"ಒಂದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ" ನಟ ಜಯರಾಂ ಕಾರ್ತಿಕ್
ಜೆಕೆ ಎಂದೇ ಪ್ರಸಿದ್ಧಿ ಪಡೆದಿರುವ ನಟ ಕಾರ್ತಿಕ್ ಜಯರಾಮ ಅವರು ಯಾರಿಗೆ ಗೊತ್ತಿಲ್ಲ ಹೇಳಿ?! 'ಅಶ್ವಿನಿ ನಕ್ಷತ್ರ' ಎಂಬ ಧಾರಾವಾಹಿ ಮೂಲಕ ಬಹಳಷ್ಟು ಪಾಪ್ಯುಲಾರಿಟಿ ಪಡೆದ ಈ ನಟ ನಂತರ ಬಿಗ್ ಬಾಸ್ ನಲ್ಲಿಯೂ ತಮ್ಮ ಛಾಪನ್ನು ಮೂಡಿಸಿದರು. ಅದಾದ ಮೇಲೆ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮ ನಟನ ಕೆರಿಯರ್ ಅನ್ನು ಮುಂದುವರಿಸುತ್ತಿದ್ದಾರೆ.
ಸದ್ಯಕ್ಕೆ ಇವರು ಒಂದು ಬಿಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ತಪ್ಪಾಗಲ್ಲ. ನಿರ್ದೇಶಕ ನಾಗೇಂದ್ರ ಅರಸ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಓಂ ತತ್ಸತ್' ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ನಟ ಕಾರ್ತಿಕ್ ಜಯರಾಮ್ ಅವರು ಸ್ಪೋರ್ಟ್ಸ್ ಪರ್ಸನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಪಾತ್ರಕ್ಕಾಗಿ ಬಹಳಷ್ಟು ವರ್ಕೌಟ್ ಮಾಡಿ, ಪಾತ್ರಕ್ಕೆ ಸರಿಯಾಗಿರುವಂತೆ ತಯಾರಿ ನಡೆಸಿದ್ದಾರಂತೆ.

ಕಳೆದ ನಾಲ್ಕು ವರ್ಷಗಳಿಂದ ಈ ಸಿನಿಮಾಗೆ ಬಹಳಷ್ಟು ತಯಾರಿಗಳು ನಡೆದಿದ್ದು, ಇನ್ನೇನು ಇನ್ನೇನು ಸದ್ಯದಲ್ಲೇ ಹೊರಬರಲಿದೆ. ಕ್ರೀಡೆಯಲ್ಲಿ ಬಹಳ ಆಕ್ಟೀವ್ ಆಗಿರುವ ಅದನ್ನೇ ಜೀವನವಾಗಿಸಿಕೊಳ್ಳುವ ಅದೆಷ್ಟು ಸ್ಪೋರ್ಟ್ಸ್ ಮ್ಯಾನ್‌ಗಳ ಕಥೆಯನ್ನು ಹೇಳಲಿದೆಯಂತೆ ಈ ಸಿನಿಮಾ.
ಹೇಗೆ ಒಂದಷ್ಟು ಕಮರ್ಷಿಯಲ್ ಮೋಟಿವೇಶನ್ ಹಾಗೂ ವೈಯಕ್ತಿಕ ಜೀವನದ ಘಟನೆಗಳು ಒಬ್ಬ ಕ್ರೀಡಾಪಟುವಿನ ಕೆರಿಯರ್ ಹಾಗೂ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಸಿಕೊಡಲಿದೆಯಂತೆ ಈ ಸಿನಿಮಾ. ಯಾವುದೇ ರೀತಿಯ ಬೋಧನೆ ಇಲ್ಲದೆ ಸಮಾಜಕ್ಕೆ ಒಂದೊಳ್ಳೆ ಮೆಸೇಜನ್ನು ಕೊಡಲಿದೆ ಎಂದಿದ್ದಾರೆ ನಟ ಜೆಕೆ.

ಅಂದ ಹಾಗೆ ಇವರು ರಾವಣ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅದಾದ ಮೇಲೆ ಕೈವಾ ಚಿತ್ರದಲ್ಲೂ ಒಂದೊಳ್ಳೆ ಪಾತ್ರದಲ್ಲಿ ಜನರ ಮುಂದೆ ಬಂದಿದ್ದಾರೆ. ಅಂದ ಹಾಗೇ ಜಯರಾಂ ಅವರಿಗೆ ಒಂದೇ ರೀತಿಯ ಪಾತ್ರಗಳನ್ನು ತೆಗೆದುಕೊಳ್ಳಲು ಇಷ್ಟವಿಲ್ಲವಂತೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ತೆಗೆದುಕೊಂಡಾಗಲೇ ತಮ್ಮ ನಟನಾ ಸಾಮರ್ಥ್ಯದ ಅರಿವಾಗುವುದು ಹಾಗೆಯೇ ವೈವಿಧ್ಯಮಯವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುವುದು ಎಂಬುದು ಇವರ ಅಭಿಪ್ರಾಯ.
ಒಂದೇ ರೀತಿಯ ಪಾತ್ರಗಳನ್ನು ತೆಗೆದುಕೊಳ್ಳದೇ ಹಲವಾರು ಮಜಲುಗಳನ್ನು ಹೊಂದಿರುವ ವಿಶೇಷ ಪಾತ್ರಗಳನ್ನು ತೆಗೆದುಕೊಂಡಿರುವುದರ ಬಗ್ಗೆ ಅವರಿಗೆ ಬಹಳ ಸಂತೃಪ್ತಿ ಇದೆ. ಸದಾ ಕ್ರಿಯಾಶೀಲ ತಂಡಗಳೊಂದಿಗೆ ಕೆಲಸ ಮಾಡಲು ಹಪಹಪಿಸುವ ಇವರು, ಬೇರೆ ಬೇರೆ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚುವುದನ್ನೇ ತಮ್ಮ ಯಶಸ್ಸು ಎಂದು ಪರಿಗಣಿಸುತ್ತಾರಂತೆ.


Click it and Unblock the Notifications











