'ಬಿಗ್ ಬಾಸ್' ನಿಂದ ಬಂದ ಮೇಲೆ ಸಿನಿಮಾ ಹೀರೋ ಆದ ಜಯಶ್ರೀನಿವಾಸನ್!
'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮದ ಸ್ಪರ್ಧಿ ಆಗಿದ್ದ ಸಂಖ್ಯಾಶಾಸ್ತ್ರಙ್ಞ ಜಯ ಶ್ರೀನಿವಾಸ್ ಈಗ ಹೀರೋ ಆಗಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಮೇಲೆ ಸೈಲೆಂಟ್ ಆಗಿ ಸಿನಿಮಾ ರಂಗಕ್ಕೆ ಜಯಶ್ರೀನಿವಾಸ್ ಎಂಟ್ರಿ ಕೊಟ್ಟಿದ್ದಾರೆ.
'Y5=X' ಎಂಬ ವಿಶೇಷ ಟೈಟಲ್ ಅನ್ನು ಜಯಶ್ರೀನಿವಾಸನ್ ಅವರ ಮೊದಲ ಸಿನಿಮಾಗೆ ಇಡಲಾಗಿದೆ. ಈ ಸಿನಿಮಾವನ್ನು ರಿವನ್ ವಿಕ್ರಂ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ತಾರಬಳಗ ಸೇರಿದಂತೆ ಉಳಿದವರ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಜಯಶ್ರೀನಿವಾಸನ್ ನಾಯಕನಾಗಿ ಹೊಸ ಸಿನಿಮಾ ಮಾಡುತ್ತಿರುವುದು ಪಕ್ಕಾ.

ಇನ್ನು ಸಂಖ್ಯಾಶಾಸ್ತ್ರಙ್ಞರಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ್ ಜಯಶ್ರೀವಾಸ್ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟಿದ್ದರು. ತಮ್ಮ ಹಾಸ್ಯ ಪ್ರವೃತ್ತಿಯಿಂದ 'ಬಿಗ್ ಬಾಸ್' ನೋಡುಗರನ್ನು ನಗಿಸುತ್ತಿದ್ದರು. 'ಬಿಗ್ ಬಾಸ್' ಫೈನಲ್ ಹಂತಕ್ಕೆ ಜಯ ಶ್ರೀನಿವಾಸನ್ ಬರಲಿಲ್ಲ ಎಂಬ ಬೇಸರ ಅವರ ಅಭಿಮಾನಿಗಳಿಗೆ ಇತ್ತು. ಆದರೆ ಈಗ ಅವರ ಮೊದಲ ಸಿನಿಮಾ ಶುರುವಾಗಿದೆ.
More from Filmibeat
English summary
Bigg Boss Kannada 5 Jaya Srinivasan will play lead role in 'Y5=X' Kannada movie. The movie is directed Rivan Vikrama.
jaya srinivasan bigg boss kannada 5 bigg boss kannada news bigg boss kannada 5 contestants bigg boss tv reality show colors channel sudeep ಜಯಶ್ರೀನಿವಾಸನ್ ಬಿಗ್ ಬಾಸ್ ಕನ್ನಡ 5 ಬಿಗ್ ಬಾಸ್ ಟಿವಿ


Click it and Unblock the Notifications











