ಮೊದಲ ಸಲ ಕ್ಯಾಮರಾ ಮುಂದೆ ಬಂದ ಜೈಜಗದೀಶ್ ಮೊದಲ ಪತ್ನಿಯ ಮಗಳು!
ಕನ್ನಡದ ಹಿರಿಯ ನಟ ಜೈಜಗದೀಶ್ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಮತ್ತು ಆ ದಂಪತಿಗೆ ಮೂವರು ಹೆಣ್ಣು ಮಕ್ಕಳು ಎಂಬ ವಿಚಾರ ಎಲ್ಲರಿಗೂ ಗೊತ್ತಿತ್ತು. ಆದರೆ, ವಿಜಯಲಕ್ಷ್ಮಿ ಸಿಂಗ್ ಅವರಿಗೂ ಮೊದಲೇ ಜೈಜಗದೀಶ್ ಮದುವೆ ಆಗಿತ್ತು, ಅವರಿಗೊಬ್ಬರು ಮಗಳಿದ್ದರು ಎನ್ನುವುದು ಅನೇಕರಿಗೆ ಗೊತ್ತಿರಲಿಲ್ಲ.
ಬಿಗ್ ಬಾಸ್ ಮನೆಯಲ್ಲಿ ಸ್ವತಃ ಜೈಜಗದೀಶ್ ಅವರೇ ಈ ವಿಚಾರವನ್ನ ಬಹಿರಂಗಪಡಿಸಿದ್ದರು. ಈ ಘಟನೆಯನ್ನ ಹೇಳಿದ್ಮೇಲೆ ಜೈಜಗದೀಶ್ ಅವರ ಮೊದಲ ಪತ್ನಿ ಮತ್ತು ಮಗಳು ಯಾರು? ಎಲ್ಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿತ್ತು.
ಗೂಗಲ್ನಲ್ಲಿ ಜೈಗದೀಶ್ ಅವರ ಮೊದಲ ಪತ್ನಿ ಮತ್ತು ಮಗಳ ಬಗ್ಗೆ ಹುಡುಕುವವರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ, ಯಾರಿಗೂ ಅವರ ಫೋಟೋ ಸಿಕ್ಕರಲಿಲ್ಲ. ಈಗ, ಜೈಜಗದೀಶ್ ಅವರ ಹಿರಿಯ ಮಗಳ ಪರಿಚಯ ಆಗಿದೆ. ಆಕೆ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡು ಸರ್ಪ್ರೈಸ್ ನೀಡಿದ್ದಾರೆ. ಯಾರದು? ಮುಂದೆ ಓದಿ....

ಬಿಗ್ ಬಾಸ್ ವೇದಿಕೆ ಬಂದಿದ್ದ ಮಗಳು
ಜೈಜಗದೀಶ್ ಅವರ ಮೊದಲ ಪತ್ನಿಯ ಮಗಳು, ಹಿರಿಯ ಮಗಳು ಅರ್ಪಿತಾ ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಕಳೆದ ಭಾನುವಾರ ಜೈಜಗದೀಶ್ ಎಲಿಮಿನೇಟ್ ಆದರು. ಈ ಸಂದರ್ಭದಲ್ಲಿ ತಮ್ಮ ತಂದೆಯನ್ನ ಸ್ವಾಗತಿಸಲು ಅರ್ಪಿತಾ ಅವರು ಶೋಗೆ ಬಂದಿದ್ದು ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು.

ಜನರ ಮುಂದೆ ಕ್ಷಮೆ ಕೇಳಿದ್ದು ಸಮಾಧಾನ ಆಯ್ತು
''ಬಿಗ್ ಬಾಸ್ ಮನೆಯಲ್ಲಿ ಕೆಲವರಿಗೆ ಕ್ಷಮೆ ಕೇಳುವ ಅವಕಾಶ ಸಿಕ್ತು. ತುಂಬಾ ವರ್ಷ ಆಗಿತ್ತು. ಕ್ಷಮೆ ಕೇಳಿರಲಿಲ್ಲ. ಜನರ ಮುಂದೆ ನಾನು ಕ್ಷಮೆ ಕೇಳಿದ್ದು ನನಗೆ ನಿರಾಳ ತಂದಿದೆ. ನಾನು ತಪ್ಪು ಮಾಡಿದ್ದೀನಿ, ತಪ್ಪು ಮಾಡಿದ್ದೀನಿ, ತಪ್ಪು ಮಾಡಿದ್ದೀನಿ..ನಮ್ಮಿಬ್ಬರ ಜರ್ನಿ ಬಹಳ ಇದೆ'' ಎಂದು ಜೈಜಗದೀಶ್ ಮಗಳ ಮುಂದೆ ಹೇಳಿಕೊಂಡರು.

ನೀವು ಕ್ಷಮೆ ಕೇಳುವುದು ಬೇಡ
''ಐ ಲವ್ ಯೂ ಪಾ....ನೀವು ಕ್ಷಮೆ ಕೇಳುವುದು ಬೇಡ. ನಿಮ್ಮ ಜೊತೆ ಇರೋದು ನನಗೆ ತೃಪ್ತಿ ತಂದಿದೆ'' ಎಂದು ಅರ್ಪಿತಾ ಭಾವುಕರಾದರು.

ಬಹಳ ಸಂತೋಷ ಆಯ್ತು
ಬಹಳ ವರ್ಷದಿಂದ ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡಿದ್ದ ಅವರ ನೋವನ್ನ ಹೊರಹಾಕಿದ್ದು, ಬಹಳ ಸಂತೋಷ ಆಯ್ತು. ಅದಕ್ಕೆ ತಕ್ಕಂತೆ ಅರ್ಪಿತಾ ಕೂಡ ಸ್ವೀಕರಿಸಿದಳು. ಈಗ ಅವರ ಮನಸ್ಸಿನಲ್ಲಿ ಯಾವ ಕಲ್ಮಶವಿಲ್ಲ'' ಎಂದು ವಿಜಯಲಕ್ಷ್ಮಿ ಸಿಂಗ್ ಹೇಳಿದರು.

ಪ್ರೀತಿಸಿ ಮದುವೆಯಾಗಿದ್ದರು
ಜೈಜಗದೀಶ್ ಮತ್ತು ರೂಪಾ ಅವರು ಪ್ರೀತಿ ಮದುವೆಯಾದರು. ಮನೆಯವರು ಒಪ್ಪದ ಕಾರಣ ಡಾ ವಿಷ್ಣುವರ್ಧನ್ ಅವರ ನೆರವಿನಿಂದ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆರು ವರ್ಷದ ನಂತರ ಅರ್ಪಿತಾ ಹುಟ್ಟಿದ್ದರು. ಆದರೆ, ಕಾರಣಾಂತರಗಳಿಂದ ಡಿವೋರ್ಸ್ ಪಡೆದುಕೊಂಡು ದೂರವಾದರು.


Click it and Unblock the Notifications











