ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟ ಜಗ್ಗೇಶ್

ನಟ ಜಗ್ಗೇಶ್ ಈಗ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹೌದೆ..? ಯಾವ ಧಾರಾವಾಹಿ...? ಜಗ್ಗೇಶ್ ಪಾತ್ರ ಏನು...? ಎನ್ನುವ ಪ್ರಶ್ನೆ ನಿಮಗೆ ಬರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ನವರಸ ನಾಯಕ ಜಗ್ಗೇಶ್ ಜೀ ಕನ್ನಡ ವಾಹಿನಿಯ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಧಾರಾವಾಹಿಯಲ್ಲಿ ಯಾವುದೇ ಪಾತ್ರ ಮಾಡುತ್ತಿಲ್ಲ. ಬದಲಿಗೆ ಸೀರಿಯಲ್ ಗೆ ಅತಿಥಿಯಾಗಿ ಬಂದಿದ್ದಾರೆ. ಇಲ್ಲಿಯೂ ಅವರು ಜಗ್ಗೇಶ್ ಆಗಿಯೇ ಇರುತ್ತಾರೆ.

'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ನಟ ಜಗ್ಗೇಶ್ ನಟಿಸಿದ್ದಾರೆ. ಈ ಸಿನಿಮಾ ನಾಳೆ (ಶುಕ್ರವಾರ) ಬಿಡುಗಡೆಯಾಗುತ್ತಿದೆ. ಈ ಕಾರಣ ಚಿತ್ರದ ಪ್ರಮೋಷನ್ ಅನ್ನು ಧಾರಾವಾಹಿಯ ಮೂಲಕ ಮಾಡಲಾಗಿದೆ. ಸೀರಿಯಲ್ ನ ಒಂದು ವಿಶೇಷ ಸಂಚಿಕೆಯಲ್ಲಿ ಜಗ್ಗೇಶ್ ನಟಿಸಿದ್ದಾರೆ.

jaggesh in yaare nee mohini kannada serial

'ಪ್ರೀಮಿಯರ್ ಪದ್ಮಿನಿ' ಶ್ರುತಿ ನಾಯ್ಡು ನಿರ್ಮಾಣದ ಸಿನಿಮಾವಾಗಿದೆ. 'ಯಾರೇ ನೀ ಮೋಹಿನಿ' ಕೂಡ ಅವರ ನಿರ್ಮಾಣ ಹಾಗೂ ನಿರ್ದೇಶನದ ಧಾರಾವಾಹಿ. ಹೀಗಾಗಿ ತಮ್ಮ ಕಿರುತೆರೆ ವೀಕ್ಷಕರಿಗೆ ಸಿನಿಮಾವನ್ನು ಈ ರೀತಿ ತಲುಪಿಸಿದ್ದಾರೆ.

ಚಿತ್ರದಲ್ಲಿ ಜಗ್ಗೇಶ್, ಸುಧಾರಾಣಿ, ಹಿತಾ ಚಂದ್ರಶೇಖರ್, ಪಂಜು, ಮಧು, ವಿಕ್ರಮ್ ಸಿಂಹ ನಟಿಸಿದ್ದಾರೆ. ರಮೇಶ್ ಇಂದಿರಾ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಸಿನಿಮಾಗಿದೆ.

More from Filmibeat

English summary
Kannada actor Jaggesh in 'Yaare Nee Mohini' kannada serial for 'Premier Padmini' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X