಗಳು ಇವರು !

ಹುಟ್ಟು ಉಚಿತ .. ಸಾವು ಖಚಿತ .. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ. ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಶೆಫಾಲಿ ಜರಿವಾಲಾ ಅವರ ಅಕಾಲಿನ ನಿಧನ ಮತ್ತೊಂದು ಸಾಕ್ಷಿ.

ಹೌದು .. ಕಾಂಟಾ ಲಗಾ ಹಾಡಿನ ಮೂಲಕ ಅನೇಕರ ಹೃದಯ ಗೆದ್ದ ಶೆಫಾಲಿಯ ಹೃದಯದ ಬಡಿತ ನಿನ್ನೆ ನಿಂತು ಹೋಗಿದೆ. ಶೆಫಾಲಿಯ ಅಗಲಿಕೆಯ ಸುದ್ದಿ ಬಣ್ಣದ ಪ್ರಪಂಚಕ್ಕೆ ಬರ ಸಿಡಿಲಿನಂತೆ ಬಡೆದಿದೆ.

Is There a Bigg Boss Curse Shefali Jariwala amp amp 6 Tragic Reality Star Deaths

ಯಾಕೆಂದರೆ .. ಶೆಫಾಲಿ ಇನ್ನೂ ಬಾಳಿ ಬದುಕಬೇಕಿದ್ದವರು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದವರು. ಆರೋಗ್ಯದ ಕಡೆ ಗಮನ ಕೊಡುತ್ತಿದ್ದವರು. ಆದರೂ ಕೇವಲ 42ರ ಪ್ರಾಯದಲ್ಲಿ ಹೃದಯಾಘಾತದಿಂದ ಶೆಫಾಲಿ ಸಾವನ್ನಪ್ಪಿದ್ದಾರೆ.

ಶೆಫಾಲಿ ಅವರ ಈ ಅಕಾಲಿಕ ನಿಧನದಿಂದ ಇತ್ತೀಚೆನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತದ ಕುರಿತು ಮತ್ತೊಮ್ಮೆ ಅನೇಕರು ಚರ್ಚೆಯನ್ನು ಮಾಡುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್ ಮನೆ ಶಾಪಗ್ರಸ್ತ ಎನ್ನುವ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಸ್ಫರ್ಧಿಗಳ ಅಕಾಲಿಕ ನಿಧನ ಇಂತಹದ್ದೊಂದು ಚರ್ಚೆಗೆ ಸದ್ಯ ಕಾರಣವಾಗಿದೆ.

ಹೌದು, ಅಸಲಿಗೆ ಇಹಲೋಕ ತ್ಯಜಿಸಿದ ಶೆಫಾಲಿ ಜರಿವಾಲಾ ಹಿಂದಿಯ ಬಿಗ್ ಬಾಸ್ ಸೀಸನ್ 13ರಲ್ಲಿ ಭಾಗವಹಿಸಿದ್ದರು. ಇವರನ್ನು ಹೊರತು ಪಡಿಸಿದರೆ ಬಿಗ್ ಬಾಸ್ ಮನೆಗೆ ಇಲ್ಲಿಯವರೆಗೆ ಬೇರೆ ಬೇರೆ ಭಾಷೆಗಳಲ್ಲಿ ಅನೇಕ ಜನ ಹೋಗಿ ಬಂದಿದ್ದಾರೆ.

ಆದರೆ ಹೀಗೆ ಹೋದ ಸ್ಫರ್ಧಿಗಳಲ್ಲಿ ಆರು ಜನ ನಾನಾ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಆ ಪೈಕಿ ಶೆಫಾಲಿ ಅವರನ್ನು ಒಳಗೊಂಡಂತೆ ಇನ್ನು ಇಬ್ಬರು ಸ್ಫರ್ಧಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಆ ಆರು ಜನ ಯಾರು ಎನ್ನುವ ಪಟ್ಟಿ ಇಲ್ಲಿದೆ.

1. ಸಿದ್ಧಾರ್ಥ್ ಶುಕ್ಲಾ

ಹಿಂದಿ ಕಿರುತೆರೆಯ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ಕೂಡ ಬಿಗ್ ಬಾಸ್‌ ಮನೆಗೆ ಹೋಗಿದ್ದರು. ಇಷ್ಟೇ ಅಲ್ಲ ಬಿಗ್ ಬಾಸ್ ಕಿರೀಟವನ್ನು ಕೂಡ ಮುಡಿಗೇರಿಸಿಕೊಂಡಿದ್ದರು. ಬಿಗ್ ಬಾಸ್‌ನ ಹದಿಮೂರನೇ ಸೀಸನ್‌ನಲ್ಲಿ ಸಿದ್ಧಾರ್ಥ್ ಶುಕ್ಲಾ ಭಾಗವಹಿಸಿದಾಗ ಇದೇ ಸೀಸನ್‌ನಲ್ಲಿ ಶೆಫಾಲಿ ಜರಿವಾಲಾ ಕೂಡ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಸಿದ್ಧಾರ್ಥ್ ಶುಕ್ಲಾ ಮತ್ತು ಶೆಫಾಲಿ ನಡುವೆ ಪ್ರೇಮಾಂಕುವಾಗಿರುವ ಸುದ್ದಿ ಕೂಡ ಸದ್ದು ಮಾಡಿತ್ತು.

ಇನ್ನು, ಕಳೆದ ವರ್ಷ.. ಶೆಫಾಲಿ ಕೂಡ ತಮ್ಮ 40ರ ಹರೆಯದಲ್ಲಿ ಹೃದಯಾಘಾತದಿಂದ ನಿಧನರಾದ ಸಿದ್ಧಾರ್ಥ್ ಶುಕ್ಲಾ ಅವರನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ನೆನಪು ಮಾಡಿಕೊಂಡಿದ್ದರು. ಇದಾದ ನಂತರ ಶೆಫಾಲಿ ಬೇರೆ ಯಾವ ಪೋಸ್ಟ್ ಹಂಚಿಕೊಂಡಿರಲಿಲ್ಲ.ಕಾಕತಾಳೀಯ ಎಂದರೆ ಇದೀಗ ಶೆಫಾಲಿ ಕೂಡ ಸಿದ್ಧಾರ್ಥ್ ಶುಕ್ಲಾ ಅವರಂತೆಯೇ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ.

2. ಸೋನಾಲಿ ಪೋಗಟ್

ಭಾರತೀಯ ಜನತಾ ಪಕ್ಷದಲ್ಲಿ { ಬಿಜೆಪಿ } ನಾಯಕಿಯಾಗಿ ಗುರುತಿಸಿಕೊಂಡಿದ್ದ, ಹರಿಯಾಣ ವಿಧಾನ ಸಭಾ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಿದ್ದ ಸೋನಾಲಿ ಪೋಗಟ್ ಕೂಡ ತಮ್ಮ 43ನೇ ವರ್ಷದಲ್ಲಿ ಹೃದಯಾಘಾತದಿಂದ 2022ರಲ್ಲಿ ಗೋವಾದಲ್ಲಿ ಕೊನೆಯುಸಿರೆಳೆದಿದ್ದರು. ಹಿಂದಿಯ ಬಿಗ್ ಬಾಸ್‌ ಸೀಸನ್ 14ರಲ್ಲಿ ಸೋನಾಲಿ ಭಾಗವಹಿಸಿದ್ದರು.

3. ಪ್ರತ್ಯೂಷಾ ಬ್ಯಾನರ್ಜಿ

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಜನ ಮನ ಗೆದ್ದಿದ್ದ ಕೇವಲ 24 ವರ್ಷದ ಪ್ರತ್ಯೂಷಾ ಬ್ಯಾನರ್ಜಿ 2016ರಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದರು.

2016 ಏಪ್ರಿಲ್ 1 ರಂದು ಸಂಜೆ 5 ಗಂಟೆಗೆ ಸಮಯಕ್ಕೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಗೋರೆಗಾಂವ್ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂಬ ವಿಚಾರ ಹೊರಬಿತ್ತು. ಕೂಡಲೇ ಅವರನ್ನು ಆಕೆಯ ಬಾಯ್‌ಫ್ರೆಂಡ್ ರಾಹುಲ್ ರಾಜ್ ಸಿಂಗ್ ಅಂಧೇರಿಯ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಗೆ ರವಾನಿಸಲಾಯಿತು.

ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಆಕೆ ಪ್ರಾಣ ಕಳೆದುಕೊಂಡಿದ್ದರು ಎಂದು ವೈದ್ಯರು ದೃಢಪಡಿಸಿದರು. ಇವರ ಸಾವಿನ ಹಿಂದಿನ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

4. ಜಯಶ್ರೀ ರಾಮಯ್ಯ

'ಉಪ್ಪು ಹುಳಿ ಖಾರ', 'ಕನ್ನಡ್‌ ಗೊತ್ತಿಲ್ಲ' ಸೇರಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದ, ಬಿಗ್ ಬಾಸ್ ಕನ್ನಡದ ಸೀಸನ್‌ 3 ರಲ್ಲಿ ಭಾಗವಹಿಸಿದ್ದ ಜಯಶ್ರೀ ರಾಮಯ್ಯ 2021ರಲ್ಲಿ ಆತ್ಮಹತ್ಯೆಗೆ ಶರಣಾದರು. ಕೌಟಂಬಿಕ ಸಮಸ್ಯೆಯಿಂದ ತೀವೃ ಖಿನ್ನತೆಗೆ ಜಾರಿದ್ದ ಜಯಶ್ರೀ ಇದಕ್ಕೂ ಮೊದಲು ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿದ್ದರು. ಆದರೆ ಅಂದು ಬದುಕುಳಿದಿದ್ದ ಜಯಶ್ರೀಗೆ ಸುದೀಪ್ ಕೂಡ ಧೈರ್ಯ ತುಂಬಿದ್ದರು. ಆದರೂ ಕೂಡ ಖಿನ್ನತೆಯಿಂದ ದುಖದಿಂದ ಹೊರ ಬರದ ಜಯಶ್ರೀ ನೇಣಿಗೆ ಕೊರಳೊಡ್ಡಿದರು.

5. ಸ್ವಾಮಿ ಓಂ

ಹಿಂದಿ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ಸ್ವಯಂಘೋಷಿತ ದೇವಮಾನವ ಸ್ವಾಮಿ ಓಂ 2021ರಲ್ಲಿ ನಿಧನರಾದರು. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಸ್ವಾಮಿ ಓಂ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡರೂ ತೀವ್ರವಾಗಿ ಕೃಶರಾಗಿದ್ದ ಸ್ವಾಮಿ ಓಂ ನಡೆದಾಡಲು ಕಷ್ಟಪಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

6. ಸೋಮದಾಸ್ ಚತ್ತನ್ನೂರ್

ಮಲಯಾಳಂನ ಜನಪ್ರಿಯ ಗಾಯಕ ಮತ್ತು ಬಿಗ್ ಬಾಸ್‌ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದ ಸೋಮದಾಸ್ ಚತ್ತನ್ನೂರ್ ಕೂಡ 2021 ರಲ್ಲಿ ತಮ್ಮ 42ನೇ ವರ್ಷದಲ್ಲಿ ನಿಧನರಾದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಸೋಮದಾಸ್ ಆ ನಂತರ ಚೇತರಿಸಿಕೊಂಡಿದ್ದರಾದರೂ ಕೆಲವು ದಿನಗಳ ನಂತರ ಹೃದಯಾಘಾತದಿಂದ ಕೊನೆಯುಸಿರೆಳೆದರು.

More from Filmibeat

English summary
Heartbreaking losses: Delve into the untimely deaths of 7 Bigg Boss contestants. From Shefali Jariwala to 6 others, is there a curse on the reality show?
Read more about: bigg boss death ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X