ಎಂಟನೇ ಅದ್ಭುತ: ಜಯಶ್ರೀನಿವಾಸನ್ ಗೆ ಸಿಕ್ತು ಸೂಪರ್ ಅಧಿಕಾರ.!
ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಕಂಡ್ರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ... ಅದರಲ್ಲೂ ಆಶಿತಾ, ಕೃಷಿ ತಾಪಂಡ ಹಾಗೂ ಅನುಪಮಾ ಗೌಡಗೆ ಅಷ್ಟಕಷ್ಟೆ. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ವಾರವೇ ಆಶಿತಾ ಜೊತೆ ಕಿರಿಕ್ ಮಾಡಿಕೊಂಡ ಜಯಶ್ರೀನಿವಾಸನ್ ಬಳಿಕ ಜನಸಾಮಾನ್ಯ ಸ್ಪರ್ಧಿಗಳ ಜೊತೆಗೆ ಗಾರ್ಡನ್ ಏರಿಯಾದಲ್ಲಿ ಠಿಕಾಣಿ ಹೂಡಿದರು.
ಇಂತಿಪ್ಪ ಜಯಶ್ರೀನಿವಾಸನ್ ಅವರ ಕೈಯಲ್ಲಿ ಇದೀಗ ಸೂಪರ್ ಅಧಿಕಾರ ಇದೆ. ಅದು ಕೃಷಿ ತಾಪಂಡ ಕಡೆಯಿಂದ.! 'ಬಿಗ್ ಬಾಸ್' ಮನೆಯಿಂದ ಔಟ್ ಆಗುವ ಮುನ್ನ ನಟಿ ಕೃಷಿ ತಾಪಂಡ 'ಸೂಪರ್ ಅಧಿಕಾರ'ವನ್ನು ಜಯಶ್ರೀನಿವಾಸನ್ ಅವರಿಗೆ ನೀಡಿದರು. ಮುಂದೆ ಓದಿರಿ...

ಜಯಶ್ರೀನಿವಾಸನ್ ಗೆ ಸಿಕ್ತು ಸೂಪರ್ ಅಧಿಕಾರ
'ದೊಡ್ಮನೆ'ಯಿಂದ ಹೊರಬರುವ ಮುನ್ನ ಎಂದಿನಂತೆ, ಎಲಿಮಿನೇಟ್ ಆದ ಕೃಷಿ ತಾಪಂಡ ಅವರಿಗೆ 'ಬಿಗ್ ಬಾಸ್' ಒಂದು 'ಸೂಪರ್ ಅಧಿಕಾರ'ವನ್ನು ಹಸ್ತಾಂತರಿಸಲು ಸೂಚಿಸಿದರು. ಇದರ ಅನುಸಾರ 'ಸೂಪರ್ ಅಧಿಕಾರ'ವನ್ನು ಕೃಷಿ, ಜಯಶ್ರೀನಿವಾಸನ್ ಗೆ ನೀಡಿದರು.

ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು
ತಮಗೆ ಸಿಕ್ಕ 'ಸೂಪರ್ ಅಧಿಕಾರ'ವನ್ನು ಜಯಶ್ರೀನಿವಾಸನ್ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು.

ದಿವಾಕರ್, ಸಮೀರಾಚಾರ್ಯ ಮೇಲೆ ಪರಿಣಾಮ.?
ಗಾರ್ಡನ್ ಏರಿಯಾದ ಗುಂಪಿನಲ್ಲಿ ಗುರುತಿಸಿಕೊಂಡಿರುವ ಜಯಶ್ರೀನಿವಾಸನ್ ಗೆ ಇದೀಗ ತಮ್ಮದೇ ಗುಂಪಿನ ಸಮೀರಾಚಾರ್ಯ ಹಾಗೂ ದಿವಾಕರ್ ಜೊತೆ ಮನಸ್ತಾಪ ಮೂಡಿರುವ ಹಾಗಿದೆ. ಹೀಗಾಗಿ, ಇವರಿಬ್ಬರ ಮೇಲೆ 'ಸೂಪರ್ ಅಧಿಕಾರ'ದ ಪ್ರಭಾವ ಬೀರುತ್ತಾ, ನೋಡೋಣ.

ಎಂಟನೇ ಅದ್ಭುತ
ಸಂಖ್ಯಾಶಾಸ್ತ್ರದ ಪ್ರಕಾರ, ಸೂಪರ್ ಅಧಿಕಾರವನ್ನ ಜಯಶ್ರೀನಿವಾಸನ್ ಹೇಗೆ ಬಳಸಿಕೊಳ್ಳುತ್ತಾರೆ ಅಂತ ತಿಳಿದುಕೊಳ್ಳಲು ಇನ್ನೂ ಒಂದು ದಿನ ಕಾಯಲೇಬೇಕು. ಹಾಗ್ನೋಡಿದ್ರೆ, ಜಯಶ್ರೀನಿವಾಸನ್ ಜೊತೆ ಅಷ್ಟಾಗಿ ಮಾತನಾಡದ ಕೃಷಿ ತಾಪಂಡ, ಜಯಶ್ರೀನಿವಾಸನ್ ಗೆ 'ಸೂಪರ್ ಅಧಿಕಾರ' ಕೊಟ್ಟಿದ್ದು ಎಂಟನೇ ಅದ್ಭುತವೇ ಸರಿ.


Click it and Unblock the Notifications











