ಮನಸ್ಸಿನ ನೋವು ಹಂಚಿಕೊಂಡ ಇಸ್ಮಾರ್ಟ್ ಜೋಡಿ!
ಕನ್ನಡ ಕಿರುತೆರೆಯಲ್ಲಿ ವಾರಂತ್ಯ ಬಂದರೆ ಸಾಕು, ಸೀರಿಯಲ್‌ಗಳ ಸುರಿಮಳೆ ಶುರುವಾಗಿ ಬಿಡುತ್ತದೆ. ತರಹೇವಾರಿ ಶೋಗಳು ಈಗ ಶುರುವಾಗಿ ಬಿಟ್ಟಿವೆ. ಒಂದೊಂದು ವಾಹಿನಿಯಲ್ಲಿ, ಒಂದೊಂದು ರೀತಿಯ ವಿಭಿನ್ನ ಶೋಗಳು ಮೂಡಿ ಬರುತ್ತವೆ.
ಈ ರಿಯಾಲಿಟಿ ಶೋಗಳು ಎಷ್ಟು ಮನರಂಜನೆಯನ್ನು ನೀಡುತ್ತಿವೆ ಎಂದು ಪ್ರೇಕ್ಷಕರನ್ನು ಕೇಳುವ ಅಗತ್ಯವೇ ಇಲ್ಲ. ಟಿಆರ್ ಪಿ ರೇಟಿಂಗ್ ಕಾರ್ಯಕ್ರಮದ ಸಕ್ಸಸ್ ಹೇಳಿಬಿಡುತ್ತವೆ. ಅದಕ್ಕೆ ತಕ್ಕಂತೆ ಶೋಗಳ ಪ್ಲಾನ್ ಮಾಡಿಕೊಳ್ಳಬಹುದು.
ಕಾಮಿಡಿ, ಡ್ಯಾನ್ಸ್, ಡ್ರಾಮಾ ಹೀಗೆ ಎಲ್ಲಾ ರಿಯಾಲಿಟಿ ಶೋಗಳು ಕೂಡ ಕ್ಲಿಕ್ ಆಗಿವೆ. ಇನ್ನು ಇದರಲ್ಲಿ ಜೋಡಿಗಳ ಕಾರ್ಯಕ್ರಮ ಕೂಡ ಒಂದು. ಕಪಲ್ಸ್ ಶೋ ಅಂತಾ ಬಂದಾಗ ಎಲ್ಲಾ ವಾಹಿನಿಯಲ್ಲೂ ಈ ಕಾರ್ಯಕ್ರಮ ಬರ್ತಿದೆ. ಕನ್ನಡದ ಎಲ್ಲಾ ವಾಹಿನಿಗಳಲ್ಲಿ ದಂಪತಿಗಳ ಶೋಗಳು ಮೂಡಿ ಬರುತ್ತಿವೆ.

ವಿಭಿನ್ನ ಶೋ ಇಸ್ಮಾರ್ಟ್ ಜೋಡಿ!
ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ.1 ಎಂಬ ಹೆಸರಿನಲ್ಲಿ ದಂಪತಿಗಳ ಕಾರ್ಯಕ್ರಮ ಬರುತ್ತಿದೆ. ರಾಜಾ-ರಾಣಿ ಶೋ ಕೂಡ ಕಪಲ್ಸ್‌ಗಳದ್ದೇ. ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ನ ಪ್ರೊಮೋ ಕೊಟ್ಟಾಗ ಮೊದಮೊದಲು ಇದೂ ಕೂಡ ಜೋಡಿಗಳ ಶೋ ಎಂದು ರಾಗ ಎಳೆಯಲಾಗಿತ್ತು. ಆದರೆ ಪ್ರೋಮೋ ಮೇಕಿಂಗ್, ಟೈಟಲ್ ಟ್ರ್ಯಾಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಈ ಶೋ ಬಗ್ಗೆ ಗಣೇಶ್ ಅವರು ಮಾತನಾಡಿದಾಗ ಕೂತೂಹಲ ಹೆಚ್ಚಾಯ್ತು. ಕಾರ್ಯಕ್ರಮವನ್ನು ಅದ್ಧೂರಿಯಾಗಿ ಲಾಂಚ್ ಮಾಡಿದ ದಿನವೇ ಕಾರ್ಯಕ್ರಮದ ಟಿಆರ್‌ಪಿ ಭರ್ಜರಿ ರೇಟಿಂಗ್ ಪಡೆದಿತ್ತು. ಇನ್ನು ಇತರೆ ದಂಪತಿಗಳ ರಿಯಾಲಿಟಿ ಶೋಗಿಂತಲೂ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಥೀಮ್‌ಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ.

ಬಂಧನದ ಕತೆ ಬಿಚ್ಚಿಟ್ಟ ಜೋಡಿ!
ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಒಟ್ಟು 10 ಜೋಡಿಗಳು ಭಾಗವಹಿಸಿದ್ದು, ಇವರಿಲ್ಲಿ ಪ್ರೀತಿಸಿ ಮದುವೆಯಾದವರೂ ಇದ್ದಾರೆ. ಮದುವೆಯಾಗಿ ಪ್ರೀತಿಸಿದವರೂ ಇದ್ದಾರೆ. ಎರಡೂ ಬಗೆಯ ಜೋಡಿಗಳ ಪ್ರೇಮ ಬಂಧನದ ಕತೆಯನ್ನು ಡಿಫರೆಂಟ್ ಆಗಿ ಶೋ ನಲ್ಲಿ ತೋರ್ಪಡಿಸಲಾಯ್ತು. ಸಿಂಗಲ್ ಆಗಿದ್ದವರು ಡಬಲ್ ಆದ ಕಥೆಯನ್ನು ಜೋಡಿಗಳೇ ಹೇಳಿ ಖುಷಿ ಪಟ್ಟಿದ್ದರು. ವೇದಿಕೆಯಲ್ಲಿ ಮತ್ತೆ ಜೋಡಿಗಳಿಗೆ ಮದುವೆ ಮಾಡಿಸಿ ಸಂಭ್ರಮಿಸಲಾಗಿತ್ತು. ಈ ಕ್ಷಣಗಳನ್ನು ಪ್ರೇಕ್ಷಕರು ಕಣ್ತುಂಬಿ ಕೊಂಡರು.

ಟಾಸ್ಕ್‌ಗಳಲ್ಲಿ ಗೆದ್ದ ಜೋಡಿಗಳು!
ಸ್ಟಾರ್ ಸುವರ್ಣ ವಾಹಿನಿ ಜೋಡಿಗಳಿಗಾಗಿ ಆಟವಾಡಿಸಿದರು. ಯೋಗ ಮಾಡಿಸಿದರು, ಕಣ್ಣು ಕಟ್ಟಿ ಪತಿ-ಪತ್ನಿಯರು ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ. ಎಂಬುದನ್ನು ಪರೀಕ್ಷಿಸಲಾಯ್ತು. ಇದರಲ್ಲೂ ಗೆದ್ದ ಜೋಡಿಗಳಿಗೆ ತಮ್ಮ ಬದುಕಿನ ಆದ್ಯತೆಗಳ ಪಟ್ಟಿ ಮಾಡಿಸಲಾಯ್ತು. ಈ ವೇಳೆ ನಟಿ ಸ್ವಪ್ನ ದೀಕ್ಷಿತ್ ಅವರ ಮನದ ಗುಟ್ಟನ್ನು ಬಿಚ್ಚಿಡಲಾಯ್ತು. ಜೋಡಿಗಳ ನಡುವಿನ ಗೊಂದಲ, ಆತಂಕ, ವೈಮನಸ್ಸನ್ನು ಸರಿ ಪಡಿಸಲೆಂದೇ ಈ ವಾರ ಒಲವಿನ ಮಾತುಗಳನ್ನು ಆಡಿಸಲಾಯ್ತು.

ನೋವು ಹಂಚಿಕೊಂಡ ಜೋಡಿಗಳು!
ದಂಪತಿಗಳ ನಡುವೆ ಇದ್ದ ಸಣ್ಣ-ಪುಟ್ಟ ನೋವು, ಹತಾಶೆ, ಬೇಸರಗಳನ್ನು ದೂರ ಮಾಡಲೆಂದೇ ನಿನ್ನೆ ಗಣೇಶ್ ಅವರು ದಂಪತಿಗಳನ್ನು ಕೂರಿಸಿ ಮಾತನಾಡಿಸಿದರು. ಇದರಲ್ಲಿ ಎಲ್ಲಾ ಜೋಡಿಗಳು ಎಂದಿಗೂ ತಮ್ಮ ಸಂಗಾತಿಯೊಂದಿಗೆ ಹೇಳಿಕೊಳ್ಳಲಾಗದ ಮಾತುಗಳನ್ನು ಹೇಳಿಕೊಂಡು ಸಮಸ್ಯೆಗಳನ್ನು ಬಗೆ ಹರಿಸಿಕೊಂಡರು. ಸ್ವಪ್ನಾ ದೀಕ್ಷಿತ್ ತಮ್ಮ ಜೀವನದ ನೋವಿನ ಗುಟ್ಟನ್ನು ಬಿಚ್ಚಿಟ್ಟರು. ಕಳೆದ ವಾರ ಗಂಡನಿಗಿಂತಲೂ ವೃತ್ತಿ ಜೀವನ ಮುಖ್ಯ ಎಂದಿದ್ದ ಸ್ವಪ್ನಾ, ಅದಕ್ಕೆ ಕಾರಣವನ್ನೂ ಹೇಳಿಕೊಂಡರು. ಕಳೆದ 16 ವರ್ಷದಿಂದ ತಾವೊಬ್ಬರೇ ದುಡಿದು ಮನೆ ನಡೆಸುತ್ತಿರುವ ನೋವಿನ ವಿಚಾರವನ್ನು ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.


Click it and Unblock the Notifications











