ಜಾನಕಿ ಇಲ್ಲದೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾಳಾ ಚಂಚಲ?
ಜಾನಕಿ ಈಗ ಭಾರ್ಗಿಗೆ ದೊಡ್ಡ ವಿಲನ್ ಆಗಿ ಕಾಣಿಸುತ್ತಿದ್ದಾರೆ. ಚಿರಂತನ್ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಹೇಳಿದ ಜಾನಕಿಯೆ ಈಗ ಕೆಟ್ಟವರಾಗಿದ್ದಾರೆ.. ಜಾನಕಿಯಿಂದನೆ ಮನೆಯ ನೆಮ್ಮದಿ ಕೂಡ ಹಾಳಾಗುತ್ತಿದೆ ಎಂದು ಭಾರ್ಗಿ ನೇರವಾಗಿ ಹೇಳಿದ್ದಾರೆ.
ಅಷ್ಟೆಯಲ್ಲ ಚಂಚಲ ಮಾಜಿ ಹೋಮ್ ಮಿನಿಸ್ಟರ್ ಮಗನನ್ನು ಮದುವೆಯಾಗುತ್ತಿರುವುದು ಜಾನಕಿಗೆ ಹೊಟ್ಟೆಕಿಚ್ಚಾಗಿದೆ, ಹಾಗಾಗಿಯೆ ಮದುವೆ ನಿಲ್ಲಿಸುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಭಾರ್ಗಿ ಚಂಚಲಬಳಿ ಹೇಳಿದ್ದಲ್ಲದೆ ನೇರವಾಗಿ ಜಾನಕಿ ಬಳಿಯೆ ಹೇಳಿ ಜಾನಕಿಯನ್ನು ಮತ್ತಷ್ಟು ನೋವಿಸಿದ್ದಾರೆ.
ಭಾರ್ಗಿ ಮಾತಿನಿದ ತೀವ್ರ ಆಘಾತಕ್ಕೆ ಒಳಗಾಗಿರುವ ಜಾನಕಿ ಸೀದಾ ಸಿ ಎಸ್ ಪಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ನಡೆದ ಎಲ್ಲಾ ವಿಚಾರವನ್ನು ಹೇಳಿದ್ದಾರೆ. ಜಾನಕಿ ನಿಶ್ಚಿತಾರ್ಥಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಜಾನಕಿ ಬಂದಿಲ್ಲ ಅಂದ್ರೆ ಚಂಚಲ ನಿಶ್ಚಿತಾರ್ಥನೆ ಬೇಡ ಎಂದು ಹೇಳಿದ್ದಾಳೆ. ಮುಂದೆ ಓದಿ..

ಸಿ ಎಸ್ ಪಿ ಮನೆಯಲ್ಲಿ ಜಾನಕಿ
ಜಾನಕಿ ಮನೆಯಲ್ಲಿ ನಡೆದ ವಿಚಾರವನ್ನು ಸಿ ಎಸ್ ಪಿ ಅವರಿಗೆ ಎಲ್ಲವನ್ನು ಹೇಳಿದ್ದಾರೆ. ಚಿರಂತನ್ ಗೆ ಕ್ರಿಮಿನಲ್ ಬ್ಯಾಗ್ರೌಂಡ್ ಇದೆ ಸಿ ಎಸ್ ಪಿ ಹೇಳಿದ್ದಾರೆ ಎಂದು ಯಾಕೆ ಹೇಳಿದ್ರಿ ಎಂದು ಜಾನಕಿಯನ್ನು ಪ್ರಶ್ನೆಮಾಡಿದ್ದಾರೆ ಸಿ ಎಸ್ ಪಿ. ಮೊದಲ ಭಾರ್ಗಿ ಮತ್ತು ಸಿ ಎಸ್ ಪಿಗೆ ಆಗುವುದಿಲ್ಲ ಎನ್ನುವುದು ಗೊತ್ತು. ಆದ್ರೆ ನನ್ನ ಹೆಸರನ್ನು ಹೇಳಿರುವುದರಿಂದ ಭಾರ್ಗಿ ನಂಬುವುದಿಲ್ಲ. ಆದ್ರೆ ಚಂಚಲ ಬದುಕು ಹಾಳಾಗಿ ಹೋಗುತ್ತಿದೆ ಎಂದು ಸಿ ಎಸ್ ಪಿ ಹೇಳಿದ್ದಾರೆ.
ಜಾನಕಿ ವಿರುದ್ಧವೇ ದ್ವೇಷ ಬೆಳೆಸಿಕೊಳ್ಳುತ್ತಾಳಾ ಮುದ್ದು ತಂಗಿ ಚಂಚಲ

ನೀವೆ ದಾರಿ ತೋರಿಸಬೇಕು ಎಂದ ಜಾನಕಿ
ಕ್ರಿಮಿನಲ್ ಜೊತೆ ಚಂಚಲ ಮದುವೆ ಆಗುವುದು ಜಾನಕಿಗೆ ಕಿಂಚಿತ್ತು ಇಷ್ಟವಿಲ್ಲ. ಆದ್ರೆ ಹೇಗಾದ್ರು ಮಾಡಿ ಮದುವೆಯನ್ನು ತಡೆಯಬೇಕೆಂದು ನೀವೆ ದಾರಿ ತೋರಿ ಎಂದು ಸಿ ಎಸ್ ಪಿ ಬಳಿ ಬೇಡಿಕೊಳ್ಳುತ್ತಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ಮದುವೆಗೆ ಇನ್ನು ಸಮಯವಿದೆ ಆಷ್ಟರಲ್ಲಿ ಚಂಚಲಗೆ ಚಿರಂತನ್ ಬಗ್ಗೆ ಎಲ್ಲಾ ಸತ್ಯ ಗೊತ್ತಾದರು ಆಗಬಹುದು. ಆದ್ರೆ ಚಂಚಲ ಅಥವಾ ಮನೆಯವರ ಬಳಿ ಚಿರಂತನ್ ವಿರುದ್ಧ ಹೆಚ್ಚು ಮಾತನಾಡ ಬೇಡವೆಂದು ಸಿಎಸ್ ಪಿ ಜಾನಕಿಗೆ ಕಿವಿ ಮಾತು ಹೇಳಿದ್ದಾರೆ.

ನಿಶ್ಚಿತಾರ್ಥಕ್ಕೆ ಹೋಗದಿರಲು ಜಾನಕಿ ನಿರ್ಧಾರ
ಚಂಚಲ ನಿಶ್ಚಿತಾರ್ಥಕ್ಕೆ ಜಾನಕಿ ಹೋಗದೆ ಇರಲು ನಿರ್ಧಾರ ಮಾಡಿದ್ದಾರೆ. ಭಾರ್ಗಿ ಹೇಳಿದ ಮಾತಿನಿಂದ ಬೇಸರಗೊಂಡಿರುವ ಜಾನಕಿ ನಿಶ್ಚಿತಾರ್ಥಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ತಾಯಿ ರಶ್ಮಿ ಅವರು ವಿಚಾರಿಸಿದಾಗ ಜಾನಕಿ ಬರುವುದಿಲ್ಲ ಎಂದು ಹೇಳಿದ್ದಾರೆ. ಮನೆಯ ನೆಮ್ಮದಿ ಹಾಳಾಗುವುದು ಇಷ್ಟವಿಲ್ಲ. ಮತ್ತೆ ಭಾರ್ಗಿ ಜೊತೆ ಮಾತುಕತೆಯಾಗುವ ಸಾಧ್ಯತೆ ಇದೆ. ಹಾಗಾಗಿ ಬರಲ್ಲ ಎಂದು ರಶ್ಮಿ ಬಳಿ ಹೇಳಿದ್ದಾರೆ.

ಚಂಚಲ ಮದುವೆಗೆ ಆಸ್ಪತ್ರೆ ಗಿಫ್ಟ್
ಚಂಚಲ ಮದುವೆಗೆ ಭಾರ್ಗಿ ಆಸ್ಪತ್ರೆಯನ್ನು ಗಿಫ್ಟ್ ಆಗಿ ನೀಡುತ್ತಿದ್ದಾರೆ. ಈಗಾಗಲೆ ಆಸ್ಪತ್ರೆ ಕಾರ್ಯಗಳು ಬರದಿಂದ ನಡೆಯುತ್ತಿದೆ. ಆಸ್ಪತ್ರೆ ಉದ್ಘಾಟನೆಗೆ ದೊಡ್ಡ ರಾಜಕಾರಣಿಗಳನ್ನು ಕರೆಯುವ ಪ್ಲಾನ್ ಮಾಡಿದ್ದಾರೆ ಬಾರ್ಗಿ. ಚಂಚಲ ಮದುವೆ ಒಳಗೆ ಎಲ್ಲಾ ಕೆಲಸಗಳು ಮುಗಿಯಬೇಕು, ಎಲ್ಲಾ ಕೆಲಸಗಳನ್ನು ನೀನೆ ನೋಡಿಕೊಳ್ಳಬೇಕೆಂದು ಭಾರ್ಗಿ ಚಂಚಲಗೆ ಹೇಳಿದ್ದಾರೆ.

ಅಕ್ಕ ಇಲ್ಲದ ನಿಶ್ಚಿತಾರ್ಥ ಬೇಡ
ರಶ್ಮಿ ಭಾರ್ಗಿ ಜಾನಕಿಗೆ ಪೋನ್ ಮಾಡಿ ಕೇಳಿದಾಗ ನಿಶ್ಚಿತಾರ್ಥಕ್ಕೆ ಬರಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಅಕ್ಕ ನಿಶ್ಚಿತಾರ್ಥಕ್ಕೆ ಬರಲ್ಲ ಎನ್ನುವ ಸಂಗತಿ ಚಂಚಲಗೆ ಗೊತ್ತಾಗಿದೆ. ಅಕ್ಕನ್ನು ತುಂಬ ಇಷ್ಟ ಪಡುವ ಚಂಚಲಗೆ ಅಕ್ಕ ಇಲ್ಲದ ನಿಶ್ಚಿತಾರ್ಥ ಬೇಡ ಎಂದು ಅಪ್ಪನ ಬಳಿ ಹೇಳಿದ್ದಾಳೆ. ಆದ್ರೆ ಭಾರ್ಗಿ ಅವಳು ಬರದಿದ್ರೆ ಏನು ನಡೆಯುವುದೇ ಇಲ್ಲವಾ, ಜಾನಕಿ ಬರದಿದ್ರು ಈ ನಿಶ್ಚಿತಾರ್ಥ ನಡೆಯುತ್ತೆ ಎಂದು ರಶ್ಮಿ ಬಳಿ ಸವಾಲ್ ಹಾಕಿದ್ದಾರೆ.


Click it and Unblock the Notifications











