For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮದುವೆಯಾದ ಇಸ್ಮಾರ್ಟ್ ಜೋಡಿ ದಂಪತಿಗಳು

  By ಪ್ರಿಯಾ ದೊರೆ
  |

  ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ನಲ್ಲಿ ಒಂದೊಂದು ವಾರ ಒಂದೊಂದು ವಿಶೇಷತೆಯನ್ನು ಹೊತ್ತು ತರುತ್ತದೆ. ಈ ವಾರ ದಂಪತಿಗಳ ಮದುವೆ ಮಾಡಿಸುವುದೇ ವಿಶೇಷ ಸಂಚಿಕೆ. ಈ ಸಂಚಿಕೆಗಾಗಿ ಎಲ್ಲರೂ ತಮ್ಮ ಮದುವೆಯ ದಿನದ ಉಡುಗೆಯನ್ನು ತೊಟ್ಟು ಬಂದಿದ್ದರು.

  ದಂಪತಿಗಳು ಮದುವೆಯ ಉಡುಗೆಯಲ್ಲಿ ಮುದ್ದು ಮುದ್ದಾಗಿ ಕಾಣುತ್ತಿದ್ದರು. ನಿನ್ನೆಯ ಸಂಚಿಕೆಯನ್ನು ಅದ್ಧೂರಿಯಾಗಿ ಪ್ರಾರಂಭಿಸಲಾಯ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರು ಜಸ್ಟ್ ಮ್ಯಾರೀಡ್ ಜೀಪಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು.

  ಎಲ್ಲಾ ಜೋಡಿಗಳು ಕೂಡ ವೇದಿಕೆ ಮೇಲೆ ಬಂದು ತಮ್ಮ ಮದುವೆಯ ಕಥೆಯನ್ನು ಹೇಳಿಕೊಂಡು ಎಮೋಷನಲ್ ಆದರು. ಇದರಲ್ಲಿ ಸಿಂಪಲ್ ಆಗಿ ಮದುವೆಯಾದವರೂ ಇದ್ದರು. ಎರಡೆರಡು ಸಲ ಮದುವೆಯಾದ ಜೋಡಿಗಳ ಕಥೆಯೂ ಚೆನ್ನಾಗಿತು.

  ಆರ್ ಜೆ ಜೋಡಿಗಳ ಲವ್ ಸ್ಟೋರಿ ಸೂಪರ್!

  ಆರ್ ಜೆ ಜೋಡಿಗಳ ಲವ್ ಸ್ಟೋರಿ ಸೂಪರ್!

  ಆರ್ ಜೆ ಜೋಡಿಗಳಾದ ಪುನೀತಾ ಆಚಾರ್ಯ ಹಾಗೂ ಶ್ರೀರಾಮ್ ಸುಳ್ಯ ಮದುವೆಯ ಉಡುಗೆಯಲ್ಲಿ ಮುದ್ದಾಗಿ ಕಾಣುತ್ತಿದ್ದರು. ಇಬ್ಬರು ಕಾಲೇಜ್ ದಿನಗಳಲ್ಲೇ ಪ್ರೀತಿಸಿ, ಆರ್ ಜೆ ಆಗಿ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರು. ಆದರೆ, ಇಬ್ಬರ ನಡುವೆ ಬ್ರೇಕಪ್ ಆಗಿ ಮತ್ತೆ ಒಂದಾದ ಕಥೆಯನ್ನು ಹೇಳಿ ಖುಷಿ ಪಟ್ಟರು. ಬಳಿಕ ಇವರ ಮಗಳ ಎದುರಿಗೆ ಮತ್ತೆ ಹಾರ ಬದಲಾಯಿಸಿಕೊಂಡರು. ಈ ವೇಳೆ, ಶ್ರೀರಾಮ್, ಪುನೀತಾ ಅವರಿಗೆ ಚಿನ್ನದ ನೆಕ್ಲೇಸ್ ಅನ್ನು ಗಿಫ್ಟ್ ಮಾಡಿದರು.

  ಲೂಯಿಸ್ ಜೋಡಿಯ ಮದುವೆ ಡಿಫರೆಂಟ್

  ಲೂಯಿಸ್ ಜೋಡಿಯ ಮದುವೆ ಡಿಫರೆಂಟ್

  ರಿಚರ್ಡ್ ಲೂಯಿಸ್ ಹಾಗೂ ಪತ್ನಿ ಹ್ಯಾರಿಯೇಟ್ ಲೂಯಿಸ್ ಇಬ್ಬರೂ ವೇದಿಕೆ ಮೇಲೆ ಬಂದರು. ಇಬ್ಬರೂ ತಮ್ಮ ಮದುವೆಯ ಬಗ್ಗೆ ಮಾತನಾಡಿದರು. ರಿಚರ್ಡ್ ಅವರು ತಮಾಷೆಯಾಗಿ ಮಾತನಾಡಿ, ಗಂಡು ನೋಡಲು ಬಂದ ಸಂದರ್ಭವನ್ನು ನೆನಪು ಮಾಡಿಕೊಂಡರು. ಇದನ್ನು ರೀ- ಕ್ರಿಯೇಟ್ ಮಾಡಲಾಯ್ತು. ಆಗ ರಿಚರ್ಡ್ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಹಾಡಿ, ಬಳುಕುವ ಬಳ್ಳಿಯಂತೆ ಕುಣಿದು, ಎಲ್ಲರನ್ನು ರಂಜಿಸಿದರು. ಈ ಸ್ಕಿಟ್ ತುಂಬಾ ತಮಾಷೆಯಾಗಿತ್ತು.

  ಸ್ವಪ್ನಾ ದೀಕ್ಷಿತ್ ಮದುವೆಗೆ ಒಪ್ಪಿಗೆ ಸಿಗಲಿಲ್ಲ!

  ಸ್ವಪ್ನಾ ದೀಕ್ಷಿತ್ ಮದುವೆಗೆ ಒಪ್ಪಿಗೆ ಸಿಗಲಿಲ್ಲ!

  ಸ್ವಪ್ನಾ ದೀಕ್ಷಿತ್ ಹಾಗೂ ಪತಿ ಅಶ್ವಿನ್ ದೀಕ್ಷಿತ್ ಇಬ್ಬರು ಪ್ರೀತಿಸಿ ಮದುವೆಯಾಗಲು ಸ್ವಪ್ನ ಅವರ ತಂದೆ ಒಪ್ಪದಿದ್ದಾಗ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಅಶ್ವಿನ್ ಅವರ ಮನೆಯಲ್ಲಿ ಹೇಳಿ, ಒಪ್ಪಿಸಿ ಇಬ್ಬರೂ ಎಲ್ಲರ ಸಮ್ಮುಖದಲ್ಲಿ ಮದುವೆಯಾದರು. ಆದರೆ, ಸ್ವಪ್ನ ಅವರ ತಂದೆ ಇವರಿಬ್ಬರ ಮದುವೆಯನ್ನು ನೋಡಿರಲಿಲ್ಲ. ಇದು ಸ್ವಪ್ನ ಅವರ ಮನದಲ್ಲಿ ಇಂದಿಗೂ ಉಳಿದುಕೊಂಡಿರುವ ದುಃಖ. ಇನ್ನು ಸ್ವಪ್ನ ಹಾಗೂ ಅವರ ತಾಯಿ ಕಳೆದ ಮೂರು ವರ್ಷದಿಂದ ಮಾತನಾಡುತ್ತಿರಲಿಲ್ಲವಂತೆ. ಹೀಗಾಗಿ ಇವರ ತಾಯಿ ಹಾಗೂ ಕೆಲ ಸಂಬಂಧಿಕರನ್ನು ಕರೆಸಲಾಗಿತ್ತು. ಸಪ್ತಪದಿ ತುಳಿಸಿ ಇವರ ಮದುವೆಯನ್ನು ವೇದಿಕೆ ಮೇಲೆ ಮಾಡಲಾಯಿತು.

  ಸಿಂಪಲ್ ಮದುವೆಯಾದ ಜೋಡಿಗಳು!

  ಸಿಂಪಲ್ ಮದುವೆಯಾದ ಜೋಡಿಗಳು!

  ಸುಮನ್ ನಗರ್‌ಕರ್ ಹಾಗೂ ಗುರುದೇವ್ ನಾಗರಾಜ್ ಇಬ್ಬರೂ ಇಷ್ಟಪಟ್ಟು ಮದುವೆಯಾದವರು. ಸುಮನ್ ಅವರ ಆಸೆಯಂತೆ ಸಿಂಪಲ್ ಆಗಿ ರಿಜಿಸ್ಟರ್ ಮದುವೆಯಾದರು. ಬಳಿಕ ಸಿಂಗಾಪುರ್‌ಗೆ ಹೋಗಿ ಬಂದಿದ್ದರು. ಇಂದಿಗೂ ಈ ಜೋಡಿ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ. ಇನ್ನು ನಟ ವಿನಯ್ ಗೌಡ ಹಾಗೂ ಅಕ್ಷತಾ ಕೂಡ ಪ್ರೀತಿಸಿ ಮದುವೆಯಾದರು. ಹೀಗಾಗಿ ಇವರಿಬ್ಬರು ಶಾಸ್ತ್ರೋಕ್ತವಾಗಿ ಮದುವೆಯಾಗಿಲ್ಲ. ಇದರಿಂದ ರಿಯಾಲಿಟಿ ಶೋ ನಲ್ಲಿ ಇವರ ಮದುವೆ ಮಾಡಲು ಪುರೋಹಿತರನ್ನು ಕರೆಸಲಾಗಿದೆ.

  English summary
  Ismart Jodi Reality Show Written Update On July 23rd Episode, Know more about new episode

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X