ನಿರಂಜನ್ ಪತ್ನಿ ಜಾನಕಿ ಎನ್ನುವ ವಿಚಾರ ಮನೆಯವರಿಗೆ ಗೊತ್ತಾಗಿಬಿಡುತ್ತಾ?

ಚಂಚಲ ನಿಶ್ಚಿತಾರ್ಥದ ಸಂಭ್ರಮದಲ್ಲಿ ನಿರಂಜನ್ ಕೋಟಿನ ವಿಚಾರ ಭಾರಿ ಸಮಸ್ಯೆಯಾಗಿತ್ತು. ಬಟನ್ ಕಿತ್ತುಹೋದ ಕೋಟು ಧರಿಸಿದ್ದ ನಿರಂಜನ್ ನಿಂದ ಭಾರ್ಗಿ ಅವರ ಮರ್ಯಾದೆ ಎಲ್ಲರ ಮುಂದೆ ಹರಾಜಾಗುತ್ತಿತ್ತು. ಆದ್ರೆ ರಶ್ಮಿ ಮತ್ತು ಚಂಚಲ ಇಬ್ಬರು ನಿರಂಜನ್ ಗೆ ಹೊಸ ಕೋಟು ಕೊಡುವ ಮೂಲಕ ಕೋಟಿನ ಸಮಸ್ಯೆಗೆ ಬ್ರೇಕ್ ಹಾಕುವ ಜೊತೆಗೆ ಭಾರ್ಗಿ ಅವರ ಮರ್ಯಾದೆ ಕೂಡ ಕಾಪಾಡಿದ್ದಾರೆ.

ಮತ್ತೊಂದೆಡೆ ಜಾನಕಿಗೆ ಇಷ್ಟವಿಲ್ಲದಿದ್ದರು ತಂಗಿಗಾಗಿ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಒಂದೆಡೆ ಚಿರಂತನ್ ಬಗ್ಗೆ ಜಾನಕಿಗೆ ಅಸಮಾಧಾನ ಮತ್ತು ಬಾರ್ಗಿ ಅವರ ಅವಮಾನ ಎಲ್ಲವನ್ನು ಸಹಿಸಿಕೊಂಡು ಜಾನಕಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ನೀಲಿ ಬಣ್ಣದ ಸೀರೆಯಲ್ಲಿ ಮದುಮಗಳು ಚಂಚಲ ಮಿಂಚಿದ್ದಾರೆ. ಬಿಳಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಚಿರಂತನ್ ಕಾಣಿಸಿಕೊಂಡಿದ್ದಾರೆ. ಕೊನೆಗು ನಿಶ್ಚಿತಾರ್ಥದಲ್ಲಿ ಮೀರಾ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಫೋಟೋದಿಂದ ತಪ್ಪಿಸಿಕೊಳ್ಳಲು ಜಾನಕಿ ಹರ ಸಾಹಸ ಪಡುತ್ತಿದ್ದಾರೆ.

ನಿರಂಜನ್ ಟೋಪಿ ಗಿರಾಕಿ

ನಿರಂಜನ್ ಟೋಪಿ ಗಿರಾಕಿ

ಸುಂದರ್ ಮೂರ್ತಿ ಮನೆಯಲ್ಲಿ ಆರಾಮಾಗಿ ಭಾರ್ಗಿ ಮಗಳ ನಿಶ್ಚಿತಾರ್ಥ ಟಿವಿಯಲ್ಲಿ ನೋಡುತ್ತ ಕುಳಿತಿದ್ದಾರೆ. ಜಾನಕಿ ಮತ್ತು ನಿಂರಜನ್ ಅನ್ನು ಟಿವಿಯಲ್ಲಿ ನೋಡಿದ ಸುಂದರ್ ಮೂರ್ತಿಗೆ ಶಾಕ್ ಆಗಿದೆ. ಭಾರ್ಗಿ ಅವರ ಮಗಳು ಜಾನಕಿ ಎನ್ನುವ ವಿಚಾರ ಸುಂದರ್ ಮೂರ್ತಿಗೆ ಗೊತ್ತಿರಲಿಲ್ಲ. ಶಾಮಲಾ ಹೇಳಿದ ಮೇಲೆ ಗೊತ್ತಾಗಿದೆ. ಆದ್ರೆ ನಿರಂಜನ್ ಟೋಪಿ ಗಿರಾಕಿ ಅಂತೆ ಹೌದ ಅಂತ ಶಾಮಲಾ ಬಳಿ ಕೇಳಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ನಿಮ್ಮಗಿಂತ ದೊಡ್ಡ ಟೋಪಿ ಗಿರಾಕಿ ಏನು ಅಲ್ಲ. ನಿಮ್ಮನ್ನ ನಾನೂ ಮದುವೆ ಆಗಿಲ್ಲವಾ ಎಂದು ಹೇಳಿ ಸುಂದರ್ ಮೂರ್ತಿ ಬಾಯಿ ಮುಚ್ಚಿಸಿದ್ದಾರೆ.

ಜಾನಕಿಗೆ ನಿರಂಜನ್ ಸಮಾಧಾನ

ಜಾನಕಿಗೆ ನಿರಂಜನ್ ಸಮಾಧಾನ

ಅವಮಾನಗಳನ್ನು ಸಹಿಸಕೊಳ್ಳ ಬೇಕಾಗುತ್ತೆ ಎಂದು ಜಾನಕಿಗೆ ಸಮಾಧಾನ ಮಾಡುತ್ತಿದ್ದಾರೆ ಜಾನಕಿ. ನಿಶ್ಚಿತಾರ್ಥದಿಂದ ಹೊರಟು ಹೋದರೆ ಭಾರ್ಗಿಗೆ ಸಂತೋಷ ಆಗುತ್ತೆ. ಆದ್ರೆ ತಾಯಿ ರಶ್ಮಿ ಅವರಿಗೆ ಬೇಸರ ಆಗುತ್ತೆ. ಆದ್ರೆ ಮನೆ ಮಗಳಾಗಿ ಇರಬೇಕು, ಒಮ್ಮೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋದರೆ ಸಂಬಂಧಗಳು ನಾಶ ಆಗುತ್ತೆ. ಮುಂದೆ ಯಾವತ್ತು ಅಮ್ಮನ ಬಳಿ ಮಾತನಾಡಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಸಹಿಸಿಕೊಂಡು ಇರುವಂತೆ ಜಾನಕಿಗೆ ಹೇಳುತ್ತಿದ್ದಾರೆ ನಿರಂಜನ್.

ನಿಶ್ಚಿತಾರ್ಥಕ್ಕೆ ಬಂದ ಮಧುಕರ

ನಿಶ್ಚಿತಾರ್ಥಕ್ಕೆ ಬಂದ ಮಧುಕರ

ಮಧುಕರ ನಿಶ್ಚಿತಾರ್ಥಕ್ಕೆ ಬಂದು ಜಾನಕಿಯ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾರೆ. ಮಧುಕರನ ವರ್ತನೆ ನೋಡಿ ಜಾನಕಿ ನೇರವಾಗಿ ಬಂದು ಮಾತನಾಡಿದ್ದಾರೆ. ಅಪ್ಪನಿಗೆ ನೋವಾಗುತ್ತೆ ಅಂತ ಗೊತ್ತಿದ್ದರು ಯಾಕೆ ಬಂದಿದ್ದೀಯಾ ಎಂದು ಮಧುಕರನನ್ನು ಕೇಳಿದ್ದಾರೆ. ಸಿ ಎಸ್ ಪಿ ಅವರಿಗೆ ಹೇಗಾದರು ಗೊತ್ತಾಗುತ್ತೆ. ಗೊತ್ತಾದ್ರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಜಾನಕಿ ಹೇಳಿದ್ರೆ. ಮಧುಕರ ಮಾತ್ರ ರಶ್ಮಿ ಅವರನ್ನು ನೋಡಿದ್ರೆ ತಾಯಿಯನ್ನು ನೋಡಿದ ಹಾಗೆ ಆಗುತ್ತೆ, ತುಂಬ ಒತ್ತಾಯ ಮಾಡಿದ್ರು ಹಾಗಾಗಿ ಬಂದೆ ಎಂದು ಹೇಳಿ ನಿಶ್ಚಿತಾರ್ಥ ಸಮಾರಂಭದಲ್ಲಿ ಬಾಗಿಯಾಗಿದ್ದಾರೆ.

ಫ್ಯಾಮಿಲಿ ಫೋಟೋದಿಂದ ಜಾನಕಿ ಮಾಯ

ಫ್ಯಾಮಿಲಿ ಫೋಟೋದಿಂದ ಜಾನಕಿ ಮಾಯ

ಫ್ಯಾಮಿಲಿ ಫೋಟೋ ತೆಗೆಸಿಕೊಳ್ಳಲು ಎಲ್ಲರು ಒತ್ತಾಯ ಮಾಡುತ್ತಿದ್ದಾರೆ. ಆದ್ರೆ ಜಾನಕಿ ಮತ್ತು ನಿರಂಜನ್ ಗೆ ಆತಂಕ ಶುರುವಾಗಿದೆ. ಹೋಮ್ ಮಿನಿಸ್ಟರ್ ಮನೆಯ ಫ್ಯಾಮಿಲಿ ಪೋಟೋ ಅಂದ್ಮೇಲೆ ವೈರಲ್ ಆಗುತ್ತೆ. ಆಗ ನಿರಂಜನ್ ಮನೆಯವರಿಗೆ ಗೊತ್ತಾಗುತ್ತೆ ಎಂದು ಜಾನಕಿ ತಪ್ಪಿಸಿಕೊಳ್ಳುವ ಪ್ಲಾನ್ ಮಾಡುತ್ತಿದ್ದಿದ್ದಾರೆ. ಫೋಟೋಯಿಂದ ತಪ್ಪಿಸಿಕೊಳ್ಳಲು ಡಿ ವೈ ಎಸ್ ಪಿ ಅವರೆ ಕಾಣೆ ಆಗಿದ್ದಾರೆ.

ಜಾನಕಿಗೆ ಬೇಸರ ಮಾಡಿದ್ದೀರ ಎಂದ ರಶ್ಮಿ

ಜಾನಕಿಗೆ ಬೇಸರ ಮಾಡಿದ್ದೀರ ಎಂದ ರಶ್ಮಿ

ರಶ್ಮಿ ಅವರು ಭಾರ್ಗಿ ಬಳಿ ಬಂದು ಜಾನಕಿ ಕಾಣುತ್ತಿಲ್ಲ ಎಂದು ಗಾಬರಿಯಿಂದ ಹೇಳುತ್ತಿದ್ದಾರೆ. ಅವಮಾನ ಮಾಡಿದ್ದರಿಂದನೆ ಜಾನಕಿ ಮನೆ ಬಿಟ್ಟುಹೋಗಿದ್ದಾರೆ ಎಂದು ರಶ್ಮಿ, ಭಾರ್ಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ ಭಾರ್ಗಿ ಜಾನಕಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಫ್ಯಾಮಿಲಿ ಫೋಟೋದಲ್ಲಿ ಜಾನಕಿ ಇಲ್ಲ ಅಂದ್ರೆ ಏನು ಆಗಲ್ಲ, ಅವಳೇನು ಬೇಕಾಗಿಲ್ಲ ಎಂದು ಹೇಳಿ ಜಾನಕಿ ಇಲ್ಲದೆ ಫ್ಯಾಮಿಲಿ ಫೋಟೋ ತೆಗೆಸಿಕೊಂಡಿದ್ದಾರೆ ಭಾರ್ಗಿ.

More from Filmibeat

English summary
Janaki and Niranan are going to take a family picture Chanchala engagement ceremony. Janaki worried about as it will be published in newspapers and Niranjan's family will learn about her true identity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X