ವಿಚ್ಛೇದನ ಪಡೆಯಬೇಕಿದ್ದ ಬಿಗ್ ಬಾಸ್ ಸ್ಫರ್ಧಿ ಈಗ ಗರ್ಭಿಣಿ, ಆದರೆ ಗಂಡನಿಗೆ ಗೊತ್ತಿಲ್ಲ ಮಗು ವಿಚಾರ !
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಹೀಗಿರುವಾಗ ತನ್ನ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ ನಟಿಯೊಬ್ಬರು ಸದ್ಯ ಗರ್ಭಿಣಿಯಾಗಿದ್ದಾರೆ. ಆದರೆ ಈ ವಿಚಾರ ಅವರ ಪತಿಗೆ ಗೊತ್ತಿಲ್ಲ. ಇದೀಗ ಅನೇಕರ ಹುಬ್ಬೇರಿಸಿದೆ.
ಹೌದು, ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್.. ಹಿಂದಿ ಕಿರುತೆರೆಯ ಆದರ್ಶ ದಂಪತಿಗಳು. ಮನಸಾರೆ ಪರಸ್ಪರ ಪ್ರೀತಿಸಿ 2021ರಲ್ಲಿ ಹಸೆಮಣೆ ಏರಿದ ಇಬ್ಬರು ಆ ನಂತರ ಬಿಗ್ ಬಾಸ್ ಸೀಸನ್ 17ರಲ್ಲಿ ಜೊತೆಯಾಗಿ ಭಾಗವಹಿಸಿದ್ದರು. ತಮ್ಮ ಸಾಂಸಾರಿಕ ಜೀವನವನ್ನೇ ಪಣಕ್ಕಿಟ್ಟಿದ್ದರು.

ಬಿಗ್ ಬಾಸ್ ಮನೆಯಲ್ಲಿ ಇದ್ದ ಅಷ್ಟು ದಿನವೂ ಇವರು ಇಬ್ಬರು ಜೊತೆಯಾಗಿ ಆಡಿದ್ದಕ್ಕಿಂತ ಕಿತ್ತಾಡಿಕೊಂಡಿದ್ದೇ ಹೆಚ್ಚು. ಇವರ ಈ ದಿನನಿತ್ಯದ ಜಗಳವನ್ನು ಕಿರುತೆರೆಯ ಮೂಲಕ ಕಣ್ತುಂಬಿಕೊಂಡ ಅನೇಕರು ಇಬ್ಬರು ಮನೆಯಾಚೆ ಬಂದ ನಂತರ ವಿಚ್ಛೇದನ ಪಡೆಯುವುದು ನಿಜಾ ಎಂದೇ ಮಾತನಾಡಿಕೊಂಡಿದ್ದರು.
ಆದರೆ ಜನ ಅಂದುಕೊಂಡಂತೆ ಆಗಲಿಲ್ಲ. ಬದಲಿಗೆ ಇಬ್ಬರು ದಾಂಪತ್ಯ ಅಂದ ಮೇಲೆ ಸರಸ-ವಿರಸ ಇದ್ದಿದ್ದೇ ಎಂದು ಹೇಳಿ ಸುಮ್ಮನಾದರು. ಇಂಥಾ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಸದ್ಯ ಲಾಫ್ಟರ್ ಶೆಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇನ್ನೇನು ಈ ಜುಲೈನಲ್ಲಿ ಈ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಈ ಕಾರ್ಯಕ್ರಮದ ಈ ವಾರದ ಪ್ರೋಮೋವನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದ್ದು, ಈ ಪ್ರೋಮೋದಲ್ಲಿ ಕಾರ್ಯಕ್ರಮದ ನಿರೂಪಕ ಕೃಷ್ಣ ಅಭಿಷೇಕ್, ಅಂಕಿತಾ ಅವರನ್ನು ಸತಾಯಿಸಿದ್ದಾರೆ.
ಈ ಸಮಯದಲ್ಲಿ ಕೃಷ್ಣ ಹಿಂದೆ ಓಡಿರುವ ಅಂಕಿತಾ ನನ್ನಿಂದ ಇನ್ನೂ ಆಗಲ್ಲ ನಾನು ಪ್ರೆಗ್ನೆಂಟ್ ಎಂದು ಹೇಳಿದ್ದಾರೆ. ಅಂಕಿತಾ ಅವರ ಈ ಮಾತಿಂದ ಇತರೆ ಸ್ಫರ್ಧಿಗಳು ಶಾಕ್ ಆಗಿದ್ದಾರೆ. ಆ ನಂತರ ಕರಣ್ ಕುಂದ್ರಾ ಬಂದು ನೀವು ನಿಜವಾಗಿಯೂ ಗರ್ಭಿಣಿನಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನೇರ ಉತ್ತರವನ್ನು ನೀಡದ ಅಂಕಿತಾ ನಾಚಿಕೊಳ್ಳುತ್ತಾರೆ. ಬೇರೆ ಸ್ಫರ್ಧಿಗಳು ಕೂಡ ಅಂಕಿತಾಗೆ ಶುಭಾಶಯ ತಿಳಿಸಿದ್ದಾರೆ.

ಆದರೆ, ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ಅಂಕಿತಾ ಅವರ ಪತಿ ವಿಕ್ಕಿ ಜೈನ್ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಮೌನ ವಹಿಸಿದ್ದಾರೆ. ವಿಕ್ಕಿ ಜೈನ್ ಅವರ ಈ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕರು.. ಪತ್ನಿ ಗರ್ಭಿಣಿಯಾದ ವಿಚಾರ ಪತಿಗೆ ಗೊತ್ತಿಲ್ಲದಿರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ಧಾರೆ.
ಇನ್ನು ಕೆಲವರು ಇದೆಲ್ಲ ಟಿಆರ್‌ಪಿಗಾಗಿ ಮಾಡಿರುವ ಕಸರತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಂಕಿತಾ ಗರ್ಭಿಣಿಯಾಗಿಲ್ಲೆ ಎನ್ನುವ ವಾದ ಮಾಡುತ್ತಿದ್ದಾರೆ. ಮತ್ತೂ ಕೆಲವರು ಶುಭಾಶಯಗಳನ್ನು ಕೂಡ ಕೋರುತ್ತಿದ್ದಾರೆ. ಸದ್ಯ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನುಳಿದಂತೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಮೀರಾ ಚೋಪ್ರಾ ಅವರ ಕೈಯನ್ನು ವಿಕ್ಕಿ ಜೈನ್ ತಮ್ಮ ಕೈಯಲ್ಲಿ ಹಿಡಿದುಕೊಂಡು ಮಾತನಾಡಿದ್ದರು. ಹೀಗೆ ಅತ್ತ ಈ ಇಬ್ಬರ ನಡುವೆ ಸಂಭಾಷಣೆ ನಡೆಯುತ್ತಿದ್ದರೆ, ತನ್ನ ಪತಿ ಬೇರೆ ಆಕೆಯ ಕೈ ಹಿಡಿದುಕೊಂಡಿದ್ದಕ್ಕೆ ಇತ್ತ ಅಂಕಿತಾ ಕಣ್ಣು ಕೆಂಪಾಗಿದೆ. ತನ್ನ ಪತಿ ವಿಕ್ಕಿ ಜೈನ್ ಅವರನ್ನೇ ಅಂಕಿತಾ ಲೋಖಂಡೆ ಗುರಾಯಿಸಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.


Click it and Unblock the Notifications











