DKD-Shivanna: ಡಿಕೆಡಿ ವೇದಿಕೆಯಲ್ಲೂ 'ಜೈಲರ್' ನರಸಿಂಹನದ್ದೇ ಹವಾ.. ಶಿವಣ್ಣನ ಖದರ್‌ಗೆ ನೋಡಲು ಬಂದ ಧ್ರುವ!

By ಎಸ್ ಸುಮಂತ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಇದೇ ತಿಂಗಳು ಅಂದ್ರೆ ಆಗಸ್ಟ್ 11 ರಂದು ರಿಲೀಸ್ ಆಗಿದೆ. ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ತೆರೆ ಕಂಡಿದೆ. ಈ‌ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ. ಶಿವಣ್ಣ ಪಾತ್ರ ಕೇವಲ 11 ನಿಮಿಷವಾದರೂ ಹೈಲೈಟ್ ಆಗಿದ್ದು ಮಾತ್ರ ಶಿವಣ್ಣನೇ. ಆ ಗತ್ತು, ಆ‌ ಖಡಕ್ ಡೈಲಾಗ್, ಆ ಲುಕ್ ವಾರೆ ವ್ಹಾ.. ಎಂಬಂತೆ ಇತ್ತು.

ಮಂಡ್ಯ ನೆಲದಲ್ಲಿ ನರಸಿಂಹನಾಗಿ ಎಂಟ್ರಿ ಕೊಡ್ತಾ ಇದ್ರೆ ಥಿಯೇಟರ್‌ನಲ್ಲೆಲ್ಲಾ ಶಿಳ್ಳೆ ಚಪ್ಪಾಳೆಯದ್ದೇ ಸದ್ದು. ಶಿವಣ್ಣನ ಎಂಟ್ರಿಗೆ ಎಲ್ಲರೂ ಫುಲ್‌ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಡಿಕೆಡಿ ವೇದಿಕೆಯಲ್ಲಿ‌ ನರಸಿಂಹನ ಅವತಾರವನ್ನು ರೀ-ಕ್ರಿಯೇಟ್ ಮಾಡಿದ್ದಾರೆ.

dkd-shivarajkumar-jailer-dhruva-sarja

ಡಿಕೆಡಿ ವೇದಿಕೆಯಲ್ಲಿ ಸ್ಪೆಷಲ್ ಗೆಸ್ಟ್

ಡಿಕೆಡಿ ವೇದಿಕೆಯಲ್ಲಿ ಶಿವಣ್ಣನ ಬಗೆಗಿರುವ ಗೌರವ, ಪ್ರೀತಿ, ಅಭಿಮಾನ ಆಗಾಗ ಅನಾವರಣವಾಗುತ್ತಲೇ ಇರುತ್ತದೆ. ಶಿವಣ್ಣ ಜೊತೆಗೆ ಕೆಲಸ‌ ಮಾಡುವುದೇ ನಮ್ಮೆಲ್ಲರ ಖುಷಿ ಅನ್ನೋ ಸಂತಸದಿಂದಾನೇ ಎಲ್ಲರೂ ಡಿಕೆಡಿಯಲ್ಲಿ ಕೆಲಸ‌ ಮಾಡುತ್ತಾರೆ. ಇದೀಗ ಡಿಕೆಡಿ ವೇದಿಕೆಗೆ ಸ್ಪೆಷಲ್ ಅಭಿಮಾನಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅವರೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಶಿವಣ್ಣ ಅಂತಾನೆ ಅಲ್ಲ ದೊಡ್ಮನೆಗೆ ಬರೀ ಸಾಮಾನ್ಯ ಜನರಷ್ಟೇ ಅಭಿಮಾನಿಗಳಲ್ಲ. ಇಂಡಸ್ಟ್ರಿಯಲ್ಲಿರುವವರು ದೊಡ್ಮನೆ ಬಗ್ಗೆ ಅಭಿಮಾನ, ಗೌರವ ಹೊಂದಿದ್ದಾರೆ. ಅದಕ್ಕೆ ಇಂದಿನ ದೃಶ್ಯವೇ ಸಾಕ್ಷಿ.

'ಜೈಲರ್' ಬಳಿಕ ಶಿವಣ್ಣ ಫುಲ್ ಟ್ರೆಂಡಿಂಗ್

ಆಂಕರ್ ಅನುಶ್ರೀ ಅಂತು 'ಜೈಲರ್' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಅದು ಅವರ ಪದದಲ್ಲಿಯೇ ಗೊತ್ತಾಗ್ತಾ ಇತ್ತು. ವೇದಿಕೆ ಮೇಲೆ ನಿಂತು 'ಜೈಲರ್' ರಿಲೀಸ್ ಆದಾಗಿನಿಂದ ಇಂದಿನವರೆಗೂ ಎಷ್ಟೆಲ್ಲಾ ಕ್ರೇಜ್ ಇದೆ ಅನ್ನೋದನ್ನ ಹೇಳಿದ್ರು. ಶಿವಣ್ಣನ ಎಂಟ್ರಿ ಬಗ್ಗೆ ಕರ್ನಾಟಕದಲ್ಲಿ ಹುಟ್ಟಿರುವ ಕ್ರೇಜ್ ಬಗ್ಗೆ ಕೊಂಡಾಡಿದ್ರು.

dkd-shivarajkumar-jailer-dhruva-sarja

ಡಿಕೆಡಿ ವೇದಿಕೆಯಲ್ಲೂ‌ ನರಸಿಂಹನದ್ದೇ ಹವಾ

ಆಂಕರ್ ಅನುಶ್ರೀ 'ಜೈಲರ್' ಸಿನಿಮಾದ ಬಗ್ಗೆ ಕೊಟ್ಟ ಇಂಟ್ರುಡಕ್ಷನ್ ಬಳಿಕ ಒಂದು ವಿಟಿ ಪ್ಲೇ ಆಗಿದೆ. ಅದರಲ್ಲಿ ತಮಿಳು, ತೆಲುಗು ಮಂದಿ ಕೂಡ ಶಿವಣ್ಣನ ನಟನೆ ಬಗ್ಗೆಯೇ ಹಾಡಿ‌ ಹೊಗಳಿದ್ದಾರೆ. ಶಿವಣ್ಣನ ಎಂಟ್ರಿಗೆ ಕನ್ನಡದವರು ಮಾತ್ರವಲ್ಲ, ಬೇರೆ ಭಾಷೆಯವರು ಥ್ರಿಲ್ ಆಗಿದ್ದಾರೆ. ಈ ವಿಟಿ ನೋಡಿದ ಬಳಿಕ ಡಿಕೆಡಿ ವೇದಿಕೆಯಲ್ಲಿದ್ದ ಸ್ಪರ್ಧಿಗಳು, ಜಡ್ಜ್‌ಗಳಿಗೂ ಒಂದು ರೀತಿಯ ಹೆಮ್ಮೆ ಎನಿಸಿದೆ. ಎಲ್ಲರೂ ಎದ್ದು ನಿಂತು ಶಿವಣ್ಣನಿಗೆ ಚಪ್ಪಾಳೆ ಹೊಡೆದಿದ್ದಾರೆ. ಇನ್ನು ಆ ಸಮಯದಲ್ಲಿ ಶಿವಣ್ಣ ಕಂಪ್ಲೀಟ್ ಮಗುವೇ ಆಗಿದ್ದರು. ಎಲ್ಲರಿಗೂ ಮಗುವಿನಂತೆಯೇ ಧನ್ಯವಾದ ಹೇಳಿದರು.

ಡಿಕೆಡಿ ವೇದಿಕೆ ಮೇಲೆ ಬಂದ್ರು ಜೈಲರ್ ನರಸಿಂಹ

ಡಿಕೆಡಿ ವೇದಿಕೆಯಲ್ಲಿ ಆಗಾಗ ಇತಿಹಾಸ ಸೃಷ್ಟಿಸಿದ ಪಾತ್ರಗಳು, ದೃಶ್ಯಗಳು ರಿಕ್ರಿಯೇಟ್ ಆಗ್ತಾನೆ ಇರುತ್ತವೆ. ಇನ್ನೂ ಜೈಲರ್ ಆಗದೆ ಇದ್ದರೆ ಹೇಗೆ. ಅಭಿಮಾನಿಗಳ ಒತ್ತಾಸೆಯ ಮೇರೆಗೆ ಜೈಲರ್ ನ ನರಸಿಂಹನ ಅವತಾರವನ್ನು ಶಿವಣ್ಣ ಮರುಸೃಷ್ಟಿ ಮಾಡಿದ್ದಾರೆ. ಆ‌ ಪಂಚೆ ತೊಟ್ಟು, ಧಮ್ ಎಳೆಯುತ್ತಾ, ಹೊಗೆ‌ ಬಿಡುತ್ತಾ, ಆಹಾ ಆ ಖಡಕ್ ಲುಕ್‌ನಲ್ಲಿ ಡಿಕೆಡಿ ವೇದಿಕೆ ಮೇಲೆ ಬರ್ತಾ ಇದ್ರೆ 'ಜೈಲರ್' ಸಿನಿಮಾ ಮತ್ತೊಮ್ಮೆ ಕಣ್ಣ ಮುಂದೆ ಬಂದಂತೆ ಆಗಿದೆ. ಹಾಗೆ‌ ಬಂದು ಚೇರ್ ಮೇಲೆ ಕೂತ ಶಿವಣ್ಣನಿಗೆ ಎಲ್ಲರಿಂದ ಚಪ್ಪಾಳೆಯ ಸುರಿಮಳೆ. 'ಜೈಲರ್‌' ಸಿನಿಮಾದಲ್ಲೂ ಶಿವಣ್ಣ ಮೊದಲಿಗೆ ಕನ್ನಡವನ್ನೇ ಮಾತಾಡಿರುವುದೇ ಕನ್ನಡಿಗರ ಹೃದಯಕ್ಕೆ ಹೆಚ್ಚು ನಾಟಿದೆ.

More from Filmibeat

English summary
Jailer Shivarajkumar role Narasimha recreate in DKD August 19th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X