ಎಲ್ಲಾ ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆ ಜಾಹ್ನವಿ ಒಂದೇ ಮಾತು; ಅಭಿಮಾನಿಗಳು ಅಸಮಾಧಾನ

ಕಳೆದ ವಾರ ಜಾಹ್ನವಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಫಿನಾಲೆವರೆಗೂ ಹೋಗುತ್ತಾರೆ ಎಂದುಕೊಂಡಿದ್ದವರು ಅಚ್ಚರಿ ಎನ್ನುವಂತೆ 63 ದಿನಕ್ಕೆ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಮನೆಯಿಂದ ಹೊರ ಬಂದ ಮೇಲೆ ಬಿಗ್‌ಬಾಸ್ ಶೋ ಅನುಭವಗಳ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಜಾಹ್ನವಿ ಮಾತನಾಡಿದ್ದಾರೆ.

ಬಿಗ್‌ಬಾಸ್ ಸೀಸನ್ 12 ಶೋ ಯಾರು ಗೆಲ್ಲಬಹುದು, ಯಾರು ಫಿನಾಲೆಗೆ ಹೋಗಬಹುದು ಎಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಗಿಲ್ಲಿ ಕ್ರೇಜ್ ಬಗ್ಗೆ ಕೂಡ ಜಾಹ್ನವಿ ಮಾತನಾಡುತ್ತಿದ್ದಾರೆ. ನನಗೆ ಗಿಲ್ಲಿ ಕ್ರೇಜ್ ನೋಡಿ ಅಚ್ಚರಿ ಆಗ್ತಿಲ್ಲ ಎಂದು ಹೇಳಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಅವರನ್ನು ಗಿಲ್ಲಿ ಕಾಡಿದ್ದು ಗೊತ್ತೇಯಿದೆ.

Janhvi Opens Up After Bigg Boss Exit Says Gilly Can Win Despite Overboard Comedy

ಗಿಲ್ಲಿ ಕಾಮಿಡಿ ಕೆಲವೊಮ್ಮೆ ವೈಯಕ್ತಿಕವಾಗಿ ಬೇರೆಯವರ ಮನಸ್ಸು ನೋಯಿಸಿದ್ದು ಇದೆ. ತಮ್ಮ ಬಿಳಿ ಕೂದಲಿನ ಬಗ್ಗೆ ಗಿಲ್ಲಿ ತಮಾಷೆ ಮಾಡಿದ್ದರ ಬಗ್ಗೆ ಕೂಡ ಜಾಹ್ನವಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಬಹುತೇಕ ಸಂದರ್ಶನಗಳಲ್ಲಿ ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದ್ದಕ್ಕೆ 'ಜನ ಮರುಳೋ ಜಾತ್ರೆ ಮರುಳೋ' ಅಂತ ಅನ್ನಿಸುತ್ತದೆ ಎಂದು ಜಾಹ್ನವಿ ಹೇಳಿದ್ದಾರೆ. ಇದು ಗಿಲ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಗಿಲ್ಲಿ ಕಾಮಿಡಿ ಮಾಡುತ್ತಾ ಆಟ ಆಡುತ್ತಿದ್ದಾರೆ. ಅದು ಎಲ್ಲರಿಗೂ ಇಷ್ಟವಾಗಿದೆ, ಮನೆಯಲ್ಲಿ ಎಂಟರ್‌ಟೈನರ್ ಅಂದ್ರೆ ಗಿಲ್ಲಿ, ಇದರಲ್ಲಿ ಜನ ಮರಳು ಜಾತ್ರೆ ಮರುಳೋ ಅನ್ನುವಂಥದ್ದು ಏನಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. "ಹೌದು ಗಿಲ್ಲಿ ಚೆನ್ನಾಗಿ ಆಡ್ತಿದ್ದಾರೆ. ಕಾಮಿಡಿ ಮಾಡಿ ಎಲ್ಲರನ್ನು ನಗಿಸ್ತಿದ್ದಾರೆ ನಿಜ. ಆದರೆ ಬಿಗ್‌ಬಾಸ್ ವ್ಯಕ್ತಿತ್ವದ ಆಟ. ಕಾಮಿಡಿ ಬಿಟ್ಟರೆ ಗಿಲ್ಲಿಯ ಬೇರೆ ಎಮೋಷನ್ಸ್ ಯಾರು ನೋಡಿಲ್ಲ. ಕೋಪ, ತಾಪ, ದಯೆ, ಎಮೋಷನ್ ಯಾವುದು ಇಲ್ಲ. ತೋರಿಸಿಕೊಳ್ತಿಲ್ಲ ಅನ್ನಿಸ್ತಿದೆ, ನಾನಂತೂ ನೋಡಿಲ್ಲ. ಆದರೂ ಗೆಲ್ಲೋದು ಅವ್ನೇ" ಎಂದು ಜಾಹ್ನವಿ ಸಂದರ್ಶನಗಳಲ್ಲಿ ಹೇಳಿದ್ದಾರೆ.

Janhvi Opens Up After Bigg Boss Exit Says Gilly Can Win Despite Overboard Comedy

"24 ಗಂಟೆ ಮನೆಯಲ್ಲಿ ನಡೆಯುವುದನ್ನೆಲ್ಲಾ ಜನ ನೋಡಲ್ಲ. ಎಲ್ಲವನ್ನು ಎಡಿಟ್ ಮಾಡಿ ಯಾವುದು ಚೆನ್ನಾಗಿರುತ್ತದೋ ಅದನ್ನು ಮಾತ್ರ ಒಂದೂವರೆ ಗಂಟೆ ಪ್ರಸಾರ ಮಾಡ್ತಾರೆ. ಗಿಲ್ಲಿ ಯಾವ ಯಾವ ರೀತಿ ತಮಾಷೆ ಮಾಡ್ತಾನೆ, ಅದು ಕೆಲವೊಮ್ಮೆ ಮನೆ ಒಳಗೆ ಅತಿರೇಕ ಅನ್ನಿಸುತ್ತದೆ. ಎಡಿಟ್ ಮಾಡಿ ತೋರಿಸಿದಾಗ ಮಜಾ ಅನ್ನಿಸಬಹುದು. ಪ್ರತಿ ಸೀಸನ್‌ನಲ್ಲಿ ಈ ತರ ಒಬ್ಬರ ಬಗ್ಗೆ ಫಾಲೋಯಿಂಗ್ ಇರುತ್ತದೆ. ಅದರಲ್ಲಿ ನನಗೇನು ಆಶ್ಚರ್ಯ ಅನ್ನಿಸ್ತಿಲ್ಲ ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಜಾಹ್ನವಿ ಹೇಳಿದ್ದಾರೆ.

ಗಿಲ್ಲಿ ಹಾಗೂ ರಕ್ಷಿತಾ ಇಬ್ಬರೂ ಸ್ಮಾರ್ಟ್ ಇದ್ದಾರೆ. ಅಶ್ವಿನಿ ಜೊತೆ ಇವರಿಬ್ಬರು ಟಾಪ್‌-3 ಅಲ್ಲಿ ಇರ್ತಾರೆ. ಈ ಮೂವರನ್ನು ಬಿಟ್ಟರೆ ಉಳಿದವರೆಲ್ಲಾ ಟಾಪ್‌-5 ಹಂತಕ್ಕೆ ಏರಲು ಆಟದಲ್ಲಿ ಬಹಳ ದೂರ ಉಳಿದಿದ್ದಾರೆ. ಅನಿವಾರ್ಯವಾಗಿ ಇಬ್ಬರನ್ನು ಟಾಪ್‌-5ಗೆ ಸೇರಿಸಬೇಕು ಅಷ್ಟೇ ಎಂದಿದ್ದಾರೆ. ನನಗೆ ವೈಯಕ್ತಿಕವಾಗಿ ಅಶ್ವಿನಿ ಗೌಡ ಗೆಲ್ಲಬೇಕು. ಆದರೆ ಗಿಲ್ಲಿ ಗೆಲ್ಲಬಹುದು ಅನ್ನಿಸುತ್ತಿದೆ ಎಂದು ತಿಳಿಸಿದ್ದಾರೆ. ಕಾವ್ಯಾ ಇಲ್ಲದೇ ಗಿಲ್ಲಿ ಜೀರೊ ಅನ್ನೋಕೆ ಆಗಲ್ಲ, ಗಿಲ್ಲಿಯಿಂದಲೇ ಕಾವ್ಯಾಗೆ ಪ್ಲಸ್ ಪಾಯಿಂಟ್ ಎಂದು ಜಾಹ್ನವಿ ಹೇಳಿದ್ದಾರೆ.

ಬಿಗ್‌ಬಾಸ್ ಮನೆಗೆ 5ನೇ ಸ್ಪರ್ಧಿಯಾಗಿ ಜಾಹ್ನವಿ ಹೋಗಿದ್ದರು. ಸುದ್ದಿವಾಹಿನಿ ನಿರೂಪಕಿಯಾಗಿ ಗುರ್ತಿಸಿಕೊಂಡಿದ್ದ ಜಾಹ್ನವಿ ಬಳಿಕ ಕಲರ್ಸ್ ವಾಹಿನಿ ಶೋಗಳಲ್ಲಿ ಭಾಗವಹಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ತಮ್ಮ ಕಾಸ್ಟ್ಯೂಮ್ಸ್ ಹಾಗೂ ಪಿಆರ್‌ಗಾಗಿ 4 ಲಕ್ಷ ವ್ಯಯಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಅದು ಉಪಯೋಗಕ್ಕೆ ಬಂತು, ನನ್ನ ಕಾಸ್ಟ್ಯೂಮ್ ಬಗ್ಗೆ ಎಲ್ಲರೂ ಮಾತನಾಡುವಂತಾಯಿತು ಎಂದು ಹೇಳಿದ್ದಾರೆ. ಮುಂದೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸೋ ಬಗ್ಗೆ ಸುಳಿವು ನೀಡಿದ್ದಾರೆ.

More from Filmibeat

Read more about: bigg boss 12 gilli bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X