ಪೊಲೀಸ್ ಅಧಿಕಾರಿಯಾದ ಜಾನಕಿ: ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಮಗಳು

Recommended Video

Magalu Janaki: ಡಿ ವೈ ಎಸ್ ಪಿಯಾಗಿ ಅಧಿಕಾರಿ ಸ್ವೀಕರಿಸುವ ಮೊದಲು ತಂದೆಯನ್ನ ಭೇಟಿ ಮಾಡಿದ ಜಾನಕಿ

ಕನ್ನಡ ಕಿರುತೆರೆ ಲೋಕದ ಪ್ರಸಿದ್ಧ ಧಾರಾವಾಹಿ 'ಮಗಳು ಜಾನಕಿ' ಹೊಸ ಅಧ್ಯಾಯ ಪ್ರಾರಂಭವಾಗಿದೆ. ಸುಮಾರು 220 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿರುವ ಮಗಳು ಜಾನಕಿ ಈಗ ಹೊಸ ರೂಪದಲ್ಲಿ ಪ್ರಸಾರವಾಗುತ್ತಿದೆ. ಅಂದರೆ ಇಷ್ಟು ದಿನಗಳ ಕಾಲ ಅಳುಮುಂಜಿಯಾಗಿದ್ದ ಮಗಳು ಜಾನಕಿ ಈಗ ಡಿ ವೈ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಜಾನಕಿಯನ್ನು ಪೊಲೀಸ್ ಪಾತ್ರದಲ್ಲಿ ನೋಡುವುದು ಪ್ರೇಕ್ಷಕರ ದೊಡ್ಡ ಆಸೆಯಾಗಿತ್ತು. ಆ ದಿನಗಳು ಈಗ ಬಂದಿದೆ. ರೋಚಕ ತಿರುವು ಪಡೆದುಕೊಂಡಿರುವ ಮಗಳು ಜಾನಕಿ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಪೊಲೀಸ್ ಆದ ಜಾನಕಿ ಮಾಜಿ ಪ್ರಿಯಕರ ಆನಂದ್ ಬೆಳಗೂರು ಕೈ ಕೆಳಗೆ ಕೆಲಸ ಮಾಡಬೇಕಾಗಿದೆ. ಅಧಿಕಾರ ವಹಿಸಿಕೊಂಡ ಜಾನಕಿ ನಂತರ ಮಾಡಿದ್ದೇನು? ತಂದೆ ಭಾರ್ಗಿಯ ಕುತಂತ್ರ ಜಾನಕಿ ಗಮನಕ್ಕೆ ಬರುತ್ತಾ? ಮುಂದೆ ಓದಿ..

ಹೊಸ ಅಧ್ಯಾಯದ ಬಗ್ಗೆ ಸೀತಾರಾಮ್ ಮಾತು

ಹೊಸ ಅಧ್ಯಾಯದ ಬಗ್ಗೆ ಸೀತಾರಾಮ್ ಮಾತು

ಮಗಳು ಜಾನಕಿ ಧಾರಾವಾಹಿಯಲ್ಲಿ ಮಹತ್ತರ ತಿರುವು ಪಡೆದುಕೊಂಡಿದೆ. ಹೊಸ ಅಧ್ಯಾಯ ಪ್ರಾರಂಭವಾದ ಬಗ್ಗೆ ಸೀತಾರಾಮ್ ವಿವರಿಸಿದ್ದಾರೆ. ಪರೀಕ್ಷೆಗೆ ತಯಾರಾಗುತ್ತಿದ್ದ ಜಾನಕಿ ದಿಢೀರನೆ ಡಿ ವೈ ಎಸ್ ಪಿ ಆಗಿದ್ದಾಳೆ ಎಂದು ಅಚ್ಚರಿ ಪಡಬೇಡಿ. ಮಧ್ಯದಲ್ಲಿ ಏನೆಲ್ಲ ನಡೆದು ಹೋಗಿದೆ ಎನ್ನುವುದನ್ನು ತೋರಿಸುತ್ತಾ ಹೋದರೆ ಪ್ರೇಕ್ಷಕರಿಗೆ ಬೋರ್ ಆಗಬಹುದು ಎನ್ನುವ ಉದ್ದೇಶದಿಂದ, ಜಾನಕಿ ಪರೀಕ್ಷೆ ಬರೆದು ನಂತರ ಪಾಸಾಗಿ, ಟ್ರೈನಿಂಗ್ ಪಡೆದು ಈಗ ಡಿ ವೈ ಎಸ್ ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಪ್ರಾರಂಭವಾಗಿದೆ ಮಗಳು ಜಾನಕಿ ಧಾರಾವಾಹಿಯ ನಿಜವಾದ ಕತೆ.

ಮಣಿಘಟ್ಟದ ಡಿ ವೈ ಎಸ್ ಪಿ ಜಾನಕಿ

ಮಣಿಘಟ್ಟದ ಡಿ ವೈ ಎಸ್ ಪಿ ಜಾನಕಿ

ಪರೀಕ್ಷೆಯಲ್ಲಿ ಮೂರನೆ ರ್ಯಾಂಕ್ ಪಡೆದ ಜಾನಕಿ ಮಣಿಘಟ್ಟದ ಡಿ ವೈ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಾಜಿ ಪ್ರಿಯಕರನಾದಿದ್ದ ಆನಂದ್ ಬೆಳಗೂರು ಕೈ ಕೆಳಗೆ ಜಾನಕಿ ಕೆಲಸ ಮಾಡಬೇಕಾಗಿದೆ. ಅಧಿಕಾರ ವಹಿಸಿಕೊಂಡ ನಂತರ ಜಾನಕಿ ತಂದೆ ಚಂದು ಭಾರ್ಗಿ ಅವರನ್ನು ಭೇಟಿಯಾಗಿದ್ದಾರೆ. ಪೊಲೀಸ್ ಆಗಿ ಬಂದ ಜಾನಕಿಯನ್ನು ನೋಡಿ ಭಾರ್ಗಿ ಒಳಗೊಳಗೆ ಸಿಟ್ಟಿಗೇಳುತ್ತಿದ್ದಾರೆ. ಖಾಕಿ ಧರಿಸಿದ ಮಗಳು ಅಪ್ಪನನ್ನು ಸರ್ ಅಂತಾನೆ ಕರೆಯುತ್ತಿರುವುದ್ದನ್ನು ನೋಡಿ ಕೆಂಡಕಾರುತ್ತಿದ್ದಾರೆ ಭಾರ್ಗಿ

ಗೃಹ ಮಂತ್ರಿ ಭಾರ್ಗಿ ಸಹಾಯ ತಿರಸ್ಕರಿಸಿದ ಜಾನಕಿ

ಗೃಹ ಮಂತ್ರಿ ಭಾರ್ಗಿ ಸಹಾಯ ತಿರಸ್ಕರಿಸಿದ ಜಾನಕಿ

ಗೃಹ ಮಂತ್ರಿ ಆಗಬೇಕೆಂದು ದುರಾಸೆ ಇಟ್ಟುಕೊಂಡಿದ್ದ ಭಾರ್ಗಿ ಕೊನೆಗೂ ಗೃಹ ಮಂತ್ರಿಯಾಗಿದ್ದಾರೆ. ಮಾಜಿ ಗೃಹಮಂತ್ರಿ ಚೌಧರಿ ವಿರುದ್ಧ ಪಿತೂರಿ ನಡೆಸಿ ಗೃಹಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಪೊಲೀಸ್ ಆಗಿರುವ ಮಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆನ್ನುವ ಭಾರ್ಗಿಯ ಮೊದಲ ಹಂತದ ಪ್ರಯತ್ನ ವಿಫಲವಾಗಿದೆ. ಅಪ್ಪನ ಫೋನ್ ನಂಬರ್ ಕೂಡ ತೆಗೆದುಕೊಳ್ಳದೆ, ಏನೆ ಕಷ್ಟ ಬಂದರು ನಾನೆ ಧೈರ್ಯವಾಗಿ ಎದುರಿಸುತ್ತೇನೆ ಎಂದು ಅವಮಾನ ಆಗುವ ಹಾಗೆ ಜಾನಕಿ ಮಾತನಾಡಿದ್ದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಭಾರ್ಗಿಗೆ.

ಅಪ್ಪನ ವಿರುದ್ಧ ತಿರುಗಿ ಬೀಳುತ್ತಾಳಾ ಜಾನಕಿ

ಅಪ್ಪನ ವಿರುದ್ಧ ತಿರುಗಿ ಬೀಳುತ್ತಾಳಾ ಜಾನಕಿ

ಜಾನಕಿ ತಂದೆ ಭಾರ್ಗಿಯ ಕುತಂತ್ರಗಳೆಲ್ಲ ಮಗಳಿಗೆ ಗೊತ್ತಾಗುವ ಸಾದ್ಯತೆ ಇದೆ. ಗೃಹ ಮಂತ್ರಿಯ ಮೋಸ, ವಂಚನೆ ಡಿ ವೈ ಎಸ್ ಪಿ ಜಾನಕಿಗೆ ಗೊತ್ತಾದರೆ ಅಪ್ಪನ ವಿರುದ್ಧವೆ ತಿರುಗಿ ಬೀಳುವ ಸಾದ್ಯತೆ ಇದೆ. ಅದೇ ಭಯ ಭಾರ್ಗಿಗೂ ಕಾಡೋಕೆ ಶುರುವಾಗಿದೆ. ಮಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆನ್ನುವ ಪ್ರಯತ್ನ ಕೂಡ ಸಾಧ್ಯವಾಗುತ್ತಿಲ್ಲ. ಹಾಗಾಗಿ ಭಾರ್ಗಿ ವಿರುದ್ಧ ಜಾನಕಿ ತಿರುಗಿ ಬೀಳುವ ಕಾಲ ಸಮೀಪವಾಗುತ್ತಿದೆ.

ನಷ್ಟದಲ್ಲಿ ನಿರಂಜನ್, ದೊಡ್ಡ ವಕೀಲನಾದ ಮಧುಕರ

ನಷ್ಟದಲ್ಲಿ ನಿರಂಜನ್, ದೊಡ್ಡ ವಕೀಲನಾದ ಮಧುಕರ

ಜಾನಕಿ ಪತಿ ನಿರಂಜನ್ ಇನ್ನು ಕಷ್ಟದಲ್ಲೆ ಜೀವನ ನಡೆಸುತ್ತಿದ್ದಾರೆ. ಚಿರಂತನ್ ಚೌಧರಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ನಿರಂಜನ್ ನಷ್ಟದಲ್ಲಿದ್ದಾರೆ. ಮತ್ತೊಂದೆಡೆ ಸಿ ಎಸ್ ಪಿ ಮಗ ಮಧುಕರ ದೊಡ್ಡ ಕ್ರಿಮಿನಲ್ ಲಾಯರ್ ಆಗಿದ್ದಾರೆ. ಮಗ ಮನೆ ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿರುವ ದುಃಖ ತಂದೆ ಸಿ ಎಸ್ ಪಿ ಅವರನ್ನು ಕಾಡುತ್ತಿದ್ದರೆ, ಮಧುಕರ್ ದೊಡ್ಡ ಲಾಯರ್ ಆಗಿರುವ ಸಂತಸ ಕೂಡ ಇದೆ.

ಇನ್ನು ಮದುವೆ ಆಗದ ಚಂಚಲ ಮತ್ತು ಚಿರಂತನ್

ಇನ್ನು ಮದುವೆ ಆಗದ ಚಂಚಲ ಮತ್ತು ಚಿರಂತನ್

ಭಾರ್ಗಿ ಎರಡನೆ ಪುತ್ರಿ ಚಂಚಲ ಮತ್ತು ಮಾಜಿ ಗೃಹ ಸಚಿವರ ಪುತ್ರ ಚಿರಂತನ್ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಆದ್ರೆ ಭಾರ್ಗಿ ಮತ್ತು ಚಿರಂತನ್ ತಂದೆ ಅವರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬಗೆ ಆಗಲ್ಲ. ಹಾಗಾಗಿ ಚಿರಂತನ್ ಮನೆಯಲ್ಲಿ ಚಂಚಲರನ್ನ ಸೊಸೆ ಮಾಡಿಕೊಳ್ಳಲು ಒಪ್ಪಿಗೆ ನೀಡಿಲ್ಲ. ಇಬ್ಬರ ಪ್ರೇಮ್ ಕಹಾನಿ ಎಲ್ಲಿಗೆ ಹೋಗಿ ಮುಟ್ಟುತ್ತೊ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

More from Filmibeat

English summary
The superintendent of police asks Janaki to visit the home minister before taking charge. The home minister being Janaki step father. janaki meets her father chandu bargi before taking charge of DYSP.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X