ಇಸ್ಮಾರ್ಟ್ ಜೋಡಿಗಳ ಸ್ಮಾರ್ಟ್ ಆಟವೇ ಬಲು ಚೆಂದ!

By ಪ್ರಿಯಾ ದೊರೆ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಪ್ರೇಕ್ಷಕರ ಮನಗೆದ್ದಿದೆ. ಈ ಕಾರ್ಯಕ್ರಮವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅದ್ಭುತವಾಗಿ ನಡೆಸಿಕೊಡುತ್ತಿದ್ದಾರೆ. ಒಂದೂವರೆ ಗಂಟೆ ಮೂಡಿಬರುವ ಕಾರ್ಯಕ್ರಮದಲ್ಲಿ ಎಲ್ಲೂ ಕೊಂಚವೂ ಬೋರ್ ಎನಿಸುವುದಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮ ಕಪಲ್ಸ್‌ಗಳಿಗಾಗಿ ಮಾಡಿರುವ ಕಾರ್ಯಕ್ರಮ. ಡಿಫರೆಂಟ್ ಆಗಿ ಮೂಡಿ ಬಂದಿದೆ. ಇದರ ಟೈಟಲ್ ಟ್ರ್ಯಾಕ್ ಕೂಡ ಅದ್ಭುತವಾಗಿದ್ದು, ಜೋಡಿಗಳ ಆಟ ಇನ್ನೂ ಸೂಪರ್ ಆಗಿದೆ. ಜೀವನದ ಏಳು-ಬೀಳುಗಳನ್ನು ಮರೆತು, ಆಟದಲ್ಲಿ ಸೋಲು-ಗೆಲುವು ಕಾಣುವ ಜೋಡಿಗಳ ಮೊಗದಲ್ಲಿ ಸದಾ ನಗು ಅರಳಿರುತ್ತದೆ.

ಒಂದೊಂದು ವಾರ ಒಂದೊಂದು ಐಡಿಯಾಗಳೊಂದಿಗೆ ಆಟಗಳನ್ನು ಹೊತ್ತು ಬರುವ ಗಣೇಶ್ ಅವರು ಕೂಡ ಈ ಕಾರ್ಯಕ್ರಮವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಜೋಡಿಗಳನ್ನು ಆಟವಾಡಿಸುತ್ತಾ, ಅವರ ಜೀವನದ ಕೆಲ ಘಟನೆಗಳನ್ನು ಮೆಲುಕು ಹಾಕಿಸುತ್ತಾರೆ ಗಣೇಶ್.

ಕನ್ನಡ ಸಂಸ್ಕೃತಿ ಉತ್ಸವ!

ಕನ್ನಡ ಸಂಸ್ಕೃತಿ ಉತ್ಸವ!

ಈ ವಾರದ ಕಾರ್ಯಕ್ರಮ ವಿಶೇಷವಾಗಿತ್ತು. ಯಾಕೆಂದರೆ ಕನ್ನಡ ಸಂಸ್ಕೃತಿ ಉತ್ಸವವನ್ನು ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿತ್ತು. ಹೀಗಾಗಿ ಸ್ಪರ್ಧಿಗಳೆಲ್ಲರೂ ಕರ್ನಾಟಕದ ಒಂದೊಂದು ಪ್ರದೇಶಗಳನ್ನು ಬಿಂಬಿಸಿದ್ದರು. ಮೈಸೂರು, ಧಾರವಾಡ, ಕರಾವಳಿ, ಆದಿ ಜನಾಂಗ, ಬೆಳಗಾವಿ, ಮಲೆನಾಡು ಹೀಗೆ 9 ರೀತಿಯಲ್ಲಿ ರೆಡಿಯಾಗಿ ಬಂದಿದ್ದರು. ಎಲ್ಲಾ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದ್ದರು.

ಅರಿಶಿಣ ಕುಟ್ಟೋ ಆಟ!

ಅರಿಶಿಣ ಕುಟ್ಟೋ ಆಟ!

ಈ ವಾರ ಒಟ್ಟು ಐದು ಆಟಗಳನ್ನು ಹೊತ್ತು ತಂದಿದ್ದ ಗಣೇಶ್, ಮೊದಲು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಮಡಿಕೆ ಹೊಡೆದು 9 ಜೋಡಿಗಳನ್ನು 3 ಗುಂಪುಗಳಾಗಿ ವಿಂಗಡಿಸಿದರು. ಮೊದಲು ವಿನಯ್-ಅಕ್ಷತಾ, ವಿಜಯಲಕ್ಷ್ಮೀ-ಜೈ ಜಗದೀಶ್ ಹಾಗೂ ಪುನೀತಾ ಹಾಗೂ ಶ್ರೀರಾಮ್ ಅವರಿಂದ ಅರಿಶಿಣದ ಕೊಂಬನ್ನು ಒನಕೆಯಿಂದ ಕುಟ್ಟಿಸಿದರು. ಈ ಆಟದಲ್ಲಿ ಎರಡು ಜೋಡಿ ಗೆದ್ದು, ಮಿನ್ನಿ ಹಾಗೂ ಜಗ್ಗ ಗ್ಯಾಲರಿಗೆ ಹೋದರು. ದಿಶಾ-ಶಶಾಂಕ್, ಸುಮನ್-ಗುರುದೇವ, ಇಂಪನಾ ಜೋಡಿಗಳು ತುಲಾಭಾರ ಮಾಡಿದರು. ತರಕಾರಿ, ದಿನಸಿಯನ್ನು ಬಳಸಿ ತಮ್ಮ ತಮ್ಮ ಒಡತಿಯರ ದತುಲಾಭಾರ ಮಾಡಿದರು. ಇದರಲ್ಲಿ ಸುಮನ್ ನಗರ್‌ಕರ್ ಜೋಡಿ ಸೋಲೊಪ್ಪಿಕೊಂಡಿತು. ಹುಲ್ಲಿನಲ್ಲಿ ವಸ್ತು ಹುಡುಕುವ ಆಟದಲ್ಲಿ ರಾಘು ದಂಪತಿ ಸೋತರು.

ಪದಬಂಧದಲ್ಲಿ ಮಸ್ತ್ ಮಜಾ!

ಪದಬಂಧದಲ್ಲಿ ಮಸ್ತ್ ಮಜಾ!

ಇನ್ನು ಗಣೇಶ್ ಗೆದ್ದ ಆರು ಜೋಡಿಗಳಿಂದ ಪದಬಂಧವನ್ನು ಆಡಿಸಿದರು. ಈ ಆಟದಲ್ಲಿ ಪುನೀತಾ ದಂಪತಿ ಹಾಗೂ ದಿಶಾ ಜೋಡಿಗಳು ಗೆದ್ದರು. ಆಟವಾಡುವ ವೇಳೆ ಕೆಲ ಪದಗಳ ಕ್ಲ್ಯೂ ಕೊಡುವಾಗ ಪತಿ ಪತ್ನಿಯರ ಕೆಲ ಸೀಕ್ರೇಟ್ ವಿಚಾರಗಳು ಕೂಡ ರಿವೀಲ್ ಆದವು. ಈ ವೇಳೆ ಉಳಿದ ದಂಪತಿಗಳು ಮಸ್ತ್ ಎಂಜಾಯ್ ಮಾಡಿದರು. ಗಣೇಶ್ ಅವರಂತೂ ದಂಪತಿಗಳಿಗೆ ಎಲ್ಲೂ ಇರಿಟೇಟ್ ಆಗದಂತೆ ಮ್ಯಾನೇಜ್ ಮಾಡಿದರು. ಈ ಆಟದಲ್ಲಿ ಗೆದ್ದವರಿಗೆ ಕುಸ್ತಿ ಆಟವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ದಿಶಾ ಮದನ್ ಹಾಗೂ ಶಶಾಂಕ್ ಗೆಲ್ಲುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಪುನೀತಾ ಹಾಗೂ ಶ್ರೀರಾಮ್ ಆಟ ಗೆದ್ದು 'ಬ್ರಹ್ಮಗಂಟು ಫ್ರೇಮ್' ತಮ್ಮದಾಗಿಸಿಕೊಂಡರು.

ಎಲಿಮಿನೇಷನ್ ಇಲ್ಲದ ವಾರ!

ಎಲಿಮಿನೇಷನ್ ಇಲ್ಲದ ವಾರ!

ಆಟದ ಕೊನೆಯಲ್ಲಿ ಈ ವಾರ ಯಾವ ಜೋಡಿ ಎಲಿಮಿನೇಟ್ ಆಗುತ್ತೆ ಎನ್ನುವ ಕುತೂಹಲ ಸೃಷ್ಟಿಯಾಗಿತ್ತು. ಆದರೆ ಡೇಂಜರ್ ಝೋನ್ ನಲ್ಲಿ ಈ ವಾರ ಒಟ್ಟು 5 ಜೋಡಿಗಳಿದ್ದರು. ಗಣೇಶ್ ಅವರು ಎಲ್ಲಾ ಜೋಡಿಗಳನ್ನು ವೇದಿಕೆ ಮೇಳೆ ಕರೆದು, ಕನ್ನಡ ಸಂಸ್ಕೃತಿ ಉತ್ಸವ ನಡೆಸಿದ ಕಾರಣ ಈ ವಾರ ಯಾರೂ ಎಲಿಮಿನೇಟ್ ಆಗುತ್ತಿಲ್ಲ ಎಂದು ಹೇಳಿದರು. ಈ ಮಾತನ್ನು ಕೇಳಿದ ಸ್ಫರ್ಧಿಗಳು ಖುಷಿಪಟ್ಟರು.

More from Filmibeat

English summary
Ismart Jodi Reality Show Written Update On August 21st Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X