»   » 'ಬಿಗ್ ಬಾಸ್' ಮನೆಯಲ್ಲಿ ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ.!

'ಬಿಗ್ ಬಾಸ್' ಮನೆಯಲ್ಲಿ ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ.!

Posted By:
Subscribe to Filmibeat Kannada

ಇದುವರೆಗೂ ಒಂದು ಲೆಕ್ಕ....ಇನ್ಮುಂದೆ ಒಂದು ಲೆಕ್ಕ. ಈ ಡೈಲಾಗ್ ಬಿಗ್ ಬಾಸ್ ಮನೆಯಲ್ಲಿರುವ ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸನ್ ಅವರಿಗೆ ಸೂಕ್ತವಾಗಿ ಹೋಲುತ್ತೆ.

ಇಷ್ಟು ದಿನ 'ಬಿಗ್' ಮನೆಯಲ್ಲಿ ಯಾರು ಏನೇ ಅಂದ್ರು ಸೈಲಾಂಟ್ ಆಗಿ ಇರ್ತಿದ್ದ ಜಯಶ್ರೀನಿವಾಸನ್ ಕಳೆದ ಎರಡು ದಿನಗಳಿಂದ 'ಹೆಬ್ಬುಲಿ'ಯಂತೆ ಅಬ್ಬರಿಸುತ್ತಿದ್ದಾರೆ.

ಮೊನ್ನೆಯಷ್ಟೇ ಸುದೀಪ್, ರಜನಿಕಾಂತ್ ಸ್ಟೈಲ್ ನಲ್ಲಿ ಪಂಚಿಂಗ್ ಡೈಲಾಗ್ ಹೊಡೆದು ಗಮನ ಸೆಳೆದಿದ್ದ ಸಂಖ್ಯಾಶಾಸ್ತ್ರಜ್ಞ ನಿನ್ನೆಯೂ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರತಾಪ ತೋರಿದ್ದಾರೆ.

ಸಮೀರಾಚಾರ್ಯ ಪರ ನಿಂತ ಜೆ.ಎಸ್

ಸಮೀರಾಚಾರ್ಯ ಅವರು ಒಂದು ಲೋಟ ಹಾಲು ಕುಡಿಯಲು ಕೇಳಿದರು. ಆದ್ರೆ, ಸಿಹಿ ಕಹಿ ಚಂದ್ರು ಅವರು ''ಒಂದು ಲೋಟ ಹಾಲು ನೀವೇ ಕುಡಿದರೇ ಬೇರೆಯವರಿಗೆ ಇಲ್ಲದಂತಾಗುತ್ತೆ. ಅರ್ಧ ಲೋಟ ತಗೊಳ್ಳಿ ಎಂದರು. ಆಗ ಮಧ್ಯೆ ಪ್ರವೇಶಿಸಿದ ಜಯಶ್ರೀನಿವಾಸನ್ ''ಸಮೀರಾಚಾರ್ಯ ಅವರಿಗೆ ''ಪರವಾಗಿಲ್ಲ ಒಂದು ಲೋಟ ಹಾಲು ನೀವು ತಗೊಳ್ಳಿ. ಏನೂ ಆಗಲ್ಲ. ಅವರೆಲ್ಲಾ ಟೀ-ಕಾಫಿ ಕುಡಿತಾರೆ'' ಎಂದು ಸಪೋರ್ಟ್ ಮಾಡಿದರು. ಆದ್ರೆ, ಸಮೀರಾಚಾರ್ಯ ತಗೋಳ್ಳಲೇ ಇಲ್ಲ.


'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.!

ಆಶಿತಾ ಹಾಗೂ ಜಗನ್ ಟಾಂಗ್ ಕೊಟ್ಟ ಜೆ.ಎಸ್

ಸಮೀರಾಚಾರ್ಯ ಅವರ ಹಾಲಿನ ಗಲಾಟೆಗೆ ಸಂಬಂಧಿಸಿದಂತೆ ಮನೆಯವರೆಲ್ಲಾ ಮಾತನಾಡುವಾಗ ಆಶಿತಾ ಚಂದ್ರಪ್ಪ ಮತ್ತು ಜಗನ್ ಇಬ್ಬರ ಮೇಲೂ ಜಯಶ್ರೀನಿವಾಸನ್ ವಾಗ್ವಾದಕ್ಕೀಳಿದರು. ಈ ಮೂವರ ಮಧ್ಯೆ ಮಾತಿನ ಸಮರವೇ ನಡೆಯಿತು.

ಇನ್ಮೇಲೆ ನನಗೋಸ್ಕರ ಹೋರಾಟ

ಸಮೀರಾಚಾರ್ಯ ಅವರ ಪರವಾಗಿ ಜಯಶ್ರೀನಿವಾಸನ್ ಅವರು ಮಾತನಾಡಿದ್ರು, ಸಮೀರ್ ಅವರು ಯಾವುದೇ ಮಾತು ಆಡಿಲ್ಲ. ಇದು ಜೆ.ಎಸ್ ಅವರನ್ನ ಕೆರಳಿಸಿತು. ಅದಕ್ಕೆ ''ಇನ್ಮುಂದೆ ನಾನು ನನಗೆ ಅನ್ಯಾಯ ಆದ್ರೆ ಮಾತ್ರ ತಲೆಕೆಡಿಸಿಕೊಳ್ಳತ್ತೇನೆ. ಬೇರೆಯವರಿಗೆ ಏನಾದ್ರೆ ನನಗೇನೂ'' ಎಂದು ಎಲ್ಲರ ಮುಂದೆ 10 ನಿಮಿಷ ಅಬ್ಬರಿಸಿ ಬೊಬ್ಬಿರಿದರು.

ನನ್ನ ವಿಷ್ಯಕ್ಕೆ ಬಂದರೆ ಕತೆ ಮುಗಿತು

ಸಮೀರಾಚಾರ್ಯ ಅವರ ಪರವಾಗಿ ಎಷ್ಟೇ ಮಾತನಾಡಿದ್ರು ಸಮೀರ್ ಅವರು ನನಗೆ ಸಪೋರ್ಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಜಯಶ್ರೀನಿವಾಸನ್ ಅವರು ಕೋಪ ಮಾಡಿಕೊಂಡರು. ನಾನು ಹೊಡೆದ ಡೈಲಾಗ್ ಎಲ್ಲ ನನಗೆ ಮಾತ್ರ ಸಂಬಂಧಿತ. ಇನ್ಮೇಲೆ ನನ್ನ ವಿಷ್ಯಕ್ಕೆ ಬಂದರೆ ಕತೆ ಮುಗಿತು ಅಂತ ಸುಮ್ಮನಾದರು.

English summary
Bigg Boss Kannada 5: Week 3: Numerologist jaya srinivasan is angry on bigg boss house members. ಬಿಗ್ ಬಾಸ್ ಮನೆಯಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರು ಮನೆಯ ಸದಸ್ಯರ ಮೇಲೆ ಕೋಪಗೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X