ಯಶೋಧೆ ಅವತಾರದಲ್ಲಿ ಮಿಂಚಿದ 'ಜೊತೆ ಜೊತೆಯಲಿ' ಮಾನ್ಸಿ ಅಲಿಯಾಸ್ ನಯನಾ

By ಪ್ರಿಯಾ ದೊರೆ

ಕನ್ನಡದ ಸಾಕಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ನಯನಾ 'ಜೊತೆ ಜೊತೆಯಲಿ' ಧಾರಾವಾಹಿಯ ಮಾನ್ಸಿ ಪಾತ್ರದ ಮೂಲಕ ಫೇಮಸ್ ಆಗಿದ್ದರು. ಧಾರಾವಾಹಿಯಲ್ಲಿ ಸ್ಟೈಲಿಶ್ ಆಗಿ ಮಾತನಾಡುತ್ತಾ ಬುದ್ಧಿವಂತ ದಡ್ಡಿಯಂತೆ ನಟಿಸಿ ಎಲ್ಲರ ಮನ ಗೆದ್ದಿದ್ದರು.

ನಟಿ ನಯನಾ ಅವರು ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು, ಎರಡು ವರ್ಷಗಳ ಬ್ರೇಕ್ ಪಡೆದಿದ್ದ ಅವರು 'ಜೊತೆ ಜೊತೆಯಲಿ' ಮೂಲಕ ಕಮ್ ಬ್ಯಾಕ್ ಮಾಡಿದ್ದರು.

Janmashtami 2023: TV Actress Nayana and her sons special photoshoot as Krishna, Yashoda

ಅಕಸ್ಮಾತ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಯನಾ ನಂತರ ಧಾರಾವಾಹಿ ಲೋಕದಲ್ಲೇ ಪ್ರಸಿದ್ಧಿ ಪಡೆದರು. ವಿಲನ್ ಪಾತ್ರದ ಮೂಲಕ ಖ್ಯಾತಿ ಪಡೆದ ಚೆಲುವೆ ಕಿರುತೆರೆಗೆ ಎಂಟ್ರಿ ಕೊಟ್ಟರು.

ಈಗ ಮತ್ತೆ ನಟನೆಯಿಂದ ದೂರ

ನಯನಾ ಅವರು ಗರ್ಭಿಣಿಯಾಗಿದ್ದಾಗ ನಟನೆಯಿಂದ ಬ್ರೇಕ್ ಪಡೆದಿದ್ದರು. ಎರಡು ವರ್ಷದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟರು. ಅದೂ ಕೂಡ 'ಇಂತಿ ನಿಮ್ಮ ಆಶಾ' ಎಂಬ ಧಾರಾವಾಹಿ ಮೂಲಕ. ನಯನ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹರ್ಷವರ್ಧನ್ ಪತ್ನಿಯಾಗಿ ಮಾನ್ಸಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿನ ಮಾನ್ಸಿ ಪಾತ್ರವನ್ನು ಹಲವರು ಮೆಚ್ಚಿಕೊಂಡರು.

Janmashtami 2023: TV Actress Nayana and her sons special photoshoot as Krishna, Yashoda

ಪತಿ ಮಗು ಜೊತೆಗೆ ಇರುವ ನಟಿ

ನಟಿ ನಯನಾ ಅವರು ನಟನೆಗೆ ಬರುವ ಮುನ್ನ ಉಪನ್ಯಾಸಕಿ ಆಗಿದ್ದರು. ಸ್ನಾತಕೋತ್ತರ ಪದವಿ ಪಡೆದ ಇವರು ಸುಮಾರು 2 ವರ್ಷಗಳ ಕಾಲ ಉಪನ್ಯಾಸಕಿ ಆಗಿ ಕೆಲಸ ಮಾಡಿದ್ದರು. ವೆಂಕಟೇಶ್ ಪ್ರಸಾದ್ ಎಂಬುವರ ಜೊತೆಗೆ ವಿವಾಹವಾಗಿದ್ದು, ನಯನಾ ಅವರಿಗೆ ಪ್ರಯಾನ್ ಭಾರದ್ವಾಜ್ ಎಂಬ ಮುದ್ದಾದ ಗಂಡು ಮಗುವಿದೆ. ಕಿರುತೆರೆಯಲ್ಲಿ ಸುಮಾರು ವರ್ಷಗಳಿಂದ ಇದ್ದು, ಗರ್ಭಿಣಿಯಾದ ಕಾರಣ ಕೆಲ ಕಾಲ ಬ್ರೇಕ್ ಪಡೆದಿದ್ದರು. ಆಕೆ 'ಮನೆದೇವ್ರು', 'ಗಾಳಿಪಟ', 'ಪುಟ್ಟಗೌರಿ ಮದುವೆ', 'ವಸುದೈವ ಕುಟುಂಬ', 'ಕನಕ', 'ಕರ್ಪೂರದ ಬೊಂಬೆ', 'ವಾರಾಸ್ದಾರ', 'ಸತ್ಯ ಶಿವಂ ಸುಂದರಂ' ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಟಿಪ್ಸ್ ನೀಡುವ ನಟಿ

ನಯನಾ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿ ಇರುತ್ತಾರೆ. ಫಾಲೋವರ್ಸ್‌ಗಳಿಗೆ ಬ್ಯೂಟಿ ಟಿಪ್ಸ್, ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ. ಬಟ್ಟೆಗಳನ್ನು ಹೇಗೆ ಜೋಪಾನ ಮಾಡಬೇಕು. ಸೀರೆಗಳಿಗೆ ಮ್ಯಾಚಿಂಗ್ ಬ್ಲೌಸ್ ಹೇಗಿರಬೇಕು ಎಂದೆಲ್ಲಾ ಟಿಪ್ಸ್ ಕೊಡುತ್ತಿರುತ್ತಾರೆ. ಅಲ್ಲದೇ, ಆಗಾಗ ಫೋಟೋಶೂಟ್ ಮಾಡಿಸುವ ನಯನಾ ರೀಲ್ಸ್ ಕೂಡ ಮಾಡುತ್ತಿರುತ್ತಾರೆ. ಅಲ್ಲದೇ ಹೆಲ್ತ್ ಬಗ್ಗೆಯೂ ಮಾಹಿತಿ ನೀಡುವ ಆಕೆಗೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಸದ್ಯ ನಟಿ ನಯನಾ ಅವರು ಒಳ್ಳೊಳ್ಳೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಆಕೆಗೆ ಖಳ ನಾಯಕಿಯ ಪಾತ್ರವೇ ಹೆಚ್ಚು ಇಷ್ಟವಾಗುತ್ತದೆಯಂತೆ. ವಿಲನ್ ಪಾತ್ರದ ಮೂಲಕ ಜನರ ಮನಸ್ಸಿಗೆ ಬೇಗ ತಲುಪಬಹುದು ಎನ್ನುತ್ತಾರೆ ನಯನಾ.

ಯಶೋಧೆಯಾದ ನಯನಾ

ಇದೀಗ ನಟಿ ನಯನಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುತ್ರನ ಜೊತೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಅದೂ ಕೂಡ ಯಶೋಧೆ ಅವತಾರದಲ್ಲಿ ನಯನಾ ಕಾಣಿಸಿಕೊಂಡಿದ್ದಾರೆ. ಮಗನನ್ನು ಕೃಷ್ಣನನ್ನಾಗಿ ಅಲಂಕರಿಸಿದ್ದಾರೆ. ಈ ಫೋಟೋಗಳನ್ನು ನಯನಾ ಅವರು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಿಲಕವಿಟ್ಟು, ಕೆಂಪು ರೇಷ್ಮೇ ಸೀರೆಯಲ್ಲಿ ಕಂಗೊಳಿಸುತ್ತಿರುವ ನಯನಾ ಅವರು ಮುದ್ದಾಗಿ ಕಾಣುತ್ತಿದ್ದಾರೆ.

More from Filmibeat

English summary
Mansi alias Nayana small screen journey and her new photo shoot:ಮಾನ್ಸಿ ಅಲಿಯಾಸ್ ನಯನಾ ಅವರ ಸೀರಿಯಲ್ ಜರ್ನಿ ಮತ್ತು ಹೊಸ ಫೋಟೋಗಳು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X