ಕೊನೆಗೂ ಚಂಚಲ ನಿಶ್ಚಿತಾರ್ಥಕ್ಕೆ ಬಂದ ಜಾನಕಿ-ನಿರಂಜನ್
ಹೋಮ್ ಮಿನಿಸ್ಟರ್ ಭಾರ್ಗಿ ಅವರ ಮಗಳು ಜಾನಕಿ ಎಂದು ಗೊತ್ತಿಲ್ಲದೆ ಭಾರ್ಗಿಯನ್ನು ಭೇಟಿಯಾಗಿ ಮಗಳ ಜೊತೆ ಮಾತನಾಡಲು ಹೇಳುತ್ತಿದ್ದಾರೆ ನಿರಂಜನ್ ತಾಯಿ. ನಿರಂಜನ್ ಅಮ್ಮನ ಮಾತು ಕೇಳಿ ಜಾನಕಿ ಒಮ್ಮೆ ಶಾಕ್ ಆಗಿದ್ದಾರೆ.
ಭಾರ್ಗಿ ಮಗಳು ನಿರಂಜನ್ ಪತ್ನಿ. ಭಾರ್ಗಿ ಫೋನ್ ನಂಬರ್ ಕಲೆಕ್ಟ್ ಮಾಡಿ ಕೊಟ್ಟರೆ ಅವರ ಬಳಿ ಮಾತನಾಡುತ್ತೇನೆ ಎಂದು ನಿರಂಜನ್ ತಾಯಿ ಜಾನಕಿ ಬಳಿಯೆ ಕೇಳುತ್ತಿದ್ದಾರೆ. ಜಾನಕಿಗೆ ಭಾರ್ಗಿ ಫೋನ್ ನಂಬರ್ ತಂದು ಕೊಡುವಂತೆ ಒತ್ತಾಯಿಸಿದ ಅಮ್ಮನನ್ನು ನಿರಂಜನ್ ಮತ್ತು ಮಗಳು ಸಂಜನಾ ಸಮಾಧಾನ ಮಾಡಿ ಹೊರಟು ಹೋಗುತ್ತಾರೆ.
ಜಾನಕಿ ಮತ್ತು ನಿರಂಜನ್ ಇಬ್ಬರು ಚಂಚಲ ನಿಶ್ಚಿತಾರ್ಥಕ್ಕೆ ಹೊರಟಿದ್ದಾರೆ. ಭಾರ್ಗಿ ಎಷ್ಟೆ ಅವಮಾನ ಮಾಡಿದ್ರು ಚಂಚಲಗೋಸ್ಕರ ಇಬ್ಬರು ನಿಶ್ಚಿತಾರ್ಥಕ್ಕೆ ಹೊರಟಿದ್ದಾರೆ. ಮನೆಗೆ ಹೋದ ಜಾನಕಿಗೆ ಹೇಗೆ ಸ್ವಾಗತ ಸಿಕ್ತು? ಭಾರ್ಗಿ ಪ್ರತಿಕ್ರಿಯೆ ಹೇಗಿತ್ತು? ಮುಂದೆ ಓದಿ..

ಭಾರ್ಗಿ ಮನೆಗೆ ಬಂದ ಜಾನಕಿ-ನಿರಂಜನ್
ಮನೆಗೆ ಬಂದ ಜಾನಕಿಯನ್ನು ಹಾಡಿಹೊಗಳಿದ ಸಂಬಂಧಿಕರು. ಜಾನಕಿಯನ್ನು ಹೊಗಳಿದ್ದನ್ನು ದೂರದಿಂದನೆ ನೋಡುತ್ತಿದ್ದರು ಭಾರ್ಗಿ. ಮಗಳನ್ನು ನೋಡಿ ಒಂದು ಕ್ಷಣ ಮಾತನಾಡಿಸದೆ ಸುಮ್ಮನಾಗಿ ನಂತರ ರಶ್ಮಿ ಅವರು ಹೇಳಿದ ಮೇಲೆ ಭಾರ್ಗಿ ಕಾರಿನಲ್ಲಿ ಬರಬಹುದಿತ್ತು, ದುಡ್ಡು ಕೊಡುತ್ತಿದ್ದೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಆದ್ರೆ ನಿರಂಜನ ಮತ್ತು ಜಾನಕಿ ಇಬ್ಬರು ಭಾರ್ಗಿ ಆಟೋದಲ್ಲಿ ಬರಬಹುದು ಇದರಿಂದ ಏನು ತಪ್ಪಿಲ್ಲ ಎಂದು ಹೇಳಿ ಸುಮ್ಮನಾಗಿದ್ದಾರೆ.

ಅಕ್ಕನ ನೋಡಿದ ಖುಷಿಯಲ್ಲಿ ಚಂಚಲ
ಚಂಚಲ ನಿಶ್ಚಿತಾರ್ಥಕ್ಕೆ ಜಾನಕಿ ಮತ್ತು ಭಾವ ನಿರಂಜನ್ ಇಬ್ಬರು ಬಂದಿದ್ದನ್ನು ನೋಡಿ ಚಂಚಲ ಖುಷಿಯಲ್ಲಿ ತೇಲುತ್ತಿದ್ದಾಳೆ. ಆದ್ರೆ ಇದರ ನಡುವೆಯು ನಿರಂಜನ್ ಮತ್ತು ಜಾನಕಿಯನ್ನು ನೋಡಿ ವ್ಯಂಗವಾಡುತ್ತಿದ್ದಾರೆ ಭಾರ್ಗಿ. ಆಟೋದಲ್ಲಿ ಬಂದಿದ್ದನ್ನು ನೋಡಿ ಭಾರ್ಗಿ ಮತ್ತಷ್ಟು ಸಿಟ್ಟಾಗಿದ್ದಾರೆ. ಇದರಿಂದ ಅವಮಾನ ಆಗಿದೆ ಎಂದು ಭಾರ್ಗಿ ರಶ್ಮಿ ಬಳಿ ಹೇಳಿಕೊಂಡು ರೇಗಿದ್ದಾರೆ.

ಅಪ್ಪನ ಮೇಲೆ ಕೋಪ ಮಾಡಿಕೊಳ್ಳಬೇಡ
ರಶ್ಮಿ ಅವರು ಮಗಳು ಜಾನಕಿಗೆ ಕೋಪ ಮಾಡಿಕೊಳ್ಳಬೇಡ ಎಂದು ಸಮಾಧಾನ ಮಾಡುತ್ತಿದ್ದಾರೆ. ಅಲ್ಲದೆ ಕೆಲಸದ ವಿಚಾರಗಳನ್ನು ಮಾತನಾಡದ್ದಂತೆ ರಶ್ಮಿ ಅವರು ಪತಿ ಮತ್ತು ಮಗಳು ಜಾನಕಿ ಇಬ್ಬರಿಗೂ ಹೇಳಿದ್ದಾರೆ. ಆದ್ರೆ ಜಾನಕಿಗೆ ಮಾತ್ರ ತಂಗಿಯನ್ನು ಕ್ರಿಮಿನಲ್ ಚಿರಂತನ್ ಗೆ ಕೊಡಲು ಮನಸಾಗುತ್ತಿಲ್ಲ. ಆತ ಕ್ರಿಮಿನಲ್ ಅಲ್ಲ ಎಂದು ಭಾರ್ಗಿ ಅವರು ಎಲ್ಲಾ ವಿಚಾರಿಸಿದ್ದಾರೆ ಎಂದು ರಶ್ಮಿ ಮತ್ತೊಮ್ಮೆ ಹೇಳಿ ಜಾನಕಿಯನ್ನು ಸಮಾಧಾನ ಪಡಿಸಿದ್ದಾರೆ. ನಿಶ್ಚಿತಾರ್ಥದಲ್ಲಿ ನಗುನಗುತ ಇರಲು ಜಾನಕಿಯನ್ನು ರಶ್ಮಿ ಕೇಳಿಕೊಂಡಿದ್ದಾರೆ.

ಭಾರ್ಗಿ ಬಳಿ ಆತಂಕ ಹೇಳಿಕೊಂಡ ರಶ್ಮಿ
ಚಿರಂತನ್ ಮನೆಯವರು ಯಾರು ಬಂದಿಲ್ಲ. ಆದ್ರೆ ಚಿರಂತನ್ ಒಬ್ಬನೆ ಹಸೆಮಣೆ ಮೇಲೆ ಕೂತರೆ ಎಲ್ಲರು ಬೇರೆ ರೀತಿಯೆ ಅರ್ಥಮಾಡಿಕೊಳ್ಳುತ್ತಾರೆ. ಚಂಚಲನೆ ಚಿರಂತನ್ ಅನ್ನು ಮನೆಯಿಂದ ದೂರ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಹಾಗಾಗಿ ರಾಜು ಚೌಧರಿಯನ್ನು ನೀವೆ ಒಪ್ಪಿಸಿ ಎಂದು ಭಾರ್ಗಿ ಅವರಲ್ಲಿ ಕೇಳಿಕೊಳ್ಳುತ್ತಿದ್ದಾರೆ ರಶ್ಮಿ. ಆದ್ರೆ ಭಾರ್ಗಿ ನಾನೇನು ಮಾಡೋಕೆ ಅಗಲ್ಲ. ಅವರಿಗೆ ಅಹಂಕಾರ ಜಾಸ್ತಿ ಎಂದು ಹೇಳಿ ರಶ್ಮಿ ಅವರ ಬಾಯಿ ಮುಚ್ಚಿಸಿದ್ದಾರೆ.

ಜಾನಕಿ ಮುಂದೆ ಡ್ರಾಮಾ ಮಾಡಿದ ಭಾರ್ಗಿ
ಜಾನಕಿಗೆ ಚಂಚಲ ಕಂಡ್ರೆ ಪ್ರಾಣ. ಆದ್ರೆ ಬರಲ್ಲ ಅಂತ ಯಾಕೆ ಹೇಳಿದಿಯಾ ಜಾನಕಿ. ನೀನು ಬರಲ್ಲ ಅಂತ ಭಾರಿ ಬೇಸರ ಆಗಿತ್ತು ಎಂದು ಜಾನಕಿ ಮುಂದೆ ನಾಟಕೀಯವಾಗಿ ಮಾತನಾಡುತ್ತಿದ್ದಾರೆ ಭಾರ್ಗಿ. ಆದ್ರೆ ಚಂಚಲ ಅಕ್ಕ ಬಂದಾಗಲೆಲ್ಲ ಜಗಳ ಆಡುತ್ತೀರಾ ಹಾಗಾಗಿ ಅಕ್ಕ ಬರಲ್ಲ ಎಂದು ಹೇಳಿದ್ದು ಎಂದು ಸತ್ಯ ಹೇಳುತ್ತಾಳೆ. ಈ ರೀತಿಯ ಜಗಳ ಆಡಿದ್ರೆ ಅಕ್ಕನ ಸ್ವಾಭಿಮಾನಿಕ್ಕೆ ನೋವಾಗುತ್ತೆ ಎಂದು ಚಂಚಲ ಅಪ್ಪನಿಗೆ ಹೇಳಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದೆ ಜಾನಕಿ ಮತ್ತು ನಿರಂಜನ್ ಅನ್ನು ಮತ್ತಷ್ಟು ವ್ಯಂಗ್ಯವಾಗಿ ಮಾತನಾಡಿ ಜಾನಕಿಯನ್ನು ನೋವಿಸಿದ್ದಾರೆ ಬಾರ್ಗಿ.


Click it and Unblock the Notifications











