Don't Miss!
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಸ್ಮಾರ್ಟ್ ಜೋಡಿ: ಪ್ರೀತಿಸಿ ಮದುವೆಯಾದ ಜೋಡಿಯ ಕಥೆ ಅನವಾರಣ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಪ್ರಾರಂಭವಾದಾಗಿನಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ವಾರಪೂರ್ತಿ ಒಂದಲ್ಲ ಒಂದು ರೀತಿಯ ಮನರಂಜನೆ ಸಿಗುತ್ತಿದೆ. ವೀಕ್ ಡೇಸ್‌ನಲ್ಲಿ ಧಾರಾವಾಹಿಗಳ ಮೂಲಕ, ವೀಕೆಂಡ್ ನಲ್ಲಿ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಅಷ್ಟೇ ಯಾಕೆ ಹಬ್ಬ-ಹರಿದಿನ, ವಿಶೇಷ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಿ ಇನ್ನಷ್ಟು ಮನರಂಜನೆ ಕೊಡುವಲ್ಲಿ ಸ್ಟಾರ್ ಸುವರ್ಣ ವಾಹಿನಿ ಮುಂದೆ ಇದೆ.
ಮತ್ತೆ
ಶುರುವಾಗಲಿದೆ
ವೀಕೆಂಡ್
ವಿತ್
ರಮೇಶ್:
ಇದು
ಸೀಸನ್
5!
ಇದೀಗಷ್ಟೇ ಪ್ರಾರಂಭಿಸಿರುವ ಇಸ್ಮಾರ್ಟ್ ಜೋಡಿ ಅಂತೂ ಪ್ರೇಕ್ಷಕರ ಮೆಚ್ಚಿನ ಶೋ ಆಗಿದೆ. ಇದು ವಿಭಿನ್ನ ರೀತಿಯಲ್ಲಿ ಮೂಡಿ ಬರ್ತಿದೆ. ಇದರಲ್ಲಿನ ಗೇಮ್ಸ್ ಗಳು ಕೂಡ ಎಲ್ಲರಿಗೂ ಇಷ್ಟವಾಗುತ್ತಿದೆ. ಹಲವು ಬಗೆಯ ಆಟಗಳನ್ನು ಆಡಿಸುತ್ತಾ ರಂಜಿಸಲಾಗುತ್ತಿದೆ.

ಆಟ, ತುಂಟಾಟ, ಮೋಜು, ಮಸ್ತಿ!
ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಮೂಡಿ ಬರುವ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ, ಪ್ರೇಕ್ಷಕರನ್ನು ರಂಜಿಸುತ್ತಿದೆ. ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಮನೆಯವರೆಲ್ಲಾ ಕೂತು ನೋಡುವಂತದ್ದು. ಸುಖ ಸಂಸಾರ ನಡೆಸುವುದು ಹೇಗೆ ಎಂಬ ಗುಟ್ಟನ್ನು ಕೂಡ ಹಿರಿಯ ಜೋಡಿಗಳು ಹೇಳುತ್ತಿದ್ದಾರೆ. ನವ ಜೋಡಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇನ್ನು ಶೋನಲ್ಲಿ ರಿಚರ್ಡ್ ಲೂಯಿಸ್ ದಂಪತಿ ಕೂಡ ಇದ್ದು ಸಖತ್ ಕಾಮಿಡಿ ಮಾಡುತ್ತಾರೆ. ಶೋ ಹೋಸ್ಟ್ ಮಾಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಜೋಡಿ ಹಕ್ಕಿಗಳನ್ನು ಆಡಿಸಿ, ನಲಿಸಿ, ಕುಣಿಸಿ, ನಗಿಸಿ ಪ್ರೇಕ್ಷಕರಿಗೆ ರಸದೌತಣವನ್ನು ಉಣ ಬಡಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಶೋ ಆಗಿದ್ದು, ಅದ್ಧೂರಿ ಸೆಟ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. ಸೆಲೆಬ್ರಿಟಿ ಜೋಡಿಗಳು ಕೂಡ ವೇದಿಕೆಯ ಮೇಲೆ ನಕ್ಕು-ನಲಿಯುತ್ತಿದ್ದಾರೆ.
ಶ್ರೆಯಾ
ಪಾಲಾಗಿರುವ
ಅದೃಷ್ಟ
ವೈದೇಹಿಯತ್ತ
ತಿರುಗುತ್ತಾ

ಗೆದ್ದ ಜೋಡಿಗೆ ಬಂಪರ್ ಬಹುಮಾನ!
ಈ ರಿಯಾಲಿಟಿ ಶೋನಲ್ಲಿ 40 ವರ್ಷದ ದಾಂಪತ್ಯ ಜೀವನ ನಡೆಸಿರುವ ಜೋಡಿಗಳಿಂದ ಹಿಡಿದು ಇತ್ತೀಚೆಗೆ ಮದುವೆಯಾಗಿರುವ ಕಪಲ್ಸ್ ಕೂಡ ಇದ್ದಾರೆ. ತೀರ್ಪುಗಾರರು ಇಲ್ಲದ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಸಾರಥ್ಯವನ್ನು ವಹಿಸಿಕೊಂಡಿರುವ ಗಣೇಶ್ ಅವರೆ ಸ್ಪರ್ಧಿಗಳಿಗೆ ಹಲವು ಟಾಸ್ಕ್ ಗಳನ್ನು ನೀಡುತ್ತಾರೆ. ಪ್ರತೀ ಆಟದ ಪರ್ಫಾಮೆನ್ಸ್ ಅನ್ನು ನೋಟ್ ಮಾಡಿಕೊಳ್ಳಲಾಗುತ್ತದೆ. ಮೊದಲ ಐದು ಕಂತುಗಳು ಮುಗಿದ ಮೇಲೆ ಎಲಿಮೆನೇಷನ್ ರೌಡ್ ಶುರುವಾಗುತ್ತದೆ. ಉತ್ತಮವಾಗಿ ಆಟವಾಡಿ ಗೆದ್ದ ಜೋಡಿ ಕೊನೆಗೆ ವಿನ್ ಆಗುತ್ತಾರೆ. ಗೆದ್ದ ದಂಪತಿಗೆ ವಾಹಿನಿ ಕಡೆಯಿಂದ 10 ಲಕ್ಷ ರೂ ಬಹುಮಾನ ನೀಡಲಾಗುತ್ತದೆ.

ವಿಭಿನ್ನವಾದ ಟಾಸ್ಕ್!
ಸಂಸಾರದ ಕಥೆಯ ಜೊತೆಗೆ ಇಸ್ಮಾರ್ಟ್ ಜೋಡಿಯಲ್ಲಿ ಭಿನ್ನ ವಿಭಿನ್ನ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಮೊದಲೆರಡು ಎಪಿಸೋಡ್‌ನಲ್ಲಿ ಎಲ್ಲಾ ಜೋಡಿಗಳನ್ನು ಪರಿಚಯಿಸಲಾಯಿತು. ಅವರ ಭೇಟಿ, ಪ್ರೀತಿ ಬಗ್ಗೆ ತಿಳಿಸಿಕೊಡಲಾಯ್ತು. ನಂತರದ ಎಪಿಸೋಡ್‌ನಲ್ಲಿ ಮತ್ತೆ ಎಲ್ಲಾ ಜೋಡಿಗಳ ಮದುವೆ ಮಾಡಿಸಿ ಹಳೆಯ ನೆನಪುಗಳನ್ನು ಮರುಕಳಿಸಲಾಯ್ತು. ನಂತರ ಕೆಲ ಆಟಗಳನ್ನು ಆಡಿಸಿ, ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದು ಪರೀಕ್ಷೆ ಮಾಡಿದ್ದರು. ಬಳಿಕ ಎಲ್ಲರಿಂದಲೂ ಯೋಗ ಕೂಡ ಮಾಡಿಸಿದ್ದರು.

ಮನದ ಮಾತು ಹಂಚಿಕೊಂಡ ಜೋಡಿ!
ಈ ವಾರದ ಆಟದಲ್ಲಿ ಮನದ ಮಾತುಗಳನ್ನು ಬಿಚ್ಚಿಡಲಿದ್ದಾರೆ. ಮನೆಯವರ ಬಳಿ ಹೇಳಿಕೊಳ್ಳಲಾಗದಂತಹ ಕೆಲ ವಿಚಾರಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ದಂಪತಿಗಳನ್ನು ಮತ್ತಷ್ಟು ಹತ್ತಿರ ಮಾಡಲು ವಾಹಿನಿ ಮುಂದಾಗಿದೆ. ಇಂದಿನ ಶೋ ಬಹಳ ಕುತೂಹಲಕಾರಿಯಾಗಿದೆ. ಶೋ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.