Janaki Samsara: ಅನಾಮಿಕ ನಿಜ ರೂಪ ಜಾನಕಿ ಮುಂದೆ ಅನಾವರಣ; ತಕ್ಕ ಪಾಠ ಕಲಿಸುತ್ತಾಳಾ?
ರಾಘವ ಹಾಗೂ ಜಾನಕಿ ಒಬ್ಬರನ್ನೊಬ್ಬರು ಬಹಳ ಪ್ರೀತಿ ಮಾಡುತ್ತಾರೆ. ಹಾಗೆಯೇ ಅವರಿಗೆ ಒಬ್ಬಳು ಪುಟ್ಟ ಮಗಳು ಇದ್ದಾಳೆ. ರಮಣ ಅಷ್ಟಾಗಿ ಯಾವ ಕೆಲಸ ಮಾಡದೆ ಪೆದ್ದು ಥರಾನೇ ಇರುತ್ತಾನೆ. ರಮಣನಿಗೆ ಏನಾದರೂ ಕೆಲಸ ಕೊಟ್ಟರೆ ಎಲ್ಲಿ ರಮಣ ಆ ಕೆಲಸವನ್ನು ಹಾಳು ಮಾಡಿ ಬಿಡುತ್ತಾನೆ ಎನ್ನುವ ಚಿಂತೆ ರಘುರಾಮ್‌ಗೆ. ರಾಘವ ಹಾಗೂ ಜಾನಕಿ ಬಹಳ ಕಷ್ಟ ಪಟ್ಟು ತುಂಬು ಸಂಸಾರದಲ್ಲಿ ಖುಷಿ, ನೆಮ್ಮದಿಯನ್ನು ತಂದಿರುತ್ತಾರೆ.
ಯಾರು ಏನೇ ಅಂದರೂ ಅದೆಲ್ಲವನ್ನೂ ಸಹಿಸಿಕೊಂಡು ಜಾನಕಿ ಹಾಗೂ ಆ ಮನೆಯಲ್ಲಿ ಇರುವವರು ಎಲ್ಲರೂ ಕೂಡ ಅನುಸರಿಸಿಕೊಂಡು ಹೋಗುತ್ತಿರುತ್ತಾರೆ. ಇದೀಗ ರಿಷಿ ಬೇರೆ ಮದುವೆ ಮಾಡಿಕೊಂಡು ಮನೆಯಿಂದ ದೂರಾಗುತ್ತಾನೆ. ಆ ನೋವಿನಲ್ಲಿ ಮನೆ ಮಂದಿ ಎಲ್ಲರೂ ದುಃಖದಲ್ಲಿ ಇರುತ್ತಾರೆ. ಆದರೆ, ರಿಷಿ ಹಾಗೂ ಅನಾಮಿಕಾಗೆ ಮದುವೆ ನಿಶ್ಚಯ ಆಗಿರುತ್ತದೆ. ಆದರೆ ರಿಷಿ ಅನಾಮಿಕಾಳನ್ನು ಮದುವೆ ಆಗದೆ ಇರುವುದನ್ನು ನೋಡಿದ ರಘು ರಾಮ್‌ಗೆ ದಿಕ್ಕೇ ತೋಚದಂತಾಗುತ್ತದೆ.

ಆ ವೇಳೆ ಜಾನಕಿ ಅನಾಮಿಕ ಜೀವನ ಹಾಳಾಗಬಾರದು ಎನ್ನುವ ಉದ್ದೇಶದಿಂದ ರಮಣನನ್ನು ಒಪ್ಪಿಸಿ ಮದುವೆ ಆಗುತ್ತಾನೆ. ರಮಣ ಮಾತ್ರ ಅನಾಮಿಕಾಗೆ ಒಪ್ಪಿಗೆ ಇಲ್ಲದೆ ತಾಳಿ ಕಟ್ಟುತ್ತಾನೆ. ಅದು ಅತ್ತಿಗೆಯ ಮಾತನ್ನು ಕೇಳಿ. ಆದರೆ, ಅದರ ಪ್ರತಿಫಲವಾಗಿ ರಮಣಗೆ ಸಿಕ್ಕಿದ್ದು ಅನಾಮಿಕಾ ಪ್ರೀತಿ ನಾಟಕ, ಬೈಗುಳ, ಅವಮಾನ. ಇನ್ನೂ ಜಾನಕಿಗೆ ಅನಾಮಿಕ ಮದುವೆ ಆದ ಬಳಿಕ ಒಂದಲ್ಲ ಒಂದು ಕಷ್ಟ ತಪ್ಪಿದ್ದಲ್ಲ. ಯಾರು ಏನೇ ಕೆಲಸ ಮಾಡಿದರೂ ಅದೆಲ್ಲವೂ ಜಾನಕಿ ತಪ್ಪು ಮಾಡಿರುವುದು ಎಂದು ಆಕೆಯ ತಲೆಗೆ ಬರುತ್ತದೆ. ರಘು ರಾಮನ ಒಪ್ಪಿಗೆ ಪಡೆಯದೇ ಜಾನಕಿ ರಮಣನನ್ನು ಮೀಟಿಂಗ್‌ಗೆ ಕಳುಹಿಸುತ್ತಾನೆ.
ಮಾವನ ನಂಬಿಕೆ ಕಳೆದುಕೊಂಡ ಜಾನಕಿ
ಅಲ್ಲಿ ಒಂದು ಪ್ರಾಜೆಕ್ಟ್ ಅನ್ನು ಸಬ್ಮಿಟ್ ಮಾಡಬೇಕಾಗಿ ಇರುತ್ತದೆ. ಆದರೆ, ಆ ಪ್ರಾಜೆಕ್ಟ್ ಬದಲಿಗೆ ಬೇರೆ ಇನ್ನೇನೋ ಆಗಿ ರಘುರಾಮ್‌ನ ಕೆಂಗಣ್ಣಿಗೆ ಗುರಿ ಆಗುತ್ತಾನೆ. ಹಾಗೆಯೇ ಜಾನಕಿ ಕೂಡ ಮಾವನ ನಂಬಿಕೆಯನ್ನು ಕಳೆದುಕೊಳ್ಳುತ್ತಾಳೆ. ಇನ್ನೂ ಪ್ರಾಜೆಕ್ಟ್ ಮಿಸ್ ಆಗಲು ಮೂಲ ಕಾರಣ ಬೇರೆ ಯಾರು ಅಲ್ಲ. ಅದಕ್ಕೆ ಕಾರಣ ಅನಾಮಿಕ ಎನ್ನುವ ವಿಚಾರ ರಾಘಮ್‌ಗೆ ತಿಳಿದಿದೆ ಆತ ಕೂಡಲೇ ಜಾನಕಿಗೆ ಕರೆ ಮಾಡುತ್ತಾನೆ

ಸಿಸಿ ಟಿವಿ ದೃಶ್ಯ ನೋಡಿ ಜಾನಕಿಗೆ ಶಾಕ್
ಇದಕ್ಕೆಲ್ಲ ಕಾರಣ ಅನಾಮಿಕ ಎನ್ನುವ ಅಸಲಿ ವಿಚಾರವನ್ನು ಹೇಳಿದಾಗ ಜಾನಕಿಗೆ ಕೂಡ ಬಹಳ ಬೇಸರ ಆಗುತ್ತದೆ. ಹಾಗೆಯೇ ರಾಘವ ಅನಾಮಿಕ ಮಾಡಿದ ಕೆಲಸವನ್ನು ಜಾನಕಿ ಮೊಬೈಲ್‌ಗೆ ಕಳುಹಿಸುತ್ತಾನೆ. ಜಾನಕಿಗೆ ಅನಾಮಿಕ ಮಾಡಿರುವ ಕೆಲಸದಿಂದ ಆಕೆ ಏನೇ ಕೆಲಸ ಮಾಡಿದರೂ ಆಕೆಯ ಮಾವನಿಗೆ ತಪ್ಪು ಎಂದೇ ಅನ್ನಿಸುತ್ತದೆ.
ಮಗುವಿನ ಶಾಲೆ ಬಳಿ ಹೋದ ಅನಾಮಿಕ
ಅನಾಮಿಕ ಮಾಡಿದ ಕೆಲಸ ಎಲ್ಲರಿಗೂ ತಿಳಿದರೆ ಎಲ್ಲಿ ಅನಾಹುತ ಆಗುತ್ತೋ ಎನ್ನುವ ಆತಂಕದಲ್ಲಿರುತ್ತಾಳೆ. ಜಾನಕಿ ಅನಾಮಿಕ ಯಾಕೆ ಹೀಗೆ ಮಾಡುತ್ತಿದ್ದಾಳೆ ಎನ್ನುವ ಬೇಸರ ಆಕೆಗೆ ಕಾಡುತ್ತದೆ. ಇದೀಗ ಜಾನಕಿ ಮಗಳ ಶಾಲೆಯ ಬಳಿಗೆ ಬಂದು ಆಕೆಯ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಬರುತ್ತಾಳೆ. ಆದರೆ ಸೆಕ್ಯೂರಿಟಿ, ಮಕ್ಕಳು ಎಲ್ಲರೂ ಮನೆಗೆ ಹೋದರು ಎಂದು ಹೇಳುತ್ತಾನೆ.


Click it and Unblock the Notifications