'ಇಸ್ಮಾರ್ಟ್ ಜೋಡಿ' ವೇದಿಕೆಯಲ್ಲಿ ಕನ್ನಡ ನಾಡಿನ ವೈಭವದ ಹಬ್ಬ!
ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಶುರುವಾಗಿ ಈಗಾಗಲೇ ಒಂದು ತಿಂಗಳಾಗುತ್ತಾ ಬಂದಿದೆ. ಇದೀಗಷ್ಟೇ ಪ್ರಾರಂಭಿಸಿರುವ 'ಇಸ್ಮಾರ್ಟ್ ಜೋಡಿ' ಅಂತೂ ಪ್ರೇಕ್ಷಕರ ಮೆಚ್ಚಿನ ಶೋ ಆಗಿದೆ. ಇತರೆ ಕಪಲ್ಸ್ ಶೋಗಳಿಗಿಂತಲೂ ಡಿಫರೆಂಟ್ ಆಗಿದೆ. ಇದರಲ್ಲಿನ ಗೇಮ್ಸ್ ಗಳು ಕೂಡ ಎಲ್ಲರಿಗೂ ಇಷ್ಟವಾಗುತ್ತಿದೆ. ಇವತ್ತಿನ ಶೋ ಕೂಡ ಸೂಪರ್ ಆಗಿ ಮೂಡಿ ಬರಲಿದೆ.
ಸಂಸಾರದ ಕಥೆಯ ಜೊತೆಗೆ 'ಇಸ್ಮಾರ್ಟ್ ಜೋಡಿ'ಯಲ್ಲಿ ಆಟವನ್ನು ಆಡಿಸಲಾಗುತ್ತಿದೆ. ಗಣೇಶ್, ಕಾರ್ಯಕ್ರಮದಲ್ಲಿರುವ ಹತ್ತು ಜೋಡಿಗಳ ಅಂತರಾಳವನ್ನು ತೆರೆದಿಟ್ಟಿದ್ದು, ವೈಮನಸ್ಸು, ಮುನಿಸುಗಳನ್ನು ದೂರ ಮಾಡಿಸಿದ್ದಾರೆ. ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸಿದ್ದಾರೆ.
ದಂಪತಿಗಳನ್ನು ಮತ್ತೆ ಒಂದು ಮಾಡಿಸಿ, ಈಗ ಆಟವಾಡಿಸುತ್ತಿದ್ದಾರೆ. ಸಪ್ತಪದಿ ತುಳಿದು ಒಟ್ಟಿಗೆ ಸಂಸಾರ ಎಂಬ ಸಾಗರದಲ್ಲಿ ಈಜಿದ ಜೋಡಿಗಳು ಈಗ ಒಟ್ಟಿಗೆ ಆಡಿ ಗೆಲ್ಲಲು ಮುಂದಾಗಿದ್ದಾರೆ. ಸೋಲು-ಗೆಲುವಿನ ಆಟದಲ್ಲಿ ದಂಪತಿಗಳು ಒಂದಾಗಿದ್ದಾರೆ. ಗೆಲ್ಲುವ ಹುಮ್ಮಸ್ಸಿನಲ್ಲಿ ವೈಮನಸ್ಸನ್ನು ಮರೆತಿದ್ದಾರೆ.

ಇಸ್ಮಾರ್ಟ್ ಜೋಡಿಯಲ್ಲಿ ಸ್ಮಾರ್ಟ್ ಜೋಡಿಗಳು!
ಪ್ರೀತಿಸಿ ಆಗಲೀ, ಮನೆಯಲ್ಲಿ ನೋಡಿದವರನ್ನು ಮದುವೆ ಆಗೋದು ಮುಖ್ಯ ಅಲ್ಲ ಸಂಸಾರ ತೂಗಿಸಿಕೊಂಡು ಹೋಗುವುದು ಮುಖ್ಯ. ಅಷ್ಟೇ ಯಾಕೆ ಇಸ್ಮಾರ್ಟ್ ಜೀವನ ನಡೆಸುವುದು ಬಹಳ ಮುಖ್ಯವಾಗುತ್ತದೆ. ಅದೆಲ್ಲದರ ಮಹತ್ವ ತಿಳಿಸುವುದಕ್ಕೇನೆ, ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಮೂಡಿ ಬರುತ್ತಿದೆ. ಈಗಾಗಲೇ ಸ್ಟಾರ್ ದಂಪತಿಗಳ ನಗುವಿನ ಅಡ್ಡದಲ್ಲಿ ಪ್ರೇಕ್ಷಕರೂ ಕೂಡ ನಕ್ಕು ನಲಿಯುತ್ತಿದ್ದಾರೆ.

ಗೆದ್ದ ಜೋಡಿಗೆ ಬ್ರಹ್ಮಗಂಟು!
ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಪ್ರತೀ ವೀಕೆಂಡ್ ನಲ್ಲೂ ದಂಪತಿಗಳನ್ನು ಆಟ ಆಡಿಸಲಾಗುತ್ತದೆ. ಪ್ರತೀ ವೀಕೆಂಡ್ ಗೆದ್ದ ಜೋಡಿಗೆ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಮೂಲಕ ಬ್ರಹ್ಮಗಂಟು ಫ್ರೇಮ್ ನೀಡಲಾಗುತ್ತದೆ. ಮೊದಲ ಬಾರಿಗೆ ಈ ಬ್ರಹ್ಮಗಂಟು ಫ್ರೇಮ್ ದಿಶಾ ಮತ್ತು ಶಶಾಂಕ್ ಜೋಡಿ ಗೆದ್ದಿತ್ತು. ಇನ್ನು ಕಳೆದ ವಾರ ಈ ಆಟವನ್ನು ಸ್ವಪ್ನಾ ದೀಕ್ಷಿತ್ ಮತ್ತು ಅಶ್ವಿನ್ ಜೋಡಿ ಗೆದ್ದು ಬೀಗಿತ್ತು. ಈ ವಾರ ಯಾವ ಜೋಡಿಗೆ ಈ ಬ್ರಹ್ಮಗಂಟು ಗೆಲ್ಲುತ್ತಾರೋ ಕಾದು ನೋಡಬೇಕಿದೆ.

ಪ್ರತೀ ವಾರ ಒಂದು ಜೋಡಿ ಎಲಿಮಿನೇಟ್!
ಇನ್ನು ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಆಟವಾಡಿಸುವ ಗಣೇಶ್ ಅವರು ಕಡಿಮೆ ಅಂಕ ಗಳಿಸಿದ ಜೋಡಿಯನ್ನು ಎಲಿಮಿನೇಟ್ ಮಾಡುತ್ತಾರೆ. ಕಳೆದ ವಾರ ಆಟವಾಡಿದ ಜೋಡಿಗಳಲ್ಲಿ ಕಡಿಮೆ ಅಂಕ ಗಳಿಸಿ ನವ ಜೋಡಿಗಳಾದ ಪ್ರತೀಕ್ ಹಾಗೂ ಮೌಲ್ಯ ಎಲಿಮಿನೇಟ್ ಆದರು. ಈ ವಾರ ಯಾವ ಜೋಡಿ ಮನೆಗೆ ಹೋಗುತ್ತದೆ ಎಂದು ಈಗಾಗಲೇ ಪ್ರೇಕ್ಷಕರು ಗೆಸ್ ಮಾಡಿದ್ದಾರೆ. ಆದರೆ ಯಾರ ಗೆಸ್ ನಿಜವಾಗುತ್ತದೋ ಕಾದು ನೋಡಬೇಕಿದೆ.

ಕನ್ನಡ ನಾಡಿನ ಸಂಸ್ಕೃತಿ ವೈಭವದ ಹಬ್ಬ!
ಈ ವಾರದ ಎಪಿಸೋಡ್ ಜೋರಾಗಿದೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋ ಗ್ರ್ಯಾಂಡ್ ಆಗಿದೆ. ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ವೇದಿಕೆ ಮೇಲೆ ಕನ್ನಡ ನಾಡಿನ ಸಂಸ್ಕೃತಿ ವೈಭವದ ಹಬ್ಬ ಮೇಳೈಸಿದೆ. ಜೋಡಿಗಳು ಚೆಂದವಾಗಿ ರೆಡಿಯಾಗಿ ಬಂದಿದ್ದು, ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ರೋಮ್ಯಾನ್ಸ್, ಕಾಮಿಡಿ ಎಲ್ಲವೂ ವೇದಿಕೆಯಲ್ಲಿ ಕುಣಿದು ನಲಿದಾಡಲಿದೆ.


Click it and Unblock the Notifications











