For Quick Alerts
  ALLOW NOTIFICATIONS  
  For Daily Alerts

  ಸಂಜನಾ ಪತಿಯನ್ನು ಭೇಟಿಯಾಗುವ ಸಮಯ ಹತ್ತಿರ ಬಂದಾಯ್ತು

  |

  ಏಳು ವರ್ಷದ ನಂತರ ಪತ್ತೆಯಾಗಿರುವ ಸಂಜನಾ ಪತಿ ಗೌತಮ್ ಅವರನ್ನು ಕಂಡುಹಿಡಿಯಲು ಒದ್ದಾಡುತ್ತಿದ್ದಾರೆ. ಪತಿಯ ಹಳೆ ಫೋಟೋ ಮತ್ತು ಈಗಿನ ಫೋಟೋವನ್ನು ಹಿಡಿದು ಸಂಜನಾ ಮನೆಯವರಿಗೆಲ್ಲ ತೋರಿಸಿ ಕೇಳುತ್ತಿದ್ದಾರೆ. ಫೋಟೋ ನೋಡಿದ ಜಾನಕಿ ಎರಡು ಫೋಟೋಗು ಸ್ವಲ್ಪ ಹೊಂದಾಣಿಕೆ ಇದೆ ಎಂದು ಹೇಳಿದ್ದಾರೆ.

  ಜಾನಕಿಯ ಈ ಮಾತು ಕೇಳಿ ಸಂಜನಾ ಮನಸ್ಸು ಕೊಂಚ ನಿರಾಳವಾಗಿದೆ. ಆದ್ರೆ ಖಚಿತವಾಗಿ ಹೇಳಲಿಕ್ಕೆ ಆಗಲ್ಲ, ಖಚಿತವಾಗಬೇಕು ಅಂದ್ರೆ ಫರಿನ್ ಸಿಕ್ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿಸಬೇಕು ಆದ್ರೆ ಈ ಬಗ್ಗೆ ದೂರು ದಾಖಲಾಗದೆ ಇದೆಲ್ಲ ಮಾಡಲು ಸಾಧ್ಯವಿಲ್ಲ ಎಂದು ಜಾನಕಿ ಹೇಳಿದ್ದಾರೆ.

  ಸಂಜನಾ ಪತಿ ಗೌತಮ್ ನ ಗುರುತು ಹಿಡಿಯುತ್ತಾಳಾ ಜಾನಕಿ ಸಂಜನಾ ಪತಿ ಗೌತಮ್ ನ ಗುರುತು ಹಿಡಿಯುತ್ತಾಳಾ ಜಾನಕಿ

  ಸಂಜನಾ ಪತಿಯನ್ನು ಹುಡುಕುತ್ತಿದ್ರೆ ಗೌತಮ್ ವರುಣ್ ವೈಭವ್ ಹೆಸರಿನಲ್ಲಿ ಭಾರ್ಗಿ ಮನೆಗೆ ಬಂದಿದ್ದಾರೆ. ವಿಶೇಷ ಅತಿಥಿಯಾಗಿ ಭಾರ್ಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ರಶ್ಮಿ ಅವರ ಬಳಿ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಮುಂದೆ ಓದಿ..

  ಮನೆಗೆ ಬಂದ ಮಧುಕರ

  ಮನೆಗೆ ಬಂದ ಮಧುಕರ

  ಮನೆಗೆ ಬಂದ ಮಧುಕರನನ್ನು ಅಕ್ಕರೆಯಿಂದ ಬರಮಾಡಿಕೊಂಡಿದ್ದಾರೆ ಶ್ಯಾಮಲ. ಸುಂದರ್ ಮೂರ್ತಿ ಮ್ಯಾಜಿಕ್ ಕಥೆ ಹೇಳಿ ಶ್ಯಾಮಲ ಬಳಿ ಸರಿಯಾಗಿ ಉಗಿಸಿಕೊಂಡಿದ್ದಾರೆ. ಶ್ಯಾಮಲ ಅವರ ಹಳೆಯ ಕಥೆಗಳನ್ನು ಮಧುಕರನ ಬಳಿ ಹೇಳಿಕೊಂಡು ನೊಂದುಕೊಳ್ಳುತ್ತಿದ್ದಾರೆ. ಶ್ಯಾಮಲ ಹುಟ್ಟುಹಬ್ಬಕ್ಕೆ ಮಧುಕರ ಚಿಕ್ಕ ಗಿಫ್ಟ್ ತಂದುಕೊಟ್ಟಿದ್ದಾರೆ. ಮಧುಕರನ ಗಿಫ್ಟ್ ನೋಡಿ ಭಾವುಕರಾಗಿದ್ದಾರೆ ಶ್ಯಾಮಲ.

  ಜಾನಕಿ ಭೇಟಿಯಾದ ರಾಜು ಚೌಧರಿ

  ಜಾನಕಿ ಭೇಟಿಯಾದ ರಾಜು ಚೌಧರಿ

  ರಾಜು ಚೌಧರಿ ಅವರು ಜಾನಕಿ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ದಾರಿಯಲ್ಲೆ ನಿಲ್ಲಿಸಿ ಮಾತನಾಡುತ್ತಿರುವ ಬಗ್ಗೆ ರಾಜು ಚೌಧರಿ ಕ್ಷಮೆ ಕೇಳುತ್ತ ಮಾತನಾಡಿದ್ದಾರೆ. ಕಾನ್ಸೇಬಲ್ ರಂಗಣ್ಣ ಅವರ ವರ್ಗಾವಣೆ ಬಗ್ಗೆ ಮಾತನಾಡಿ ವರ್ಗಾವಣೆ ಕ್ಯಾನ್ಸಲ್ ಮಾಡಿಸಿ ಮತ್ತೆ ದೇವಘಟ್ಟಕ್ಕೆ ವರ್ಗಾವಣೆ ಮಾಡಿಸುವಂತೆ ಕೇಳಿಕೊಂಡಿದ್ದಾರೆ. ಜಾನಕಿಗೆ ಈ ಅಧಿಕಾರವಿಲ್ಲ ಅದ್ರೂ ಆನಂದ್ ಬೆಳಗೂರು ಅವರಿಗೆ ಹೇಳಿ ಮಾಡಿಸಿಕೊಡುವಂತೆ ಮನವಿ ಮಾಡಿಸಿಕೊಂಡಿದ್ದಾರೆ.

  'ಮಗಳು ಜಾನಕಿ' ಧಾರಾವಾಹಿಯ ಪಯಣ ಮುಗಿಸಿದ ಹರಿ ಕುಮಾರ್'ಮಗಳು ಜಾನಕಿ' ಧಾರಾವಾಹಿಯ ಪಯಣ ಮುಗಿಸಿದ ಹರಿ ಕುಮಾರ್

  ಭಾರ್ಗಿ ಮನೆಗೆ ಬಂದ ವರುಣ್ ವೈಭವ್

  ಭಾರ್ಗಿ ಮನೆಗೆ ಬಂದ ವರುಣ್ ವೈಭವ್

  ಸಂಜನಾ ಪತಿ ಎಂದು ಹೇಳುತ್ತಿದ್ದ ವ್ಯಕ್ತಿ ವರುಣ್ ವೈಭವ್ ಅವರು ಭಾರ್ಗಿ ಮನೆಗೆ ಬಂದಿದ್ದಾರೆ. ಮನೆಯವರನ್ನೆಲ್ಲ ಪರಿಚಯ ಮಾಡಿಸಿಕೊಟ್ಟಿದ್ದಾರೆ. ವರುಣ್ ಗಾಗಿ ಮನೆಯಲ್ಲಿ ವಿಶೇಷ ಅಡುಗೆ ಮಾಡಿಸಿದ್ದಾರೆ ಭಾರ್ಗಿ. ಮದುವೆಯ ಬಗ್ಗೆ ಕೇಳಿದ್ದಕ್ಕೆ ವರುಣ್ ಮದುವೆ ಆಗಿದ್ದಾರೆ ಎಂದು ಹೇಳಿದ್ದಾರೆ. ಅಂದ್ಮೇಲೆ ವರುಣ್ ಮತ್ತೊಂದು ಮದುವೆ ಆಗಿದ್ದಾರೆ.

  ಸಂಜನಾ ಶಾಲೆಗೆ ಗೌತಮ್ ಅತಿಥಿ

  ಸಂಜನಾ ಶಾಲೆಗೆ ಗೌತಮ್ ಅತಿಥಿ

  ವರುಣ್ ವೈಭವ್ ದೇವಘಟ್ಟದಲ್ಲಿ ಉದ್ಯಮ ಪ್ರಾರಂಭಿಸಲು ಪ್ಲಾನ್ ಮಾಡಿದ್ದಾರೆ. ಅದೂ ಭಾರ್ಗಿ ಅವರ ಜೊತೆ ಪಾರ್ಟನರ್ ಆಗಿ ಉದ್ಯಮ ಸ್ಥಾಪಿಸುವ ಪ್ಲಾನ್ ಮಾಡಿದ್ದಾರೆ. ಅಲ್ಲದೆ ಭಾರ್ಗಿ ಅವರ ದೇವಘಟ್ಟ ಎಜುಕೇಶನ್ ಸೊಸೈಟಿ ಶಾಲೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ವರುಣ್ ವೈಭವ್ ಅವರನ್ನು ಆಹ್ವಾನ ಮಡಿದ್ದಾರೆ ಭಾರ್ಗಿ. ಶಾಲೆಯ ಕಾರ್ಯಕ್ರಮಕ್ಕೆ ವರುಣ್ ಹಾಜರಾಗಲಿದ್ದಾರೆ ಅಂದ್ಮೇಲೆ ಸಂಜನಾ ಪತಿಯನ್ನು ನೋಡುವ ಸಾಧ್ಯತೆ ಇದೆ.

  ಸಂಜನಾ ಪತಿ ಇನ್ನು ಬದುಕಿದ್ದಾರೆ : ಏಳು ವರ್ಷದ ನಂತರ ಕಾಣಿಸಿಕೊಂಡ ನಿರಂಜನ್ ಭಾವಸಂಜನಾ ಪತಿ ಇನ್ನು ಬದುಕಿದ್ದಾರೆ : ಏಳು ವರ್ಷದ ನಂತರ ಕಾಣಿಸಿಕೊಂಡ ನಿರಂಜನ್ ಭಾವ

  ಅಪ್ಪನ ಬಳಿ ನಿರಂಜನ್ ಬಗ್ಗೆ ಹೇಳಿದ ಚಂಚಲ

  ಅಪ್ಪನ ಬಳಿ ನಿರಂಜನ್ ಬಗ್ಗೆ ಹೇಳಿದ ಚಂಚಲ

  ಚಂಚಲ ಸಂತೋಷವಾಗಿ ಹಾಡುತ್ತ ಕುಳಿತ್ತಿದ್ದಲು. ಅದೆ ಸಮಯಕ್ಕೆ ಎಂಟ್ರಿ ಕೊಟ್ಟ ಭಾರ್ಗಿ ಮಗಳ ಹಾಡು ಕೇಳಿ ಫುಲ್ ಖುಷ್ ಆಗಿದ್ದಾರೆ. ಈ ಸಂತೋಷಕ್ಕೆ ಕಾರಣ ಕೇಳಿದ ಭಾರ್ಗಿಗೆ ಚಂಚಲ ಮಾತು ಕೇಳಿ ಶಾಕ್ ಆಗಿದೆ. ನಿರಂಜನ್ ಕಂಪೆನಿ ಲಾಭದ ಬಗ್ಗೆ ಭಾರ್ಗಿ ಬಳಿ ಹೇಳಿಕೊಂಡಿದ್ದಾರೆ ಚಂಚಲ. ಚಂಚಲ ಮಾತು ಕೇಳಿ ಭಾರ್ಗಿ ಒಳಗೊಳಗೆ ಉರಿದುಕೊಳ್ಳುತ್ತಿದ್ದಾರೆ. ಅಲ್ಲದೆ ಚಿರಂತನ್ ಮತ್ತು ನಿರಂಜನ್ ವಿರುದ್ಧ ಮನಸ್ತಾಪ ತಂದಿಡುವ ಕೆಲಸ ಮಾಡುತ್ತಿದ್ದಾರೆ ಭಾರ್ಗಿ.

  English summary
  Janaki is surprised to see Raju Chowdary waiting for her and apologises to him for her inability to keep up her promise of inviting him for Chanchala-Chiranthan's engagement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X