For Quick Alerts
  ALLOW NOTIFICATIONS  
  For Daily Alerts

  ಸೆಮಿ ಫೈನಲ್ ತಲುಪಿದ ಇಸ್ಮಾರ್ಟ್ ಜೋಡಿ : ಇಡೀ ಫ್ಯಾಮಿಲಿಯನ್ನು ನೋಡೋಕೆ ಖುಷಿ

  By ಎಸ್ ಸುಮಂತ್
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆಯುತ್ತಿರುವ 'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ ಇದೀಗ ಸೆಮಿಫೈನಲ್ ರೌಂಡ್ ತಲುಪಿದೆ. ಇಲ್ಲಿಯವರೆಗೂ ಕಷ್ಟ-ಸುಖ, ನೋವು-ನಲಿವು, ಸಾಂಸಾರಿಕ ಜೀವನದ ಜಂಜಾಟ ಎಲ್ಲವನ್ನು ತೋರಿಸಿಕೊಟ್ಟ ಜೋಡಿಗಳು ಇದೀಗ ಒಂದು ಹೆಜ್ಜೆ ಮುಂದಕ್ಕೆ ಸಾಗಿದ್ದಾರೆ. ಕಂಪ್ಲೀಟ್ ಮನರಂಜನೆ ನೀಡಿದ ಶೋ ಮತ್ತಷ್ಟು ಮನರಂಜನೆ ನೀಡುವುದಕ್ಕೆ ಸಜ್ಜಾಗಿದೆ.

  ಸೆಮಿಫೈನಲ್‌ನಲ್ಲಿ ಎಲ್ಲರೂ ಅವರವರ ಫ್ಯಾಮಿಲಿ ಜೊತೆಗೂಡಿ ಎಂಜಾಯ್ ಮಾಡಲು ಸಿದ್ದರಾಗಿದ್ದಾರೆ. ಇಷ್ಟು ದಿನ ವೇದಿಕೆ ಮೇಲೆ ಎಲ್ಲರನ್ನೂ ನಕ್ಕು ನಗಿಸಿದ್ದ ಜೋಡಿಗಳು ಇದೀಗ ಫ್ಯಾಮಿಲಿಯೊಟ್ಟಿಗೆ ಮಜಾ ಮಾಡಲಿದ್ದಾರೆ. ಈಗಾಗಲೇ ಸೆಮಿಫೈನಲ್ ತಲುಪಿರುವ ಜೋಡಿಗಳು ತಮ್ಮ ತಮ್ಮ ಫ್ಯಾಮಿಲಿ ಜೊತೆಗೆ ಬಂದಿದ್ದಾರೆ. ಹಾಗಾದ್ರೆ ಅವರ ಫ್ಯಾಮಿಲಿ ಮೆಂಬರ್ಸ್ ಎಷ್ಟು ಎಗ್ಸೈಟ್ ಆಗಿದ್ದಾರೆ ಎಂಬುದನ್ನು ಮುಂದೆ ಓದಿ.

  ಕೆಲವೇ ಕ್ಷಣಗಳಲ್ಲಿ ಟಿವಿ ಬಿಗ್‌ಬಾಸ್ ಸೀಸನ್ ಗ್ರ್ಯಾಂಡ್ ಓಪನಿಂಗ್: ಸೆಲೆಬ್ರಿಟಿಗಳ ಜೊತೆ ಕಾಮನ್‌ಮ್ಯಾನ್ ಎಂಟ್ರಿ!ಕೆಲವೇ ಕ್ಷಣಗಳಲ್ಲಿ ಟಿವಿ ಬಿಗ್‌ಬಾಸ್ ಸೀಸನ್ ಗ್ರ್ಯಾಂಡ್ ಓಪನಿಂಗ್: ಸೆಲೆಬ್ರಿಟಿಗಳ ಜೊತೆ ಕಾಮನ್‌ಮ್ಯಾನ್ ಎಂಟ್ರಿ!

  ಮಕ್ಕಳ ಜೊತೆ ಫುಲ್ ಮಸ್ತಿ

  ಮಕ್ಕಳ ಜೊತೆ ಫುಲ್ ಮಸ್ತಿ

  ಸೆಮಿಫೈನಲ್‌ಗೆ ನಟ ಜೈಜಗದೀಶ್ ದಂಪತಿಯೂ ತಲುಪಿದ್ದಾರೆ. ವೇದಿಕೆ ಮೇಲೆ ಮಾತನಾಡುವಾಗ ಅವರ ಮಕ್ಕಳು ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೂವರು ಹೆಣ್ಣು ಮಕ್ಕಳು ಸಹ ಬಂದಿದ್ದು, ತಂದೆ ತಾಯಿಗೆ ಸಂತಸ ನೀಡಿದ್ದಾರೆ. ವೇದಿಕೆ ಮೇಲೆ ಪುಟಾಣಿ ಎಂದಾಗ ಗಣೇಶ್ ಯಾರು ಪುಟಾಣಿ ಎಂದಿದ್ದಾರೆ. ಆಗ ಈಗ ಪುಟಾಣಿ ಅಲ್ಲ ಗಟ್ವಾಣಿ ಆಗಿ ಬಿಟ್ಟಿದ್ದಾಳೆ ಅಂತ ವಿಜಯಲಕ್ಷ್ಮೀ ರೇಗಿಸಿದ್ದಾರೆ. ಇನ್ನು ಮೂರು ಹೆಣ್ಣು ಮಕ್ಕಳು ಜನಿಸಿದ್ದರ ಬಗ್ಗೆ ವಿಜಯಲಕ್ಷ್ಮೀ ಹೇಳಿಕೊಂಡಿದ್ದಾರೆ. ಮೂವರು ಮಕ್ಕಳ ಹೆಸರು ಪುಟಾಣಿ, ಬಂಗಾರು ಅಂತಾ ಕರೆಯುತ್ತಾರೆ.

  ಆರ್ಯನಿಗೆ ಕಂಟಕ: ಇನ್ಮುಂದೆ ಆರ್ಯವರ್ಧನ್ ಕಥೆಯೇ ಇರೊದಿಲ್ಲ!ಆರ್ಯನಿಗೆ ಕಂಟಕ: ಇನ್ಮುಂದೆ ಆರ್ಯವರ್ಧನ್ ಕಥೆಯೇ ಇರೊದಿಲ್ಲ!

  ಸ್ವಪ್ನಾ ಕಡೆಯಿಂದ ಯಾರೆಲ್ಲಾ ಬಂದಿದ್ದಾರೆ?

  ಸ್ವಪ್ನಾ ಕಡೆಯಿಂದ ಯಾರೆಲ್ಲಾ ಬಂದಿದ್ದಾರೆ?

  ಇವತ್ತು ಫ್ಯಾಮಿಲಿ ರೌಂಡ್ ಆಗಿರುವುದರಿಂದ ಸ್ವಪ್ನಾ ಕಡೆಯಿಂದ ಅವರ ಅಕ್ಕ, ಅಮ್ಮ ಮತ್ತು ಮಗಳು ಬಂದಿದ್ದಾರೆ. ಎಲ್ಲರನ್ನು ಪರಿಚಯ ಮಾಡಿಕೊಟ್ಟ ಸ್ವಪ್ನಾ, ಎಲ್ಲರನ್ನು ಕರೆಸುವುದಕ್ಕೆ ಆಗಲ್ಲ. ಇರುವುದರಲ್ಲಿ ಮೂರು ಜನ ಬಂದಿದ್ದಾರೆ. ಇವತ್ತಿನ ಪ್ರೋಗ್ರಾಂನಲ್ಲಿ ಅವರು ಎಷ್ಟು ಎಕ್ಸೈಟ್ ಆಗಿದ್ದಾರೋ ಅಷ್ಟೆ ಎಕ್ಸೈಟ್ ನನಗೂ ಆಗಿದೆ ಎಂದಿದ್ದಾರೆ. ಇನ್ನು ಅವರ ಅಮ್ಮನ ಬಳಿ ಓಪಿನಿಯನ್ ಕೇಳಿದಾಗ ಅವರ ಅಮ್ಮ ಒಲವೇ ವಿಸ್ಮಯದ ಬಗ್ಗೆ ಮಾತನಾಡಿದ್ದಾರೆ. ನಾವೇ ಕೂತು ಅಳುತ್ತಾ ಇದ್ವಿ. ನಮ್ಮ ಮನೆಯಲ್ಲಿ ಹೀಗೆಲ್ಲಾ ನಡೀತಾ ಎಂಬ ಸಂಕಟ ಆಗಿದೆ ಎಂದಿದ್ದಾರೆ.

  ತಂದೆ ತಾಯಿ ಬಗ್ಗೆ ಏನಂದ್ರು ಮಕ್ಕಳು?

  ತಂದೆ ತಾಯಿ ಬಗ್ಗೆ ಏನಂದ್ರು ಮಕ್ಕಳು?

  ಎಲ್ಲರನ್ನು ರಿಚರ್ಡ್ ಪರಿಚಯ ಮಾಡಿಕೊಟ್ಟಿದ್ದು, ಮಗಳು, ಮಗ, ಸೊಸೆ, ಮೊಮ್ಮಗನ ಬಗ್ಗೆ ಹೇಳಿದ್ದಾರೆ. ಇದೇ ಮೊದಲ ಸಾರಿ ನನ್ನ ಇಡೀ ಫ್ಯಾಮಿಲಿ ವೇದಿಕೆ ಮೇಲೆ ಬರುತ್ತಿದ್ದೀವಿ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಮಗಳು, ಮುಂಚೆ ಅಪ್ಪನ ಮಗಳು ಅಂತಿದ್ದರು. ಈಗ ಅಮ್ಮನ ಮಗಳು ಅಂತಿದ್ದಾರೆ. ನಮ್ಮ ಅಮ್ಮ ಈಗ ಫುಲ್ ಸೆಲೆಬ್ರೆಟಿ ಆಗಿಬಿಟ್ಟಿದ್ದಾರೆ. ಎಲ್ಲಾದರೂ ಹೋದರೆ ಈಗ ತರಕಾರಿ, ಸೊಪ್ಪಲಲ್ಲೆಲ್ಲ ಡಿಸ್ಕೌಂಟ್ ಸಿಗುತ್ತಿದೆ ಎಂದಿದ್ದಾರೆ. ಇನ್ನು ಮಗ ಮಾತನಾಡಿ, ಮನೆಯಲ್ಲಿ ಈಗ ಅಮ್ಮ ಸಿಗುವುದೇ ಕಷ್ಟವಾಗುತ್ತಿದೆ. ಮನೆಯಲ್ಲೆಲ್ಲಾ ಗೇಮ್‌ನದ್ದೇ ಡಿಸ್ಕಷ್ ನಡೀತಾ ಇದೆ. ಗೆದ್ದು ಬನ್ನಿ ಅಂತ ಹಾರೈಸಿದ್ದಾರೆ.

  ಪುನೀತಾ & ಶ್ರೀರಾಮ್ ಫ್ಯಾಮಿಲಿ ಹೇಗಿದೆ?

  ಪುನೀತಾ & ಶ್ರೀರಾಮ್ ಫ್ಯಾಮಿಲಿ ಹೇಗಿದೆ?

  ಪುನೀತಾ ತಂದೆ, ತಾಯಿ ಹಾಗೂ ತಮ್ಮ ಬಂದಿದ್ದಾರೆ. ಈ ಬಗ್ಗೆ ಪುನೀತಾ ಅವರ ತಂದೆಯನ್ನು ಕೇಳಿದ್ದಾರೆ. ಆಗ, ಮಗಳು ಹಾಗೂ ಅಳಿಯ ಇಬ್ಬರು ಪ್ರತಿಭಾವಂತರು. ಇಲ್ಲಿಗೆ ಬಂದಿರುವುದು ಹೆಮ್ಮೆ ಅನಿಸುತ್ತಿದೆ. ಸ್ಟಾರ್ ಸುವರ್ಣಗೆ ಧನ್ಯವಾದ ಅಂತ ಹೇಳಿದ್ದಾರೆ. ಈ ವೇಳೆ ಅವರ ಮಗಳು ಫುಲ್ ಖುಷಿ ವ್ಯಕ್ತಪಡಿಸಿ, ಗೆದ್ದು ಬನ್ನಿ ಅಂತ ಹೇಳಿದ್ದಾಳೆ.

  English summary
  Ismart Jodi Reality Show September 5th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X