ಈ ನಟ 'ಬಿಗ್ ಬಾಸ್' ಎರಡನೇ ಸ್ಪರ್ಧಿ: ವಿಡಿಯೋ ನೀಡಿದ ಸುಳಿವು

Recommended Video

Bigg Boss Kannada Spoof | ಹೌದು ಸ್ವಾಮಿ ಇದು ಬಿಗ್ ಬಾಸ್ ಕನ್ನಡ 7 | FILMIBEAT KANNADA

'ಬಿಗ್ ಬಾಸ್ ಕನ್ನಡ ಸೀಸನ್ 7' ಕಾರ್ಯಕ್ರಮದ ಮೊದಲ ಸ್ಪರ್ಧಿ ಹೆಸರು ಈಗ ತಾನೇ ಬಹಿರಂಗವಾಗಿದೆ. ಹಾಸ್ಯ ನಟ ಕುರಿ ಪ್ರತಾಪ್ ಈ ಬಾರಿ ಬಿಗ್ ಬಾಸ್ ಮನೆಗೆ ಹೆಜ್ಜೆ ಇಡುತ್ತಿರುವ ಮೊದಲ ಸ್ಪರ್ಧಿಯಾಗಿದ್ದಾರೆ.

ಮೊದಲ ಸ್ಪರ್ಧಿಯ ಹೆಸರನ್ನು ವಿಡಿಯೋ ಮೂಲಕ ಕಲರ್ಸ್ ಕನ್ನಡ ವಾಹಿನಿಯೇ ತನ್ನ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಹಂಚಿಕೊಂಡಿದೆ. ಇದೀಗ ಎರಡನೇ ಸ್ಪರ್ಧಿಯ ಹೆಸರು ಕೂಡ ಬೇರೆ ಮೂಲಗಳಿಂದ ರಿವೀಲ್ ಆಗಿದೆ. ಕನ್ನಡದ ಹಿರಿಯ ನಟ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ.

ಹಿರಿಯ ನಟ ಜೈ ಜಗದೀಶ್ 'ಬಿಗ್ ಬಾಸ್'ಗೆ ಹೋಗುತ್ತಾರೆ ಎನ್ನುವ ಸುದ್ದಿ ಅನೇಕ ದಿನದಿಂದ ಇತ್ತು. ಇದೀಗ ಈ ಸುದ್ದಿ ನಿಜವಾಗಿದೆ. ಜೈ ಜಗದೀಶ್ ಕಾರ್ಯಕ್ರಮಕ್ಕೆ ಹೋಗುವುದು ಬಹುತೇಕ ಖಚಿತವಾಗಿದೆ.

ಎರಡನೇ ಸ್ಪರ್ಧಿ ಜೈ ಜಗದೀಶ್

ಎರಡನೇ ಸ್ಪರ್ಧಿ ಜೈ ಜಗದೀಶ್

'ಬಿಗ್ ಬಾಸ್ ಕನ್ನಡ ಸೀಸನ್ 7' ಕಾರ್ಯಕ್ರಮಕ್ಕೆ ನಟ ಜೈ ಜಗದೀಶ್ ಹೋಗುತ್ತಿದ್ದಾರೆ. ಅವರು ಈ ಬಾರಿಯ ಎರಡನೇ ಸ್ಪರ್ಧಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಈ ಬಗ್ಗೆ ಸುಳಿವು ನೀಡಿದೆ. ಕಲರ್ಸ್ ವಾಹಿನಿ ಇನ್ನೂ ಜೈ ಜಗದೀಶ್ ಹೆಸರನ್ನು ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಜೈ ಜಗದೀಶ್ ಕಾರ್ಯಕ್ರಮಕ್ಕೆ ಹೋಗುವುದು ಪಕ್ಕಾ.

ಮನೆಯಿಂದ ಹೊರಟ ಜೈ ಜಗದೀಶ್

ಮನೆಯಿಂದ ಹೊರಟ ಜೈ ಜಗದೀಶ್

ನಟ ಜೈ ಜಗದೀಶ್ ತಮ್ಮ ಮನೆಯಿಂದ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಹೊರಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕಾರ್ ಹತ್ತುವ ಅವರನ್ನು ಮನೆಯವರು ಪ್ರೀತಿಯಿಂದ ಬೀಳ್ಕೊಡುಗೆ ನೀಡುತ್ತಿದ್ದಾರೆ. ಈ ಹಿಂದೆ ನಟ ಮೋಹನ್, ಸಿಹಿ ಕಹಿ ಚಂದ್ರು, ಹಿರಿಯ ನಟಿ ಶ್ರುತಿ, ಮಾಳವಿಕಾ, ಶಕಿಲಾ ಹೀಗೆ ಸಾಕಷ್ಟು ಸೀರಿಯರ್ ಗಳು ಬಿಗ್ ಮನೆಗೆ ಹೋಗಿದ್ದು, ಈ ಬಾರಿ ಜೈ ಜಗದೀಶ್ ಅವಕಾಶ ಪಡೆದಿದ್ದಾರೆ.

ನಟ, ನಿರ್ದೇಶಕ, ನಿರ್ಮಾಪಕ ಜೈ ಜಗದೀಶ್

ನಟ, ನಿರ್ದೇಶಕ, ನಿರ್ಮಾಪಕ ಜೈ ಜಗದೀಶ್

ಜೈ ಜಗದೀಶ್ ಇಡೀ ಕುಟುಂಬ ಸಿನಿಮಾ ಕುಟುಂಬವಾಗಿ ಗುರುತಿಸಿಕೊಂಡಿದೆ. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 1976ರ 'ಫಲಿತಾಂಶ' ಸಿನಿಮಾದ ಮೂಲಕ ತಮ್ಮ ಕೆರಿಯರ್ ಶುರು ಮಾಡಿದರು. 'ಭೂಮಿ ತಾಯಿಯ ಚೊಚ್ಚಲ ಮಗ' ಸಿನಿಮಾದ ಮೂಲಕ ನಿರ್ಮಾಪಕರಾದರು. 'ಮದನ' ಅವರ ಮೊದಲ ನಿರ್ದೇಶನದ ಸಿನಿಮಾ.

ಕಾರ್ಯಕ್ರಮ ಪ್ರೊಮೋ ಬಿಡುಗಡೆ

ಕಾರ್ಯಕ್ರಮ ಪ್ರೊಮೋ ಬಿಡುಗಡೆ

'ಬಿಗ್ ಬಾಸ್ ಕನ್ನಡ ಸೀಸನ್ 7' ಕಾರ್ಯಕ್ರಮ ಪ್ರೊಮೋ ಬಿಡುಗಡೆಯಾಗಿದೆ. ಗ್ರಾಂಡ್ ಓಪನಿಂಗ್ ವೇದಿಕೆ ಅದ್ದೂರಿಯಾಗಿದೆ. ಕಲರ್ ಫುಲ್ ಆಗಿ ಸುದೀಪ್ ಕಾಣಿಸಿಕೊಂಡಿದ್ದಾರೆ . ಪೈಲ್ವಾನ್ ಮ್ಯೂಸಿಕ್ ಮೂಲಕ ಸುದೀಪ್ ಎಂಟ್ರಿ ಆಗುತ್ತಾರೆ. ಇಂದು ಸಂಜೆ 6 ಗಂಟೆಯಿಂದ ಪ್ರಾರಂಭ ಆಗಲಿದೆ. ಪ್ರೊಮೊ ವಿಡಿಯೋವನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ.

More from Filmibeat

English summary
Bigg Boss Kannada Season 7 : Actor Jai Jagadeesh will be the 2nd contestant of Bigg Boss Kannada Season 7 Show. Bigg Boss kannada season 7 show will grand opening from today 6PM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X