ಚಿರಂತನ್ ಮತ್ತು ಚಂಚಲ ಮದುವೆ ನಿಲ್ಲಿಸುತ್ತಾಳಾ ಜಾನಕಿ?
ಮಗಳು ಜಾನಕಿ ಧಾರಾವಾಹಿಯಲ್ಲಿ ಈಗ ಚಂಚಲ ಮತ್ತು ಚಿರಂತನ್ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇಷ್ಟ ಇಲ್ಲದ ಮಗನ ಮದುವೆಯ ಸುಳಿಯಲ್ಲಿ ಸಿಲುಕಿ ರಾಜು ಚೌಧರಿ ಒದ್ದಾಡುತ್ತಿದ್ದಾರೆ.
ಮತ್ತೊಂದೆಡೆ ಜಾನಕಿ ಪತಿ ನಿರಂಜನ್ ಗಾಗಿ ದೊಡ್ಡ ರಿಸ್ಕ್ ತೆರೆದುಕೊಂಡಿದ್ದಾರೆ. ಜಾನಕಿ ತೆಗೆದುಕೊಂಡ ರಿಸ್ಕ್ ನಿಂದ ಸಿ ಎಸ್ ಪಿ ಗೂ ಸಿಕ್ಕಾಪಟ್ಟೆ ನೋವಾಗಿದೆ. ಆದ್ರೆ ನಿರಂಜನ್ ಜಾನಕಿಯನ್ನು ಹೊಗಳಿ ಸಹಾಯ ಗಿಟ್ಟಿಸಿಕೊಂಡಿದ್ದಾರೆ.
ಸಾಕಷ್ಟು ಬೆಳವಣಿಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮಗನ ಮದುವೆ ತಡೆಯಲು ಸಾಧ್ಯವಾಗದೆ ಸಹಾಯಕ್ಕಾಗಿ ಜಾನಕಿ ಬಳಿ ಬಂದು ಅಂಗಲಾಚುತ್ತಿದ್ದಾರೆ ರಾಜು ಚೌಧರಿ. ಜಾನಕಿ ರಾಜು ಚೌಧರಿ ಮಾತನ್ನು ಉಳಿಸಿಕೊಳ್ಳುತ್ತಾರಾ ಅಥವಾ ಭಾರ್ಗಿ ಕುತಂತ್ರ ನೋಡಿ ಸೈಲೆಂಟ್ ಆಗುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಮುಂದೆ ಓದಿ..

ಜಾನಕಿ ಭೇಟಿ ಮಾಡಿದ ರಾಜು ಚೌಧರಿ
ಚಿರಂತನ್ ಗೂ ಚಂಚಲಾಗೂ ಮದುವೆ ಮಾಡಿಕೊಳ್ಳುವ ತಾಯಾರಿಯಲ್ಲಿದ್ದಾರೆ. ಎಂದು ಜಾನಕಿ ಅಳಲು ತೋಡಿಕೊಂಡ ರಾಜು ಚೌಧರಿ. ಭಾರ್ಗಿ ಇಂದ ತುಂಬಾ ಅನ್ಯಾಯವಾಗಿದೆ ಇದರಿಂದ ಹೇಗೆ ಮದುವೆ ಸಾಧ್ಯ. ಪತ್ನಿಗೆ ಆರೋಗ್ಯ ಸರಿ ಇಲ್ಲ ಆಸ್ಪತ್ರೆಗಯಲ್ಲಿದ್ದಾರೆ. ಎಂದು ಜಾನಕಿ ಬಳಿ ಸಹಾಯ ಕೇಳಿದ ರಾಜು ಚೌಧರಿ.

ಸಿ ಎಸ್ ಪಿಯಿಂದ ಮಗನನ್ನು ದೂರ ಮಾಡಿದ್ದಾರೆ
ಸಿ ಎಸ್ ಪಿಯಿಂದ ಮಗನನ್ನು ದೂರ ಮಾಡಲು ಭಾರ್ಗಿ ಹರಸಾಹಸ ಪಡುತ್ತಿದ್ದಾರೆ. ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡಿಸಿಕೊಂಡು ತಂದೆಯಿಂದ ದೂರ ಮಾಡಿದ್ದಾರೆ. ಎಂದು ಜಾನಕಿ ಮುಂದೆಯೇ ಹೇಳಿದ ರಾಜು ಚೌಧರಿ. ಚಿರಂತನ್ ಅನ್ನು ದೂರ ಮಾಡ್ತಾರೆ ಎನ್ನುವ ಭಯದಲ್ಲಿದ್ದಾರೆ ರಾಜು ಚೌಧರಿ.

ಕೈ ಮುಗಿದು ಕೇಳಿಕೊಂಡ ರಾಜು ಚೌಧರಿ
ಚಿರಂತನ್ ಮತ್ತು ಚಂಚಲ ಮದುವೆಯನ್ನು ನಿಲ್ಲಿಸುವಂತೆ ರಾಜು ಚೌಧರಿ ಜಾನಕಿ ಬಳಿ ಕೈ ಮುಗಿದು ಕೇಳಿ ಕೊಂಡಿದ್ದಾರೆ. ಭಾರ್ಗಿ ಬಂದು ಕ್ಷಮೆ ಕೇಳಿದ್ರೆ ಸಾಧ್ಯವಾಗ ಬಹುದು. ಆದ್ರೆ ಭಾರ್ಗಿ ಯಾವಾದೆ ಕಾರಣಕ್ಕು ಕ್ಷಮೆ ಕೇಳಲು ತಯಾರಿಲ್ಲ. ಹಾಗಾಗಿ ಚಂಚಲ ಮತ್ತು ಚಿರಂತನ್ ಮದುವೆ ನಡೆಯುತ್ತೆ ಎನ್ನುವ ಅನುಮಾನ ಪ್ರೇಕ್ಷಕರನ್ನು ಕಾಡುತ್ತಿದೆ.

70 ಲಕ್ಷ ಸಾಲದ ಬಗ್ಗೆ ಸಿ ಎಸ್ ಪಿಗೆ ತಿಳಿಯಿತು
ಸಿ ಎಸ್ ಪಿಗೆ ಹೇಳದೆ ಜಾನಕಿ ನಿರಂಜನ್ ಗೆ ಗ್ಯಾರಂಟಿ ಸಹಿ ಹಾಕಿದ್ದಾರೆ. ಹಾಗಾಗಿ ಮೊದಲೆ ಮಾತನಾಡಿ ಈ ನಿರ್ಧಾರ ಮಾಡಬೇಕಿತ್ತು. ಹೇಗೆ ನಿರ್ಧಾರ ತೆಗೆದುಕೊಂಡಳು ಎಂದು ಸಿ ಎಸ್ ಪಿ ಕೋಪಗೊಂಡಿದ್ದಾರೆ. ನಿರಂಜನ್ ಬೆಜವಾಬ್ದಾರಿ ಮನುಷ್ಯ. ಏನಾದ್ರು ಬ್ಯುಸಿನೆಸ್ ಮುಳುಗಿ ಹೋದ್ರೆ ಜಾನಕಿ ಕತೆ ಅಷ್ಟೆ ಎಂದು ಬೇಸರಮಾಡಿಕೊಂಡಿದ್ದಾರೆ ಸಿ ಎಸ್ ಪಿ.

70ಲಕ್ಷಕ್ಕೆ ಗ್ಯಾರಂಟಿ ಸಿಹಿ ಹಾಕಿದ ಜಾನಕಿ
ಜಾನಕಿ ಪತಿ ನಿರಂಜನ್ ಗೆ ಬ್ಯಾಂಕಿನಿಂದ ಸಾಲ ಪಡೆಯಲು ಗ್ಯಾರಂಟಿ ಸಹಿ ಹಾಕಿದ್ದಾರೆ. ಬೇಜಾವಾಬ್ದಾರಿ ನಿರಂಜನ್ ಗೆ 70 ಲಕ್ಷಕ್ಕೆ ಗ್ಯಾರಂಟಿ ಹಾಕಿದ್ದು ಯಾಕೆ ಎಂದು ಜಾನಕಿ ಬಳಿ ರೇಗಿದ ಬಳಿಕ ಏನೆ ಆದ್ರೂ ಎದುರಿಸೋಣ ಎಂದು ಅಭಯ ನೀಡಿದ್ದಾರೆ.


Click it and Unblock the Notifications











