ಭಾರ್ಗಿ ಜೊತೆ ವಿದೇಶಕ್ಕೆ ಹೊರಟ ಮಧುಕರ : ವಿಷಯ ಕೇಳಿ ಶಾಕ್ ಆದ ಸಿ ಎಸ್ ಪಿ
ಜಾನಕಿ ಮೇಲಿನ ಕೋಪ ಅಪ್ಪ ಭಾರ್ಗಿ ಅವರಿಗೆ ಜಾಸ್ತಿ ಆಗುತ್ತಲೆ ಇದೆ. ಮಗಳು ಜಾನಕಿಯನ್ನು ಕಂಡರೆ ಸಿಟ್ಟಾಗುವ ಭಾರ್ಗಿ, ಚಂಚಲ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ. ಚಂಚಲಗಾಗಿ ವಿಶೇಷವಾದ ವಜ್ರದ ಉಂಗುರಗಳನ್ನು ತಂದು ಕೊಟ್ಟಿದ್ದಾರೆ. ಆದ್ರೆ ಜಾನಕಿಗೆ ಯಾಕೆ ಮೋಸ ಮಾಡುತ್ತಿದ್ದೀರಾ ಎಂದು ರಶ್ಮಿ ಪತಿ ಭಾರ್ಗಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಆದ್ರೆ ಭಾರ್ಗಿ ಮಾತ್ರ ಜಾನಕಿಗೆ ಹಾಗೆ ಆಗಬೇಕು ಅವಳಿಗೆ ಏನು ತಂದು ಕೊಡವುದಿಲ್ಲ ಎಂದು ಕೂಗಾಡಿದ್ದಾರೆ ಭಾರ್ಗಿ. ರಶ್ಮಿ ಎಷ್ಟು ಮನವಲಿಸಿದರು ಭಾರ್ಗಿಗೆ ಮಾತ್ರ ಜಾನಕಿ ಮೇಲಿನ ಕೋಪ ಕಮ್ಮಿ ಆಗಿಲ್ಲ. ಜಾನಕಿಗೆ ಏನೇ ಆದ್ರು ನನಗೇನು ಆಗಬೇಕಿಲ್ಲ ಎಂದು ಭಾರ್ಗಿ ಖಡಕ್ ಆಗಿ ಹೇಳಿದ್ದಾರೆ.
ಮತ್ತೊಂದೆಡೆ ಸಿ ಎಸ್ ಪಿ ಅವರಿಂದ ಮಗನನ್ನು ದೂರ ಮಾಡುವ ಪ್ರಯತ್ನ ನಡೆಯುತ್ತಲೆ ಇದೆ. ಮಧುಕರನನ್ನು ಕರೆದುಕೊಂಡು ವಿದೇಶಕ್ಕೆ ಹೊರಟಿದ್ದಾರೆ ಭಾರ್ಗಿ. ಈ ವಿಚಾರ ಕೇಳಿ ಸಿ ಎಸ್ ಪಿಗೆ ಶಾಕ್ ಆಗಿದೆ. ಅಪ್ಪನಿಗೆ ಭಾರ್ಗಿ ಕಂಡ್ರೆ ಆಗಲ್ಲ ಎಂದು ಗೊತ್ತಿದ್ದರು ಭಾರ್ಗಿ ಜೊತೆ ಹೋಗುತ್ತಿರುವ ಮಗನಿಗೆ ಏನು ಹೇಳದೆ ಮೌನವಾಗಿದ್ದಾರೆ ಸಿ ಎಸ್ ಪಿ. ಮುಂದೆ ಓದಿ..

ಜಾನಕಿಗೆ ಉಡುಗೊರೆ ಕೊಡಲು ರಶ್ಮಿ ತಯಾರಿ
ಜಾನಕಿ ಮೇಲೆ ಸಿಟ್ಟಾಗಿರುವ ಭಾರ್ಗಿ ಅವಳಿಗೆ ಏನು ಬೇಕೊ ಅದನ್ನು ನೀವೆ ಕೊಡಿಸಿ ಎಂದು ರಶ್ಮಿ ಬಳಿ ರೇಗಾಡಿದ್ದಾರೆ ಭಾರ್ಗಿ. ತಾರತಮ್ಯ ಮಾಡಿದ್ದೀರಿ ಎಂದು ಇಷ್ಟೊತ್ತೊ ಉಪದೇಶ ಮಾಡುವ ಬದಲು ನೀವೆ ಕೊಡಿಸಿದ್ರೆ ಆಗುತ್ತಿತ್ತಲ್ಲ. ಹೇಗಿದ್ರು ಅಕೌಂಟಲ್ಲಿ ಬೇಜಾನ್ ದುಡ್ಡಿದೆಯಲ್ಲ ಎಂದು ಭಾರ್ಗಿ, ರಶ್ಮಿ ಅವರಿಗೆ ವ್ಯಂಗವಾಗಿ ಆಡಿಕೊಂಡಿದ್ದಾರೆ. ಆದ್ರೆ ರಶ್ಮಿ ಅವರು ಕೊಟ್ಟರೆ ನೀವು ಕೊಟ್ಟ ಹಾಗೆ ಆಗಲ್ಲ ಎಂದು ಹೇಳಿ ಭಾರ್ಗಿ ಮನವೊಲಿಸುವ ಕೆಲಸ ಮಾಡಿದ್ದಾರೆ ರಶ್ಮಿ.

ಜಾನಕಿಗೆ ಏನೇ ಆದ್ರು ನನಗೇನು ಆಗಬೇಕಿಲ್ಲ
ಜಾನಕಿಗೆ ಏನು ತಂದು ಕೊಡಲ್ಲ, ಅವಳಿಗೆ ನೋವಾದ್ರು ಪರವಾಗಿಲ್ಲ. ಅವಳಿಗೆ ಏನೇ ಆದ್ರು ನನಗೇನು ಆಗಬೇಕಿಲ್ಲ, ಎಂದು ರಶ್ಮಿ ಬಳಿ ಖಡಕ್ ಆಗಿ ಹೇಳಿದ್ದಾರೆ ಭಾರ್ಗಿ. ಪತಿಯ ಮಾತಿನಿಂದ ನೊಂದ ರಶ್ಮಿ ಅವರೆ, ಜಾನಕಿಗೆ ಏನಾದರು ಉಡುಗೊರೆ ತಂದು ಕೊಡಲು ಸಿದ್ಧರಾಗಿದ್ದಾರೆ. ಆದ್ರೆ ಭಾರ್ಗಿ ಅವರೆ ತಂದು ಕೊಟ್ಟಿದ್ದು ಎಂದು ಹೇಳುತ್ತೇನೆ, ಅದನ್ನಾದ್ರು ಒಪ್ಪಿಕೊಳ್ಳಿ ಎಂದು ರಶ್ಮಿ ಭಾರ್ಗಿ ಅವರ ಬಳಿ ಮನವಿ ಮಾಡಿದ್ದಾರೆ.

ಜಾನಕಿ ಬಳಿ ಸಹಾಯ ಕೇಳಿ ಸೋತ ಭಾರ್ಗಿ
ರಾಜು ಸಿಂಗ್, ಭಾರ್ಗಿ ಕಡೆಯ ಎಂ ಎಸ್ ಬಾಲು ಸಿಂಗ್ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಜಾನಕಿ ಬಳಿ ದೂರು ದಾಖಲಿದೆ. ಇದನ್ನು ವಿಚಾರಿಸಲು ಭಾರ್ಗಿ ಜಾನಕಿಗೆ ಫೋನ್ ಮಾಡಿದ್ದಾರೆ. ಹೋಮ್ ಮಿನಿಸ್ಟರ್ ಅಂದ್ರೆ ಭಾರ್ಗಿ ಮಾತನಾಡಿದ ಜಾನಕಿ, ರಾಜು ಸಿಂಗ್ ಅವರದ್ದು ತಪ್ಪಿಲ್ಲ, ಬಾಲು ಸ್ವಾಮಿ ಅವರದ್ದೆ ಎಲ್ಲಾ ತಪ್ಪು, ಹಾಗಾಗಿ ರಾಜು ಸಿಂಗ್ ಅವರಿಗೆ ಕ್ಲೀನ್ ಚಿಟ್ ನೀಡುತ್ತಿರುವುದಾಗಿ ಹೇಳಿದ್ದಾರೆ. ಆದ್ರೆ ಭಾರ್ಗಿ ಮಾತಿಗೆ ಬೆಲೆ ಕೊಟ್ಟಿಲ್ಲ ಎಂದು ಭಾರ್ಗಿ ಮತ್ತೆ ಕೋಪಗೊಂಡಿದ್ದಾರೆ.

ಮನೆಗೆ ಬಂದ ಮಧುಕರ
ಮನೆಗೆ ಬಂದ ಮಧುಕರನ ಮುಂದೆ ಮ್ಯಾಜಿಕ್ ಮಾಡಿ ತೋರಿಸಿದ್ದಾರೆ ಸುಂದರ್ ಮೂರ್ತಿ. ಎರಡು ಸಾವಿರವನ್ನು ಇನ್ನೂರು ರುಪಾಯಿ ಮಾಡಿ ತೋರಿಸುತ್ತೇನೆ ಎಂದು, ಮಧುಕರನ ಬಳಿ ಎರಡು ಸಾವಿರವನ್ನು ತೆಗೆದುಕೊಂಡು ಸುಂದರ್ ಮೂರ್ತಿ ಜೇಬಿಗೆ ಸೇರಿಸಿಕೊಂಡಿದ್ದಾರೆ. ಶಾಮಲಾ ಅವರು ಮಧುಗೆ ಇಷ್ಟವಾದ ತಿಂಡಿ ಮಾಡಿ ಕೊಟ್ಟು ಉಪಚಾರ ಮಾಡಿದ್ದಾರೆ.

ಭಾರ್ಗಿ ಜೊತೆ ವಿದೇಶಕ್ಕೆ ಮಧುಕರ
ಮಧುಕರ ಯಾವುದೋ ಕೆಲಸದ ಮೇಲೆ ವಿದೇಶಕ್ಕೆ ಹೋಗುತ್ತಿದ್ದಾರೆ. 10 ದಿನಗಳ ಕಾಲ ವಿದೇಶಕ್ಕೆ ಹೊರಟಿದ್ದಾರೆ ಮಧು. ಈ ವಿಚಾರವನ್ನು ಅಪ್ಪ ಸಿ ಎಸ್ ಪಿ ಬಳಿ ಹೇಳಿದ್ದಾರೆ. ವಿದೇಶಕ್ಕೆ ಹೊರಟ ಮಗನ ಬಗ್ಗೆ ಸಂತಸ ಪಡುತ್ತಿದಂತೆ, ಮಗನನ್ನು ಕರೆದು ಕೊಂಡು ಹೋಗುತ್ತಿರುವುದು ಭಾರ್ಗಿ ಎಂದು ಗೊತ್ತಾಗಿ ನೊಂದುಕೊಳ್ಳುತ್ತಿದ್ದಾರೆ. ಈ ವಿಚಾರ ಕೇಳಿ ಸಿ ಎಸ್ ಪಿ ಬೇಸರಗೊಂಡಿದ್ದಾರೆ. ಆದ್ರೆ ಮಧುಕರನ ಬಳಿ ನೋವನ್ನು ತೋರಿಸಿಕೊಳ್ಳದೆ ಮೌನವಾಗಿದ್ದಾರೆ.


Click it and Unblock the Notifications











