For Quick Alerts
  ALLOW NOTIFICATIONS  
  For Daily Alerts

  ಸ್ಮಾರ್ಟ್ ಜೋಡಿಯಲ್ಲಿ ಮಸ್ತ್ ಟಾಸ್ಕ್!

  By Priya Dore
  |

  ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಈ ವಾರ ಗಣೇಶೋತ್ಸವವನ್ನು ಆಚರಿಸಲಾಯಿತು. ಗೌರಿ-ಗಣೇಶ ಹಬ್ಬದ ಪ್ರಯುಕ್ತವಾಗಿ ಈ ವಾರ ಸ್ಪೆಷಲ್ ಎಪಿಸೋಡ್ ಪ್ರಸಾರ ಮಾಡಲಾಯ್ತು. ಜೋಡಿಗಳು ಹಬ್ಬ ಆಚರಿಸಲು ಗ್ರ್ಯಾಂಡ್ ಆಗಿ ರೆಡಿಯಾಗಿ ಬಂದಿದ್ದರು.

  ಎಲ್ಲಾ ಜೋಡಿಗಳು ಕೂಡ ಮ್ಯಾಚಿಂಗ್ ಬಟ್ಟೆಯನ್ನು ಧರಿಸಿದ್ದರು. ವೇದಿಕೆ ಮೇಲೆ ದಂಪತಿಗಳನ್ನು ನೋಡಲು ತುಂಬಾನೇ ಮುದ್ದಾಗಿ ಕಾಣುತ್ತಿದ್ದರು. ಇಸ್ಮಾರ್ಟ್ ಜೋಡಿಯಲ್ಲಿ ಈ ವಾರ ಸ್ಕಿಟ್ ಕೂಡ ಮಾಡಲಾಗಿತ್ತು. ಎರಡು ಸ್ಕಿಟ್ ಗಳನ್ನು ಕಾರ್ಯಕ್ರಮದಲ್ಲಿ ಮಾಡಲಾಯ್ತು.

  ಏಜೆ ಸೊಸೆಯಂದಿರಿಗೆ ತಕ್ಕ ಪಾಠ ಕಲಿಸುತ್ತಾಳ ಲೀಲಾ ತಾಯಿ ಕೌಸಲ್ಯ? ಏಜೆ ಸೊಸೆಯಂದಿರಿಗೆ ತಕ್ಕ ಪಾಠ ಕಲಿಸುತ್ತಾಳ ಲೀಲಾ ತಾಯಿ ಕೌಸಲ್ಯ?

  ಈ ವಾರವೂ ಎಲಿಮಿನೇಷನ್ ಕ್ಯಾನ್ಸಲ್ ಮಾಡಲಾಗಿತ್ತು. ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಈಗಾಗಲೇ ಒಂದು ಜೋಡಿ ಎಲಿಮಿನೇಟ್ ಆಗಿದೆ. ಆದರೆ ಕಳೆದ ವಾರ ಹಾಗೂ ಈ ವಾರ ಎಲಿಮಿನೇಷನ್ ಅನ್ನು ರದ್ದುಗೊಳಿಸಲಾಗಿದೆ.

  ಬಲೂನ್ ಆಟದಲ್ಲಿ ಸೋತವರು ಯಾರು?

  ಬಲೂನ್ ಆಟದಲ್ಲಿ ಸೋತವರು ಯಾರು?

  ಕಾರ್ಯಕ್ರಮದಲ್ಲಿ 8 ಜೋಡಿಗಳನ್ನು ಎರಡು ಟೀಂಗಳಾಗಿ ವಿಂಗಡಿಸಿದ ಗಣೇಶ್, ಆಟವಾಡಿಸಲು ಮುಂದಾದರು. ಎರಡೂ ಟೀಂಗಳಿಂದ ಇಬ್ಬರನ್ನು ಕರೆಸಿದರು. ಕಾಲಿಗೆ ಬಲೂನ್ ಕಟ್ಟಿ ಒಡೆಯದಂತೆ ನೋಡಿಕೊಳ್ಳಬೇಕಿತ್ತು. ಹೀಗಾಗಿ ಲಾಂಗ್ ಸ್ಕರ್ಟ್ ಮಾದರಿಯ ಬಟ್ಟೆ ಧರಿಸಿದ್ದ ಪುನೀತಾ ಅವರು ಅದೇ ಡ್ರೆಸ್ ಅನ್ನೇ ಕಚ್ಚೆ ರೀತಿ ಕಟ್ಟಿಕೊಂಡು ಆಡಲು ಮುಂದಾದರು. ಕೊನೆಗೆ ತಮ್ಮ ಕಾಲಿನ ಬಲೂನ್ ಅನ್ನು ಕಳೆದುಕೊಂಡು ತಮ್ಮ ಟೀಂ ಸೋಲುವಂತಾಯ್ತು. ಸೀರೆಯುಟ್ಟು ಆಡಿದ ಹ್ಯಾರಿಯೇಟ್ ಲೂಯಿಸ್ ಅವರು ಎದುರಿನ ಟೀಂನ ಎರಡೂ ಬಲೂನ್ ಒಡೆದು ಆಟ ಗೆದ್ದರು.

  ಚಳಿ ಚಳಿ ತಾಳೆನು ಎಂದು ಹಾಡಿದ ರಘು!

  ಚಳಿ ಚಳಿ ತಾಳೆನು ಎಂದು ಹಾಡಿದ ರಘು!

  ಚಿತ್ರಮಂಜರಿ ಆಟವಾಡುವಾಗ ಚಳಿ-ಚಳಿ ತಾಳೆನು, ಈ ಸನಿಹ ಎಂಬ ಹಾಡನ್ನು ಪ್ಲೇ ಮಾಡಲಾಯ್ತು. ಗಣೇಶ್ ಅವರು ಈ ಹಾಡಿಗೆ ರಘು ಮತ್ತು ದಿವ್ಯಶ್ರೀ ಡ್ಯಾನ್ಸ್ ಮಾಡಿ ಎಂದು ಹೇಳಿದರು. ಇಬ್ಬರು ಡ್ಯಾನ್ಸ್ ಮಾಡಿದ ಮೇಲೆ ಹೀಗಲ್ಲ ಎಂದು ರಿಷರ್ಡ್ ಲೂಯಿಸ್ ದಂಪತಿ ಕುಣಿದು ತೋರಿಸಿದರು. ಆದರೂ ಕೂಡ ಮುಜುಗರಗೊಂಡ ರಘು ದಂಪತಿಯನ್ನು ಎಲ್ಲರೂ ಗೇಲಿ ಮಾಡಿದರು. ಇನ್ನು ಚಿತ್ರ ಮಂಝರಿ ಆಟದಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳಲಾಯ್ತು.

  ದಿಶಾ ಜೊಡಿಗೆ ಪ್ರಶ್ನೆಗಳು!

  ದಿಶಾ ಜೊಡಿಗೆ ಪ್ರಶ್ನೆಗಳು!

  ಕಳೆದ ವಾರದ ಆಟದಲ್ಲಿ ರಾಗಿಯನ್ನು ಎಲ್ಲಿ ಬೆಳೆಯಲಾಗುತ್ತೆ ಎಂದು ಗಣೇಶ್ ಅವರು ದಿಶಾ ಮದನ್ ಹಾಗೂ ಶಶಾಂಕ್ ಅವರನ್ನು ಕೇಳಿದ್ದರು. ಆಗ ಗೊತ್ತಿಲ್ಲ ಎಂಬ ಕಾರಣಕ್ಕೆ ದಂಪತಿ ಏನೇನೋ ಉತ್ತರ ಕೊಟ್ಟು ಎಲ್ಲರನ್ನೂ ನಗಿಸಿದ್ದರು. ಈ ವಾರವೂ ಗಣೇಶ್ ಅವರು ಹೊಂಬಾಳೆಯನ್ನು ತಂದು ದಿಶಾ ಹಾಗೂ ಶಶಾಂಕ್‌ಗೆ ಏನು ಎಂದು ಕೇಳಿದರು. ಉತ್ತರ ಗೊತ್ತಿಲ್ಲದೇ, ಅಡಿಕೆ ಮರದ ಹಣ್ಣು ಎಂದೆಲ್ಲಾ ಏನೇನೋ ಉತ್ತರ ಕೊಟ್ಟರು. ಕೊನೆಗೆ ಆ ಹೊಂಬಾಳೆಯನ್ನು ಅವರಿಗೆ ಕೊಟ್ಟು ಮನೆಯಲ್ಲಿ ಪೂಜೆ ಮಾಡಿ ಎಂದು ಹೇಳಿ, ಹೊಂಬಾಳೆಯ ಮಹತ್ವವನ್ನು ಗಣೇಶ್ ಅವರು ಹೇಳಿದರು. ಮುಂದಿನ ವಾರವೂ ಮತ್ತೊಂದು ಪ್ರಶ್ನೆಯೊಂದಿಗೆ ಬರುತ್ತೇವೆ. ತಯಾರಾಗಿರಿ ಎಂದು ಹೇಳಿ ಎಚ್ಚರಿಸಿದರು.

  ಜೈ ಜಗದೀಶ್- ವಿಜಯಲಕ್ಷ್ಮಿ ಎಲ್ಲಿ ಹೋದ್ರು?

  ಜೈ ಜಗದೀಶ್- ವಿಜಯಲಕ್ಷ್ಮಿ ಎಲ್ಲಿ ಹೋದ್ರು?

  ಇನ್ನು ಈ ವಾರದ ಎಪಿಸೋಡ್‌ನಲ್ಲಿ ಜೈ ಜಗದೀಶ್-ವಿಜಯಲಕ್ಷ್ಮಿ ಸಿಂಗ್ ದಂಪತಿಗಳು ಕಾಣಿಸಲಿಲ್ಲ. ಇಬ್ಬರೂ ಯಾಕೆ ಬಂದಿಲ್ಲ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಮೂಡಿದೆ. ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲು ಕಳೆದ ವಾರ ಎಲಿಮಿನೇಷನ್ ರೌಂಡ್ ರದ್ದಾಗಿತ್ತು. ಆದರೆ, ಈ ವಾರ ಯಾಕೆ ಈ ಜೋಡಿ ಕಾಣಿಸುತ್ತಿಲ್ಲ ಎಂದು ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ವಾರವಾದರೂ ಬರುತ್ತಾರಾ ಎಂಬ ಪ್ರಶ್ನೆಯೂ ಎದ್ದಿದೆ.

  English summary
  Ismart Jodi Reality Show Written Update On August 28th Episode,
  Monday, August 29, 2022, 20:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X