For Quick Alerts
  ALLOW NOTIFICATIONS  
  For Daily Alerts

  ಕೋಟ್ಯಧಿಪತಿ ಹಾಟ್ ಸೀಟ್ನಲ್ಲಿ ಎರಡನೇ ಸಲ ಕೂತಿದ್ದ ಜಗ್ಗೇಶ್ ಗಳಿಸಿದ್ದೆಷ್ಟು?

  |
  ರಮ್ಯಾ ಮದುವೆ ಬಗ್ಗೆ ಬಾಯ್ಬಿಟ್ಟ ಜಗ್ಗೇಶ್..? | FILMIBEAT KANNADA

  ಕನ್ನಡದ ಕೋಟ್ಯಧಿಪತಿ ಇತಿಹಾಸದಲ್ಲಿ ಯಾರಿಗೂ ಸಿಗದ ಅವಕಾಶ ನವರಸ ನಾಯಕ ಜಗ್ಗೇಶ್ ಅವರಿಗೆ ಸಿಕ್ಕಿತ್ತು. ಇದುವರೆಗೂ ಎರಡು ಸಲ ಹಾಟ್ ಸೀಟ್ ನಲ್ಲಿ ಯಾರೂ ಕೂತಿರಲಿಲ್ಲ. ಇಂತಹ ಅಪರೂಪದ ಅವಕಾಶ ಜಗ್ಗಣ್ಣನ ಪಾಲಾಗಿದೆ.

  ಕಳೆದ ಆರು ವರ್ಷದ ಹಿಂದೆ ಜಗ್ಗೇಶ್ ಅವರು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದೀಗ, ಆರು ವರ್ಷದ ಬಳಿಕ ಮತ್ತೊಮ್ಮೆ ಸ್ಪರ್ಧಯಾಗಿ ಹಾಟ್ ಸೀಟ್ ನಲ್ಲಿ ಕುಳಿತುಕೊಂಡಿದ್ದರು.

  ಕೋಟ್ಯಧಿಪತಿಯಲ್ಲಿ ತೇಜಸ್ವಿ ಸೂರ್ಯ-ಪ್ರತಾಪ್ ಸಿಂಹಗೆ ಕೈಕೊಟ್ಟ ಪ್ರಶ್ನೆ ಇದೇಕೋಟ್ಯಧಿಪತಿಯಲ್ಲಿ ತೇಜಸ್ವಿ ಸೂರ್ಯ-ಪ್ರತಾಪ್ ಸಿಂಹಗೆ ಕೈಕೊಟ್ಟ ಪ್ರಶ್ನೆ ಇದೇ

  ಆದರೆ ಕಳೆದ ಬಾರಿಗಿಂತ ಈ ಸಲ ಹೆಚ್ಚು ಹಣ ಗೆದ್ದುಕೊಂಡಿದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರ. ಹಾಗಿದ್ರೆ, ಮೊದಲ ಸಲ ಭಾಗಿಯಾಗಿದ್ದಾಗ ಜಗ್ಗೇಶ್ ಎಷ್ಟು ಹಣ ಗೆದ್ದಿದ್ದರು? ಈ ಸಲ ಬಂದಿದ್ದಾಗ ಎಷ್ಟು ಗೆದ್ದರು? ಮುಂದೆ ಓದಿ....

  ಮೊದಲ ಸಲ ಜಗ್ಗೇಶ್ ಗಳಿಸಿದ ಹಣವೆಷ್ಟು?

  ಮೊದಲ ಸಲ ಜಗ್ಗೇಶ್ ಗಳಿಸಿದ ಹಣವೆಷ್ಟು?

  2013ರ ಕನ್ನಡದ ಕೋಟ್ಯಧಿಪತಿ ಎರಡನೇ ಆವೃತ್ತಿಯಲ್ಲಿ ಜಗ್ಗೇಶ್ ಭಾಗಿಯಾಗಿದ್ದರು. ಆಗ 3.20 ಲಕ್ಷ ಹಣ ಗೆದ್ದಿದ್ದರು. ಶೈಕ್ಷಣಿಕ ಸಂಸ್ಥೆಯೊಂದರ ನೆರವಿಗಾಗಿ ಆಟ ಆಡಿದ್ದ ನವರಸ ನಾಯಕ ಒಂದೊಳ್ಳೆ ಮೊತ್ತವನ್ನ ನೀಡಿದ್ದರು. ಎರಡನೇ ಆವೃತ್ತಿಯನ್ನ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿದ್ದರು.

  ಈ ಸಲ ಜಗ್ಗೇಶ್ ಗೆದ್ದಿದ್ದೆಷ್ಟು?

  ಈ ಸಲ ಜಗ್ಗೇಶ್ ಗೆದ್ದಿದ್ದೆಷ್ಟು?

  ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಸಲ ಜಗ್ಗೇಶ್ ಗೆದ್ದಿದ್ದು ದೊಡ್ಡ ಮೊತ್ತ. ಈ ಬಾರಿ ಜಗ್ಗೇಶ್ ಅವರು 6.40 ಲಕ್ಷ ಹಣವನ್ನ ಕೋಟ್ಯಧಿಪತಿಯಲ್ಲಿ ಗೆದ್ದರು. ಜಗ್ಗೇಶ್ ಅವರು ಆಟ ಆಡಿದ್ದು 'ನೀರು ಇಂಗುಗುಂಡಿ ಯೋಜನೆ'ಗಾಗಿ. ಸಮಾಜದ ಒಳ್ಳೆಯ ಕೆಲಸಕ್ಕಾಗಿ ಜಗ್ಗೇಶ್ ಆಡಿದ್ದು ವಿಶೇಷವಾಗಿತ್ತು.

  ಸಂತ್ರಸ್ತರ ಬದುಕು ಬದಲಾಯಿಸುತ್ತ 'ಮನರಂಜನೆ' ಆಟದಲ್ಲಿ ಗೆದ್ದ 12.5 ಲಕ್ಷ?ಸಂತ್ರಸ್ತರ ಬದುಕು ಬದಲಾಯಿಸುತ್ತ 'ಮನರಂಜನೆ' ಆಟದಲ್ಲಿ ಗೆದ್ದ 12.5 ಲಕ್ಷ?

  ಕ್ವಿಟ್ ಮಾಡಿಲ್ಲ, ತಪ್ಪು ಉತ್ತರ ಕೊಟ್ಟಿಲ್ಲ

  ಕ್ವಿಟ್ ಮಾಡಿಲ್ಲ, ತಪ್ಪು ಉತ್ತರ ಕೊಟ್ಟಿಲ್ಲ

  ಹನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟು ಆಟ ಆಡುತ್ತಿದ್ದ ಜಗ್ಗೇಶ್ ಅವರ ವಿಶೇಷ ಸಂಚಿಕೆ ಅರ್ಧದಲ್ಲೇ ಮುಗಿಸಬೇಕಾಯಿತು. ಉತ್ತರ ಗೊತ್ತಿಲ್ಲ ಅಂತ ಕ್ವಿಟ್ ಮಾಡಿಲ್ಲ, ತಪ್ಪು ಉತ್ತರನೂ ಕೊಟ್ಟಿಲ್ಲ. ಸಮಯ ಮುಗಿದ ಕಾರಣ ಆಟವನ್ನ ಮೊಟಕುಗೊಳಿಸಲಾಯಿತು.

  ಜಗ್ಗೇಶ್ ಅಪರೂಪದ ದಾಖಲೆ

  ಜಗ್ಗೇಶ್ ಅಪರೂಪದ ದಾಖಲೆ

  ಕನ್ನಡದ ಕೋಟ್ಯಧಿಪತಿ ಆಟದ ಇತಿಹಾಸದಲ್ಲಿ ಒಬ್ಬ ಸ್ಪರ್ಧಿ ಎರಡು ಸಲ ಹಾಟ್ ಸೀಟ್ ನಲ್ಲಿ ಕೂತಿದ್ದು ಇದೇ ಮೊದಲು. ಮೊದಲ ಸಲ 3.20 ಲಕ್ಷ ಈ ಸಲ 6.40 ಲಕ್ಷ. ಒಟ್ಟು 9.60 ಲಕ್ಷ ಗಳಿಸಿಕೊಂಡಿದ್ದಾರೆ.

  English summary
  Kannada actor jaggesh has participated in Kannadada kotyadhipathi for second time, and he won 6.4 lakhs in new session.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X