For Quick Alerts
  ALLOW NOTIFICATIONS  
  For Daily Alerts

  'ನಾಗಿಣಿ' ಜೊತೆಗೆ ಬುಸುಗುಡಲಿದ್ದಾರೆ ಸೂಪರ್ ಸ್ಟಾರ್ ಜೆಕೆ.!

  |
  ನಾಗಕನ್ನಿಕೆಯಾಗಿ ಪುಟ್ಟತಗೌರಿ ಸೀರಿಯಲ್ ಖ್ಯಾತಿಯ ನಮ್ರತಾ | JK | NAGINI 2 | FILMIBEAT KANNADA

  'ನಾಗಿಣಿ' ಎಂದ ಕೂಡಲೆ ಕನ್ನಡ ಕಿರುತೆರೆ ವೀಕ್ಷಕರಿಗೆ ಥಟ್ ಅಂತ ನೆನಪಾಗುವುದು ದೀಪಿಕಾ ದಾಸ್. ವರ್ಷಗಳಿಂದ ನಾಗಿಣಿ ಪಾತ್ರವನ್ನು ಪೋಷಿಸುತ್ತಾ ಬಂದಿದ್ದ ದೀಪಿಕಾ ದಾಸ್ ಇದೀಗ 'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆಗಿದ್ದಾರೆ. ಅತ್ತ 'ನಾಗಿಣಿ' ಧಾರಾವಾಹಿ ಕೂಡ ಕ್ಲೈಮ್ಯಾಕ್ಸ್ ಹಂತ ತಲುಪಿದೆ.

  ಸದ್ಯ ಜೀ ಕನ್ನಡ ವಾಹಿನಿಯಲ್ಲಿ 'ನಾಗಿಣಿ'ಯ ಅಂತಿಮ ಅಧ್ಯಾಯ ಪ್ರಸಾರ ಆಗುತ್ತಿದೆ. ಅದು ಮುಗಿಯುತ್ತಿದ್ದ ಹಾಗೆ 'ನಾಗಿಣಿ-2' ಆರಂಭ ಆಗಲಿದೆ. 'ನಾಗಿಣಿ-2' ಸೀರಿಯಲ್ ನಲ್ಲಿ ನಾಗಕನ್ನಿಕೆ ಆಗಿ 'ಪುಟ್ಟಗೌರಿ ಮದುವೆ' ಖ್ಯಾತಿಯ ನಮ್ರತಾ ಗೌಡ ಬುಸುಗುಡಲಿದ್ದಾರೆ.

  ನಾಗಿಣಿ ನಮ್ರತಾ ಗೌಡ ಜೊತೆಗೆ 'ನಾಗರಾಜ'ನಾಗಿ ಜಯರಾಂ ಕಾರ್ತಿಕ್ ಮಿಂಚಲಿದ್ದಾರೆ. ಮುಂದೆ ಓದಿರಿ...

  'ನಾಗರಾಜ'ನಾದ ಜೆಕೆ

  'ನಾಗರಾಜ'ನಾದ ಜೆಕೆ

  ಕನ್ನಡ ಕಿರುತೆರೆಗೆ ಜಯರಾಂ ಕಾರ್ತಿಕ್ ಮರಳಿದ್ದಾರೆ. 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಜೆಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಯರಾಂ ಕಾರ್ತಿಕ್ ಕಿರುತೆರೆ ವೀಕ್ಷಕರ ಹಾಟ್ ಫೇವರಿಟ್ ಆಗಿದ್ದರು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದ 'ಜೆ.ಕೆ' ಇದೀಗ ಲಾಂಗ್ ಗ್ಯಾಪ್ ಬಳಿಕ ಕನ್ನಡ ಸೀರಿಯಲ್ ಗಾಗಿ ಬಣ್ಣ ಹಚ್ಚಿದ್ದಾರೆ.

  'ಪುಟ್ಟಗೌರಿ ಮದುವೆ'ಯ ಹಿಮಾ ಇನ್ಮೇಲೆ 'ನಾಗಿಣಿ'ಯಾಗಿ ಬುಸುಗುಡಲಿದ್ದಾರೆ.!'ಪುಟ್ಟಗೌರಿ ಮದುವೆ'ಯ ಹಿಮಾ ಇನ್ಮೇಲೆ 'ನಾಗಿಣಿ'ಯಾಗಿ ಬುಸುಗುಡಲಿದ್ದಾರೆ.!

  'ಬಿಗ್ ಬಾಸ್' ಸ್ಪರ್ಧಿ ಜೆಕೆ

  'ಬಿಗ್ ಬಾಸ್' ಸ್ಪರ್ಧಿ ಜೆಕೆ

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ವೀಕ್ಷಕರ ಗಮನ ಸೆಳೆದಿದ್ದ ಜಯರಾಂ ಕಾರ್ತಿಕ್ ಫಿನಾಲೆವರೆಗೂ ತಲುಪಿದ್ದರು. ಈ ನಡುವೆ ಹಿಂದಿಯ 'ಸಿಯಾ ಕೆ ರಾಮ್' ಧಾರಾವಾಹಿಯಲ್ಲಿ ರಾವಣನಾಗಿ ಅಬ್ಬರಿಸಿದ್ದರು. ಈಗ ಮತ್ತೆ ಕನ್ನಡ ಕಿರುತೆರೆ ಲೋಕದ ಕಡೆ ಮುಖ ಮಾಡಿರುವ ಜೆಕೆ ನಾಗಲೋಕದ ಸೇಡಿನ ಕಥೆಯ ಭಾಗವಾಗಿದ್ದಾರೆ.

  ಕಾಲ ಕಾಲಕ್ಕೆ ನಡೆಯಬೇಕಾದದ್ದು ನಡೆದೇ ನಡೆಯುತ್ತೆ..!- ಜೆ.ಕೆಕಾಲ ಕಾಲಕ್ಕೆ ನಡೆಯಬೇಕಾದದ್ದು ನಡೆದೇ ನಡೆಯುತ್ತೆ..!- ಜೆ.ಕೆ

  ಕಥೆ ಇಷ್ಟವಾಗಿದೆ

  ಕಥೆ ಇಷ್ಟವಾಗಿದೆ

  'ಆ ಕರಾಳ ರಾತ್ರಿ', 'ಮೇ ಫಸ್ಟ್', 'ಪುಟ 109' ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದ ಜಯರಾಂ ಕಾರ್ತಿಕ್ ಗೆ 'ನಾಗಿಣಿ-2' ಧಾರಾವಾಹಿಯ ಕಥೆ ಮತ್ತು ಪಾತ್ರ ಇಷ್ಟವಾದ ಕಾರಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ನಾಮಿನೇಟ್ ಆದ ನಟ ಜೆಕೆಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ನಾಮಿನೇಟ್ ಆದ ನಟ ಜೆಕೆ

  ಇಂಪ್ರೆಸ್ ಮಾಡುತ್ತಿರುವ ಪ್ರೋಮೋಗಳು

  ಇಂಪ್ರೆಸ್ ಮಾಡುತ್ತಿರುವ ಪ್ರೋಮೋಗಳು

  'ನಾಗಿಣಿ-2' ಪ್ರೋಮೋಗಳು ಈಗಾಗಲೇ ಬಿಡುಗಡೆ ಆಗಿದ್ದು, ಕಿರುತೆರೆ ವೀಕ್ಷಕರನ್ನು ಇಂಪ್ರೆಸ್ ಮಾಡುತ್ತಿದೆ. 'ನಾಗಿಣಿ-2' ಪ್ರಸಾರ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  English summary
  Jayaram Karthik to play lead role in Nagini 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X