ಮಗಳು ಜಾನಕಿಯಿಂದ ಸಿ ಎಸ್ ಪಿಗೆ ಸಿಕ್ತು ಒಲವಿನ ಉಡುಗೊರೆ
ಶಾಂತರಾಜು ಅವರನ್ನು ಅವಮಾನ ಮಾಡಿದ್ರು ಅಂತ ಜಾನಕಿ ಮೇಲೆ ರೇಗಾಡಿದ ನಿರಂಜನ್ ಸಹೋದರಿ ಸಂಜನಾ. ಶಾಂತರಾಜು ಕೊಲೆ ಮಾಡಿಲ್ಲ ಆದ್ರೆ ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎನ್ನುವ ಸತ್ಯ ಅವರ ಮನೆಯವರಿಗೆ ಗೊತ್ತಿದೆ.
ಅಷ್ಟೆಯಲ್ಲ ಶಾಂತರಾಜು ಕೊಲೆ ಮಾಡಿಲ್ಲ ಎಂದು ಜಾನಕಿ ಕೂಡ ನಿರಂಜನ್ ಅಕ್ಕ ಸಂಜನಾ ಅವರಿಗೆ ಹೇಳಿದ್ದಾರೆ. ಶಾಂತರಾಜು ಕೊಲೆಮಾಡಿದ್ದಾರಾ ಎನ್ನುವ ಸತ್ಯವನ್ನು ಜಾನಕಿ ಭೇದಿಸುತ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ.
ಮತ್ತೊಂದೆಡೆ ಚಂಚಲ ಮದುವೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಭಾರ್ಗಿ ಅಧಿಕಾರದ ಆಸೆಗೆ ಎರಡನೆ ಮಗಳ ಬದುಕನ್ನು ಹಾಳುಮಾಡ್ತಾರಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಕಾಡುತ್ತಿದೆ. ಇದೆಲ್ಲರ ನಡುವೆ ಜಾನಕಿ ಮತ್ತು ಸಿ ಎಸ್ ಪಿ ಮನೆಯವರ ಭಾವನಾತ್ಮಕ ಸಂಚಿಕೆ ನೋಡುಗರನ್ನು ಭಾವುಕತೆಗೆ ತಳ್ಳಿದೆ. ಮುಂದೆ ಓದಿ.

ಸಿ ಎಸ್ ಪಿ ಮನೆಯಲ್ಲಿ ಜಾನಕಿ
ಜಾನಕಿ ಪೊಲೀಸ್ ಆಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳಾಗಿದೆ. ಮೊದಲ ತಿಂಗಳ ಸಂಬಳದಲ್ಲಿ ಜಾನಕಿ ಶ್ಯಾಮಲತ್ತೆ ಮತ್ತು ಅವರ ಪತಿಗೆ ಬಟ್ಟೆಯನ್ನು ಉಡುಗೊರೆಯಾಗಿ ತಂದು ನೀಡಿದ್ದಾರೆ. ಶ್ಯಾಮಲತ್ತೆ ಬಳಿ ಸಿ ಎಸ್ ಪಿ ಕೊಟ್ಟ 50ಸಾವಿರ ಹಣವನ್ನು ನೆನಸಿಕೊಂಡು ಭಾವುಕರಾಗಿದ್ರು. ಮನೆಗೆ ಹೋಗಲಾರದೆ ತಾಯಿ ರಶ್ಮಿ ಅವರಿಗೆ ಸೀರೆಯನ್ನು ಕೊರಿಯರ್ ಮಾಡಿದ ಬೇಸರವನ್ನು ಶ್ಯಾಮಲತ್ತೆ ಬಳಿ ಹೇಳಿಕೊಂಡಿದ್ದಾರೆ ಜಾನಕಿ.

ಭಾರ್ಗಿ ದ್ವೇಷದ ಬಗ್ಗೆ ಹೇಳಿಕೊಂಡ ಜಾನಕಿ
ಭಾರ್ಗಿಯವರಿಗೆ ಸಿ ಎಸ್ ಪಿ ಕಂಡ್ರೆ ಯಾಕೆ ಆಗಲ್ಲ ಎನ್ನುವ ಸತ್ಯ ಜಾನಕಿಗೆ ಇನ್ನು ಗೊತ್ತಿಲ್ಲ. ಸಿ ಎಸ್ ಪಿ ಬಳಿಯೆ ನೀವು ತುಂಬಾ ಒಳ್ಳೆಯವರು, ಆದ್ರೆ ಯಾಕೆ ಭಾರ್ಗಿಗೆ ಆಗಲ್ಲ ಎನ್ನುವುದನ್ನು ಸಿ ಎಸ್ ಪಿ ಬಳಿ ಚರ್ಚಿಸಿದ್ದಾರೆ. ಆ ದುಃಖದ ನಡುವೆಯೂ ಜಾನಕಿ ಸಿ ಎಸ್ ಪಿ ಅವರಿಗೆ ಪ್ರೀತಿಯ ಉಡುಗೊರೆಯನ್ನು ನೀಡಿದ್ದಾರೆ.

ಜಾನಕಿ ಗಿಫ್ಟ್ ಅನ್ನು ನೆನೆದು ಭಾವುಕರಾದ ಸಿ ಎಸ್ ಪಿ
ಸಿ ಎಸ್ ಪಿ ಮಗ ಈಗ ಮನೆಯಿಂದ ದೂರ ಇದ್ದಾರೆ. ಮಧುಕರ ಆಗಾಗ ಗಿಫ್ಟ್ ಗಳನ್ನು ತಂದು ಕೊಡುತ್ತಿದ್ದ. ಆದ್ರೀಗ ಆತ ಇಲ್ಲ ಎಂದು ಸಿ ಎಸ್ ಪಿ ಭಾವುಕರಾಗಿದ್ದಾರೆ. ಜಾನಕಿ ಕೊಟ್ಟ ಗಿಫ್ಟ್ ನಿಂದ ಸಂತಸಗೊಂಡಿದ್ದಾರೆ ಸಿ ಎಸ್ ಪಿ. ಆದ್ರೆ ತಂದೆಯ ಮುಂದೆಯೆ ಅಪರಿಚಿತಳಾದ ನನ್ನನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀರ ಅಂತ ಹೇಳುವ ಮೂಲಕ ಸಿ ಎಸ್ ಪಿ ಅವರನ್ನು ಮತ್ತಷ್ಟು ಭಾವುಕತೆಗೆ ತಳ್ಳಿದ್ರು ಜಾನಕಿ.

ಸಿ ಎಸ್ ಪಿ ಆಟೋಗ್ರಾಫ್ ಪಡೆದ ಜಾನಕಿ
ಜಾನಕಿ ಗಿಫ್ಟ್ ಕೊಟ್ಟ ಪೆನ್ನಿನಿಂದ ಸಿ ಎಸ್ ಪಿ ಅವರ ಮೊದಲ ಆಟೋಗ್ರಾಫ್ ಪಡೆದಿದ್ದಾರೆ. ಜಾನಕಿ ಇವತ್ತು ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣರಾಗಿದ್ದು ಸಿ ಎಸ್ ಪಿ ಎಂದು, ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರನ್ನು ನೆನಪಿಸಿಕೊಂಡು ಉಡುಗೊರೆ ನೀಡಿದ್ದಾರೆ ಜಾನಕಿ. ಸಿ ಎಸ್ ಪಿ ಆಟೋಗ್ರಾಫ್ ನಲ್ಲಿ ಅರಸಿ ಬಂದ ಬಾಂಧವ್ಯದ ನೆನಪಿಗಾಗಿ ಎಂದು ಬರೆದುಕೊಟ್ಟಿದ್ದನ್ನು ನೋಡಿ ಜಾನಕಿ ಸಂತಸಗೊಂಡಿದ್ದಾರೆ.

ಚಿರಂತನ್ ಜೊತೆ ಚಂಚಲ ಮದುವೆ ಆಗುತ್ತಾ?
ರಾಜು ಚೌಧರಿ ಅವರ ಮಗ ಚಿರಂತನ್ ಜೊತೆ ಚಂಚಲ ಮದುವೆ ಆಗುತ್ತ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಇಬ್ಬರ ಮದುವೆಗು ಇರುವ ಅಡ್ಡಿಯನ್ನು ಜಾನಕಿ ಸರಿಪಡಿಸಿ ಚಂಚಲ ಮದುವೆ ಮಾಡಿಸುತ್ತಾರಾ. ಅಥವಾ ಹಠ ಬಿಡದೆ ಭಾರ್ಗಿ ಬೇರೆ ಹುಡುಗನ ಜೊತೆ ಮದುವೆ ಮಾಡಿಸುತ್ತಾರಾ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











