ಜೈ ಜಗದೀಶ್, ವಿಜಯ ಲಕ್ಷ್ಮೀ ಸಿಂಗ್ ಲವ್ ಸ್ಟೋರಿ ಬಲು ಚೆಂದ!

By ಪ್ರಿಯಾ ದೊರೆ

ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ನಲ್ಲಿ ಈಗ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಗಳು ಭಾಗವಹಿಸಿದ್ದಾರೆ. ಆಟವಾಡಿ ಬಹುಮಾನವನ್ನು ಗೆಲ್ಲುವ ಉತ್ಸುಕದಲ್ಲಿದ್ದಾರೆ. ಇನ್ನು ಈ ದಂಪತಿಯ ನಡುವೆ ಪ್ರೀತಿ ಹುಟ್ಟಿ ಮದುವೆಯಾಗಿದ್ದು ಹೇಗೆ ಎನ್ನುವ ವಿಚಾರ ಹೊರ ಬಂದಿದೆ.

ಜೈ ಜಗದೀಶ್ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ. 1976ರಲ್ಲಿ ಫಲಿತಾಂಶ ಚಿತ್ರದ ಮೂಲಕ ಜೈಜಗದೀಶ್‌ ಅವರು ಸಿನಿಪಯಣ ಆರಂಭಿಸಿದರು. ಜೈ ಜಗದೀಶ್ ನಾಯಕನಟನಾಗಿ, ಪೋಷಕನಟನಾಗಿ, ಖಳನಟನಾಗಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಜೈ ಜಗದೀಶ್ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ಇವರೂ ಕೂಡ ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ ಪ್ರಸಿದ್ಧರಾಗಿದ್ದಾರೆ. ಸದ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಪಾಪ್‌ ಕಾರ್ನ್ ಕೊಡಿಸಿ ಪ್ರೀತಿಸಿದ ಜೈ ಜಗದೀಶ್!

ಪಾಪ್‌ ಕಾರ್ನ್ ಕೊಡಿಸಿ ಪ್ರೀತಿಸಿದ ಜೈ ಜಗದೀಶ್!

ಅದೊಂದು ದಿನ ಮೈಸೂರಿನಲ್ಲಿ ಸಿನಿಮಾಗೆ ಹೋಗಿದ್ದರು. ಜೈ ಜಗದೀಶ್ ಅವರು ಕೂಡ ಅಲ್ಲಿಗೆ ಬಂದಿದ್ದರು. ಪಾಪ್‌ ಕಾರ್ನ್ ಕೊಡಿಸಿ, ಅಲ್ಲಿಂದ ಇಬ್ಬರೂ ಪರಿಚಯವಾದರು. ಹೆದರಿಕೊಂಡ ವಿಜಯಲಕ್ಷ್ಮಿ ಅವರು ಸಿನಿಮಾ ಮುಗಿಯುತ್ತಿದ್ದಂತೆ ಎಸ್ಕೇಪ್‌ ಆದರು. ಅಲ್ಲಿಂದ ಐಸ್‌ ಕ್ರೀಮ್‌ ಪಾರ್ಲರ್‌ಗೆ ವಿಜಯಲಕ್ಷ್ಮಿ ಅವರು ಹೋದರೆ, ಅಲ್ಲಿಗೂ ಜೈ ಜಗದೀಶ್ ಕೂಡ ಬಂದು ಬಿಲ್‌ ಪೇ ಮಾಡಿದರು. ನಂತರ ಅವರ ಸ್ನೇಹಿತನನ್ನು ಕಳಿಸಿ ವಿಜಯಲಕ್ಷ್ಮಿ ಅವರ ಮನೆಯನ್ನು ತಿಳಿದುಕೊಂಡರು.

ಮೂರು ವರ್ಷದ ಬಳಿಕ ಭೇಟಿ!

ಮೂರು ವರ್ಷದ ಬಳಿಕ ಭೇಟಿ!

ಬಳಿಕ ಮೂರು ವರ್ಷದ ಬಳಿಕ ಜೈ ಜಗದೀಶ್ ಅವರು ವಿಜಯಲಕ್ಷ್ಮಿ ಅವರ ಅಣ್ಣನ ಸ್ನೇಹಿತರಂತೆ. ಆಗ ಮನೆಗೆ ಬಂದಾಗ ವಿಜಯಲಕ್ಷ್ಮಿ ಅವರು ನೋಡಿ ಜೈ ಜಗದೀಶ್ ಗುರುತು ಹಿಡಿದಿದ್ದರು. ಆದರೆ ಇಬ್ಬರೂ ಮಾತನಾಡಿರಲಿಲ್ಲ. ಅದೇ ವೇಳೆಗೆ ಜೈ ಜಗದೀಶ್ ಸಿನಿಮಾಗಾಗಿ ಬೆಂಗಳೂರಿಗೆ ಬಂದರು. ಮತ್ತೆ ಗ್ಯಾಪ್ ಆದ ಮೇಲೆ, ಅಂಬರೀಷ್ ಅವರು ಮನೆಗೆ ಬಂದು ಜೈ ಜಗದೀಶ್ ಮದುವೆಯಾಯಿತು. ರೂಪಾ ಎಂಬುವರೊಂದಿಗೆ ಎಂದಾಗ ವಿಜಯಲಕ್ಷ್ಮಿ ಸ್ವಲ್ಪ ಬೇಸರ ಮಾಡಿಕೊಂಡರು.

ಮೊದಲ ಪತ್ನಿಯಿಂದ ದೂರಾದರು!

ಮೊದಲ ಪತ್ನಿಯಿಂದ ದೂರಾದರು!

ಈ ನಡುವೆ ಜೈಜಗದೀಶ್ ಮತ್ತು ರೂಪಾ ಅವರು ಮದುವೆಯಾದರು. ಮನೆಯವರು ಒಪ್ಪದ ಕಾರಣ ಡಾ ವಿಷ್ಣುವರ್ಧನ್ ಅವರ ನೆರವಿನಿಂದ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆರು ವರ್ಷದ ನಂತರ ಅರ್ಪಿತಾ ಹುಟ್ಟಿದ್ದರು. ಆದರೆ, ಕಾರಣಾಂತರಗಳಿಂದ ಡಿವೋರ್ಸ್ ಪಡೆದುಕೊಂಡು ದೂರವಾದರು. ಆಗ ಸುಮಾರು ಮೂರು ವರ್ಷಗಳ ಕಾಲ ಹೋಟೆಲ್‌ ನಲ್ಲಿ ಜೈ ಜಗದೀಶ್ ಅವರು ವಾಸವಿದ್ದರು. ಒಟ್ಟು ಎಂಟು ವರ್ಷಗಳ ಕಾಲ ಜೈ ಜಗದೀಶ್ ಅವರು ಹೋಟೆಲ್‌ನಲ್ಲೇ ವಾಸವಿದ್ದರು.

ಪ್ರಪೋಸ್ ಮಾಡಿದ ಜೈ ಜಗದೀಶ್!

ಪ್ರಪೋಸ್ ಮಾಡಿದ ಜೈ ಜಗದೀಶ್!

ಸ್ವಲ್ಪ ಕಾಲದ ನಂತರ ಇಬ್ಬರೂ ಒಟ್ಟಿಗೆ ಸುಮಾರು ಐದು ಚಿತ್ರಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ನಟಿಸಿದರೂ, ಪ್ರೀತಿಯ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಜಗ್ಗು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಜೈ ಜಗದೀಶ್ ಅವರೇ ಮಾತನಾಡಿದರು. ನಂತರ ಹೀಗೆ ಪ್ರೀತಿಸಲು ಶುರು ಮಾಡಿದರು. ಅಲ್ಲಿಗೆ ಎಂಟು ವರ್ಷದ ಬಳಿಕ ಇಬ್ಬರೂ ಮದುವೆಯಾಗುವ ನಿರ್ಧಾರ ಮಾಡಿದರು. ವಿಜಯಲಕ್ಷ್ಮಿ ಸಿಂಗ್‌ ಅವರ ಸ್ನೇಹಿತ ಇವರಿಬ್ಬರ ಜಾತಕವನ್ನು ತೆಗೆದುಕೊಂಡು ಹೋಗಿ ವಿಚಾರಿಸಿದಾಗ, ಇಬ್ಬರೂ ಒಳ್ಳೆಯ ಜೋಡಿ. ಆದರೆ, ಜೂನ್‌ 4ರಂದೇ ಮದುವೆಯಾಗಬೇಕು ಇಲ್ಲದಿದ್ದರೆ, ಇನ್ನೆಂದೂ ಮದುವೆಯಾಗುವುದಿಲ್ಲ ಎಂದು ಹೇಳಿದ್ದರು.

ಇದ್ದಕ್ಕಿದ್ದಂತೆ ಮದುವೆಯಾದ ಜೋಡಿ!

ಇದ್ದಕ್ಕಿದ್ದಂತೆ ಮದುವೆಯಾದ ಜೋಡಿ!

ಈ ಮಾತನ್ನು ಕೇಳಿದ ಸ್ನೇಹಿತರು ಮದುವೆಗೆ ಎಲ್ಲಾ ಅರೇಂಜ್ ಮೆಂಟ್ಸ್ ಮಾಡಿದರು. ಸೀರೆ, ತಾಳಿ ಎಲ್ಲವನ್ನೂ ಸ್ನೇಹಿತರೇ ತಂದರು. ಮನೆಯಲ್ಲಿ ವಿಜಯಲಕ್ಷ್ಮಿ ಅವರು ಹೇಳಿದ್ದೇ ಮದುವೆಯ ದಿನ. ಇನ್ನು ಜೈ ಜಗದೀಶ್ ಅವರಿಗೆ ತಮ್ಮ ಮದುವೆ ಎಂಬುದೇ ಗೊತ್ತಿರಲಿಲ್ಲ. ಸುಮ್ಮನೇ ಹೋಟೆಲ್‌ಗೆ ಬಂದಿದ್ದಾರೆ. ನೋಡಿದರೆ, ಅವರನ್ನೇ ಮದುವೆಯ ಗಂಡು ಎಂದು ಹೇಳಿ ಕೂರಿಸಿ ಮದುವೆ ಮಾಡಿಸಿದ್ದಾರೆ. ಹೀಗೆ ಈ ಜೋಡಿಯ ಮದುವೆ ನಡೆಯಿತು. ಇಂದಿಗೂ ಈ ಜೋಡಿ ಸುಖ ಸಂಸಾರ ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

More from Filmibeat

English summary
Jai Jagadeesh and Vijayalakshmi Singh love stoy is Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X