ಮೊದಲ ಪತ್ನಿ ಮತ್ತು ಮಗಳ ರಹಸ್ಯ ಬಿಚ್ಚಿಟ್ಟು ಬಿಕ್ಕಿ ಬಿಕ್ಕಿ ಅತ್ತ ಜೈ ಜಗದೀಶ್

Recommended Video

Jai Jagdish Revealed About His First Wife And Daughter | FILMIBEAT KANNADA

ಬಿಗ್ ಬಾಸ್ ಮನೆಯಲ್ಲಿ ಹಿರಿಯ ನಟ ಜೈ ಜಗದೀಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೊದಲ ಪತ್ನಿ ಮತ್ತು ಮೊದಲ ಮಗಳ ಬಗ್ಗೆ ರಿವೀಲ್ ಮಾಡುತ್ತ ಜೈ ಜಗದೀಶ್ ಕಣ್ಣೀರಾಕಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಸ್ಯಾಂಡಲ್ ವುಡ್ ನ ಹಿರಿಯ ನಟ ಜೈ ಜಗದೀಶ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಜೊ ಜಗದೀಶ್ ಬಗ್ಗೆ ಯಾರಿಗೂ ಗೊತ್ತಿರದ, ಎಲ್ಲಿಯೂ ಕೇಳಿಕೊಂಡಿರದ ಮೊದಲ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಜೈ ಜಗದೀಶ್ ಅಂದರೆ ಹಿರಿಯ ನಟ, ಸಿನಿಮಾಗಳು, ನೇಮ್ ಫೇಮ್, ಗತ್ತು, ಪತ್ನಿ ವಿಜಯಲಕ್ಷ್ಮಿ ಸಿಂಗ್ ಮತ್ತು ಮೂವರು ಹೆಣ್ಣು ಮಕ್ಕಳು ಎನ್ನುವುದು ಮಾತ್ರ ಗೊತ್ತಿರುವ ವಿಚಾರ. ಆದರೆ ಜೈ ಜಗದೀಶ್ ಬಗ್ಗೆ ಇದೂವರೆಗೂ ಗೊತ್ತಿರದ ಒಂದು ರಹಸ್ಯ ಬಿಗ್ ಬಾಸ್ ಮನೆಯಲ್ಲಿ ರಿವೀಲ್ ಆಗಿದೆ. ಹೌದು, ಅನೇಕ ವರ್ಷಗಳಿಂದ ತನ್ನಲ್ಲೆ ಬಚ್ಚಿಟ್ಟುಕೊಂಡು ಕೊರಗುತ್ತಿದ್ದ ದೊಡ್ಡ ನೋವೊಂದನ್ನು ಬಿಗ್ ಬಾಸ್ ಮನೆಯಲ್ಲಿ ಹೊರಹಾಕಿದ್ದಾರೆ ಜೈ ಜಗದೀಶ್.

ಜೈ ಜಗದೀಶ್ ಮೊದಲ ಮದುವೆ ರಹಸ್ಯ ಬಯಲು

ಜೈ ಜಗದೀಶ್ ಮೊದಲ ಮದುವೆ ರಹಸ್ಯ ಬಯಲು

ಜೈ ಜಗದೀಶ್ ಇದುವರೆಗೂ ಎಲ್ಲಿಯೂ ಹೇಳಿಕೊಳ್ಳದ ವಿಚಾರವೊಂದನ್ನು ಬಿಗ್ ಮನೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಜೈ ಜಗದೀಶ್ ಮೊದಲ ಪತ್ನಿ ಮತ್ತು ಮೊದಲ ಮಗಳ ರಹಸ್ಯ ಬಿಚ್ಚಿಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 1976ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಜೈ ಜಗದೀಶ್ ಆಗಲೆ ಸಕ್ಸಸ್ ಕಂಡ ನಟ. ಇದೆ ಯಶಸ್ಸು ಬೇಕಾದಷ್ಟು ಹಣವನ್ನು ಸಂಪಾದನೆ ಮಾಡಿಕೊಟ್ಟಿತ್ತು. ಜೊತೆಗೆ ಅಹಂಕಾರ, ಕಾರು, ಕ್ಲಬ್, ಮಜಾ, ಪ್ರೇಂಡ್ಸ್ ಎಲ್ಲವು ಅಷ್ಟೆ ವೇಗದಲ್ಲಿ ಜೈ ಜಗದೀಶ್ ಪಾಲಿಗೆ ಒಲಿದು ಬಂತು.

ಮೊದಲ ಪತ್ನಿ ರೂಪ

ಮೊದಲ ಪತ್ನಿ ರೂಪ

1980ರ ಸುಮಾರಿಗೆ ಜೈ ಜಗದೀಶ್ ರೂಪ ಎನ್ನುವರನ್ನು ಭೇಟಿಯಾಗುತ್ತಾರೆ. ರೂಪ ಹೆಸರಿಗೆ ತಕ್ಕಂತೆ ರೂಪವಂತೆ ಆಗಿದ್ದರು. ರೂಪ ಜೊತೆ ಸ್ನೇಹ ಬೇಳೆಸಿಕೊಂಡ ಜೈ ಜಗದೀಶ್ ಇದೇ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿ ಮದುವೆ ಆಗುವ ನಿರ್ಧಾರ ಮಾಡುತ್ತಾರೆ. ಕುಟುಂಬದವರಿಗೆ ಗೊತ್ತಾದರೆ ಎಲ್ಲಿ ಇಬ್ಬರನ್ನು ದೂರ ಮಾಡುತ್ತಾರೋ ಎನ್ನುವ ಭಯದಿಂದ ಯಾರಿಗೂ ಹೇಳದೆ ಮದುವೆ ಮಾಡಿಕೊಳ್ಳುತ್ತಾರೆ.

ಮೊದಲ ಮಗಳು ಅರ್ಪಿತಾ

ಮೊದಲ ಮಗಳು ಅರ್ಪಿತಾ

"1982ನಲ್ಲಿ ಒಬ್ಬಳು ಮಗಳು ಹುಟ್ಟಿದಳು. ಅವಳ ಹೆಸರು ಅರ್ಪಿತಾ. 6 ವರ್ಷದ ನಂತರ ನನಗೂ ರೂಪಾಗೂ ಮನಸ್ತಾಪ ಬಂತು. ಆ ನಂತರ ಮತ್ತೆ ನಾವು ಭೇಟಿಯಾಗಿಲ್ಲ. ನಾನು ಮನೆ ಬಿಟ್ಟು ಹೊರಟು ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡು ಇದ್ದೆ. ಸುಮಾರು 8 ವರ್ಷಗಳು ಹೋಟೆಲ್ ನಲ್ಲಿಯೆ ಇದ್ದೆ. ಮಗಳಿಗಾಗಿ ನಾನು ಅವಳಿಗೆ ವಿಚ್ಛೇದನ ಕೂಡ ಕೊಟ್ಟಿರಲಿಲ್ಲ. ಆದ್ರೆ ಒಂದು ದಿನ ವಿಚ್ಛೇದನ ಬೇಕು ಅಂತ ಕೇಳಿದಳು. ನಾನು ಪೇಪರ್ಸ್ ಗೆ ಸಹಿ ಮಾಡಿಕೊಟ್ಟೆ. ನಂತರ ಮಗಳನ್ನು ಕರೆದುಕೊಂಡು ಹೊರಟಳು" ಎಂದು ಹಳೆಯದನ್ನು ನೆನಪಿಸಿಕೊಳ್ಳುತ್ತ ಜೈ ಜಗದೀಶ್ ಬಿಕ್ಕಿ ಬಿಕ್ಕಿ ಅತ್ತರು.

ಮೊದಲ ಮಗಳು ಅರ್ಪಿತಾ ಮದುವೆ

ಮೊದಲ ಮಗಳು ಅರ್ಪಿತಾ ಮದುವೆ

"ಎಷ್ಟೊ ವರ್ಷಗಳಾದ ಮೇಲೆ ಮಗಳನ್ನು ಭೇಟಿಯಾದೆ ಅವಳಿಗೆ ಮದುವೆ ಫಿಕ್ಸ್ ಆಯ್ತು, ಮದುವೆ ಮಾಡಿದ್ವಿ. 6 ರಿಂದ 7 ವರ್ಷಗಳು ಗಂಡನ ಜೊತೆ ಚೆನ್ನಾಗಿಯೆ ಇದ್ದಳು. ಆದರೆ ಪ್ರತಿ ಬಾರಿ ಅವಳಿಗೆ ನನ್ನ ಅನುಪಸ್ಥಿತಿ ಕಾಡುತ್ತಿತ್ತು. 6 ವರ್ಷವಾಗಿದ್ದರು ಮಕ್ಕಳಾಗಿರಲಿಲ್ಲ. ಯಾಕೆ ಅಂತ ಒಂದು ದಿನ ವಿಚಾರಿಸಿದಾಗ ಅವಳು ಹೇಳಿದ್ದು ಗಂಡನಿಗೆ ಮಗು ಬೇಡವಂತೆ ಎಂದು. ಅಲ್ಲಿಗೆ ಮಗಳ ಮದುವೆಯೂ ಮುರಿದು ಬಿತ್ತು"

ಮಗಳಿಗೆ ತಂದೆನೂ ಇಲ್ಲ ಗಂಡನೂ ಇಲ್ಲ

ಮಗಳಿಗೆ ತಂದೆನೂ ಇಲ್ಲ ಗಂಡನೂ ಇಲ್ಲ

"ತಂದೆ ಇಲ್ಲ. ಗಂಡ ಇದಾನೆ ಅಂತ ಧೈರ್ಯ ಪಡುವಷ್ಟೊತ್ತಿಗೆ ಗಂಡನನ್ನು ಕಳೆದು ಕೊಂಡಳು. ಇದನ್ನೆಲ್ಲ ಹೇಗೆ ಫೇಸ್ ಮಾಡುತ್ತಾಳೆ ಎನ್ನುವುದು ಗೊತ್ತಿಲ್ಲ. ಇದು ನನಗೆ ದೊಡ್ಡ ಕೊರಗು ಕಾಡ್ತಿದೆ. ಜೀವನದಲ್ಲಿ ಇಬ್ಬರನ್ನು ಕಳೆದು ಕೊಂಡಳು. ನಾನು ತುಂಬ ಧೈರ್ಯ ಹೇಳುತ್ತೇನೆ. ಸೆಟ್ಲ್ ಆಗಲಿ ಅಂತ ಪ್ರಾರ್ಥನೆ ಮಾಡುತ್ತೀನಿ. ನಮ್ಮ ತಪ್ಪಿನಿಂದ ಆ ಮಗು ಕಷ್ಟದಲ್ಲಿ ಬಳಲುವಂತಾಗಿದೆ. ಈಗ ತಾಯಿ ಜೊತೆ ಇದಾಳೆ" ಎಂದು ಹೇಳುತ್ತಾ ಮೊದಲ ಪತ್ನಿ ಮತ್ತು ಮಗಳ ಬಗ್ಗೆ ಜೈ ಜಗದೀಶ್ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.

More from Filmibeat

English summary
annada senior actor Jai jagdish revealed First wife and first daughter in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X