For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಸಹೋದರಿಯಂತೆ ಕಾಣುವ ನಟಿ ಪ್ರತ್ಯಕ್ಷ.! ಯಾರಿದು?

  |
  ರಶ್ಮಿಕಾ ಮಂದಣ್ಣರನ್ನ ಹೋಲುವ ಕಿರುತೆರೆ ನಟಿ ಪ್ರತ್ಯಕ್ಷ |FILMIBEAT KANNADA

  ಕರ್ನಾಟಕ ಕ್ರಶ್ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣಗೆ ಅವರು ನಗುಮುಖವೇ ಅಂದ-ಚೆಂದ. ಅವರಂತೆ ನಗುವ ಇನ್ನೊಬ್ಬ ನಟಿ ಅಪರೂಪ ಅಥವಾ ಅಚ್ಚರಿ ಎನ್ನಬಹುದು. ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುವ ರಶ್ಮಿಕಾ ಒಂದು ರೀತಿ ಪಾಸೀಟಿವ್ ಎನರ್ಜಿ ಎಂದು ಸಹನಟರು ಹೇಳಿರುವ ಉದಾಹರಣೆಯೂ ಇದೆ.

  ಇಂತಹ ರಶ್ಮಿಕಾ ಮಂದಣ್ಣ ಅವರನ್ನೇ ಹೋಲುವ ಮತ್ತೊಬ್ಬ ನಟಿ ಈಗ ಗಮನ ಸೆಳೆಯುತ್ತಿದ್ದಾರೆ. ಕನ್ನಡದಲ್ಲೊಂದು ಹೊಸ ಧಾರಾವಾಹಿ ಆರಂಭವಾಗುತ್ತಿದ್ದು, ಈ ಸೀರಿಯಲ್ ನ ನಾಯಕಿಯಾಗಿ ಈಕೆ ನಟಿಸುತ್ತಿದ್ದಾರೆ.

  ರೀಲ್ ಅಲ್ಲ ರಿಯಲ್: 'ಪುಟ್ಟಗೌರಿ' ರಂಜನಿ ಈಗ ಡೈರೆಕ್ಟರ್!ರೀಲ್ ಅಲ್ಲ ರಿಯಲ್: 'ಪುಟ್ಟಗೌರಿ' ರಂಜನಿ ಈಗ ಡೈರೆಕ್ಟರ್!

  ಸದ್ಯ, ಈ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಈ ಪ್ರೋಮೋದಲ್ಲಿ ನೋಡಲು ಥೇಟ್ ಕಿರಿಕ್ ಹುಡುಗಿ ರಶ್ಮಿಕಾ ಅವರಂತೆ ಕಾಣಿಸುತ್ತಿದ್ದಾರೆ. ಈಕೆಯನ್ನ ನೋಡಿದವರು ಒಂದು ಕ್ಷಣ, ರಶ್ಮಿಕಾ ಮಂದಣ್ಣ ಧಾರಾವಾಹಿಗೆ ಬಂದ್ರಾ? ಎಂದು ಕುತೂಹಲದಿಂದ ನೋಡುವಂತಾಗಿದೆ. ಅಷ್ಟಕ್ಕೂ, ಯಾರು ಈಕೆ? ಯಾವುದು ಆ ಧಾರಾವಾಹಿ.? ಮುಂದೆ ಓದಿ....

  'ಇಷ್ಟದೇವತೆ' ರೂಪದಲ್ಲಿ ಬಂದ ಹೊಸ ನಟಿ.!

  'ಇಷ್ಟದೇವತೆ' ರೂಪದಲ್ಲಿ ಬಂದ ಹೊಸ ನಟಿ.!

  ಕಲರ್ಸ್ ಕನ್ನಡದಲ್ಲಿ ಇಷ್ಟದೇವತೆ ಎಂಬ ಹೊಸ ಧಾರಾವಾಹಿ ಮೂಡಿಬರುತ್ತಿದೆ. ಈ ಧಾರಾವಾಹಿಯಲ್ಲಿ ಈ ನಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೈದೇವಿ ಎಂಬ ಪಾತ್ರ ನಿರ್ವಹಿಸುತ್ತಿರುವ ಈ ನಟಿಯ ಬಗ್ಗೆ ಸದ್ಯಕ್ಕೆ ಯಾವ ಮಾಹಿತಿಯೂ ಇಲ್ಲ. ಆದ್ರೆ, ಪ್ರೋಮೋದಲ್ಲಿ ಮಾತ್ರ ಮೋಡಿ ಮಾಡಿದ್ದಾರೆ.

  ರಶ್ಮಿಕಾಗೂ ಈಕೆಗೂ ಯಾವುದೇ ಸಂಬಂಧವಿಲ್ಲ

  ರಶ್ಮಿಕಾಗೂ ಈಕೆಗೂ ಯಾವುದೇ ಸಂಬಂಧವಿಲ್ಲ

  ರಶ್ಮಿಕಾ ಮಂದಣ್ಣ ಅವರಂತೆ ಕಾಣಿಸುತ್ತಿದ್ದಾರೆ ಎಂಬ ಭಾವನೆ ಬರುವುದು ಸಹಜ. ಆದ್ರೆ, ರಶ್ಮಿಕಾಗೂ ಮತ್ತು ಇಷ್ಟದೇವತೆ ನಟಿಗೂ ಯಾವುದೇ ಸಂಬಂಧವಿಲ್ಲ. ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ಹಿರಿಯ ನಟಿ ಭವ್ಯ ಕೂಡ ನಟಿಸಿದ್ದಾರೆ.

  'ಕಿರಿಕ್ ಪಾರ್ಟಿ' ಬಳಿಕ ರಶ್ಮಿಕಾ ಖಾತೆಯಲ್ಲಿ 11 ಸಿನಿಮಾ, ಆದ್ರೆ ಆ ನಟನ.?'ಕಿರಿಕ್ ಪಾರ್ಟಿ' ಬಳಿಕ ರಶ್ಮಿಕಾ ಖಾತೆಯಲ್ಲಿ 11 ಸಿನಿಮಾ, ಆದ್ರೆ ಆ ನಟನ.?

  ಪುಟ್ಟಗೌರಿ ರಂಜನಿ ಕೊಟ್ಟ ಸರ್ಪ್ರೈಸ್

  ಪುಟ್ಟಗೌರಿ ರಂಜನಿ ಕೊಟ್ಟ ಸರ್ಪ್ರೈಸ್

  ಅಂದ್ಹಾಗೆ, ಇಷ್ಟದೇವತೆ ಧಾರಾವಾಹಿಯನ್ನ ನಿರ್ದೇಶನ ಮಾಡುತ್ತಿರುವುದು ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್. ಪುಟ್ಟಗೌರಿ ಸೀರಿಯಲ್ ನಿಂದ ಹೊರಬಂದ ಬಳಿಕ, ತಾವೇ ನಿರ್ದೇಶನಕ್ಕೆ ಧುಮುಕಿದ್ದಾರೆ. ನಿರ್ದೇಶನದ ಜೊತೆಗೆ ಬರಹಗಾರ್ತಿಯಾಗಿಯೂ ಕೆಲಸ ಮಾಡಿದ್ದಾರಂತೆ.

  ಅಧಿಕೃತ ಪ್ರಕಟ ಆಗಬೇಕು

  ಅಧಿಕೃತ ಪ್ರಕಟ ಆಗಬೇಕು

  ಇಷ್ಟದೇವತೆ ಧಾರಾವಾಹಿಯ ಚಿತ್ರೀಕರಣ ಡನೆಯುತ್ತಿದ್ದು, ಸದ್ಯ ಪ್ರೋಮೋ ಮಾತ್ರ ರಿಲೀಸ್ ಆಗಿದೆ. ಮತ್ತೊಂದೆಡೆ ರಂಜನಿ ರಾಘವನ್ ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ಕೂಡ ಗೌಪ್ಯವಾಗಿದೆ. ಇನ್ನು ವೈದೇವಿ ಪಾತ್ರದಲ್ಲಿ ನಟಿಸಿರುವ ಆ ನಟಿಯ ಬಗ್ಗೆಯೂ ಅಷ್ಟಾಗಿ ಮಾಹಿತಿ ಹೊರಬಿದ್ದಿಲ್ಲ. ಅಧಿಕೃತವಾಗಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

  English summary
  Colors kannada presenting new serial titled as a ista devathe. recently the promo has released. the actress of this serial looking like rashmika mandanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X