'ಹೆಮ್ಮೆಯ ಕನ್ನಡಿಗ' ವೇದಿಕೆಯಲ್ಲಿ ಜೈಜಗದೀಶ್ ಪುತ್ರಿಯರ ಡ್ಯಾನ್ಸ್
ಜೀ ಕನ್ನಡ ವಾಹಿನಿಯಲ್ಲಿ 'ಹೆಮ್ಮೆಯ ಕನ್ನಡಿಗ' ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ನಿನ್ನೆ ಮತ್ತು ಇಂದು ಕಾರ್ಯಕ್ರಮದ ಪ್ರಸಾರ ನಡೆದಿದೆ.
ಪ್ರಶಸ್ತಿ ನೀಡುವುದರ ಜೊತೆಗೆ ಅನೇಕ ಡ್ಯಾನ್ಸ್ ಹಾಗೂ ಕಾಮಿಡಿಗಳು ಕಾರ್ಯಕ್ರಮದ ಹೈಲೆಟ್ ಆಗಿದೆ. ಇಂದು ಪ್ರಸಾರ ಆಗುವ ಈ ಕಾರ್ಯಕ್ರಮದಲ್ಲಿ ಮೂರು ಸಹೋದರಿಯರ ಸುಂದರ ನರ್ತನ ನೋಡಬಹುದಾಗಿದೆ.
ನಟ ಜೈಜಗದೀಶ್ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂರು ಪುತ್ರಿಯರು 'ಹೆಮ್ಮೆಯ ಕನ್ನಡಿಗ' ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ವೈಷ್ಣವಿ, ವೈನಿಧಿ ಹಾಗೂ ವೈಸಿರಿ ಕಾರ್ಯಕ್ರಮದಲ್ಲಿ ತಮ್ಮ ಡ್ಯಾನ್ಸ್ ಮೂಲಕ ರಂಜಿಸಲಿದ್ದಾರೆ.

ತಮ್ಮ ಖುಷಿಯ ಕ್ಷಣಗಳ ಫೋಟೊವನ್ನು ನಟಿ ವೈಭವಿ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂರು ಸಹೋದರಿಯರ ನೃತ್ಯ ನೋಡಬೇಕು ಅಂದರೆ ಇಂದಿನ ಕಾರ್ಯಕ್ರಮನ್ನು ನೀವು ವೀಕ್ಷಿಸಬೇಕಾಗಿದೆ.

ಅಂದಹಾಗೆ, ವೈಷ್ಣವಿ, ವೈನಿಧಿ ಹಾಗೂ ವೈಸಿರಿ ಮೂವರು 'ಯಾನ' ಸಿನಿಮಾದ ಮೂಲಕ ಲಾಂಚ್ ಆಗಿದ್ದಾರೆ. ಈ ಸಿನಿಮಾ ವರ್ಷಗಳ ಹಿಂದೆ ಸೆಟ್ಟೆರಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ.
English summary
Actor Jai Jagadish daughters Vaibhavi, Vaisiri and Vaishnavi dance performance in Zee Kannada Hemmeya Kannadiga show.


Click it and Unblock the Notifications