ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ನಟ ಜಗನ್
Recommended Video
ಕಿರುತೆರೆ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಜಗನ್ನಾಥ್ ಚಂದ್ರಶೇಖರ್ ವಿವಾಹದ ಸಂಭ್ರಮದಲ್ಲಿದ್ದಾರೆ. ಜಗನ್ ಬಹುಕಾಲದ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜಗನ್ ಮತ್ತು ರಕ್ಷಿತಾ ಇಬ್ಬರು ಸುಮಾರು ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಪ್ರೀತಿ ಈಗ ಇಬ್ಬರನ್ನು ಪತಿ ಪತ್ನಿಯರನ್ನಾಗಿ ಮಾಡಿದೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕನ್ವೆಂಷನ್ ಹಾಲ್ ನಲ್ಲಿ ಈ ಜೋಡಿ ಹಸೆಮಣೆ ಏರಿದೆ.
ಮೂರು ವರ್ಷದ ಇಬ್ಬರ ಪ್ರೀತಿಗೆ ಮನೆಯವರ ಗ್ರೀನ್ ಸಿಕ್ಕಿ, ಹಿರಿಯ ಸಮ್ಮುಕದಲ್ಲೆ ಹಿಂದೂ ಸಂಪ್ರದಾಯದ ಪ್ರಕಾರ ಇಬ್ಬರ ಮದುವೆ ನಡೆದಿದೆ. ಜಗನ್-ರಕ್ಷಿತಾ ಮದುವೆಗೆ ಸಂಬಂಧಿಕರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

ಕರ್ನಾಟಕದವರಾದ ರಕ್ಷಿತಾ ಓದಿದ್ದೆಲ್ಲಾ ದುಬೈನಲ್ಲಿ. ನಟ ಜಗನ್ 'ಜೋಶ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. ಬೆಳ್ಳಿತೆರೆಗಿಂತ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದ ಜಗನ್ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ಸೀನಸ್ 5 ನ ಸ್ಪರ್ಧಿಯಾಗಿ ಮತ್ತಷ್ಟು ಖ್ಯಾತಿಗಳಿಸಿದ್ದರು.


Click it and Unblock the Notifications











