"ಪರಪುರುಷನ ಜೊತೆ ಆತ್ಮೀಯವಾಗಿದ್ಲು, ಖಾಸಗಿ ಫೋಟೊ ಕಳಿಸುತ್ತಿದ್ಲು"; ಜಾಹ್ನವಿ ವಿರುದ್ಧ ಮಾಜಿ ಪತಿ ಗರಂ
ಸುದ್ದಿ ವಾಹಿನಿ ಮಾಜಿ ನಿರೂಪಕಿ, ನಟಿ ಜಾಹ್ನವಿ ಸದ್ಯ ಬಿಗ್‌ಬಾಸ್ ಮನೆ ಸೇರಿದ್ದಾರೆ. ದೊಡ್ಮನೆಯಲ್ಲಿ ಮೋಡಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಮುಖ್ಯವಾಗಿ ಮದುವೆ, ಡಿವೋರ್ಸ್ ಬಗ್ಗೆ ಜಾಹ್ನವಿ ಮಾತನಾಡುತ್ತಿರುವುದು ವೈರಲ್ ಆಗುತ್ತಿದೆ. ಸದ್ಯ ಆಕೆಯ ಹೇಳಿಕೆಗಳಿಗೆ ಮಾಜಿ ಪತಿ ಕಾರ್ತಿಕ್ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಮದುವೆ ಹಾಗೂ ಮಾಜಿ ಪತಿ ಕಾರ್ತಿಕ್ ಬಗ್ಗೆ ಜಾಹ್ನವಿ ಮಾತನಾಡಿದ್ದರು. ಜಿಮ್ ಏರಿಯಾದಲ್ಲಿ ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿ ಎದುರು ಜಾಹ್ನವಿ ನೋವು ತೋಡಿಕೊಂಡಿದ್ದರು. ಅಧಿಕೃತವಾಗಿ ಡಿವೋರ್ಸ್ ಆಗದೇ 2 ವರ್ಷ ದೂರ ಇದ್ವಿ. ಬಳಿಕ ರಿವೋರ್ಸ್ ಆಯ್ತು. "ಡಿವೋರ್ಸ್ ಆಗುವ ಮುಂಚೆಯೇ ಅವರಿಗೆ ಮದುವೆ ಆಗಿ ಮಗು ಇದ್ದ ವಿಚಾರ ಗೊತ್ತಾಯ್ತು. ಅವರು ಮದುವೆಯಾಗಿದ್ದು ಬೇರೆ ಯಾರು ಅಲ್ಲ ಬದಲಿಗೆ ನನ್ನ ಫ್ರೆಂಡ್‌ನ್ನೇ" ಎಂದು ಹೇಳಿದ್ದರು. ಸದ್ಯ ಜಾಹ್ನವಿ ಆರೋಪಗಳ ಬಗ್ಗೆ ಅಶ್ವವೇಗ ವಾಹಿನಿ ಸಂದರ್ಶನದಲ್ಲಿ ಕಾರ್ತಿಕ್ ಮಾತನಾಡಿದ್ದಾರೆ.

"ಗಂಡನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ಕಮ್ಯೂನಿಕೇಷನ್‌ನಲ್ಲಿ ಇದ್ದಾಗ ಅದನ್ನು ಯಾರು ಸಹಿಸಿಕೊಳ್ತಾರೆ. ವಿವರವಾಗಿ ಹೇಳಲು ನನಗೆ ಇಷ್ಟವಿಲ್ಲ. ಅವಳು ಕೆಳಮಟ್ಟಕ್ಕೆ ಇಳಿದು ಮಾತನಾಡ್ತಾಳೆ ಅಂದ್ರೆ, ಆ ರೀತಿ ನನಗೆ ಮಾತನಾಡಲು ಇಷ್ಟವಿಲ್ಲ. ಹೆಣ್ಣು ಎನ್ನುವ ಕಾರಣಕ್ಕೆ ಗೌರವ ಕೊಡ್ತೀನಿ. ಅವಳು ಏನೇನೋ ಹೇಳಿಕೆ ಕೊಡಬಹುದು. ಅದು ಸತ್ಯ ಅಲ್ಲ. ಆಕೆ ಬೇರೆ ವ್ಯಕ್ತಿ ಜೊತೆ ಮಾತನಾಡುವುದು ನೋಡ್ತಾ ಸುಮ್ಮನಿರಲು ಸಾಧ್ಯವಿಲ್ಲ. ಹಂಗಾಗಿ ನಾನು ಕುಡಿದು ಆಕೆಗೆ ಹೊಡೆದಿದ್ದೀನಿ" ಎಂದು ಕಾರ್ತಿಕ್ ಹೇಳಿದ್ದಾರೆ.
ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಎರಡು ವರ್ಷ ಯಾವುದೇ ಸಮಸ್ಯೆ ಇರಲಿಲ್ಲ. ಬಳಿಕ ಬೇರೆ ಮನೆ ಮಾಡೋಣ ಅಂದ್ಲು, ಬಾಡಿಗೆ ಮನೆ ಮಾಡಿದ್ದೆ. ಬಳಿಕ ಅಪಾರ್ಟ್‌ಮೆಂಟ್ ಮಾಡುವಂತೆ ಹೇಳಿದ್ಲು. ಅದನ್ನು ಮಾಡ್ದೆ ಎಂದು ಕಾರ್ತಿಕ್ ಹೇಳಿದ್ದಾರೆ. "ಬರೀ ಬೇರೆಯವರೊಂದಿಗೆ ಮಾತನಾಡುವುದು ಮಾತ್ರವಲ್ಲ, ತನ್ನ ಖಾಸಗಿ ಫೋಟೊಗಳನ್ನು ಬೇರೆಯವರಿಗೆ ಶೇರ್ ಮಾಡುತ್ತಿದ್ದಳು. ಅದನ್ನು ಯಾರು ಸಹಿಸುತ್ತಾರೆ. ಯಾರೋ ಹೇಳಿ ಕೇಳಿದ್ದಲ್ಲ, ನನ್ನ ಮುಂದೆಯೇ ಆ ರೀತಿ ಮಾಡಿದ್ಲು. ಅದಕ್ಕೆ ಕುಡಿದು ಹೊಡೆದಿದ್ದೀನಿ. ಯಾವುದೇ ಆದಾಯ ಇಲ್ಲದೇ ಒಂದೂವರೆ ಕೋಟಿ ಸಾಲ ಇದ್ದಾಗ ವ್ಯಕ್ತಿ ಫಸ್ಟ್ರೇಷನ್ ಆಗುತ್ತೆ. ಆಗ ಮನುಷ್ಯ ಏನು ಮಾಡ್ತಾನೆ? ಗಂಡನಿಗಿಂತ ಬೇರೆಯವರಿಗೆ ಆದ್ಯತೆ ಕೊಟ್ಟಾಗ ಎಂಥಹವರಿಗೆ ಕೋಪ ಬರುತ್ತದೆ" ಎಂದು ಕಾರ್ತಿಕ್ ತಿಳಿಸಿದ್ದಾರೆ.

ನನ್ನದು ಕೆಲ ತಪ್ಪುಗಳಿದ್ದವು. ಅದು ಜಾಹ್ನವಿಗೆ ಗೊತ್ತು. ನಾನು ಕ್ಷಮೆ ಕೂಡ ಕೇಳ್ದೆ. ಆದರೆ ಕ್ಷಮಿಸಲಿಲ್ಲ ಎಂದ ಕಾರ್ತಿಕ್ ಹೇಳಿದ್ದಾರೆ. "ನೀನು ಇದ್ದರೆ ಮನೆಗೆ ಬರಲ್ಲ, ಎಂದು ಮೂರ್ನಾಲ್ಕು ದಿನ ಮನೆಗೆ ಬರಲಿಲ್ಲ. ಆಗ ನಾನು ಮನೆ ಬಿಟ್ಟು ಬಂದೆ. ಬಳಿಕ ಒಂದೂವರೆ ವರ್ಷ ನಾನು ಸುಮ್ಮನಿದ್ದೆ. ಯಾರು ಮಾತನಾಡಿದರೂ ಒಪ್ಪಲಿಲ್ಲ. ಹೊಂದಾಣಿಕೆ ಮಾಡಿಕೊಂಡು ಹೋಗಲು ಒಪ್ಪಲಿಲ್ಲ. ಅಪಾರ್ಟ್‌ಮೆಂಟ್ ಕೊಡಲು ಕೇಳಿದಳು. ಬಳಿಕ ಒಪ್ಪಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದೆವು. ನನ್ನ ತೇಜೋವಧೆ ಮಾಡುತ್ತಿದ್ದಾಳೆ, ಅವಳು ತಪ್ಪು ಒಪ್ಪಿಕೊಳ್ಳುತ್ತಿಲ್ಲ. ಸಾಕಷ್ಟು ಆರೋಪ ಬಂದಾಗ ನಾನು ಆಕೆಯ ಬೆಂಬಲಕ್ಕೆ ನಿಂತೆ. ಆದರೆ ಅವಳು ಸುಮ್ಮನಿರಲಿಲ್ಲ" ಎಂದು ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಮಾತನಾಡಿದ್ದು ನೋವಾಗಿದೆ. ಡಿವೋರ್ಸ್ ಬಳಿಕ ನಾನು ಮದುವೆ ಆಗಿದ್ದೀನಿ. ಡಿವೋರ್ಸ್‌ಗೆ ಮುನ್ನ ಮದುವೆ ಆಗಿದ್ದೆ ಎನ್ನುವುದು ಸುಳ್ಳು. ಡಿವೋರ್ಸ್ ಬಳಿಕವೇ ನಾನು ಮತ್ತೊಂದು ಮದುವೆ ಆಗಿದ್ದು. ನನಗೂ ಒಂದು ಸಂಸಾರ ಇದೆ. ಆಕೆಯ ಹೇಳಿಕೆಯಿಂದ ನನಗೆ ನನ್ನ ಕುಟುಂಬಕ್ಕೆ ಡಿಸ್ಟರ್ಬ್ ಆಗ್ತಿದೆ.


Click it and Unblock the Notifications











