ನಿನ್ನ 'ಬೆತ್ತಲೆ' ವಿಡಿಯೋ ಕಳುಹಿಸು ಎಂದಿದ್ದ, ತನ್ನ ಕಹಿ ಅನುಭವ ಹಂಚಿಕೊಂಡ ಪಾರು ಖ್ಯಾತಿಯ ಸಿತಾರಾ
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ದ ಮನಸ್ಸುಗಳು ಖೆಡ್ಡಾ ಎಂಬ ಅರಿವು ಇದ್ದರೂ ಬಿದ್ದು ಏಳುವ ಸೀಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ..
ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ, ಒಂದಿಲ್ಲೊಂದು ರೀತಿಯಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಸಮಯ-ಸಂದರ್ಭ ಬಂದಾಗ ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ ಸಿತಾರ ದೇವಿ.

ಹೌದು, ಸಿತಾರಾ.. ಕಸ್ತೂರಿ ನಿವಾಸ.. ಅಗ್ನಿ ಸಾಕ್ಷಿ.. ಪಾರು ಧಾರಾವಾಹಿಗಳ ಮೂಲಕ ಅನೇಕ ಕನ್ನಡಿಗರ ಮನ ಗೆದ್ದ ನಟಿ. ಬಾಲ್ಯದಿಂದಲೇ ಕಡು ಕಷ್ಟವನ್ನು ಕಂಡು ಆಶ್ರಮದಲ್ಲಿ ಬೆಳೆದ ಸಿತಾರಾ ಸದ್ಯ 'ವಿನಯ ಸನಾತನಿ ಶೋ' ಎಂಬ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಸಿತಾರಾ ತಮಗಾದ ಕಹಿ ಅನುಭವ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಿತಾರಾ 2016ರಲ್ಲಿ ನಾನು ಆಗಷ್ಟೇ ರಂಗಭೂಮಿಯಿಂದ ಬಂದಿದ್ದೆ, ಆ ಸಮಯದಲ್ಲಿ ನಂದೀಶ್ ಎಂಬ ವ್ಯಕ್ತಿ ಮೇಡಂ ನೀವು ಸಿನಿಮಾಗೆ ಸೆಲೆಕ್ಟ್ ಆಗಿದ್ದೀರಾ ಎಂದು ಹೇಳಿದ ಎಂದು ಹೇಳಿದ್ದಾರೆ. ಆ ವ್ಯಕ್ತಿ ಅಸೋಸಿಯೇಟ್ ಡೈರೆಕ್ಟರಾ ಅಥವಾ ಪ್ರೊಡ್ಯೂಸರಾ ಗೊತ್ತಿಲ್ಲ ಆದರೆ ಕಾಫಿ ಶಾಪ್‌ನಲ್ಲಿ ಕೂತು ಮಾತನಾಡುವಾಗ ನೀವು ಕಮಿಟ್ಮೆಂಟ್‌ಗೆ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದ ಎಂದು ಆ ದಿನವನ್ನು ನೆನಪಿಸಿಕೊಂಡಿರುವ ಸಿತಾರಾ ಆ ಟೈಮ್‌ನಲ್ಲಿ ನೀಡಿರುವ ಕೆಲಸ ಚೆನ್ನಾಗಿ ಮಾಡುವುದು, ಚೆನ್ನಾಗಿ ಅಭಿನಯಿಸುವುದು, ಸರಿಯಾದ ಸಮಯಕ್ಕೆ ಬರುವುದೇ ನಾನು ಕಮಿಟ್‌ಮೆಂಟ್ ಎಂದುಕೊಂಡಿದ್ದೇ ಹೀಗಾಗಿ ನಾನು ಓಕೆ ಎಂದು ಹೇಳಿದೆ ಆದರೆ ಆ ವ್ಯಕ್ತಿ ಹೇಳಿದ್ದ ಕಮಿಟ್‌ಮೆಂಟ್ ನಾನು ಅಂದುಕೊಂಡ ಕಮಿಟ್‌ಮೆಂಟ್ ಅಲ್ಲ ಎನ್ನುವುದು ನನಗೆ ಆಗ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಅದೇ ದಿನ ರಾತ್ರಿ 11 ಗಂಟೆಗೆ ಕಾಲ್ ಮಾಡಿ ಬಾತ್‌ರೂಮ್‌ಗೆ ಹೋಗಿ ಬೆತ್ತಲೆ ವಿಡಿಯೋ ಕಳುಹಿಸು ಎಂದು ಇಂಗ್ಲೀಷ್‌ನಲ್ಲಿ ನನಗೆ ಹೇಳಿದರು. ಆಗ ನನಗೆ ನೇಕೆಡ್ ಎನ್ನುವ ಪದದ ಅರ್ಥ ಕೂಡ ಗೊತ್ತಿರಲಿಲ್ಲ, ಹೀಗಾಗಿ ನಾನು ನನ್ನ ಫ್ರೆಂಡ್‌ಗೆ ಕಾಲ್ ಮಾಡಿ ಹೀಗೆ ಕೇಳ್ತಿದ್ದಾರೆ ಅದರ ಅರ್ಥ ಏನು ಎಂದು ಕೇಳಿದೆ ಆಗ ಬೆತ್ತಲೆ ವಿಡಿಯೋ ಕಳುಹಿಸುವಂತೆ ನಿನಗೆ ಹೇಳ್ತಿದ್ದಾರೆ ಎಂದು ನನ್ನ ಸ್ನೇಹಿತ ಹೇಳಿದ ಎಂದಿರುವ ಸಿತಾರಾ ವಿಡಿಯೋ ಎಲ್ಲ ಕಳುಹಿಸಬೇಡ, ಫೋನ್ ಸ್ವಿಚ್ ಆಫ್ ಮಾಡಿ ಮಲಗುವಂತೆ ಕೂಡ ನನ್ನ ಫ್ರೆಂಡ್ ಹೇಳಿದ ಆ ನಂತರ ನಾನು ಹಾಗೇ ಮಾಡಿದೆ ಎಂದು ಹೇಳಿದ್ದಾರೆ.

ಮರುದಿನ ಬೆಳ್ಳಗ್ಗೆಯಿಂದ ಒಂದು ಫೋನ್ ಇಲ್ಲ ಮೆಸೇಜ್ ಇಲ್ಲ ಆದರೆ ರಾತ್ರಿ ಸರಿಯಾಗಿ ಮತ್ತೆ ಹನ್ನೊಂದು ಗಂಟೆಗೆ ಕಾಲ್ ಮಾಡಿ, ʻವಿಡಿಯೋ ಕಾಲ್ ಮಾಡುʼ ಅಂತ ಹೇಳಿದರು. ಆಗ ನಮ್ಮ ಮನೆಯಲ್ಲಿ ನಾನು ಇರೋದು ಒಬ್ಬಳೇ, ಬಾತ್‌ರೂಮ್‌ನಲ್ಲಿ ಯಾಕೆ? ಇಲ್ಲೆ ಮಾಡಿ ಅಂತ ವಿಡಿಯೋ ಕಾಲ್ ಮಾಡಿದೆ ಎಂದಿರುವ ಸಿತಾರಾ , ಆಗ ʻನೀನು ಕಮಿಟ್‌ಮೆಂಟ್‌ಗೆ ಓಕೆ ಅಂದೆ ಅಲ್ವಾ? ಪ್ರೊಡ್ಯೂಸರ್ ಹೇಳಿದ್ದಾರೆ ನೀನು ನಾಳೆ ಅವರ ರೆಸಾರ್ಟ್‌ಗೆ ಹೋಗಬೇಕು ಅಂತ ಆ ವ್ಯಕ್ತಿ ಹೇಳಿದ ಎಂದು ಸಿತಾರಾ ಹೇಳಿದ್ಧಾರೆ.
ಆಗ ನನಗೆ ರೆಸಾರ್ಟ್ ಅಂದ್ರೆ ಏನೂ ಅಂತ ಕೂಡ ಗೊತ್ತಿರಲಿಲ್ಲ ಹೀಗಾಗಿ ರೆಸಾರ್ಟ್ ಅಂದರೆ ಏನು ಎನ್ನುವ ಪ್ರಶ್ನೆ ಕೇಳಿದೆ ಅದಕ್ಕೆ ಅವನು ಉತ್ತರ ನೀಡಿದ ಎಂದು ಹೇಳಿದ್ದಾರೆ. ಆ ನಂತರ
ನಾನು ಯಾಕೆ ಅಲ್ಲಿಗೆ ಹೋಗಬೇಕು? ಶೂಟಿಂಗ್ ಇದೆಯಾ? ಅಂತ ಕೇಳಿದ್ದೆ. ಅದಕ್ಕೆ ಇಲ್ಲ ನೀನು ಕಮಿಟ್‌ಮೆಂಟ್‌ಗೆ ಓಕೆ ಅಂದೆ ಅಲ್ವಾ ಅದಕ್ಕೆ ಎಂದು ನಂದೀಶ್ ಎಂಬ ವ್ಯಕ್ತಿ ಹೇಳಿದ, ಆಗ ನಿಮ್ಮ ಅರ್ಥದಲ್ಲಿ ಕಮಿಟ್‌ಮೆಂಟ್ ಅಂದ್ರೆ ಏನು ಅನ್ನೋದನ್ನು ಹೇಳಿ ಅಂದಾಗ, ಡೈರೆಕ್ಟರ್ ಜೊತೆ ಮಲ್ಕೋಳ್ಲೋದು.. ಪ್ರೊಡ್ಯೂಸರ್ ಜೊತೆ ಮಲ್ಕೋಳ್ಳೋದು.. ಮ್ಯಾನೇಜರ್ ಜೊತೆ ಮಲ್ಕೋಳ್ಳೋದು.. ಅಸೋಸಿಯೆಟ್ ಜೊತೆ ಕೂಡ ಮಲ್ಕೋಳ್ಳೋದು.. ಕಮಿಟ್ಮೆಂಟ್ ಎಂದು ಹೇಳಿದ ಎಂದು ಸಿತಾರಾ ಹೇಳಿದ್ದಾರೆ.
ಹತ್ತು ನಿಮಿಷ ಫೋನ್ ಮಾಡ್ತೀನಿ ಎಂದು ಹೇಳಿ ಅವನ ನಂಬರ್‌ನ ಬ್ಲಾಕ್ ಲಿಸ್ಟ್‌ಗೆ ಹಾಕಿದೆ ಎಂದಿರುವ ಸಿತಾರಾ ಆಗ ನಾನು ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಆಕ್ಟ್ ಮಾಡುತ್ತಿದ್ದೆ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಮುಗ್ದ ಹುಡುಗಿಯರನ್ನು ಹೇಗೆ ಯಾಮಾರಿಸುತ್ತಾರೆ ಎನ್ನುವುದು ನನಗೆ ಆಗ ಗೊತ್ತಾಯ್ತು ಎಂದು ಹೇಳಿದ್ಧಾರೆ.


Click it and Unblock the Notifications











