»   » ಟಿವಿ ಪ್ರೋಗ್ರಾಂ ನಲ್ಲಿ ಕೋಪಗೊಂಡ 'ಬಿಗ್ ಬಾಸ್' ಜಯಶ್ರೀ

ಟಿವಿ ಪ್ರೋಗ್ರಾಂ ನಲ್ಲಿ ಕೋಪಗೊಂಡ 'ಬಿಗ್ ಬಾಸ್' ಜಯಶ್ರೀ

Posted By:
Subscribe to Filmibeat Kannada

'ಉಪ್ಪು ಹುಳಿ ಖಾರ' ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಆದರೆ ಇಲ್ಲಿಯೇ ಈಗ ಒಂದು ಎಡವಟ್ಟು ಆಗಿದೆ.

ಚಿತ್ರದ ಪ್ರಮೋಷನ್ ನಿಮಿತ್ತ 'ಉಪ್ಪು ಹುಳಿ ಖಾರ' ಚಿತ್ರತಂಡ ಕನ್ನಡದ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಈ ವೇಳೆ ಚಿತ್ರದ ಮೂರು ನಾಯಕರು ಮತ್ತು ನಾಯಕಿಯಾರಾದ ಅನುಶ್ರೀ ಮತ್ತು ಜಯಶ್ರೀ ಕೂಡ ಹಾಜರಾಗಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅದೇನಾಯ್ತೋ.. ಏನೋ.. ಕಾರ್ಯಕ್ರಮ ಮಧ್ಯೆ ಇದ್ದಕ್ಕಿದ್ದ ಹಾಗೆ ಜಯಶ್ರೀ ಮೈಕ್ ಎಸೆದು 'ನಾನು ಮಾತನಾಡುವುದಿಲ್ಲ' ಎಂದು ಕೋಪಗೊಂಡು ಹೋಗಿದ್ದಾರೆ.

Jayasree is angry at the TV show

ಜಯಶ್ರೀ ಈ ರೀತಿಯ ಯಾಕೆ ವರ್ತಿಸಿದರು... ವಾಸ್ತವವಾಗಿ ಅಲ್ಲಿ ನಡೆದದ್ದು ಏನು ಎಂಬುದು ಗೊತ್ತಿಲ್ಲ. ಇದು ರಿಯಲ್ ಆಗಿ ಆಗಿದೆಯೋ ಅಥಾವ ಸುಮ್ಮನೆ ಪ್ರೋಮೋದಲ್ಲಿ ಈ ರೀತಿ ಬಿಂಬಿಸಲಾಗಿದೆಯಾ ಎನ್ನುವುದು ಕೂಡ ತಿಳಿದಿಲ್ಲ.

ಸದ್ಯ ಈ ಕಾರ್ಯಕ್ರಮದ ಪ್ರೋಮೋ ಮಾತ್ರ ಹೊರಬಂದಿದ್ದು ಕಾರ್ಯಕ್ರಮ ಪ್ರಸಾರವಾದ ಬಳಿಕ ನಿಜ ಸಂಗತಿ ಹೊರಬರಲಿದೆ.

English summary
Kannada Actress Jayasree is angry at the TV show. ಟಿವಿ ಕಾರ್ಯಕ್ರಮದಲ್ಲಿ ನಟಿ ಜಯಶ್ರೀ ಕೋಪಗೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada