ಜೇನುಗೂಡು: ದಿಯಾ ಅರಿಶಿನ ಶಾಸ್ತ್ರದ ತಯಾರಿ ಹೇಗಿತ್ತು..? ಇಲ್ನೋಡಿ ಸಣ್ಣ ಝಲಕ್!

By ಎಸ್ ಸುಮಂತ್

'ಜೇನುಗೂಡು' ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಶಶಾಂಕ್ ಅರಿಶಿನ ಶಾಸ್ತ್ರ ಮುಗಿದಿದೆ. ಈಗ ಏನಿದ್ದರು ದಿಯಾ ಸರದಿ. ದಿಯಾಳ ಅರಿಶಿನ ಶಾಸ್ತ್ರಕ್ಕೂ ಎಲ್ಲಾ ತಯಾರಿ ನಡೆಯುತ್ತಿದೆ. ಶಶಾಂಕ್ ಗೆ ಅಚ್ವಿ ಉಳಿಸಿದ ಅರಿಶಿನದಲ್ಲಿ ದಿಯಾಗೆ ಅರಿಶಿನ ಅಚ್ಚಬೇಕು. ಇದುವೇ ಶಾಸ್ತ್ರ, ಸಂಪ್ರದಾಯದಲ್ಲಿರುವ ಪದ್ಧತಿ. ಇದೀಗ ಸಿಂಡ್ರೆಲಾ ಮನೆಗೆ ಕುಕ್ಕಿ ಅಂಡ್ ಗ್ಯಾಂಗ್ ಅರಿಶಿನವನ್ನು ತೆಗೆದುಕೊಂಡು ಹೋಗಿದ್ದಾರೆ.

ದಿಯಾಗೆ ಯಾವಾಗಲೂ ಖುಷಿ ಖುಷಿಯಾಗಿರಬೇಕು ಎಂಬುದೇ ಆಸೆ. ಅದಕ್ಕೆ ದಿಯಾಗೆ ಕುಕ್ಕಿ ಅಂಡ್ ಗ್ಯಾಂಗ್ ಕಂಡರೆ ಇನ್ನಿಲ್ಲದ ಪ್ರೀತಿ, ಸಲಿಗೆ. ಅವರ ಗ್ಯಾಂಗ್ ಜೊತೆ ಇದ್ದರೆ ದಿಯಾಗೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಮದುವೆ ಶಾಸ್ತ್ರ ಆರಂಭವಾದಾಗಿನಿಂದ ಎಲ್ಲಾ ಶಾಸ್ತ್ರದಲ್ಲೂ ಭಾಗಿಯಾಗುತ್ತಿದ್ದ ದಿಯಾಗೆ ಅರಿಶಿನ ಶಾಸ್ತ್ರದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಅವರ ತಂದೆ ಡಾಕ್ಟರ್ ಶ್ರೀಧರ್ ದಿಯಾಳ ಆಸೆಯನ್ನು ಈಡೇರಿಸಿದ್ದಾರೆ.

ದಿಯಾಳ ಅರಿಶಿನ ಶಾಸ್ತ್ರ ಅದೆಷ್ಟು ಅದ್ಧೂರಿ?

ದಿಯಾಳ ಅರಿಶಿನ ಶಾಸ್ತ್ರ ಅದೆಷ್ಟು ಅದ್ಧೂರಿ?

ಉತ್ತರ ಕರ್ನಾಟಕ ಭಾಗದಲ್ಲಿ ಮದುವೆಯೆಂದರೆ ಹೀಗೆಲ್ಲಾ ಇರುತ್ತದಾ ಎಂದು ಆಶ್ಚರ್ಯ ಪಡುವಷ್ಟು ಶಾಸ್ತ್ರಗಳನ್ನು ತೋರಿಸಿಕೊಟ್ಟಿದ್ದಾರೆ. 'ಜೇನುಗೂಡು' ಫ್ಯಾಮಿಲಿ. ಮದುವೆಯೆಂದರೆ ಛತ್ರದಲ್ಲ ಒಂದೂವರೆ ದಿನ ಇದ್ದು, ಎರಡು ಶಾಸ್ತ್ರ ಮುಗಿಸಿ, ತಾಳಿ ಕಟ್ಟಿಸಿಕೊಂಡ ಮೇಲೆ, ಭರ್ಜರಿ ಊಟ ಮುಗಿಸಿಕೊಂಡು ವಾಪಾಸ್ಸಾಗುವ ಕಾಲವಿದು. ಇಂತಹ ಸಮಯದಲ್ಲಿ ವಾರಗಟ್ಟಲೇ ಮದುವೆ ಮಾಡುವುದು ಎಂದರೆ, ಅದೆಷ್ಟು ಸಂತಸ, ಸಂಭ್ರಮ ಅಡಗಿರುತ್ತದೆ ಅಲ್ಲವಾ. ಅದರಲ್ಲೂ ಮನೆಯಲ್ಲಿಯೇ ಮದುವೆ ಮಾಡುವುದೆಂದರೆ ಹೇಗೆ ಎಂಬ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಮನೆಯನ್ನೇ ಅದ್ಭುತವಾಗಿ ಅಲಂಕರಿಸಿ, ಈಗಾಗಲೇ ಎಲ್ಲಾ ಶಾಸ್ತ್ರಗಳನ್ನು ಮುಗಿಸಿದ್ದಾರೆ. ಈಗ ದಿಯಾಳ ಅರಿಶಿನ ಶಾಸ್ತ್ರಕ್ಕಾಗಿ ಡಾಕ್ಟರ್ ಮನೆ ಸಖತ್ ಅಲಂಕಾರಿಕವಾಗಿ ಸಿದ್ಧವಾಗಿದೆ.

ಅರಿಶಿನ ಶಾಸ್ತ್ರಕ್ಕೂ ಮುನ್ನ ಹೇಗಿತ್ತು?

ಅರಿಶಿನ ಶಾಸ್ತ್ರಕ್ಕೂ ಮುನ್ನ ಹೇಗಿತ್ತು?

ಈಗಾಗಲೇ ಎಲ್ಲಾ ಶಾಸ್ತ್ರಗಳನ್ನು ನೋಡಿರುವಂತೆ ನಡುಕೋಟೆ ಮನೆಯಲ್ಲಿಯೇ ಎಲ್ಲಾ ಶಾಸ್ತ್ರಗಳು ನಡೆದಿವೆ. ಹೀಗಾಗಿ ನಡುಕೋಟೆ ಮನೆಯನ್ನು ಅದ್ಭುತವಾಗಿ ಅಲಂಕಾರ ಮಾಡಲಾಗಿದೆ. ಡಾಕ್ಟರ್ ಶ್ರೀಧರ್ ಮನೆಯನ್ನು ಸ್ವಲ್ಪಮಟ್ಟಿಗೆ ಲೈಟ್‌ಗಳಿಂದ ಅಲಂಕಾರ ಮಾಡಲಾಗಿತ್ತು. ಆದರೆ ಅರಿಶಿನ ಶಾಸ್ತ್ರಕ್ಕೆ ವಿಭಿನ್ನವಾಗಿ ಅಲಂಕಾರ ಮಾಡಿದ್ದಾರೆ. ದಿಯಾ ಕೂಡ ಅರಿಶಿನ ಶಾಸ್ತ್ರಕ್ಕೆ ಸಖತ್ತಾಗಿಯೇ ತಯಾರಾಗಿದ್ದಾಳೆ. ಫ್ಲವರ್ ಡೆಕೋರೇಷನ್, ಬಟ್ಟೆಗಳಿಂದ ಅಲಂಕಾರ ಹೀಗೆ ಎಲ್ಲದರ ತಯಾರಿ ಹಿಂದಿನ ಪರಿಶ್ರಮ ಮೇಕಿಂಗ್ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ.

ದಿಯಾಗಾಗಿ ಬಂದ ಸಮರ್ಥ್

ದಿಯಾಗಾಗಿ ಬಂದ ಸಮರ್ಥ್

ಶಶಾಂಕ್ ಮನೆಯಲ್ಲಿ ಯಾವಾಗಲೂ ನಗು, ಸಂತಸ ಮನೆ ಮಾಡಿರುತ್ತದೆ. ಒಂದು ಕ್ಷಣವೂ ಸುಮ್ಮನೆ ಇರುವುದಿಲ್ಲ. ಏನಾದರೊಂದು ಚಟುವಟಿಕೆ ಮಾಡುತ್ತಾ ಖುಷಿಯಾಗಿರುತ್ತಾರೆ. ಇನ್ನು ಮದುವೆಯ ಶಾಸ್ತ್ರಗಳಲ್ಲಿ ಕೇಳಬೇಕಾ..? ಎಲ್ಲರೂ ಹಾಡು ಹಾಡುತ್ತಾ, ಕುಣಿಯುತ್ತಾ ಶಶಾಂಕ್‌ಗೆ ಅರಿಶಿನ ಶಾಸ್ತ್ರ ಮಾಡಿದ್ದಾರೆ. ದಿಯಾ ಕೂಡ ಅದೇ ರೀತಿ ಬಯಸುತ್ತಿದ್ದಾಳೆ. ಅದಕ್ಕೆಂದೇ ಡಾಕ್ಟರ್ ಶ್ರೀಧರ್ ಸ್ಪೆಷಲ್ ಗೆಸ್ಟ್ ಕರೆಸಿದ್ದಾರೆ. ಸಿಂಗರ್ ಸಮರ್ಥ್ ದಿಯಾಗಾಗಿ ಬಂದು ಹಾಡು ಹಾಡಿದ್ದಾರೆ.

ದಿಯಾಳ ಖುಷಿ ಜೊತೆ ಸಮರ್ಥ್ ಸಂಗೀತ

ಮದುವೆಯ ಒಂದೊಂದು ಶಾಸ್ತ್ರವೂ ಜೀವನಕ್ಕೆ ತುಂಬಾನೇ ಮುಖ್ಯವಾಗಿರುತ್ತದೆ. ಅವೆಲ್ಲವನ್ನು ಅವಿಸ್ಮರಣೀಯ ಮಾಡುವುದು ಮನೆಯವರ ಕೈನಲ್ಲಿರುತ್ತದೆ. ಅದಕ್ಕೆಂದೇ ದಿಯಾ ತಂದೆ ಅರಿಶಿನ ಶಾಸ್ತ್ರವನ್ನು ಅವಿಸ್ಮರಣೀಯ ಮಾಡಲು ಹೊರಟಿದ್ದಾರೆ. ದಿಯಾ ತುಂಬಾ ಇಷ್ಟಪಡುವ ಸಿಂಗರ್ ಸಮರ್ಥ್‌ನನ್ನು‌ಜರಿಸಿದ್ದಾರೆ. ಅರಿಶಿನ ಶಾಸ್ತ್ರದ ಜೊತೆ ಸಮರ್ಥ್ ಸಂಗೀತದೊಂದಿಗೆ ದಿಯಾ ಫುಲ್ ಖುಷಿಯಾಗಿದ್ದಾಳೆ.

More from Filmibeat

English summary
Star Suvarna Serial Jeenugoodu Written Update on August 1st Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X