'ಇಸ್ಮಾರ್ಟ್ ಜೋಡಿ'ಯಿಂದ ಎಲಿಮಿನೇಟ್ ಆದ ಮೊದಲ ಜೋಡಿ ಪ್ರತೀಕ್ ಮೌಲ್ಯ!
ಮಾತಿನ ಮಲ್ಲ, ಗೋಲ್ಡನ್ ಸ್ಟಾರ್ ಗಣೇಶ್ ಇದ್ದಾರೆ ಎಂದರೆ ಅಲ್ಲಿ ನಗುವಿಗೆ ಕೊರತೆಯೇ ಇರುವುದಿಲ್ಲ. ಇನ್ನು ಬೇಸರವಂತೂ ಆಗುವುದೇ ಇಲ್ಲ. ಗಣೇಶ್ ಅವರು ರಿಯಾಲಿಟಿ ಶೋ ನಡೆಸಿಕೊಡುತ್ತಾರೆ ಎಂದರೆ ಕಂಟೆಂಟ್ ಇಲ್ಲದೆ ಇದ್ದರೂ ಅಲ್ಲಿ ಗಣೇಶ್ ಒಬ್ಬರಿದ್ದರೆ ಸಾಕು ಎನ್ನವ ಮಾತಿದೆ.
ಗಣೇಶ್ ಟಾಕ್ ಆಫ್ ದಿ ಶೋ ಆಗುವಂತೆ ಮಾಡಿಯೇ ಮಾಡುತ್ತದೆ. ಇದನ್ನು ಹೊಸದಾಗಿ ಪ್ರೂವ್ ಮಾಡುವ ಅಗತ್ಯವೇ ಇಲ್ಲ. ಇದೀಗ ಹೊಸ ಶೋ 'ಇಸ್ಮಾರ್ಟ್ ಜೋಡಿ' ಮೂಲಕ ಗಣೇಶ್ ಎಲ್ಲರ ಮನ ಸೆಳೆದಿದ್ದಾರೆ. ದಂಪತಿಗಳ ನಡುವೆ ವೈಮನಸನ್ನು ತಳ್ಳಿ ಹಾಕಿ ಖುಷಿ ಹೆಚ್ಚಿಸುತ್ತಿದ್ದಾರೆ.
ಮದುವೆಯಾದ ಮೇಲೆ ಬೇಡವೆಂದರೂ ಒಂದಷ್ಟು ಜವಬ್ದಾರಿಗಳು ಹೆಚ್ಚಾಗುತ್ತವೆ. ಒಂದಷ್ಟು ಬದಲಾವಣೆಗಳನ್ನು ಅನಿವಾರ್ಯವಾಗಿ ಗಂಡ ಮತ್ತು ಹೆಂಡತಿ ಇಬ್ಬರು ಮಾಡಿಕೊಳ್ಳಬೇಕಾಗುತ್ತದೆ. ಸರಸ-ವಿರಸದ ಜೊತೆಗೆ ಜೀವನದ ಬಂಡಿ ಸಾಗಬೇಕಾಗುತ್ತದೆ. ಮದುವೆಯ ಜೀವನದಲ್ಲಿ ಸಕ್ಸಸ್ ಆದವರು ಇದ್ದಾರೆ ಫೇಲ್ಯೂರ್ ಆದವರು ಇದ್ದಾರೆ.

ಮುನಿಸು ಮರೆದ ದಂಪತಿಗಳು!
ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಶುರುವಾಗಿ ಈಗಾಗಲೇ ಒಂದು ತಿಂಗಳಾಗುತ್ತಾ ಬಂದಿದೆ. ಗಣೇಶ್ , ಕಾರ್ಯಕ್ರಮದಲ್ಲಿರುವ ಹತ್ತು ಜೋಡಿಗಳ ಅಂತರಾಳವನ್ನು ತೆರೆದಿಟ್ಟಿದ್ದು, ವೈಮನಸ್ಸು, ಮುನಿಸುಗಳನ್ನು ದೂರ ಮಾಡಿಸಿದ್ದಾರೆ. ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸಿದ್ದಾರೆ. ದಂಪತಿಗಳನ್ನು ಮತ್ತೆ ಒಂದು ಮಾಡಿಸಿ, ಈಗ ಆಟವಾಡಿಸುತ್ತಿದ್ದಾರೆ. ಸಪ್ತಪದಿ ತುಳಿದು ಒಟ್ಟಿಗೆ ಸಂಸಾರ ಎಂಬ ಸಾಗರದಲ್ಲಿ ಈಜಿದ ಜೋಡಿಗಳು ಈಗ ಒಟ್ಟಿಗೆ ಆಡಿ ಗೆಲ್ಲಲು ಮುಂದಾಗಿದ್ದಾರೆ. ಸೋಲು-ಗೆಲುವಿನ ಆಟದಲ್ಲಿ ದಂಪತಿಗಳು ಒಂದಾಗಿದ್ದಾರೆ. ಗೆಲ್ಲುವ ಹುಮ್ಮಸ್ಸಿನಲ್ಲಿ ವೈಮನಸ್ಸನ್ನು ಮರೆತಿದ್ದಾರೆ.

ಬ್ರಹ್ಮ ಗಂಟು ಗೆದ್ದ ಜೋಡಿ!
ಕಳೆದ ವಾರ ಒಲವಿನ ಮಾತುಗಳನ್ನಾಡಿ ಮನದ ನೋವನ್ನು ಹಂಚಿಕೊಂಡ ನಟಿ ಸ್ವಪ್ನಾ ದೀಕ್ಷಿತ್ ಅವರು ಹಲವು ವರ್ಷದ ಸಮಸ್ಯೆಯನ್ನು ಬಿಚ್ಚಿಟ್ಟಿದ್ದರು. ಮನದ ದುಃಖವನ್ನು ಹೊರಗೆ ಹಾಕಿ ನಿರಾಳರಾಗಿದ್ದರು. ಪತಿ-ಪತ್ನಿ ಇಬ್ಬರೂ ಗೊಂದಲಗಳಿಂದ ಹೊರಗೆ ಬಂದು ಮತ್ತೆ ಹೊಸ ಬದುಕನ್ನು ಶುರು ಮಾಡಿದರು. ಈ ವಾರದ ಆಟಗಳನ್ನು ಆಡಿದ ಸ್ವಪ್ನ ದೀಕ್ಷಿತ್ ಹಾಗೂ ಅಶ್ವಿನ್ ಅವರು ಉತ್ತಮವಾದ ಪಾಯಿಂಟ್‌ಸ್‌ಗಳನ್ನು ಗಳಿಸಿದರು. ಆಟಗಳಲ್ಲಿ ಎಲ್ಲಾ ಜೋಡಿಗಳ ಪೈಕಿ ಗೆದ್ದ ದಂಪತಿಗಳು ಖುಷಿಯಿಂದ ಬ್ರಹ್ಮಗಂಟು ಪಡೆದು ಸಂತಸ ಪಟ್ಟರು.

ಎಲಿಮಿನೇಷನ್ ಶುರು!
ಈ ವಾರ ಆಡಿಸಿದ ಆಟಗಳೆಲ್ಲವೂ ಮಜವಾಗಿತ್ತು. ಗಂಡಂದಿರಿಗೆ ಬಲೂನ್ ಕಟ್ಟಿ, ಚಡ್ಡಿ ಹಾಕಿ, ಸೈಕಲ್ ಓಡಿಸಿ ದಂಪತಿಗಳು ಖುಷಿ ಖುಷಿಯಾಗಿ ಆಟವಾಡಿದರು. ಒಬ್ಬರಿಗಿಂದ ಒಬ್ಬರು ಚೆನ್ನಾಗಿ ಆಟವಾಡಿದರು. ಆಟದಲ್ಲಿ ವಯಸ್ಸಿನ ಮಿತಿಯೇ ಇರಲಿಲ್ಲ. ಎಲ್ಲರೂ ಒಂದೇ ರೀತಿ ಆಡಿ ನಲಿದರು. ಕೆಲವರು ಗೆದ್ದು ಬೀಗಿದರೆ, ಮತ್ತೆ ಕೆಲವರು ಮಜಾ ಮಾಡಿ ಖುಷಿ ಪಟ್ಟರು. ಇನ್ನು ಆಟದ ನಡುವಲ್ಲಿ ಗಣೇಶ್ ಕಾಮಿಡಿಗಳು ಕೂಡ ಪ್ರೇಕ್ಷಕರಿಗೆ ಕಡಿಮೆ ಅನಿಸಲಿಲ್ಲ. ಆದರೆ ಈ ವಾರದಿಂದ ಕಾರ್ಯಕ್ರಮದಲ್ಲಿ ಎಲಿಮಿನೇಶನ್ ಕೂಡ ಶುರುವಾಗಿದೆ.

ಪ್ರತೀಕ್- ಮೌಲ್ಯ ಔಟ್!
ಕಾರ್ಯಕ್ರಮದ ಕೊನೆಯಲ್ಲಿ ಗಣೇಶ್ ಎಲಿಮಿನೇಟ್ ಪಟ್ಟಿಯಲ್ಲಿದ್ದ ಮೂರು ಜೋಡಿಗಳನ್ನು ವೇದಿಕೆ ಮೇಲೆ ಕರೆದು ಕೆಲಕಾಲ ಗೊಂದಲವನ್ನುಂಟು ಮಾಡಿದ್ದರು. ಕೊನೆಗೆ ನವ ಜೋಡಿಗಳಾದ ಪ್ರತೀಕ್ ಹಾಗೂ ಮೌಲ್ಯರನ್ನು ಎಲಿಮಿನೇಟ್ ಮಾಡಲಾಯ್ತು. ಈ ವೇಳೆ ಮಾತನಾಡಿದ ಮೌಲ್ಯ ಅವರು ನಾನು ಆಟದಿಂದ ಹೊರ ಹೋಗುತ್ತಿದ್ದೇನೆ ಅಷ್ಟೆ, ಇಲ್ಲಿ ನನಗೆ ಅಣ್ಣ, ಅಪ್ಪ-ಅಮ್ಮ, ಅಕ್ಕ ಎಲ್ಲರೂ ಸಿಕ್ಕಿದ್ದಾರೆ ಎಂದು ಕಣ್ಣಿರು ಹಾಕಿದರು. ಪ್ರತೀಕ್, ಈ ಕಾರ್ಯಕ್ರಮದ ಭಾಗವಾಗಿದ್ದು ನನಗೆ ತೃಪ್ತಿ ತಂದಿದೆ ಎಂದರು.


Click it and Unblock the Notifications











